1 ಪೂರ್ವಕಾಲ ವೃತ್ತಾಂತ 21:23 - ಕನ್ನಡ ಸತ್ಯವೇದವು C.L. Bible (BSI)23 ಆಗ ಒರ್ನಾನನು ದಾವೀದನಿಗೆ, “ನನ್ನ ಒಡೆಯರಾದ ಅರಸರು ತಮಗೆ ಇಷ್ಟವಾದದ್ದನ್ನು ತೆಗೆದುಕೊಂಡು ಬಲಿ ಅರ್ಪಿಸಬಹುದು. ಬಲಿದಾನಕ್ಕೆ ಇಲ್ಲಿ ಹೋರಿಗಳೂ ಸೌದೆಗೆ ಹಂತೀಕುಂಟೆಗಳೂ ನೈವೇದ್ಯಕ್ಕೆ ಗೋದಿಯೂ ಇರುತ್ತವೆ, ಇವೆಲ್ಲವನ್ನೂ ಕೊಡುತ್ತೇನೆ,” ಎಂದು ಹೇಳಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201923 ಆಗ ಒರ್ನಾನನು ದಾವೀದನಿಗೆ, “ನನ್ನ ಒಡೆಯನಾದ ಅರಸನು ತನಗೆ ಇಷ್ಟವಾದದ್ದನ್ನು ತೆಗೆದುಕೊಂಡು ಯಜ್ಞಮಾಡೋಣವಾಗಲಿ. ಇಲ್ಲಿ ಯಜ್ಞಕ್ಕೆ ಹೋರಿಗಳೂ, ಸೌದೆಗೆ ಹಂತೀಕುಂಟೆಗಳೂ, ನೈವೇದ್ಯಕ್ಕೋಸ್ಕರ ಗೋದಿಯೂ ಇರುತ್ತವೆ. ಇವೆಲ್ಲವನ್ನೂ ಕೊಡುತ್ತೇನೆ” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)23 ಆಗ ಒರ್ನಾನನು ದಾವೀದನಿಗೆ - ನನ್ನ ಒಡೆಯನಾದ ಅರಸನು ತನಗೆ ಇಷ್ಟವಾದದ್ದನ್ನು ತೆಗೆದುಕೊಂಡು ಯಜ್ಞಮಾಡೋಣವಾಗಲಿ. ಇಲ್ಲಿ ಯಜ್ಞಕ್ಕೆ ಹೋರಿಗಳೂ ಸೌದೆಗೆ ಹಂತೀಕುಂಟೆಗಳೂ ನೈವೇದ್ಯಕ್ಕೋಸ್ಕರ ಗೋದಿಯೂ ಇರುತ್ತವೆ; ಇವೆಲ್ಲವನ್ನೂ ಕೊಡುತ್ತೇನೆ ಎಂದು ಹೇಳಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್23 ಆಗ ಒರ್ನಾನನು, “ನೀನು ನನ್ನ ಒಡೆಯನೂ ಅರಸನೂ ಆಗಿರುವಿ. ಈ ಕಣವನ್ನು ನೀನೇ ತೆಗೆದುಕೋ. ನೀನು ಏನು ಬೇಕಾದರೂ ಮಾಡು. ಸರ್ವಾಂಗಹೋಮಕ್ಕೆ ಬೇಕಾದ ಕಟ್ಟಿಗೆಗಾಗಿ ನೇಗಿಲುಗಳನ್ನೂ ಧಾನ್ಯಾರ್ಪಣೆಗೆ ಬೇಕಾದ ಗೋಧಿಯನ್ನೂ ಪಶುವನ್ನೂ ನಾನು ಕೊಡುತ್ತೇನೆ” ಅಂದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ23 ಒರ್ನಾನನು ದಾವೀದನಿಗೆ, “ನಿನಗಾಗಿ ತೆಗೆದುಕೋ, ಅರಸನಾದ ನನ್ನ ಒಡೆಯನು ತನ್ನ ದೃಷ್ಟಿಗೆ ಉತ್ತಮವಾದದ್ದನ್ನು ಮಾಡಲಿ. ದಹನಬಲಿಗೋಸ್ಕರ ಎತ್ತುಗಳೂ, ಸೌದೆಗೆ ಹಂತೀಕುಂಟೆ, ಧಾನ್ಯ ಸಮರ್ಪಣೆಗೋಸ್ಕರ ಗೋಧಿ ಕೊಡುವುದಲ್ಲದೆ, ಸಮಸ್ತವನ್ನೂ ಕೊಡುವೆನು,” ಎಂದನು. ಅಧ್ಯಾಯವನ್ನು ನೋಡಿ |