Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 22:9 - ಕನ್ನಡ ಸತ್ಯವೇದವು C.L. Bible (BSI)

9 ನಿನಗೆ ಒಬ್ಬ ಮಗ ಹುಟ್ಟುವನು; ಅವನು ಸಮಾಧಾನ ಪುರುಷನಾಗಿರುವನು. ನಾನು ಅವನ ಸುತ್ತಣ ಎಲ್ಲ ವಿರೋಧಿಗಳನ್ನು ಅಡಗಿಸಿ ಅವನಿಗೆ ಶಾಂತಿ ಸಮಾಧಾನವನ್ನು ಅನುಗ್ರಹಿಸುವೆನು. ಅವನಿಗೆ ಸೊಲೊಮೋನ ಎಂಬ ಹೆಸರಿರುವುದು. ಅವನ ಕಾಲದಲ್ಲಿ ಇಸ್ರಯೇಲರಿಗೆ ಶಾಂತಿಸಮಾಧಾನವನ್ನೂ ಸೌಭಾಗ್ಯವನ್ನೂ ದಯಪಾಲಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ನಿನಗೆ ಒಬ್ಬ ಮಗನು ಹುಟ್ಟುವನು, ಅವನು ಸಮಾಧಾನ ಪುರುಷನಾಗಿರುವನು. ನಾನು ಅವನ ಸುತ್ತಣ ಎಲ್ಲಾ ವಿರೋಧಿಗಳನ್ನು ಅಡಗಿಸಿ, ಅವನಿಗೆ ಸಮಾಧಾನವನ್ನು ಅನುಗ್ರಹಿಸುವೆನು. ಅವನಿಗೆ ಸೊಲೊಮೋನನೆಂಬ ಹೆಸರಿರುವುದು. ಅವನ ಕಾಲದಲ್ಲಿ ಇಸ್ರಾಯೇಲರಿಗೆ ಸಮಾಧಾನವನ್ನೂ ಮತ್ತು ಸೌಭಾಗ್ಯವನ್ನೂ ದಯಪಾಲಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ನಿನಗೆ ಒಬ್ಬ ಮಗನು ಹುಟ್ಟುವನು; ಅವನು ಸಮಾಧಾನಪುರುಷನಾಗಿರುವನು. ನಾನು ಅವನ ಸುತ್ತಣ ಎಲ್ಲಾ ವಿರೋಧಿಗಳನ್ನು ಅಣಗಿಸಿ ಅವನಿಗೆ ಸಮಾಧಾನವನ್ನು ಅನುಗ್ರಹಿಸುವೆನು. ಅವನಿಗೆ ಸೊಲೊಮೋನನೆಂಬ ಹೆಸರಿರುವದು. ಅವನ ಕಾಲದಲ್ಲಿ ಇಸ್ರಾಯೇಲ್ಯರಿಗೆ ಸಮಾಧಾನವನ್ನೂ ಸೌಭಾಗ್ಯವನ್ನೂ ದಯಪಾಲಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಆದರೆ ನಿನ್ನ ನಂತರ ಬರುವ ನಿನ್ನ ಮಗನು ಸಮಾಧಾನ ಪುರುಷನಾಗಿರುವನು. ಅವನ ರಾಜ್ಯದಲ್ಲಿ ನಾನು ಶಾಂತಿಯನ್ನು ನೆಲೆಗೊಳಿಸುವೆನು. ಅವನ ಸುತ್ತಮುತ್ತಲಿರುವ ವೈರಿಗಳಿಂದ ಅವನಿಗೆ ಯಾವ ಕೇಡೂ ಉಂಟಾಗದು. ಅವನೇ ಸೊಲೊಮೋನನು. ಅವನ ಕಾಲದಲ್ಲಿ ಇಸ್ರೇಲರು ಸಮಾಧಾನದಿಂದ ವಾಸಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಶಾಂತಿ ಸಮಾಧಾನದ ಮನುಷ್ಯನಾಗಿರುವ ಒಬ್ಬ ಮಗನು ನಿನಗೆ ಹುಟ್ಟುವನು. ಸುತ್ತಲಿರುವ ಅವನ ಸಮಸ್ತ ಶತ್ರುಗಳಿಂದ ನಾನು ಅವನಿಗೆ ವಿಶ್ರಾಂತಿಯನ್ನು ಕೊಡುವೆನು. ಅವನಿಗೆ ಸೊಲೊಮೋನನೆಂಬ ಹೆಸರಿರುವುದು. ಅವನ ದಿವಸಗಳಲ್ಲಿ ನಾನು ಇಸ್ರಾಯೇಲಿಗೆ ಶಾಂತಿ ಸಮಾಧಾನವನ್ನೂ ಕೊಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 22:9
24 ತಿಳಿವುಗಳ ಹೋಲಿಕೆ  

ಸೊಲೊಮೋನನ ಆಳ್ವಿಕೆಯಲ್ಲೆಲ್ಲಾ ದಾನ್ ಪಟ್ಟಣದಿಂದ ಬೇರ್ಷೆಬದವರೆಗಿರುವ ಸಮಸ್ತ ಇಸ್ರಯೇಲರು ಹಾಗು ಯೆಹೂದ್ಯರು ತಮ್ಮ ತಮ್ಮ ದ್ರಾಕ್ಷಾಲತೆ, ಅಂಜೂರದಗಿಡ, ಇವುಗಳ ನೆರಳಿನಲ್ಲಿ ವಾಸಿಸುತ್ತಾ ಸುರಕ್ಷಿತರಾಗಿದ್ದರು.


ನನಗಾದರೋ ನನ್ನ ದೇವರಾದ ಸರ್ವೇಶ್ವರ ಎಲ್ಲ ಕಡೆಗಳಲ್ಲೂ ಸಮಾಧಾನವನ್ನು ಅನುಗ್ರಹಿಸಿದ್ದಾರೆ; ನನ್ನನ್ನು ವಿರೋಧಿಸುವವನು ಒಬ್ಬನೂ ಇಲ್ಲ; ಆಪತ್ತು ವಿಪತ್ತು ದೂರವಾಗಿವೆ.


ಇಸ್ರಯೇಲ್ ಹಾಗು ಯೆಹೂದ್ಯರು ಸಮುದ್ರ ತೀರದ ಮರಳಿನಷ್ಟು ಅಸಂಖ್ಯಾತರಾದರು; ಅನ್ನ ಪಾನಗಳಲ್ಲಿ ಸಂತೃಪ್ತರಾಗಿ ಸಂತೋಷದಿಂದ ಬಾಳುತ್ತಿದ್ದರು.


ಈ ಆಲಯದ ಮುಂದಿನ ವೈಭವವು ಹಿಂದಿನ ವೈಭವಕ್ಕಿಂತ ಶ್ರೇಷ್ಠವಾಗಿರುವುದು. ಈ ಸ್ಥಳದಲ್ಲಿ ಶಾಂತಿ ಸಮೃದ್ಧಿಯನ್ನು ಅನುಗ್ರಹಿಸುವೆನು.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.


ಸರ್ವೇಶ್ವರ ಸ್ವಾಮಿ ಹೀಗೆನ್ನುತ್ತಾರೆ : “ಇಗೋ, ಆಕೆಗೆ ಹರಿಯಮಾಡುವೆನು ಸುಖಶಾಂತಿಯನು ನದಿಯಂತೆ ನೀಡುವೆ ರಾಷ್ಟ್ರಗಳ ವೈಭವವನು ತುಂಬಿತುಳುಕುವ ತೊರೆಯಂತೆ ನೀವಿರುವಿರಿ ಹಾಲುಕುಡಿವ ಹಸುಳೆಯಂತೆ ಎತ್ತಿಕೊಳ್ಳಲಾಗುವುದು ನಿಮ್ಮನ್ನು ತಾಯ ಕಂಕುಳಲಿ ನಲಿದಾಡುವಿರಿ ನೀವು ಆಕೆಯ ಮಡಿಲಲಿ.


ಅವರ ಬಾಯಿಂದ ಸ್ತುತಿಸ್ತೋತ್ರ ಹೊರಬರುವಂತೆ ಮಾಡುತ್ತೇನೆ. ಶಾಂತಿ! ಹತ್ತಿರವಿರುವವರಿಗೂ ದೂರವಿರುವವರಿಗೂ ಶಾಂತಿಸಮಾಧಾನ ! ನಾನು ಅವರನ್ನು ಸ್ವಸ್ಥಪಡಿಸುತ್ತೇನೆ,” ಎನ್ನುತ್ತಾರೆ ಸರ್ವೇಶ್ವರ ಸ್ವಾಮಿ.


ಬೆಳಕಿಗೂ ಕತ್ತಲಿಗೂ ನಾನೆ ಸೃಷ್ಟಿಕರ್ತನೆಂದು ಸುಖದುಃಖಗಳಿಗೆ ಕಾರಣಕರ್ತನೆಂದು ಸಕಲವನು ನಡೆಸುವ ಸರ್ವೇಶ್ವರ ನಾನೇ ಎಂದು.


ಸರ್ವೇಶ್ವರಾ, ನೀಡೆಮಗೆ ಶಾಂತಿ ಸಮಾಧಾನ ನಮ್ಮ ಸತ್ಕಾರ್ಯಗಳೆಲ್ಲವೂ ನಿನ್ನ ಕೃಪಾಸಾಧನ.


ಬೆಳೆಯಲಿ ಆತನ ಪಾಲನೆಯಲಿ ನ್ಯಾಯನೀತಿ I ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ ಶಾಂತಿ II


ವ್ಯಕ್ತಿಯಾಗಿರಲಿ, ರಾಷ್ಟ್ರವಾಗಿರಲಿ, ಯಾರಾಗಿದ್ದರೇನು? ದೇವರು ಸುಮ್ಮನಿದ್ದರೆ ತಪ್ಪುಹೊರಿಸುವವರಾರು? ವಿಮುಖನಾದರೆ ಆತನ ದರ್ಶನ ಪಡೆಯಬಲ್ಲವರಾರು?


ನಿನ್ನ ಆಯುಷ್ಕಾಲ ಮುಗಿದು ನೀನು ನಿನ್ನ ಪೂರ್ವಜರನ್ನು ಸೇರಿ ವಿಶ್ರಮಿಸುವಾಗ ನಿನ್ನ ಮಕ್ಕಳಲ್ಲಿ ಒಬ್ಬನನ್ನು ನಿನಗೆ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು.


ಗಿದ್ಯೋನನು ಅಲ್ಲೇ ಸರ್ವೇಶ್ವರನಿಗಾಗಿ ಒಂದು ಬಲಿಪೀಠವನ್ನು ಕಟ್ಟಿ ಅದಕ್ಕೆ ‘ಯೆಹೋವ ಷಾಲೋಮ್’ ಎಂದು ಹೆಸರಿಟ್ಟನು; ಅದು ಈವರೆಗೂ ಅಬೀಯೆಜೆರ್ ಗೋತ್ರದವರ ಒಫ್ರದಲ್ಲಿರುತ್ತದೆ.


ನೀನು ಅರಸ ದಾವೀದನ ಬಳಿಗೆ ಹೋಗಿ, ‘ನನ್ನ ಒಡೆಯರಾದ ಅರಸರು ತಮ್ಮ ತರುವಾಯ ನನ್ನ ಮಗನಾದ ಸೊಲೊಮೋನನೇ ಆಳಬೇಕು, ಅವನೇ ತಮ್ಮ ಸಿಂಹಾಸನದ ಮೇಲೆ ಕುಳಿತುಕೊಳ್ಳಬೇಕು ಎಂದು ತಮ್ಮ ದಾಸಿಯಾದ ನನಗೆ ಪ್ರಮಾಣಮಾಡಿ ಹೇಳಿದಿರಲ್ಲವೇ? ಹೀಗಿದ್ದ ಮೇಲೆ ಅದೋನೀಯನು ಅರಸನಾದುದು ಹೇಗೆ?’ ಎಂದು ಕೇಳು.


ಆಗ ಅವನು, “ರಾಜ್ಯ ನನಗೆ ಬರಬೇಕಾಗಿತ್ತು; ನಾನೇ ಅರಸನಾಗುವೆನೆಂದು ಇಸ್ರಯೇಲರೆಲ್ಲರು ಎದುರು ನೋಡುತ್ತಿದ್ದರೆಂಬುದು ನಿನಗೆ ತಿಳಿದ ವಿಷಯ. ಆದರೆ ಅದು ತಪ್ಪಿ ನನ್ನ ತಮ್ಮನಿಗೆ ಹೋಯಿತು. ಅದು ಸರ್ವೇಶ್ವರನಿಂದಲೇ ಅವನಿಗೆ ದೊರಕಿತು.


ನನ್ನ ದೇವರಾದ ಸರ್ವೇಶ್ವರಾ, ನನ್ನ ತಂದೆಗೆ ಬದಲಾಗಿ ನಿಮ್ಮಿಂದ ಅರಸನಾಗಿ ನೇಮಕಗೊಂಡಿರುವ ನಿಮ್ಮ ದಾಸನಾದ ನಾನು ಇನ್ನೂ ಚಿಕ್ಕವನು.


ಅವನು ಯೂಫ್ರೆಟಿಸ್ ನದಿಯ ಈಚೆಯಲ್ಲಿ ತಿಪ್ಸಹು ಮೊದಲ್ಗೊಂಡು ಗಾಜದವರೆಗಿರುವ ಈಚೆಯ ಎಲ್ಲಾ ರಾಜರಿಗೂ ಅಧಿಪತಿಯಾಗಿದ್ದನು. ಸುತ್ತಮುತ್ತಲಿನ ರಾಜರೊಡನೆ ಶಾಂತಿಸಮಾಧಾನದಿಂದಿದ್ದನು.


“ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಸಂಗಡ ಇದ್ದು ಎಲ್ಲಾ ಕಡೆಗಳಲ್ಲೂ ನಿಮಗೆ ನೆಮ್ಮದಿಯನ್ನು ಅನುಗ್ರಹಿಸಿದ್ದಾರೆ. ನಾಡಿನ ಮೂಲ ನಿವಾಸಿಗಳನ್ನು ನನ್ನ ಕೈಗೊಪ್ಪಿಸಿದ್ದಾರೆ. ನೀವೆ ನೋಡುವ ಹಾಗೆ ನಾಡು ಸರ್ವೇಶ್ವರನಿಗೂ ಅವರ ಪ್ರಜೆಗಳಿಗೂ ಸ್ವಾಧೀನವಾಗಿದೆ.


ನಿಮ್ಮ ದಾಸನೂ ನನ್ನ ತಂದೆಯೂ ಆದ ದಾವೀದನಿಗೆ ಕೊಟ್ಟ ಮಾತನ್ನು ಈಡೇರಿಸಿದ್ದೀರಿ; ನಿಮ್ಮ ಬಾಯಿ ನುಡಿದದ್ದನ್ನು ನಿಮ್ಮ ಕೈ ಈಗ ನೆರವೇರಿಸಿತು.


“ತಾವು ವಾಗ್ದಾನ ಮಾಡಿದಂತೆ ತಮ್ಮ ಪ್ರಜೆಗಳಾದ ಇಸ್ರಯೇಲರಿಗೆ ವಿಶ್ರಾಂತಿಯನ್ನು ಅನುಗ್ರಹಿಸಿದ ಸರ್ವೇಶ್ವರನಿಗೆ ಸ್ತೋತ್ರವಾಗಲಿ! ಅವರು ತಮ್ಮ ದಾಸ ಮೋಶೆಯ ಮುಖಾಂತರ ಮಾಡಿದ ಅತಿಶ್ರೇಷ್ಠ ವಾಗ್ದಾನಗಳಲ್ಲಿ ಒಂದೂ ತಪ್ಪಿಹೋಗಲಿಲ್ಲ.


ತಿಳಿಸು ನಿನ್ನ ನ್ಯಾಯವನು ದೇವಾ, ರಾಜನಿಗೆ I ಕಲಿಸು ನಿನ್ನ ನೀತಿಯನು ರಾಜಕುವರನಿಗೆ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು