Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 17:25 - ಕನ್ನಡ ಸತ್ಯವೇದವು C.L. Bible (BSI)

25 ನನ್ನ ದೇವರೇ, ತಾವು ತಮ್ಮ ದಾಸನಿಗೆ, ‘ನಾನು ನಿನಗೊಂದು ಮನೆತನವನ್ನು ಕಟ್ಟುವೆನು’ ಎಂದು ವಾಗ್ದಾನ ಮಾಡಿದ್ದೀರಿ. ಆದುದರಿಂದಲೇ ಈ ಪ್ರಕಾರ ನಿಮ್ಮನ್ನು ಪ್ರಾರ್ಥಿಸುವುದಕ್ಕೆ ಧೈರ್ಯಗೊಂಡೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ನನ್ನ ದೇವರೇ, ನೀನು ನಿನ್ನ ಸೇವಕನಿಗೆ, ‘ನಾನು ನಿನಗೊಂದು ಮನೆಯನ್ನು ಕಟ್ಟುವೆನು’ ಎಂದು ವಾಗ್ದಾನ ಮಾಡಿದ್ದರಿಂದ ಅವನು ನಿನ್ನನ್ನು ಪ್ರಾರ್ಥಿಸುವುದಕ್ಕೆ ಧೈರ್ಯಗೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ನನ್ನ ದೇವರೇ, ನೀನು ನಿನ್ನ ಸೇವಕನಿಗೆ - ನಾನು ನಿನಗೊಂದು ಮನೆಕಟ್ಟುವೆನು ಎಂದು ವಾಗ್ದಾನಮಾಡಿದ್ದರಿಂದ ಅವನು ನಿನ್ನನ್ನು ಪ್ರಾರ್ಥಿಸುವದಕ್ಕೆ ಧೈರ್ಯಗೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 “ನನ್ನ ದೇವರೇ, ನಿನ್ನ ಸೇವಕನಾದ ನನ್ನೊಂದಿಗೆ ನೀನು ಮಾತನಾಡಿದೆ. ನೀನು ನನ್ನ ಕುಟುಂಬವನ್ನು ಸ್ಥಿರವಾಗಿ ಕಟ್ಟುವೆನೆಂದು ವಾಗ್ದಾನ ಮಾಡಿದೆ. ಆದ್ದರಿಂದ ನಾನು ಧೈರ್ಯದಿಂದ ನಿನ್ನ ಸಂಗಡ ಮಾತನಾಡುತ್ತಿದ್ದೇನೆ; ನಿನ್ನ ವಾಗ್ದಾನವನ್ನು ನೆರವೇರಿಸು ಎಂದು ಕೇಳಿಕೊಳ್ಳುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 “ಏಕೆಂದರೆ ನನ್ನ ದೇವರೇ, ನೀವು ನಿಮ್ಮ ಸೇವಕನಿಗೆ ಮನೆಯನ್ನು ಕಟ್ಟುವೆನೆಂದು ಪ್ರಕಟ ಮಾಡಿದ್ದರಿಂದ ನಿಮ್ಮನ್ನು ಪ್ರಾರ್ಥಿಸುವುದಕ್ಕೆ ನಿಮ್ಮ ಸೇವಕನ ಹೃದಯದಲ್ಲಿ ಧೈರ್ಯ ಉಂಟಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 17:25
6 ತಿಳಿವುಗಳ ಹೋಲಿಕೆ  

ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ನಾನು ಇನ್ನೊಂದು ವಿಷಯದಲ್ಲಿ ಇಸ್ರಯೇಲ್ ವಂಶದವರ ವಿಜ್ಞಾಪನೆಯನ್ನು ಆಲಿಸಿ ನೆರವೇರಿಸುವೆನು. ಅದೇನೆಂದರೆ, ಅವರ ಜನಸಂಖ್ಯೆಯನ್ನು ಹಿಂಡಿನಂತೆ ಹೆಚ್ಚಿಸುವೆನು.


ದೀನ ಕೋರಿಕೆಯನು ಪ್ರಭು, ತೀರಿಸುವೆ I ಹುರಿದುಂಬಿಸಿ, ಅವರ ಮೊರೆಗೆ ಕಿವಿಗೊಡುವೆ II


ಸೌಲನು ಬರುವುದಕ್ಕೆ ಒಂದು ದಿವಸ ಮುಂದಾಗಿಯೇ ಸರ್ವೇಶ್ವರ ಸಮುವೇಲನಿಗೆ,


‘ಸರ್ವಶಕ್ತರಾದ ಸರ್ವೇಶ್ವರ, ಇಸ್ರಯೇಲರ ದೇವರು; ತಮ್ಮ ದಾಸ ದಾವೀದನ ಮನೆತನವನ್ನು ತಮ್ಮ ಸನ್ನಿಧಿಯಲ್ಲಿ ಸ್ಥಿರವಾಗಿಟ್ಟಿದ್ದಾರೆ’ ಎಂದು ಜನರು ನಿಮ್ಮ ನಾಮವನ್ನು ಕೊಂಡಾಡಲಿ.


ಸರ್ವೇಶ್ವರಾ, ತಮ್ಮ ದಾಸನಾದ ನನಗೆ ಇಂಥ ಶ್ರೇಷ್ಠ ವಾಗ್ದಾನ ಮಾಡಿದ ನೀವು ದೇವರಾಗಿದ್ದೀರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು