1 ಪೂರ್ವಕಾಲ ವೃತ್ತಾಂತ 2:55 - ಕನ್ನಡ ಸತ್ಯವೇದವು C.L. Bible (BSI)
55 ಬರವಣಿಗೆಯಲ್ಲಿ ಮತ್ತು ದಾಖಲೆಗಳನ್ನು ನಕಲು ಮಾಡುವುದರಲ್ಲಿ ಪ್ರವೀಣರಾದ ತಿರ್ರಾತ್ಯರು, ಶಿಮ್ಗಾತ್ಯರು, ಸುಕಾತ್ಯರು ಯಾಬೇಚಿನಲ್ಲಿ ವಾಸಿಸಿದ್ದರು. ರೇಕಾಬ್ಬರೊಂದಿಗೆ ಅಂತರ್ ವಿವಾಹ ಮಾಡಿಕೊಂಡ ಕೇನ್ಯರು ಇವರೇ.
55 ಯಾಬೇಚಿನಲ್ಲಿ ವಾಸಿಸುವ ಬರವಣಿಗೆಯಲ್ಲಿ ಮತ್ತು ದಾಖಲೆಗಳನ್ನು ಬರೆಯುವುದರಲ್ಲೂ ಮತ್ತು ಪ್ರತಿಗಳನ್ನು ಮಾಡುವುದರಲ್ಲೂ ಪ್ರವೀಣರಾದ ತಿರ್ರಾತ್ಯರು, ಶಿಮ್ಗಾತ್ಯರು ಮತ್ತು ಸೂಕಾತ್ಯರು, ಇವರು ರೇಕಾಬನ ಮನೆಯವರ ಮೂಲ ಪುರುಷನಾಗಿರುವ ಹಮತನಿಂದ ಹುಟ್ಟಿದ ಕೇನ್ಯರು.
55 ಶಾಸ್ತ್ರಿಗಳ ಸಂತಾನ: ಯಾಬೇಚ್, ತಿರ್ರಾತ್ಯ, ಶಿಮ್ಗಾತ್ಯ ಮತ್ತು ಸೂಕಾತ್ಯ ಎಂಬ ಸ್ಥಳಗಳಲ್ಲಿ ವಾಸಿಸುವರು. ಇವರು ಹಮಾತಿನಿಂದ ಬಂದ ಕೇನ್ಯರು. ಬೆತ್‌ರೇಕಾಬನ್ನು ಹಮಾತನು ಸ್ಥಾಪಿಸಿದನು.
ಯೇಹುವು ಅಲ್ಲಿಂದ ಮುಂದೆ ಹೋಗುತ್ತಿರುವಾಗ ತನ್ನನ್ನು ಎದುರುಗೊಳ್ಳುವುದಕ್ಕಾಗಿ ಬಂದ ರೇಕಾಬನ ಮಗನಾದ ಯೆಹೋನಾದಾಬನನ್ನು ಕಂಡು ವಂದಿಸಿದನು. “ನಿನ್ನ ವಿಷಯದಲ್ಲಿ ನನ್ನ ಮನಸ್ಸು ಯಥಾರ್ಥವಾಗಿರುವಂತೆ ನಿನ್ನ ಮನಸ್ಸು ಯಥಾರ್ಥವಾಗಿ ಇರುತ್ತದೋ?’ ಎಂದು ಕೇಳಿದನು. ಅವನು, “ಹೌದು,” ಎಂದು ಉತ್ತರಕೊಟ್ಟನು. ಆಗ ಯೇಹುವು, “ಹಾಗಾದರೆ ನಿನ್ನ ಕೈಕೊಡು,” ಎನ್ನಲು ಅವನು ಕೈಕೊಟ್ಟನು. ಯೇಹುವು ಅವನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡನು.
ಕೇನ್ಯನೂ ಮೋಶೆಯ ಮಾವನೂ ಆದ ಹೋಬಾಬನ ವಂಶದವರು ಖರ್ಜೂರ ನಗರದಿಂದ ಹೊರಟು ಯೆಹೂದ ಕುಲದವರ ಜೊತೆಯಲ್ಲಿ ಆರಾದಿನ ದಕ್ಷಿಣದಲ್ಲಿರುವ ಯೆಹೂದ ಮರುಭೂಮಿಗೆ ಬಂದು ಅಲ್ಲಿಯ ಜನರ ಸಂಗಡ ವಾಸಮಾಡಿದರು.
ಕೇನ್ಯನಾದ ಹೆಬೆರನು ಮೋಶೆಯ ಮಾವ ಹೋಬಾಬನ ವಂಶದ ಉಳಿದ ಕೇನ್ಯರನ್ನು ಬಿಟ್ಟು ಕೆದೆಷಿನ ಹತ್ತಿರ ಇರುವ ‘ಚಾನನ್ನೀಮ್’ ಎಂಬ ಊರಿನ ಏಲೋನ್ ವೃಕ್ಷದವರೆಗೆ ಬಂದು ಅಲ್ಲಿ ಗುಡಾರ ಹಾಕಿಕೊಂಡಿದ್ದನು.
ಆದರೆ ಕೇನ್ಯರಿಗೆ ಅವನು, “ನೀವು ಅಮಾಲೇಕ್ಯರನ್ನು ಬಿಟ್ಟುಹೋಗಿ; ಇಲ್ಲವಾದರೆ ನೀವೂ ಅವರೊಡನೆ ನಾಶವಾದೀರಿ; ಇಸ್ರಯೇಲರು ಈಜಿಪ್ಟಿನಿಂದ ಬರುತ್ತಿದ್ದಾಗ ನೀವು ಅವರಿಗೆ ದಯೆತೋರಿಸಿದಿರ ಅಲ್ಲವೆ?” ಎಂದು ಹೇಳಿ ಕಳುಹಿಸಿದನು. ಅದರಂತೆಯೇ ಅವರು ಅಮಾಲೇಕ್ಯರನ್ನು ಬಿಟ್ಟುಹೋದರು.
ಎಜ್ರನು, ಇಸ್ರಯೇಲ್ ದೇವರಾದ ಸರ್ವೇಶ್ವರನಿಂದ ದೊರಕಿದ ಮೋಶೆಯ ಧರ್ಮೋಪದೇಶದಲ್ಲಿ ಪಾಂಡಿತ್ಯ ಪಡೆದ ಒಬ್ಬ ಧರ್ಮಶಾಸ್ತ್ರಿ ಆಗಿದ್ದನು. ಅವನ ದೇವರಾದ ಸರ್ವೇಶ್ವರನ ಕೃಪಾಹಸ್ತ ಅವನ ಮೇಲಿತ್ತು. ಆದುದರಿಂದ ಅರಸನು ಅವನಿಗೆ ಇಷ್ಟವಾದುದನ್ನೆಲ್ಲ ಅನುಗ್ರಹಿಸಿದನು.