Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 11:5 - ಕನ್ನಡ ಸತ್ಯವೇದವು C.L. Bible (BSI)

5 ದಾವೀದನು ಪಟ್ಟಣದೊಳಗೆ ಪ್ರವೇಶಿಸಲು ಎಂದಿಗೂ ಸಾಧ್ಯವಿಲ್ಲವೆಂದು ಯೆಬೂಸಿಯರು ಹೇಳಿದ್ದರು. ಆದರೂ ದಾವೀದನು ಪಟ್ಟಣವನ್ನು ಪ್ರವೇಶಿಸಿ ಸಿಯೋನ್ ಕೋಟೆಯನ್ನು ವಶಪಡಿಸಿಕೊಂಡನು. ಅದು ‘ದಾವೀದ್ ನಗರ’ ಎಂದು ಹೆಸರು ಪಡೆಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಯೆಬೂಸಿಯರು ದಾವೀದನಿಗೆ, “ನೀನು ಒಳಗೆ ಬರಲು ಸಾಧ್ಯವಿಲ್ಲ” ಎಂದು ಹೇಳಿದರು. ಆದರೂ ಅವನು ದಾವೀದನಗರವೆನಿಸಿಕೊಳ್ಳುವ ಚೀಯೋನ್ ಕೋಟೆಯನ್ನು ಸ್ವಾಧೀನಮಾಡಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಅವರು ದಾವೀದನಿಗೆ - ನೀನು ಒಳಗೆ ಬರಲಾರಿ ಎಂದು ಹೇಳಿದರು. ಆದರೂ ಅವನು ದಾವೀದ ನಗರವೆನಿಸಿಕೊಳ್ಳುವ ಚೀಯೋನ್ ಕೋಟೆಯನ್ನು ಸ್ವಾಧೀನಮಾಡಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 “ನೀನು ನಮ್ಮ ಪಟ್ಟಣದೊಳಗೆ ಬರಲು ಸಾಧ್ಯವೇ ಇಲ್ಲ” ಎಂದು ಹೇಳಿದರು. ಆದರೆ ದಾವೀದನು ಅವರನ್ನು ಸೋಲಿಸಿ ಚೀಯೋನ್ ಕೋಟೆಯನ್ನು ಗೆದ್ದುಕೊಂಡನು. ಅಂದಿನಿಂದ ಆ ಸ್ಥಳವು ದಾವೀದನ ನಗರವೆಂದು ಕರೆಯಲ್ಪಟ್ಟಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಆ ದೇಶದ ಮೂಲನಿವಾಸಿಗಳಾದ ಯೆಬೂಸಿಯರು ದಾವೀದನಿಗೆ, “ನೀನು ಇದರೊಳಗೆ ಬರಲು ಸಾಧ್ಯವಿಲ್ಲ,” ಎಂದರು. ಆದರೂ ದಾವೀದನು, ಚೀಯೋನಿನ ಕೋಟೆಯನ್ನು ವಶಪಡಿಸಿಕೊಂಡನು. ಅದೇ ದಾವೀದನ ಪಟ್ಟಣವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 11:5
26 ತಿಳಿವುಗಳ ಹೋಲಿಕೆ  

ಅನಂತರ ಸಿಯೋನ್ ಬೆಟ್ಟದ ಮೇಲೆ ಯಜ್ಞದ ಕುರಿಮರಿಯಾದಾತನು, ನಿಂತಿರುವುದನ್ನು ಕಂಡೆ. ಆತನ ಸಂಗಡ ಒಂದು ಲಕ್ಷದ ನಲವತ್ತನಾಲ್ಕು ಸಾವಿರ ಮಂದಿ ಇದ್ದರು. ಇವರು ತಮ್ಮ ಹಣೆಯ ಮೇಲೆ ಯಜ್ಞದ ಕುರಿಮರಿಯ ಮತ್ತು ಆತನ ಪಿತನ ನಾಮಾಂಕಿತವನ್ನು ಬರೆಸಿಕೊಂಡಿದ್ದರು.


ಆದರೆ ನೀವು ಬಂದಿರುವುದು ಸಿಯೋನ್ ಬೆಟ್ಟಕ್ಕೆ, ಜೀವಂತ ದೇವರ ನಗರಕ್ಕೆ; ಸ್ವರ್ಗೀಯ ಜೆರುಸಲೇಮಿಗೆ, ಅಸಂಖ್ಯ ದೇವದೂತರು ಕೂಡಿರುವ ಉತ್ಸವ ಕೂಟಕ್ಕೆ;


ಪವಿತ್ರಗ್ರಂಥದಲ್ಲಿ ಹೀಗೆಂದು ಲಿಖಿತವಾಗಿದೆ: “ಇಗೋ, ಎಡವಿ ನೆಲಕ್ಕುರುಳುವಂತೆ ಮಾಡುವ ಕಲ್ಲನ್ನೂ ಮುಗ್ಗರಿಸಿ ಬೀಳುವಂತೆ ಮಾಡುವ ಬಂಡೆಯನ್ನೂ ನಾನು ಸಿಯೋನಿನಲ್ಲಿ ಇರಿಸುವೆನು; ಆತನಲ್ಲಿ ವಿಶ್ವಾಸವಿಡುವವನಾದರೋ ಎಂದಿಗೂ ಆಶಾಭಂಗಗೊಳ್ಳನು.”


ಆರಿಸಿಕೊಂಡಿಹನು ಪ್ರಭು ಸಿಯೋನ್ ನಗರವನು I ಅಪೇಕ್ಷಿಸಿಹನು ತನ್ನ ನಿವಾಸಕ್ಕಾಗಿ ಅದನು II


ಸ್ಥಾಪಿತವಾಗಿವೆಯಿಲ್ಲಿ ನ್ಯಾಯಪೀಠಗಳು I ದಾವೀದನ ಮನೆತನದವರ ಸಿಂಹಾಸನಗಳು II


ಸಕಲ ಜನಾಂಗಗಳ ಜನನಿ ಸಿಯೋನ್ ನಗರವೇ I ಅದನು ಸ್ಥಾಪಿಸಿದವ ಪರಾತ್ಪರ ಪ್ರಭುವೇ” II


ಯಕೋಬ ವಂಶದ ಸಕಲ ನಿವಾಸಿಗಳಿಗಿಂತ I ಸಿಯೋನ್ ದ್ವಾರಗಳು ಆತನಿಗೆ ಸುಪ್ರೀತ II


ಆರಿಸಿಕೊಂಡನು ಯೆಹೂದರ ಗೋತ್ರವನು I ತನಗತಿಪ್ರಿಯವಾದ ಸಿಯೋನ್ ಗಿರಿಯನು II


ಎತ್ತರದಲಿ ಸುಂದರ, ಉತ್ತರದಲಿ ಸಿಯೋನ್ ಶಿಖರ I ಆನಂದದಾಯಕ ರಾಜಾಧಿರಾಜನ ಆ ನಗರ II


ಸಂಕೀರ್ತಿಸಿರಿ ಸಿಯೋನಿನಲಿ ವಾಸಿಸುವ ಪ್ರಭುವನು I ಪ್ರಕಟಿಸಿರಿ ಜನತೆಗೆ ಆತನ ಮಹತ್ಕಾರ್ಯಗಳನು II


ಅನಂತರ ಸೊಲೊಮೋನನು ದಾವೀದ ನಗರವಾದ ಸಿಯೋನಿನಿಂದ ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ಮೇಲೆ ತರುವುದಕ್ಕಾಗಿ ಇಸ್ರಯೇಲರ ಹಿರಿಯರು, ಕುಲಾಧಿಪತಿಗಳು, ಇವರೇ ಮೊದಲಾದ ಎಲ್ಲಾ ಇಸ್ರಯೇಲ್ ಗಣ್ಯವ್ಯಕ್ತಿಗಳನ್ನು ಜೆರುಸಲೇಮಿಗೆ ಕರೆಸಿಕೊಂಡನು.


ಆ ಕೋಟೆಯನ್ನು ದಾವೀದನು ತನ್ನ ವಾಸಸ್ಥಾನವನ್ನಾಗಿ ಮಾಡಿಕೊಂಡದ್ದರಿಂದ ಅದಕ್ಕೆ ‘ದಾವೀದ ನಗರ’ ಎಂದು ಹೆಸರಾಯಿತು.


ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ದಾವೀದನಗರವಾದ ಸಿಯೋನಿನಿಂದ ದೇವಾಲಯಕ್ಕೆ ತರುವುದಕ್ಕಾಗಿ, ಇಸ್ರಯೇಲರ ಹಿರಿಯರು, ಕುಲಗಳ ನಾಯಕರು, ಇವರೇ ಮೊದಲಾದ ಎಲ್ಲ ಇಸ್ರಯೇಲ್ ಪ್ರಮುಖ ವ್ಯಕ್ತಿಗಳು ಜೆರುಸಲೇಮಿಗೆ, ತನ್ನ ಆಸ್ಥಾನಕ್ಕೆ, ಬರಬೇಕೆಂದು ಅರಸ ಸೊಲೊಮೋನನು ಆಜ್ಞಾಪಿಸಿದನು.


ಹೀಗೆ ಸರ್ವೇಶ್ವರ ತಮ್ಮ ಮಂಜೂಷದ ಕಾರಣ ಓಬೇದೆದೋಮನನ್ನೂ ಅವನಿಗಿರುವುದೆಲ್ಲವನ್ನೂ ಆಶೀರ್ವದಿಸಿದ್ದಾರೆಂಬ ವರ್ತಮಾನ ದಾವೀದನಿಗೆ ಮುಟ್ಟಿತು. ಅವನು ಹೋಗಿ ಓಬೇದೆದೋಮನ ಮನೆಯಲ್ಲಿದ್ದ ದೇವರ ಮಂಜೂಷವನ್ನು ಉತ್ಸವದಿಂದ ದಾವೀದನಗರಕ್ಕೆ ತಂದನು.


ಅದನ್ನು ದಾವೀದನಗರಕ್ಕೆ ತರಲೊಲ್ಲದೆ ಗತ್ ಊರಿನ ಓಬೇದೆದೋಮನ ಮನೆಗೆ ಕಳುಹಿಸಿದನು.


ದಾವೀದನು ಆ ಕೋಟೆಗೆ ‘ದಾವೀದನಗರ’ ಎಂದು ಹೆಸರಿಟ್ಟು ಅಲ್ಲೇ ವಾಸಿಸುತ್ತಿದ್ದನು. ಅದರ ಸುತ್ತಲೂ ಮಿಲ್ಲೋವಿನಿಂದ ಪ್ರಾರಂಭಿಸಿ ಒಳಗಿನ ಪೌಳಿಗೋಡೆಯನ್ನು ಕಟ್ಟಿಸಿದನು.


ನಿಮ್ಮ ಸೇವಕನಾದ ನನ್ನಿಂದ ಆ ಸಿಂಹಕ್ಕೂ ಕರಡಿಗೂ ಆದ ಗತಿಯೇ ಈ ಸುನ್ನತಿಯಿಲ್ಲದ ಫಿಲಿಷ್ಟಿಯನಿಗೂ ಆಗಬೇಕು; ಏಕೆಂದರೆ ಜೀವಸ್ವರೂಪರಾದ ದೇವರ ಸೈನ್ಯವನ್ನು ನಿಂದಿಸುತ್ತಿದ್ದಾನೆ.


ಆಗ ದಾವೀದನು ತನ್ನ ಬಳಿಯಲ್ಲೆ ನಿಂತಿದ್ದವರನ್ನು ನೋಡಿ, “ಜೀವಸ್ವರೂಪರಾದ ದೇವರ ಸೈನ್ಯವನ್ನು ಹೀಗೆ ಹಿಯ್ಯಾಳಿಸುವ, ಸುನ್ನತಿಯಿಲ್ಲದ ಈ ಫಿಲಿಷ್ಟಿಯನು ಎಷ್ಟರವನು? ಇವನನ್ನು ಕೊಂದು ಇಸ್ರಯೇಲರಿಗೆ ಬಂದಿರುವ ನಿಂದೆ ಅವಮಾನವನ್ನು ನೀಗಿಸುವವನಿಗೆ ಏನು ಸಿಕ್ಕುವುದೆಂದು ಹೇಳಿದಿರಿ?” ಎಂದು ಕೇಳಿದನು.


ಆದರೆ ಆ ಮನುಷ್ಯ ಒಪ್ಪದೆ ತನ್ನ ಎರಡು ಕತ್ತೆಗಳಿಗೆ ತಡಿಹಾಕಿಸಿ ಉಪಪತ್ನಿಯನ್ನು ಕರೆದುಕೊಂಡು ಹೊರಟನು.


ಆ ಕಾಲದಲ್ಲಿ ಜೆರುಸಲೇಮ್ ಪಟ್ಟಣವನ್ನು ‘ಯೆಬೂಸ’ ಎಂದು ಕರೆಯಲಾಗುತ್ತಿತ್ತು. ಅಲ್ಲಿಯ ಮೂಲನಿವಾಸಿಗಳಾದ ಯೆಬೂಸಿಯರು ಆ ಪ್ರದೇಶದಲ್ಲಿ ಇನ್ನೂ ವಾಸಿಸುತ್ತಿದ್ದರು. ಅರಸ ದಾವೀದನೂ ಎಲ್ಲಾ ಇಸ್ರಯೇಲರೂ ಜೆರುಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿದರು.


‘ಯೆಬೂಸಿಯರಲ್ಲಿ ಒಬ್ಬನನ್ನು ಯಾರು ಮೊದಲು ಕೊಲ್ಲುವನೋ ಅವನು ನನ್ನ ದಳಪತಿಯಾಗುವನು’ ಎಂದು ದಾವೀದ ಪ್ರಕಟಿಸಿದ್ದನು. ಜೆರೂಯಳ ಮಗ ಯೋವಾಬನು ಯುದ್ಧದಲ್ಲಿ ಮುಂದೆ ಹೋಗಿ ಸೇನಾಪತಿಯಾದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು