Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 16:35 - ಕನ್ನಡ ಸತ್ಯವೇದವು C.L. Bible (BSI)

35 ಹೇ ದೇವಾ, ನಮ್ಮ ಸಹಾಯಕ, ನಮ್ಮನ್ನು ಉದ್ಧರಿಸು I ನಾಡು ನಾಡುಗಳಿಂದ ನಮ್ಮನ್ನು ಒಂದುಗೂಡಿಸು I ನಿನ್ನ ಪವಿತ್ರ ನಾಮವನು ಭಜಿಸುವೆವು ನಾವು I ನಿನ್ನ ಸ್ತುತಿಸ್ತೋತ್ರಗಳಲಿ ಹೆಚ್ಚಳಪಡುವೆವು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

35 ನಮ್ಮ ಸಹಾಯಕನಾಗಿರುವ ದೇವರೇ, ನಮ್ಮನ್ನು ರಕ್ಷಿಸು; ಅನ್ಯಜನಗಳಲ್ಲಿ ಚದುರಿಹೋಗಿರುವ ನಮ್ಮನ್ನು ಬಿಡಿಸಿ ಒಟ್ಟುಗೂಡಿಸು; ಆಗ ನಿನ್ನ ಪರಿಶುದ್ಧ ನಾಮವನ್ನು ಕೊಂಡಾಡುವೆವು; ನಿನ್ನ ಸ್ತೋತ್ರದಲ್ಲಿ ಹೆಚ್ಚಳಪಡುವೆವು ಅನ್ನಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

35 ನಮ್ಮ ಸಹಾಯಕನಾಗಿರುವ ದೇವರೇ, ನಮ್ಮನ್ನು ರಕ್ಷಿಸು; ಅನ್ಯಜನಗಳಲ್ಲಿ ಚದರಿರುವ ನಮ್ಮನ್ನು ಬಿಡಿಸಿ ಕೂಡಿಸು; ಆಗ ನಿನ್ನ ಪರಿಶುದ್ಧನಾಮವನ್ನು ಕೊಂಡಾಡುವೆವು; ನಿನ್ನ ಸ್ತೋತ್ರದಲ್ಲಿ ಹೆಚ್ಚಳಪಡುವೆವು ಅನ್ನಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

35 “ರಕ್ಷಕನಾದ ಯೆಹೋವನೇ, ನಮ್ಮನ್ನು ರಕ್ಷಿಸು; ನಮ್ಮನ್ನು ಒಂದುಗೂಡಿಸು; ಅನ್ಯಜನಾಂಗಗಳಿಂದ ನಮ್ಮನ್ನು ರಕ್ಷಿಸು. ಆಗ ನಾವು ನಿನ್ನ ಪರಿಶುದ್ಧ ನಾಮವನ್ನು ಕೀರ್ತಿಸುವೆವು. ನಮ್ಮ ಹಾಡುಗಳಿಂದ ನಿನ್ನನ್ನು ಘನಪಡಿಸುವೆವು” ಎಂದು ಆತನಿಗೆ ಹೇಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

35 ನಮ್ಮ ರಕ್ಷಣೆಯ ದೇವರೇ, “ನಾವು ನಿಮ್ಮ ಪರಿಶುದ್ಧ ಹೆಸರಿಗೆ ಉಪಕಾರಸ್ತುತಿ ಮಾಡಿ, ನಿಮ್ಮ ಸ್ತೋತ್ರದಲ್ಲಿ ಜಯಘೋಷ ಮಾಡುವ ಹಾಗೆ ನಮ್ಮನ್ನು ರಕ್ಷಿಸಿರಿ, ಜನಾಂಗಗಳೊಳಗಿಂದ ನಮ್ಮನ್ನು ಬಿಡುಗಡೆ ಮಾಡಿ ಒಂದುಗೂಡಿಸಿರಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 16:35
15 ತಿಳಿವುಗಳ ಹೋಲಿಕೆ  

ನೀವು ದೇವರು ಆಯ್ದುಕೊಂಡ ಜನಾಂಗ, ರಾಜಯಾಜಕರು, ಪವಿತ್ರ ಪ್ರಜೆ, ದೇವರ ಸ್ವಕೀಯ ಜನ; ಅವರ ಅದ್ಭುತ ಕಾರ್ಯಗಳನ್ನು ಪ್ರಚುರಪಡಿಸುವುದಕ್ಕಾಗಿಯೇ ಆಯ್ಕೆಯಾದವರು. ಕಾರ್ಗತ್ತಲಿನಿಂದ ತಮ್ಮ ಅದ್ಭುತಕರವಾದ ಬೆಳಕಿಗೆ ನಿಮ್ಮನ್ನು ಕರೆತಂದವರು ಅವರೇ.


ನೀವೂ ಸಹ ಸಜೀವ ಶಿಲೆಗಳಾಗಿದ್ದೀರಿ; ಆಧ್ಯಾತ್ಮಿಕ ದೇವಾಲಯವನ್ನು ನಿರ್ಮಿಸಲು ನಿಮ್ಮನ್ನೇ ಅರ್ಪಿಸಿಕೊಳ್ಳಿ. ಆ ದೇವಾಲಯದಲ್ಲೇ ಯೇಸುಕ್ರಿಸ್ತರ ಮುಖಾಂತರ ದೇವರಿಗೆ ಮೆಚ್ಚುಗೆಯಾಗಿರುವ ಆಧ್ಯಾತ್ಮಿಕ ಬಲಿಗಳನ್ನು ಸಮರ್ಪಿಸುವ ಪವಿತ್ರ ಯಾಜಕವರ್ಗದವರು ನೀವಾಗಿರುವಿರಿ.


ಬರಲಿ ಇಸ್ರಯೇಲಿಗೆ ಜೀವೋದ್ಧಾರ ಸಿಯೋನಿನಿಂದ I ತರಲಿ ಪ್ರಭು ತನ್ನ ಪ್ರಜೆಗೆ ಮರಳಿ ಸಿರಿಸಂಪತ್ತ I ಸಿಗಲಿ ಯಕೋಬ - ಇಸ್ರಯೇಲ ಜನತೆಗೆ ಹರ್ಷಾನಂದ II


ಆದಕಾರಣ ಯೇಸುಕ್ರಿಸ್ತರಲ್ಲಿ ಮೊತ್ತಮೊದಲು ನಿರೀಕ್ಷೆಯನ್ನಿರಿಸಿದ ನಾವು ದೇವರ ಮಹಿಮೆಯನ್ನು ಸ್ತುತಿಸಿ ಹಾಡಬೇಕು.


ಆದ್ದರಿಂದ ಪವಿತ್ರಗ್ರಂಥದಲ್ಲಿ ಹೇಳಿರುವಂತೆ: ‘ಹೆಚ್ಚಳಪಡುವವನು ಪ್ರಭುವಿನಲ್ಲಿ ಹೆಚ್ಚಳಪಡಲಿ.’


ಪಡೆವರು ಇಸ್ರಯೇಲಿನ ವಂಶಜರೆಲ್ಲರು ಸರ್ವೇಶ್ವರನಲ್ಲೇ ಜೀವೋದ್ಧಾರವನು, ಆನಂದವನು.”


ನಾ ಸೃಷ್ಟಿಸಿದ ಆಪ್ತ ಜನಕೆ ನೀಡುವೆನು ಜಲಪಾನವನು; ಎಂದೇ ಸ್ತುತಿಸಿಕೊಂಡಾಡುವರು ನನ್ನನು.”


ತನ್ನ ವಿಧಿಗಳಂತೆ ನಡೆಯಲೆಂದೇ I ತನ್ನ ಶಾಸ್ತ್ರವನು ಅನುಸರಿಸಲೆಂದೇ I ಈ ಪರಿ ಮಾಡಿದಾ ಸ್ವಾಮಿಗೆ ವಂದನೆ II


ಬರಲಿ ಇಸ್ರಯೇಲಿಗೆ ಜೀವೋದ್ಧಾರ ಸಿಯೋನಿನಿಂದ I ತರಲಿ ದೇವರು ತನ್ನ ಪ್ರಜೆಗೆ ಮರಳಿ ಸಿರಿಸಂಪದ I ನೀಡಲಿ ಯಕೋಬ ಮೇಣ್ ಇಸ್ರಯೇಲ ಜನತೆಗೆ ಹರ್ಷಾನಂದ II


ನಿನ್ನಲ್ಲಿಯೇ ದೇವಾ, ಹೆಮ್ಮೆಪಡುವೆವು ಸತತ I ನಿನ್ನ ನಾಮವನೆ ಸಂಕೀರ್ತಿಸುವೆವು ನಿರುತ II


ಯೆಹೂದ್ಯರಿಂದಲೂ ಅನ್ಯಜನರಿಂದಲೂ ನಾನು ನಿನ್ನನ್ನು ಕಾಪಾಡುತ್ತೇನೆ. ಇವರ ಬಳಿಗೇ ನಾನು ನಿನ್ನನ್ನು ಕಳುಹಿಸುತ್ತಿದ್ದೇನೆ.


ಆಗ, ನಿಮ್ಮ ದೇವರಾದ ಸರ್ವೇಶ್ವರ ದುರವಸ್ಥೆಯಿಂದ ನಿಮ್ಮನ್ನು ತಪ್ಪಿಸಿ, ನಿಮ್ಮನ್ನು ಕನಿಕರಿಸಿ, ನಿಮ್ಮನ್ನು ಚದುರಿಸಿದ ಎಲ್ಲ ದೇಶಗಳಿಂದ ಮತ್ತೆ ಕೂಡಿಸುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು