Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 13:1 - ಕನ್ನಡ ಸತ್ಯವೇದವು C.L. Bible (BSI)

1 ಅರಸ ದಾವೀದನು ಸರ್ವಸಹಸ್ರಾಧಿಪತಿಗಳೊಂದಿಗೂ ಶತಾಧಿಪತಿಗಳೊಂದಿಗೂ ಸಮಾಲೋಚನೆ ನಡೆಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ದಾವೀದನು ಸಹಸ್ರಾಧಿಪತಿ, ಶತಾಧಿಪತಿ ಮೊದಲಾದ ಸರ್ವಪ್ರಭುಗಳೊಡನೆ ಸಮಾಲೋಚನೆ ಮಾಡಿದ ನಂತರ ಇಸ್ರಾಯೇಲ್ಯರ ಸಮಸ್ತ ಸಮೂಹದವರಿಗೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ದಾವೀದನು ಸಹಸ್ರಾಧಿಪತಿ ಶತಾಧಿಪತಿ ಮೊದಲಾದ ಸರ್ವಪ್ರಭುಗಳೊಡನೆ ಮಾತಾಡಿದನಂತರ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ದಾವೀದನು ತನ್ನ ಎಲ್ಲಾ ಸೇನಾಧಿಪತಿಗಳೊಂದಿಗೆ ಮಾತನಾಡಿದನು. ಅವನು ಸಹಸ್ರಾಧಿಪತಿಗಳೊಂದಿಗೆ, ಶತಾಧಿಪತಿಗಳೊಂದಿಗೆ ಮತ್ತು ಪ್ರತಿಯೊಬ್ಬ ನಾಯಕನೊಂದಿಗೆ ಚರ್ಚಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ದಾವೀದನು ಸಾವಿರ ಮಂದಿಗೂ, ನೂರು ಮಂದಿಗೂ ಪ್ರಧಾನರಾದವರ ಸಂಗಡ, ಎಲ್ಲಾ ನಾಯಕರ ಸಂಗಡ ಆಲೋಚನೆ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 13:1
12 ತಿಳಿವುಗಳ ಹೋಲಿಕೆ  

ಅರಸ ಹಿಜ್ಕೀಯನು ಮರುದಿನ ಬೆಳಗಿನ ಜಾವದಲ್ಲೆದ್ದು ಪಟ್ಟಣದ ಮುಖಂಡರನ್ನು ಕೂಡಿಸಿ ಅವರೊಡನೆ ಸರ್ವೇಶ್ವರನ ಆಲಯಕ್ಕೆ ಹೋದನು.


ಹೀಗೆ ಅವನು ಹಿಂದಿರುಗುತ್ತಿದ್ದಾಗ ಅವನನ್ನು ಸೇರಿಕೊಂಡ ಮನಸ್ಸೆಗೋತ್ರದ ಸೈನಿಕರ ಹೆಸರುಗಳು ಇಂತಿವೆ: ಅದ್ನ, ಯೋಜಾಬಾದ್, ಎದೀಗಯೇಲ್, ಮೀಕಾಯೇಲ್, ಯೋಜಾಬಾದ್, ಎಲೀಹೂ ಹಾಗೂ ಚಿಲ್ಲೆತೈ. ಇವರೆಲ್ಲರೂ ಮನಸ್ಸೆ ಗೋತ್ರದಲ್ಲಿ ಸಹಸ್ರಾಧಿಪತಿಗಳಾಗಿದ್ದರು.


ಅನಂತರ ಅರಸನು ದೂತರ ಮುಖಾಂತರ ಜೆರುಸಲೇಮಿನ ಮತ್ತು ಜುದೇಯ ಪ್ರಾಂತ್ಯದ ಬೇರೆ ಎಲ್ಲಾ ಊರುಗಳ ಹಿರಿಯರನ್ನು ತನ್ನ ಬಳಿಗೆ ಕರೆಯಿಸಿದನು.


ಇಸ್ಸಾಕಾರ ಗೋತ್ರದಿಂದ: 200 ಜನ ನಾಯಕರು ಹಾಗೂ ಅವರೊಂದಿಗಿದ್ದ ಸೈನಿಕರು; (ಇಸ್ರಯೇಲರು ಏನು ಮಾಡಬೇಕು, ಅದನ್ನು ಮಾಡಲು ಯಾವುದು ಉತ್ತಮ ಸಮಯ ಎಂಬುದನ್ನು ಈ ನಾಯಕರು ತಿಳಿದಿದ್ದರು);


ಗಾದ್ ಗೋತ್ರದ ಈ ಕೆಲವು ಪುರುಷರು ಹಿರಿಯ ಸಹಸ್ರಾಧಿಪತಿಗಳೂ ಕಿರಿಯ ಶತಾಧಿಪತಿಗಳೂ ಆಗಿದ್ದರು .


ಪುನಃ ದಾವೀದನು ಇಸ್ರಯೇಲರಲ್ಲಿ ಮೂವತ್ತು ಸಾವಿರ ಮಂದಿ ಶ್ರೇಷ್ಠ ಸೈನಿಕರನ್ನು ಆರಿಸಿಕೊಂಡು ದೇವರ ಮಂಜೂಷವನ್ನು ತರುವುದಕ್ಕಾಗಿ ಅವರೆಲ್ಲರ ಸಹಿತ ಜುದೇಯ ನಾಡಿನ ಬಾಳಾ ಎಂಬಲ್ಲಿಗೆ ಹೋದನು.


ದೂರದ ಉತ್ತರದಲ್ಲಿದ್ದ ಇಸ್ಸಾಕಾರ್, ಜೆಬುಲೂನ್, ನಫ್ತಾಲಿ ಗೋತ್ರಗಳ ಜನರು ತಮ್ಮ ಎತ್ತು, ಕತ್ತೆ, ಹೇಸರಗತ್ತೆ, ಒಂಟೆ ಇವುಗಳ ಮೇಲೆ ರೊಟ್ಟಿ, ಅಂಜೂರ, ಒಣದ್ರಾಕ್ಷಿ, ದ್ರಾಕ್ಷಾರಸ, ಎಣ್ಣೆಗಳನ್ನು ಹೊತ್ತುತಂದರು. ಭೋಜನಕ್ಕೆ ಕುರಿದನಗಳನ್ನು ಸಹ ತೆಗೆದುಕೊಂಡು ಬಂದರು. ನಾಡಿನಲ್ಲೆಲ್ಲಾ ಸಂತೋಷ ಸಂಭ್ರಮವಿತ್ತು.


“ನೀವು ಎಲ್ಲರು ಸಮ್ಮತಿಸಿದರೆ, ಇದು ನಮ್ಮ ದೇವರಾದ ಸರ್ವೇಶ್ವರಸ್ವಾಮಿಯ ಚಿತ್ತವಾಗಿದ್ದರೆ, ಇಲ್ಲಿ ನಮ್ಮೊಂದಿಗೆ ಶೀಘ್ರವಾಗಿ ಬಂದು ಸೇರಬೇಕೆಂದು ಉಳಿದ ಎಲ್ಲಾ ನಮ್ಮ ದೇಶಬಾಂಧವರಿಗೆ, ಯಾಜಕ-ಲೇವಿಯರಿಗೆ ಹಾಗು ಅವರ ಪಟ್ಟಣಗಳಿಗೆ ಸಂದೇಶವನ್ನು ಕಳುಹಿಸೋಣ.


ಅವನು ತನ್ನ ಸಹಸ್ರಾಧಿಪತಿಗಳನ್ನು, ಶತಾಧಿಪತಿಗಳನ್ನು, ಸರಕಾರದ ಎಲ್ಲ ಪದಾಧಿಕಾರಿಗಳನ್ನು ಹಾಗೂ ಇಸ್ರಯೇಲ್ ಕುಲಗೋತ್ರಗಳ ನಾಯಕರನ್ನು ಬರಮಾಡಿ, ಅವರ ಸಮೇತ ಗಿಬ್ಯೋನಿನಲ್ಲಿದ್ದ ಪೂಜಾಸ್ಥಳಕ್ಕೆ ಹೋದನು.


ಆಲೋಚನೆಯಿಲ್ಲದೆ ಉದ್ದೇಶಗಳು ಈಡೇರವು; ಹಲವಾರು ಆಲೋಚನಾಪರರಿರುವಲ್ಲಿ ಅವು ಕೈಗೂಡುವುವು.


ಐದು ತಲೆಂತು ಪಡೆದ ಸೇವಕ ಒಡನೇ ಹೋಗಿ ಆ ಮೊತ್ತದಿಂದ ವ್ಯಾಪಾರಮಾಡಿ ಇನ್ನೂ ಐದನ್ನು ಸಂಪಾದಿಸಿದ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು