ಇವರಲ್ಲಿ ಹಿರಿಕಿರಿಯರೂ ಗುರುಶಿಷ್ಯರೂ ಕೂಡಿಕೊಂಡು ಚೀಟಿನಿಂದ ತಮ್ಮ ಸೇವಾಕ್ರಮವನ್ನು ಗೊತ್ತುಮಾಡಿಕೊಳ್ಳುತ್ತಿದ್ದರು. ಈ ಚೀಟಿನ ಪ್ರಕಾರ ಇನ್ನೂರ ಎಂಬತ್ತೆಂಟು ಮಂದಿ ಸದಸ್ಯರು ಇಪ್ಪತ್ತನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದ್ದರು. ಪ್ರತಿಯೊಂದು ಗುಂಪಿಗೆ ಒಬ್ಬ ನಾಯಕನು, ಅವನ ಸಹೋದರರು ಹಾಗೂ ಮಕ್ಕಳು ಕೂಡಿ ಹನ್ನೆರಡು ಮಂದಿ ಸದಸ್ಯರು ಇದ್ದರು. ಕ್ರಮಾನುಸಾರ ಇಪ್ಪತ್ತನಾಲ್ಕು ನಾಯಕರ ಹೆಸರುಗಳು ಇವು:
ಅಲ್ಲಿಂದ ಹೊರಟು ಊರಬಾಗಿಲಿಗೆ ಬಂದು, ಕಾವಲುಗಾರರಿಗೆ, “ನಾವು ಸಿರಿಯಾದವರ ಪಾಳೆಯಕ್ಕೆ ಹೋಗಿದ್ದೆವು; ಅಲ್ಲಿ ನಮಗೆ ಯಾರೂ ಕಾಣಿಸಲಿಲ್ಲ, ಮನುಷ್ಯಶಬ್ದವೇ ಕೇಳಿಸಲಿಲ್ಲ. ಕತ್ತೆಕುದುರೆಗಳನ್ನು ಅಲ್ಲಲ್ಲಿ ಕಟ್ಟಲಾಗಿದೆ. ಡೇರೆಗಳು ಇದ್ದ ಹಾಗೆಯೇ ಇರುತ್ತವೆ,” ಎಂದು ಕೂಗಿ ತಿಳಿಸಿದರು.
ಆಸಾಫ್ಯರಾದ ಗಾಯಕರು, ಅರಸನಾದ ದಾವೀದನ ಮತ್ತು ಆಸಾಫ್, ಹೇಮಾನ್ ಹಾಗು ಅರಸನ ದರ್ಶಿಯಾದ ಯೆದುತೂನ್ ಇವರ ಆಜ್ಞಾನುಸಾರ ತಮ್ಮ ಸ್ಥಳದಲ್ಲಿ ನಿಂತಿದ್ದರು; ದ್ವಾರಪಾಲಕರು ಆಯಾ ಬಾಗಿಲುಗಳನ್ನು ಕಾಯುತ್ತಿದ್ದರು. ಅವರ ಸಹೋದರರಾದ ಲೇವಿಯರು ಅವರ ಭೋಜನಕ್ಕೆ ಸಿದ್ಧಮಾಡುತ್ತಿದ್ದುದರಿಂದ ಅವರು ತಮ್ಮ ತಮ್ಮ ಸೇವೆಯನ್ನು ಬಿಡುವುದಕ್ಕೆ ಕಾರಣ ಇರಲಿಲ್ಲ.
ಪೂರ್ವದಿಕ್ಕಿನ ದ್ವಾರಪಾಲಕನಾಗಿದ್ದ ಇಮ್ಲನ ಮಗ ಕೋರೆ ಎಂಬ ಲೇವಿಯನು, ಜನರು ಸ್ವಂತ ಇಚ್ಛೆಯಿಂದ ದೇವರಿಗೆ ಕಾಣಿಕೆಯಾಗಿ ಸಮರ್ಪಿಸುತ್ತಿದ್ದ ವಸ್ತುಗಳ ಮೇಲ್ವಿಚಾರಕನಾಗಿದ್ದನು. ಅದು ಮಾತ್ರವಲ್ಲ, ಸರ್ವೇಶ್ವರನಿಗೆ ಪ್ರತ್ಯೇಕಿಸಲ್ಪಟ್ಟ ದ್ರವ್ಯ, ಮಹಾಪರಿಶುದ್ಧ ವಸ್ತು, ಇವುಗಳನ್ನು ಹಂಚಿಕೊಡುವವನೂ ಆಗಿದ್ದನು.