Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 12:22 - ಕನ್ನಡ ಸತ್ಯವೇದವು C.L. Bible (BSI)

22 ದಾವೀದನ ಸೈನ್ಯಕ್ಕೆ ಪ್ರತಿದಿನವೂ ಹೊಸಬರು ಬಂದು ಸೇರುತ್ತಾ ಇದ್ದುದರಿಂದ ಅವನ ಸೈನ್ಯವು ಸಂಖ್ಯೆಯಲ್ಲಿ ಅಧಿಕಾಧಿಕವಾಗಿ ಬೆಳೆಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ದಾವೀದನ ಸಹಾಯಕ್ಕೆ ಪ್ರತಿದಿನವೂ ಹೊಸ ಗುಂಪುಗಳು ಬರುತ್ತಿದ್ದವು. ಅವನ ಸೈನ್ಯವು ದೇವರ ಸೈನ್ಯದಷ್ಟು ದೊಡ್ಡದಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ದಾವೀದನ ಸಹಾಯಕ್ಕೆ ಪ್ರತಿದಿನವೂ ಹೊಸ ಗುಂಪುಗಳು ಬರುತ್ತಿದ್ದವು; ಅವನ ಸೈನ್ಯವು ದೇವಸೈನ್ಯದಷ್ಟು ದೊಡ್ಡದಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ದಿನದಿಂದ ದಿನಕ್ಕೆ ಹೆಚ್ಚೆಚ್ಚು ಜನರು ಬಂದು ದಾವೀದನನ್ನು ಸೇರಿಕೊಂಡಿದ್ದರಿಂದ ದಾವೀದನ ಸೈನ್ಯವು ಬಲಗೊಂಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಅದೇ ಕಾಲದಲ್ಲಿ ದಿನೇ ದಿನೇ ದೊಡ್ಡ ಸೈನ್ಯವು ದೇವರ ಸೈನ್ಯದ ಹಾಗೆ ಆಗುವವರೆಗೆ, ದಾವೀದನಿಗೆ ಸಹಾಯ ಕೊಡುವುದಕ್ಕೆ ಅವನ ಕಡೆಗೆ ಬರುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 12:22
9 ತಿಳಿವುಗಳ ಹೋಲಿಕೆ  

ಸೌಲನ ವಂಶದವರಿಗೂ ದಾವೀದನ ವಂಶದವರಿಗೂ ಬಹುದಿನಗಳವರೆಗೆ ಯುದ್ಧ ನಡೆಯಿತು. ದಾವೀದನು ಬಲಗೊಳ್ಳುತ್ತಾ ಬಂದನು. ಸೌಲನ ವಂಶ ದುರ್ಬಲವಾಗುತ್ತಾ ಬಂದಿತು.


ಸನ್ಮಾರ್ಗದಲ್ಲಿ ಮುಂದುವರೆವವನು ಸಜ್ಜನನು ಬಲಗೊಳ್ಳುತ್ತಲೇ ಇರುವನು ಶುದ್ಧಹಸ್ತನು.


ಆಗ ಆ ವ್ಯಕ್ತಿ, “ನಾನು ಅಂಥವನಲ್ಲ; ನಾನು ಸರ್ವೇಶ್ವರನ ಸೇನಾಪತಿ. ಇದೀಗಲೆ ಬಂದವನು,’ ಎಂದು ಉತ್ತರಿಸಿದನು. ಕೂಡಲೆ ಯೆಹೋಶುವ ಅವನಿಗೆ ಸಾಷ್ಟಾಂಗವೆರಗಿ, “ಒಡೆಯಾ, ತಮ್ಮ ದಾಸನಾದ ನನಗೆ ಏನು ಆಜ್ಞಾಪಿಸಬೇಕೆಂದಿದ್ದೀರಿ?” ಎಂದನು.


ದೇವದೂತರು ಅವನೆದುರಿಗೆ ಬಂದರು. ಯಕೋಬನು ಅವರನ್ನು ನೋಡಿ, “ಇದು ದೇವರ ಪಾಳೆಯ,” ಏಂದು ಹೇಳಿ ಆ ಸ್ಥಳಕ್ಕೆ ‘ಮಹನಯಿಮ್’ ಎಂದು ಹೆಸರಿಟ್ಟನು.


ಆತನ ಸಮಸ್ತ ದೂತರೇ, ಸ್ತುತಿಸಿ ಆತನನು I ಆತನ ಎಲ್ಲಾ ಗಣಗಳೇ, ಹೊಗಳಿ ಆತನನು II


ಯೆಹೋಶುವನು ಜೆರಿಕೋವಿಗೆ ಹತ್ತಿರವಿದ್ದಾಗ, ಒಮ್ಮೆ ಕಣ್ಣೆತ್ತಿ ನೋಡಿದನು. ಇಗೋ, ಒಬ್ಬ ವ್ಯಕ್ತಿ ಕಾಣಿಸಿಕೊಂಡನು. ಹಿರಿದ ಕತ್ತಿಯನ್ನು ಕೈಯಲ್ಲಿ ಹಿಡಿದು ನಿಂತಿದ್ದನು. ಯೆಹೋಶುವ ಅವನನ್ನು ಸಮೀಪಿಸಿ, “ನೀನು ನಮ್ಮವನೋ ಅಥವಾ ಶತ್ರು ಕಡೆಯವನೋ?” ಎಂದು ಕೇಳಿದನು.


ಆದ್ದರಿಂದ ನೀನೂ ನಿನ್ನ ಸಂಗಡ ಬಂದ ನಿನ್ನ ಒಡೆಯನ ಸೇವಕರೂ ನಾಳೆ ಬೆಳಿಗ್ಗೆ ಎದ್ದು ಹೊತ್ತುಮೂಡಿದ ಕೂಡಲೆ ಹಿಂದಿರುಗಿಹೋಗಿ,” ಎಂದು ಹೇಳಿದನು.


ದಾವೀದನೂ ಅವನ ಜನರೂ ಮಾರನೆಯ ದಿನ ಚಿಕ್ಲಗ್ ಊರನ್ನು ಸೇರಿದರು. ಅಷ್ಟರೊಳಗೆ ಅಮಾಲೇಕ್ಯರು ದಂಡೆತ್ತಿ ದಕ್ಷಿಣಪ್ರಾಂತ್ಯಕ್ಕೂ ಚಿಕ್ಲಗ್ ಊರಿಗೂ ಬಂದು ಚಿಕ್ಲಗ್ ಊರನ್ನು ಸುಟ್ಟು ಹಾಳುಮಾಡಿದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು