1 ಪೂರ್ವಕಾಲ ವೃತ್ತಾಂತ 26:26 - ಕನ್ನಡ ಸತ್ಯವೇದವು C.L. Bible (BSI)26 ಜಿಕ್ರೀಯ ಮಗನೂ ಆಗಿರುವ ಶೆಕೋಮೋತನೂ ಅವನ ಸಹೋದರರೂ ಪ್ರತಿಷ್ಠಿತ ವಸ್ತುಗಳ ಭಂಡಾರವನ್ನು ಕಾಯುವವರು; ಇವರು ಶೆಬೂವೇಲನ ಗೋತ್ರ ಬಂಧುಗಳು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201926 ಶೆಲೋಮೋತನು ಅವನ ಸಹೋದರರೂ ಪ್ರತಿಷ್ಠಿತ ವಸ್ತುಗಳ ಭಂಡಾರವನ್ನು ಕಾಯುವವರು. ಇವರು ಶೆಬೂವೇಲನ ಗೋತ್ರಬಂಧುಗಳು. ಈ ವಸ್ತುಗಳನ್ನು ಅರಸನಾದ ದಾವೀದನೂ, ಗೋತ್ರ ಪ್ರಧಾನರೂ ಸಹಸ್ರಾಧಿಪತಿಗಳೂ, ಶತಾಧಿಪತಿಗಳೂ, ಸೇನಾಧಿಪತಿಗಳೂ ಪ್ರತಿಷ್ಠಿಸಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)26 ಶೆಲೋಮೋತನೂ ಅವನ ಸಹೋದರರೂ ಪ್ರತಿಷ್ಠಿತವಸ್ತುಗಳ ಭಂಡಾರವನ್ನು ಕಾಯುವವರು; ಇವರು ಶೆಬೂವೇಲನ ಗೋತ್ರಬಂಧುಗಳು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್26 ದಾವೀದನು ದೇವಾಲಯಕ್ಕೋಸ್ಕರ ಸಂಗ್ರಹಿಸಿದ ಎಲ್ಲಾ ವಸ್ತುಗಳಿಗೆ ಶೆಲೋಮೋತನೂ ಅವನ ಸಂಬಂಧಿಕರೂ ಅಧಿಕಾರಿಗಳಾಗಿದ್ದರು. ಸೈನ್ಯಾಧಿಕಾರಿಗಳು ದೇವಾಲಯವನ್ನು ಕಟ್ಟಲು ಸಾಮಾಗ್ರಿಗಳನ್ನು ಒದಗಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ26 ಈ ಶೆಲೋಮೋತನೂ ಅವನ ಸಹೋದರರೂ ಅರಸನಾದ ದಾವೀದನೂ ಮುಖ್ಯಸ್ಥರಾದ ಪಿತೃಗಳೂ ಸೈನ್ಯಾಧಿಪತಿಗಳಾದ ಸಹಸ್ರಗಳ ಮೇಲೆಯೂ ಶತ್ರುಗಳ ಮೇಲೆಯೂ ಅಧಿಪತಿಗಳಾದವರೂ ಪ್ರತಿಷ್ಠೆ ಮಾಡಿದ ಪ್ರತಿಷ್ಠಿತವಾದವುಗಳ ಬೊಕ್ಕಸಗಳನ್ನು ಕಾಯುತ್ತಿದ್ದರು. ಅಧ್ಯಾಯವನ್ನು ನೋಡಿ |
ಜೆರುಸಲೇಮಿನಲ್ಲಿ ನೆಲೆಸಿದ ಲೇವಿಯರು: ಹಷಬ್ಯನ ಮಗ ಶೆಮಾಯ; ಇವನ ಪೂರ್ವಜರಲ್ಲಿ ಅಜ್ರೀಕಾಮ, ಹಷಬ್ಯ ಹಾಗು ಮೆರಾರೀ ಗೋತ್ರದ ಬಕ್ಬಕ್ಕರ್, ಹೆರೆಷ್, ಗಾಲಾಲ್ ಎಂಬವರಿದ್ದರು. ಶೆಮಾಯನ ಮಗ ಓಬದ್ಯ: ಇವನ ಪೂರ್ವಜರಲ್ಲಿ ಗಾಲಾಲ, ಯದೂತೂನ ಎಂಬವರಿದ್ದರು. ಮೀಕನ ಮಗ ಮತ್ತನ್ಯ: ಇವನ ಪೂರ್ವಜರಲ್ಲಿ ಜಿಕ್ರೀ, ಆಸಾಫ ಎಂಬವರಿದ್ದರು. ಆಸನ ಮಗನೂ ಎಲ್ಕಾನನ ಮೊಮ್ಮಗನೂ ಆದ ಬೆರೆಕ್ಯ; ನಟೋಫಾತ್ಯರ ಗ್ರಾಮಗಳಲ್ಲಿ ಇವನು ನೆಲೆಸಿದ್ದನು.