Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 2:24 - ಕನ್ನಡ ಸತ್ಯವೇದವು C.L. Bible (BSI)

24 ಹೆಚ್ರೋನನು ಮರಣ ಹೊಂದಿದ ನಂತರ ಅವನ ಮಗ ಕಾಲೇಬ್ ತನ್ನ ತಂದೆಯ ವಿಧವೆ ಎಫ್ರಾತಳನ್ನು ಮದುವೆಯಾದನು. ಅವರಿಗೆ ಅಷ್ಹೂರ ಎಂಬ ಮಗ ಜನಿಸಿದ. ತೆಕೋವ ಪಟ್ಟಣವನ್ನು ಕಟ್ಟಿದವನು ಇವನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಹೆಚ್ರೋನನು ಕಾಲೇಬನ ಎಫ್ರಾತದಲ್ಲಿ ಮರಣಹೊಂದಿದ ನಂತರ ಅವನ ಹೆಂಡತಿಯಾದ ಅಬೀಯ ಎಂಬಾಕೆಯು ಅಷ್ಹೂರನನ್ನು ಹೆತ್ತಳು. ಇವನು ತೆಕೋವದವರ ಮೂಲಪುರುಷನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಹೆಚ್ರೋನನು ಕಾಲೇಬ್ ಎಫ್ರಾತದಲ್ಲಿ ಸತ್ತನಂತರ ಅವನ ಹೆಂಡತಿಯಾದ ಅಬೀಯ ಎಂಬಾಕೆಯು ಅಷ್ಹೂರನನ್ನು ಹೆತ್ತಳು. ಇವನು ತೆಕೋವದವರ ಮೂಲ ಪುರುಷನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 (ಹೆಚ್ರೋನನ ಹೆಂಡತಿ ಅಬೀಯ.) ಹೆಚ್ರೋನನು ಕಾಲೇಬ್ ಎಫ್ರಾತದಲ್ಲಿ ಸತ್ತನು. ಅವನ ಮರಣದನಂತರ ಅಬೀಯಳು ಅವನಿಗೆ ಅಷ್ಹೂರ್ ಎಂಬ ಮಗನನ್ನು ಹೆತ್ತಳು. ಅಷ್ಹೂರನು ತೆಕೋವನ ತಂದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಹೆಚ್ರೋನನು ಕಾಲೇಬ್ ಎಫ್ರಾತದಲ್ಲಿ ಸತ್ತ ತರುವಾಯ ಹೆಚ್ರೋನನ ಹೆಂಡತಿಯಾದ ಅಬೀಯಳು ಅವನಿಗೆ ಅಷ್ಹೂರನನ್ನು ಹೆತ್ತಳು. ಇವನು ತೆಕೋವನ ತಂದೆಯು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 2:24
8 ತಿಳಿವುಗಳ ಹೋಲಿಕೆ  

ತೆಕೋವ ಪಟ್ಟಣವನ್ನು ಸ್ಥಾಪಿಸಿದ ಅಷ್ಹೂರನಿಗೆ ಹೆಲಾಹ, ನಾರಾ ಎಂಬ ಪತ್ನಿಯರು ಇದ್ದರು.


ಜುದೇಯದಲ್ಲಿ ಮಹಾ ಭೂಕಂಪ ಆಗುವುದಕ್ಕೆ ಎರಡು ವರ್ಷಗಳ ಮುಂಚೆ, ತೆಕೋವದ ಕುರುಬರಲ್ಲೊಬ್ಬನಾದ ಆಮೋಸನಿಗೆ ಇಸ್ರಯೇಲಿನ ವಿಷಯವಾಗಿ ದೇವರಿಂದ ಬಂದ ಪ್ರಕಟನೆಗಳು ಇವು. ಆಗ ಜುದೇಯ ನಾಡನ್ನು ಉಜ್ಜೀಯನೆಂಬ ಅರಸನು ಆಳುತ್ತಿದ್ದ ಕಾಲ. ಅಂತೆಯೇ, ಯೋವಾಷನ ಮಗನಾದ ಯಾರೊಬ್ಬಾಮನು ಇಸ್ರಯೇಲನ್ನು ಆಳುತ್ತಿದ್ದ ಕಾಲ.


ಹೆಚ್ರೋನನಿಗೆ ಮೂರು ಜನ ಮಕ್ಕಳು ಇದ್ದರು. ಅವರು - ಯೆರಹ್ಮೇಲ್, ರಾಮ್ ಮತ್ತು ಕೆಲೂಬಾಯ್ ಎಂಬವರು.


ಅವನು ತೆಕೋವದಿಂದ ಒಬ್ಬ ಬುದ್ಧಿವಂತೆಯಾದ ಸ್ತ್ರೀಯನ್ನು ಕರೆಕಳುಹಿಸಿ ಆಕೆಗೆ, “ನೀನು ಪ್ರಿಯರನ್ನು ಕಳೆದುಕೊಂಡು ಬಹುದಿವಸಗಳಿಂದ ಶೋಕಪಡುತ್ತಿರುವ ಸ್ತ್ರೀಯೋ ಎಂಬಂತೆ ನಟಿಸಿ ಶೋಕವಸ್ತ್ರಗಳನ್ನು ಧರಿಸಿಕೋ;


ಕೆರೇತ್ಯರೂ ಯೆಹೂದ್ಯರೂ ಕಾಲೇಬ್ಯರೂ ಇರುವ ದಕ್ಷಿಣ ಪ್ರಾಂತ್ಯವನ್ನು ನಾವು ಸೂರೆಮಾಡಿ ಚಿಕ್ಲಗ್ ಊರನ್ನು ಸುಟ್ಟುಬಿಟ್ಟು ಬಂದೆವು,” ಎಂದು ಉತ್ತರಕೊಟ್ಟನು.


ಆದರೆ ಗೆಷೂರ್ಯರ ಮತ್ತು ಅರಾಮ್ಯರ ರಾಜ್ಯಗಳವರು ಯಾಯೀರನ ಹಾಗೂ ಕೆನತ್ ಪ್ರಾಂತ್ಯದ ಗ್ರಾಮಗಳನ್ನೂ ಅವುಗಳ ಸಮೀಪದ ಪಟ್ಟಣಗಳನ್ನೂ ಸೇರಿ ಒಟ್ಟು ಅರುವತ್ತು ಪಟ್ಟಣಗಳನ್ನು ಗೆದ್ದುಕೊಂಡರು. ಅಲ್ಲಿ ವಾಸಿಸಿದ್ದ ಎಲ್ಲಾ ಜನರೂ ಗಿಲ್ಯಾದನ ತಂದೆ ಮಾಕೀರನ ವಂಶಜರೇ ಆಗಿದ್ದರು.


ಹೆಚ್ರೋನನ ಚೊಚ್ಚಲ ಮಗ ಯೆರಹ್ಮೇಲನಿಗೆ ಐದು ಜನ ಮಕ್ಕಳು ಇದ್ದರು. ಅವರು - ಹಿರಿಯವನಾದ ರಾಮ್ ಮತ್ತು ಬೂನ, ಓರೆನ್, ಓಚೆಮ್, ಹಾಗೂ ಅಹೀಯ ಎಂಬವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು