Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 15:16 - ಕನ್ನಡ ಸತ್ಯವೇದವು C.L. Bible (BSI)

16 ಸ್ವರಮಂಡಲ, ಕಿನ್ನರಿ, ತಾಳಗಳೊಂದಿಗೆ ಸಂಭ್ರಮದಿಂದ ವಾದ್ಯಗಳನ್ನು ಬಾರಿಸುವುದಕ್ಕೂ ಹಾಡುವುದಕ್ಕೂ ವಿವಿಧ ಲೇವಿಯರನ್ನು ನೇಮಿಸಬೇಕೆಂದು ದಾವೀದನು ಲೇವಿಯರ ನಾಯಕನಿಗೆ ಆಜ್ಞಾಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಆಗ ದಾವೀದನು ಲೇವಿಯರ ಪ್ರಧಾನರಿಗೆ, “ಗಾಯಕರಾದ ನಿಮ್ಮ ಸಹೋದರರನ್ನು ಸ್ವರಮಂಡಲ, ಕಿನ್ನರಿ, ತಾಳ ಮೊದಲಾದ ವಾದ್ಯಗಳಿಂದ ಉತ್ಸಾಹಧ್ವನಿ ಮಾಡುವುದಕ್ಕಾಗಿ ನೇಮಿಸಿರಿ” ಎಂದು ಆಜ್ಞಾಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಆಗ ದಾವೀದನು ಲೇವಿಯರ ಪ್ರಧಾನರಿಗೆ - ಗಾಯಕರಾದ ನಿಮ್ಮ ಸಹೋದರರನ್ನು ಸ್ವರಮಂಡಲ ಕಿನ್ನರಿ ತಾಳ ಮೊದಲಾದ ವಾದ್ಯಗಳಿಂದ ಉತ್ಸಾಹ ಧ್ವನಿಮಾಡುವದಕ್ಕಾಗಿ ನೇವಿುಸಿರಿ ಎಂದು ಆಜ್ಞಾಪಿಸಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ದಾವೀದನು ಲೇವಿಯರಿಗೆ ತಮ್ಮ ಸಹೋದರರಾದ ಗಾಯಕರನ್ನು ಕರೆದುಕೊಂಡು ಬರಲು ಹೇಳಿದನು. ಹಾರ್ಪ್ ವಾದ್ಯಗಳನ್ನು, ಲೈರ್ ವಾದ್ಯಗಳನ್ನು ಮತ್ತು ತಾಳಗಳನ್ನು ತಂದು ಆನಂದಗೀತೆಗಳನ್ನು ಹಾಡುವಂತೆ ಅವರಿಗೆ ತಿಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಇದಲ್ಲದೆ ದಾವೀದನು ವಾದ್ಯಗಳನ್ನೂ ವಿಶೇಷವಾದ ವೀಣೆಗಳನ್ನೂ, ಕಿನ್ನರಿಗಳನ್ನೂ, ತಾಳಗಳನ್ನೂ ಬಾರಿಸಿ ಸಂತೋಷದಿಂದ ಸ್ವರವನ್ನೂ ಎತ್ತುವ ಹಾಗೆ, ತಮ್ಮ ಸಹೋದರರಲ್ಲಿ ಹಾಡುಗಾರರನ್ನು ನೇಮಿಸುವುದಕ್ಕೆ ಲೇವಿಯರ ಪ್ರಧಾನರಿಗೆ ಆಜ್ಞಾಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 15:16
38 ತಿಳಿವುಗಳ ಹೋಲಿಕೆ  

ದಾವೀದನೂ ಎಲ್ಲಾ ಜನರೂ ಕಿನ್ನರಿ, ಸ್ವರಮಂಡಲ, ತಮಟೆ, ತಾಳ, ತುತೂರಿ ಮುಂತಾದ ವಾದ್ಯಗಳನ್ನು ಬಾರಿಸುತ್ತಾ ಪೂರ್ಣಶಕ್ತಿಯಿಂದ ಹಾಡುತ್ತಾ ದೇವರ ಮುಂದೆ ನರ್ತಿಸುತ್ತಾ ನಡೆದರು.


ಜೆಕರ್ಯನೂ ದೈವಪುರುಷ ದಾವೀದನ ವಾದ್ಯಗಳನ್ನು ಹಿಡಿದಿದ್ದ. ಇವನ ಬಂಧುಗಳಾದ ಶೆಮಾಯ, ಅಜರೇಲ್, ಮಿಲಲೈ, ಗಿಲಾಲೈ, ಮಾಯೈ, ನೆತನೇಲ್, ಯೆಹೂದ, ಹನಾನೀ ಎಂಬವರೂ ಹೋದರು. ಧರ್ಮೋಪದೇಶಕನಾದ ಎಜ್ರನು ಇವರ ಮುಂದಾಳಾಗಿ ಇದ್ದನು.


ಮಂಜೂಷವನ್ನು ಒಳಗಿಟ್ಟ ಯಾಜಕರು ದೇವಾಲಯದಿಂದ ಹೊರಗೆ ಬಂದ ಕೂಡಲೆ ಒಕ್ಕೊರಲಿನಿಂದ ಸ್ವರವೆತ್ತಿ ಸರ್ವೇಶ್ವರನನ್ನು ಕೀರ್ತಿಸುವುದಕ್ಕಾಗಿ, ತುತೂರಿ ಊದುವವರೂ ಗಾಯನಮಾಡುವವರೂ ಅಲ್ಲಿ ನಿಂತಿದ್ದರು. ತುತೂರಿ, ತಾಳ ಮೊದಲಾದ ವಾದ್ಯಗಳ ಧ್ವನಿ ಹಾಗೂ ‘ಸರ್ವೇಶ್ವರ ಒಳ್ಳೆಯವರು, ಅವರ ಅಚಲ ಪ್ರೀತಿ ಶಾಶ್ವತವಾದುದು’ ಎಂದು ಕೃತಜ್ಞತಾಸ್ತುತಿ ಮಾಡುವವರ ಸ್ವರ ಕೇಳಿಸಿದೊಡನೆ ಮೇಘವೊಂದು ಸರ್ವೇಶ್ವರನ ಆಲಯದಲ್ಲಿ ತುಂಬಿಕೊಂಡಿತು.


ದ್ವಾರಪಾಲಕರನ್ನಾಗಿ ನಾಲ್ಕು ಸಾವಿರ ಹಾಗು ತಾನು ಒದಗಿಸಿದ್ದ ವಾದ್ಯಗಳಿಂದ ಸರ್ವೇಶ್ವರನನ್ನು ಭಜಿಸುವುದಕ್ಕಾಗಿ ನಾಲ್ಕು ಸಾವಿರ ಜನರನ್ನು ದಾವೀದನು ನೇಮಿಸಿದನು.


ಸ್ತುತಿಗೀತೆಗಳನ್ನು ಹಾಡುವಾಗ ತುತೂರಿ, ತಾಳ, ಮತ್ತಿತರ ವಾದ್ಯಗಳನ್ನು ಬಾರಿಸುವವರ ಮೇಲ್ವಿಚಾರಣೆಯೂ ಹೇಮಾನ್ ಮತ್ತು ಯೆದುತೂನರದಾಗಿತ್ತು. ಯೆದುತೂನನ ಮಕ್ಕಳಿಗೆ ದ್ವಾರಗಳನ್ನು ಕಾಯುವ ಹೊಣೆಯೂ ಇತ್ತು.


ನೀನು ಕ್ರೇಟ್ ದ್ವೀಪದಲ್ಲಿ ಇನ್ನೂ ಸರಿಪಡಿಸಬೇಕಾದ ಕೆಲಸಗಳನ್ನು ಕ್ರಮಪಡಿಸಿ, ಅಲ್ಲಿಯ ಪ್ರತಿಯೊಂದು ಪಟ್ಟಣಕ್ಕೂ ಸಭೆಯ ಹಿರಿಯರನ್ನು ನೇಮಿಸಬೇಕೆಂದು ನಿನ್ನನ್ನು ಅಲ್ಲೇ ಬಿಟ್ಟು ಬಂದೆ.


ಹಲವರ ಮುಂದೆ ನಾನು ಮಾಡಿದ ಉಪದೇಶವನ್ನು ನೀನೇ ಕೇಳಿದ್ದೀ. ಅದೇ ಉಪದೇಶವನ್ನು ಇತರರಿಗೂ ಬೋಧಿಸಲು ಪ್ರಾಮಾಣಿಕ ವ್ಯಕ್ತಿಗಳನ್ನು ನೇಮಿಸು.


ಇದಲ್ಲದೆ ಪ್ರತಿಯೊಂದು ಕ್ರೈಸ್ತಸಭೆಗೂ ಪ್ರಮುಖರನ್ನು ನೇಮಿಸಿದರು. ಪ್ರಾರ್ಥನೆ ಮತ್ತು ಉಪವಾಸಮಾಡಿ ತಾವು ಅಚಲವಾಗಿ ನಂಬಿದ್ದ ಪ್ರಭುವಿಗೆ ಅವರನ್ನು ಒಪ್ಪಿಸಿದರು.


ಹರ್ಷಧ್ವನಿ, ಉಲ್ಲಾಸ, ಕೋಲಾಹಲ, ವಧೂವರರ ಸ್ವರ, ಇವು ಮತ್ತೆ ಕೇಳಿಬರುವುವು. ‘ಸೇನಾಧೀಶ್ವರ ಸರ್ವೇಶ್ವರನಿಗೆ ಕೃತಜ್ಞತಾಸ್ತೋತ್ರ ಮಾಡಿ; ಆತ ಒಳ್ಳೆಯವನು, ಆತನ ಪ್ರೀತಿ ಶಾಶ್ವತ’ ಎಂದು ಹಾಡುತ್ತಾ ಕೃತಜ್ಞತಾಬಲಿಯನ್ನು ದೇವಾಲಯಕ್ಕೆ ತರುವರು. ಅವರ ಗಾನ ನಿಮ್ಮ ಕಿವಿಗೆ ಬೀಳುವುದು. ನಾಡನ್ನು ಬಿಡುಗಡೆಮಾಡಿ ಹಿಂದಿನ ಸುಸ್ಥಿತಿಗೆ ಏರಿಸುವೆನು.


ಸಾಕುತಂದೆಗಳಾಗುವರು ರಾಜರು ನಿನಗೆ ಸಾಕುತಾಯಿಯರಾಗುವರು ರಾಣಿಯರು ನಿನಗೆ. ನಿನ್ನ ಪಾದಧೂಳಿಯ ನೆಕ್ಕುವರವರು ಸಾಷ್ಟಾಂಗವೆರಗಿ ನನಗೆ. ಆಗ ನಿನಗೆ ಗೊತ್ತಾಗುವುದು ನಾನೇ ಸರ್ವೇಶ್ವರನೆಂದು ನನ್ನನ್ನು ನಿರೀಕ್ಷಿಸುವವರು ಆಶಾಭಂಗಪಡರೆಂದು.


ಆತನ ನಾಮವನು ಕೀರ್ತಿಸಲಿ ಕುಣಿತದಿಂದ I ಆತನನು ಭಜಿಸಲಿ ತಮಟೆ, ಕಿನ್ನರಿಗಳಿಂದ II


ಭೂನಿವಾಸಿಗಳೇ, ಜಯಘೋಷ ಮಾಡಿ ಪ್ರಭುವಿಗೆ I


ಬನ್ನಿ, ಸ್ತುತಿಗೀತೆ ಹಾಡೋಣ ಬನ್ನಿ, ಪ್ರಭುವಿಗೆ I ಜಯಘೋಷ ಮಾಡೋಣ ನಮ್ಮ ರಕ್ಷಕ ದೇವನಿಗೆ II


ಗಾಯಕ ನರ್ತಕರೂ ಹಾಡುವರೀ ಹಾಡ I “ನಮ್ಮೆಲ್ಲರ ಜೀವದೊರೆತೆ ನೀನೇ ನೋಡ” II


ಹಾಡಿರಿ ಶುಭಗೀತೆಯನು ಬಲಪ್ರದನಾದ ದೇವನಿಗೆ I ಮಾಡಿರಿ ಜಯಜಯಕಾರವನು ಯಕೋಬ ಕುಲದೇವನಿಗೆ II


ಗಾಯನಮಂಡಲಿಗಳು ಕೃತಜ್ಞತಾ ಸ್ತುತಿಕೀರ್ತನೆಗಳ ದೇವಸೇವೆಯೂ ಪೂರ್ವಕಾಲದಲ್ಲಿ ಅಂದರೆ, ದಾವೀದನ ಮತ್ತು ಆಸಾಫನ ಕಾಲದಲ್ಲೇ ಇದ್ದವು.


ದೇವರು ತಮಗೆ ವಿಶೇಷಾನಂದವನ್ನುಂಟು ಮಾಡಿದ್ದರಿಂದ ಜನರು ಆ ದಿನ ಅನೇಕ ಬಲಿದಾನಗಳನ್ನು ಸಮರ್ಪಿಸಿ ತಮ್ಮ ಮಡದಿಮಕ್ಕಳೊಡನೆ ಮಹೋತ್ಸವ ಮಾಡಿದರು. ಜೆರುಸಲೇಮಿನ ಉತ್ಸವದ ಹರ್ಷಧ್ವನಿ ಬಹುದೂರದವರೆಗೂ ಕೇಳಿಸಿತು.


ಯೆಹೂದ್ಯರಾದರೋ ದೇವರ ಕೃಪಾಹಸ್ತದಿಂದ, ಅವರ ಪ್ರೇರಣೆಯಿಂದ, ಏಕಮನಸ್ಸುಳ್ಳವರಾಗಿ, ಸರ್ವೇಶ್ವರನ ಧರ್ಮಶಾಸ್ತ್ರಾನುಸಾರ, ಅರಸನಿಂದಲೂ ಅಧಿಕಾರಿಗಳಿಂದಲೂ ಹೊರಟ ಆಜ್ಞೆಯನ್ನು ಕೈಕೊಂಡರು.


“ನೀವು ಲೇವಿಯರ ಗೋತ್ರಗಳ ನಾಯಕರು; ನಾನು ಸಿದ್ಧಪಡಿಸಿದ ಸ್ಥಳಕ್ಕೆ ಇಸ್ರಯೇಲರ ದೇವರಾದ ಸರ್ವೇಶ್ವರನ ಮಂಜೂಷವನ್ನು ತರುವುದಕ್ಕಾಗಿ ನೀವು ಹಾಗು ನಿಮ್ಮ ಜೊತೆಯಲ್ಲಿ ಲೇವಿಯರೂ ನಿಮ್ಮನ್ನೇ ಶುದ್ಧಪಡಿಸಿಕೊಳ್ಳಿರಿ.


ಆರೋನನ ಅಕ್ಕ ಮಿರ್ಯಾಮಳು ಒಬ್ಬ ಪ್ರವಾದಿನಿ. ಆಕೆ ತಮ್ಮಟೆಯನ್ನು ಕೈಗೆ ತೆಗೆದುಕೊಂಡಳು. ಮಹಿಳೆಯರೆಲ್ಲರು ತಮ್ಮಟೆ ಹಿಡಿದು ನಾಟ್ಯವಾಡುತ್ತಾ ಆಕೆಯ ಹಿಂದೆ ಹೊರಟರು.


ನಾರುಮಡಿಗಳನ್ನು ಧರಿಸಿಕೊಂಡು ತಾಳ, ಸ್ವರಮಂಡಲ, ಕಿನ್ನರಿ, ಇವುಗಳನ್ನು ಹಿಡಿದುಕೊಂಡು, ಲೇವಿಯ ಗಾಯಕರಾದ ಆಸಾಫ್, ಹೇಮಾನ್, ಯೆದುತೂನರು ಹಾಗೂ ಇವರ ಮಕ್ಕಳೂ ಸಹೋದರರೂ ತುತೂರಿಗಳನ್ನು ಊದತಕ್ಕ ನೂರಿಪ್ಪತ್ತು ಮಂದಿ ಯಾಜಕರೂ ಬಲಿಪೀಠದ ಪೂರ್ವದಿಕ್ಕಿನಲ್ಲಿ ನಿಂತುಕೊಂಡರು.


ಯಾಜಕರೂ ಲೇವಿಯರೂ ತಮ್ಮ ತಮ್ಮ ಸ್ಥಳಗಳಲ್ಲಿ ನಿಂತರು. ದಾವೀದನು ಸರ್ವೇಶ್ವರನ ಗಾಯನಸೇವೆಗಾಗಿ ಮಾಡಿಸಿದ ವಾದ್ಯಗಳು ಈ ಲೇವಿಯರ ಕೈಯಲ್ಲಿ ಇದ್ದವು. ಇವರು ರಾಜಸೇವೆಯಲ್ಲಿದ್ದುಕೊಂಡು ದೇವಾರಾಧನೆ ನಡೆಸುತ್ತಾ, “ಸರ್ವೇಶ್ವರನಿಗೆ ಕೃತಜ್ಞತಾ ಸ್ತುತಿಯನ್ನು ಸಮರ್ಪಿಸಿರಿ; ಅವರ ಅಚಲಪ್ರೀತಿ ಶಾಶ್ವತ” ಎಂಬುದಾಗಿ ಆ ವಾದ್ಯಗಳೊಡನೆ ಭಜಿಸುತ್ತಿದ್ದರು. ಯಾಜಕರು ಇವರ ಎದುರಾಗಿ ನಿಂತು ತುತೂರಿಯೂದುತ್ತಿದ್ದರು. ಇಸ್ರಯೇಲರೆಲ್ಲರೂ ನಿಂತಿದ್ದರು.


ಜೆರುಸಲೇಮಿನ ಗೋಡೆಯನ್ನು ಪ್ರತಿಷ್ಠಿಸುವ ಸಮಯ ಬಂದಾಗ, ಆಯಾ ಸ್ಥಳಗಳಲ್ಲಿದ್ದ ಲೇವಿಯರನ್ನು ಕೀರ್ತನಗಾಯನಗಳಿಂದಲೂ ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದಲೂ ಪ್ರತಿಷ್ಠೆಯ ಉತ್ಸವವನ್ನು ಆಚರಿಸುವುದಕ್ಕಾಗಿ ಜೆರುಸಲೇಮಿಗೆ ಕರೆಯಿಸಲಾಯಿತು.


ಆತನನ್ನು ಸ್ತುತಿಸಿರಿ ತಾಳದಿಂದ I ಆತನನ್ನು ಸ್ತುತಿಸಿರಿ ಝಲ್ಲರಿಯಿಂದ II


ವೀಣೆಯನ್ನು ನುಡಿಸುತ್ತಾ ಮನಸ್ಸು ಬಂದಂತೆ ಹಾಡುವವರೇ, ದಾವೀದನಂತೆ ಹೊಸ ವಾದ್ಯಸಂಗೀತಗಳನ್ನು ರಚಿಸುವವರೇ, ನಿಮಗೆ ಧಿಕ್ಕಾರ!


ಲೇವಿಗೆ ಗೇರ್ಷೋಮ್, ಕೆಹಾತ್, ಮೆರಾರಿ ಎಂಬ ಮೂರು ಮಂದಿ ಮಕ್ಕಳಿದ್ದರು.


ಅವರಲ್ಲಿ ಆಸಾಫನು ಮುಖ್ಯಸ್ಥನಾಗಿಯೂ ಜೆಕರ್ಯ ಅವನ ಸಹಾಯಕನಾಗಿಯೂ ನೇಮಕಗೊಂಡರು. ಯೇಗೀಯೇಲ್, ಶೆಮೀರಾಮೋತ್, ಯೆಹೀಯೇಲ್, ಮತ್ತಿತ್ಯ, ಎಲೀಯಾಬ್, ಬೆನಾಯ, ಓಬೇದೆದೋಮ್ ಹಾಗು ಯೆಗೀಯೇಲ್ ಸ್ವರಮಂಡಲಗಳನ್ನು ಬಾರಿಸಲು ನೇಮಕವಾದರು. ಆಸಾಫನು ತಾಳಗಳನ್ನು ಬಾರಿಸಬೇಕಾಗಿತ್ತು.


ಆಮೇಲೆ ಲೇವಿಯರಲ್ಲಿ ಕೆಹಾತ್ಯರೂ ಕೋರಹಿಯರೂ ಎದ್ದು, ಇಸ್ರಯೇಲ್ ದೇವರಾದ ಸರ್ವೇಶ್ವರನನ್ನು ಮಹಾಸ್ವರದಿಂದ ಕೀರ್ತಿಸಿದರು.


ಊದಿರಿ ಕೊಂಬನು ಅಮವಾಸ್ಯೆಯಲಿ I ಉತ್ಸವದಿನವಾದ ಪೂರ್ಣಿಮೆಯಲಿ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು