1 ಪೂರ್ವಕಾಲ ವೃತ್ತಾಂತ 11:3 - ಕನ್ನಡ ಸತ್ಯವೇದವು C.L. Bible (BSI)
3 ಹೀಗೆ ಇಸ್ರಯೇಲಿನ ನಾಯಕರೆಲ್ಲರೂ ಹೆಬ್ರೋನಿನಲ್ಲಿ ಅರಸ ದಾವೀದನ ಬಳಿಗೆ ಬಂದು ಬಿನ್ನವಿಸಿದರು. ದಾವೀದನು ಅವರೊಂದಿಗೆ ಸರ್ವೇಶ್ವರನ ಸನ್ನಿಧಿಯಲ್ಲಿ ಒಂದು ಒಪ್ಪಂದ ಮಾಡಿಕೊಂಡನು. ಅವರು ಅವನನ್ನು ಅಭಿಷೇಕಿಸಿದರು. ಹೀಗೆ ಸರ್ವೇಶ್ವರ ಸಮುವೇಲನ ಮುಖಾಂತರ ಮಾಡಿದ ವಾಗ್ದಾನ ನೆರವೇರಿತು; ದಾವೀದನು ಇಸ್ರಯೇಲರ ಅರಸನಾದನು.
3 ಆಗ ಅರಸನಾದ ದಾವೀದನು ತನ್ನ ಜೊತೆಯಲ್ಲಿ ಹೆಬ್ರೋನಿಗೆ ಬಂದಿದ್ದ ಇಸ್ರಾಯೇಲರ ಹಿರಿಯರೆಲ್ಲರೊಡನೆ ಅಲ್ಲೇ ಯೆಹೋವನ ಸನ್ನಿಧಿಯಲ್ಲಿ ಒಡಂಬಡಿಕೆಮಾಡಿಕೊಂಡನು. ಅವರು ಸಮುವೇಲನಿಗೆ ಯೆಹೋವನ ವಾಕ್ಯಾನುಸಾರವಾಗಿ ದಾವೀದನನ್ನು ಅಭಿಷೇಕಿಸಿ, ಇಸ್ರಾಯೇಲರ ಅರಸನನ್ನಾಗಿ ಮಾಡಿದರು.
3 ಆಗ ಅರಸನಾದ ದಾವೀದನು ತನ್ನ ಹತ್ತಿರ ಹೆಬ್ರೋನಿಗೆ ಬಂದಿದ್ದ ಇಸ್ರಾಯೇಲ್ಯರ ಹಿರಿಯರೆಲ್ಲರೊಡನೆ ಅಲ್ಲೇ ಯೆಹೋವನ ಸನ್ನಿಧಿಯಲ್ಲಿ ಒಡಂಬಡಿಕೆಮಾಡಿಕೊಂಡನು. ಅವರು ಸಮುವೇಲನಿಗೆ ಯೆಹೋವನಿಂದಾದ ಆಜ್ಞೆಗನುಸಾರವಾಗಿ ದಾವೀದನನ್ನು ಅಭಿಷೇಕಿಸಿ ಇಸ್ರಾಯೇಲ್ಯರ ಅರಸನನ್ನಾಗಿ ಮಾಡಿದರು.
3 ಹೆಬ್ರೋನಿಗೆ ಬಂದ ಇಸ್ರೇಲರೆಲ್ಲಾ ಅಲ್ಲಿ ಯೆಹೋವನ ಮುಂದೆ ದಾವೀದನೊಂದಿಗೆ ಒಪ್ಪಂದ ಮಾಡಿಕೊಂಡರು. ಆ ಅಧಿಪತಿಗಳೆಲ್ಲಾ ದಾವೀದನನ್ನು ಅಭಿಷೇಕಿಸಿ ಅವನನ್ನು ಇಸ್ರೇಲರ ಅರಸನನ್ನಾಗಿ ಮಾಡಿದರು. ಇದು ಯೆಹೋವನ ವಾಗ್ದಾನವಾಗಿತ್ತು. ಪ್ರವಾದಿಯಾದ ಸಮುವೇಲನ ಮೂಲಕ ಯೆಹೋವನು ಈ ವಾಗ್ದಾನವನ್ನು ಮಾಡಿದ್ದನು.
3 ಇಸ್ರಾಯೇಲಿನ ಹಿರಿಯರೆಲ್ಲರು ಹೆಬ್ರೋನಿನಲ್ಲಿದ್ದ ಅರಸನ ಬಳಿಗೆ ಬಂದಾಗ, ಅರಸನಾದ ದಾವೀದನು ಹೆಬ್ರೋನಿನಲ್ಲಿ ಯೆಹೋವ ದೇವರ ಮುಂದೆ ಅವರ ಸಂಗಡ ಒಡಂಬಡಿಕೆ ಮಾಡಿದನು. ಯೆಹೋವ ದೇವರು ಸಮುಯೇಲನ ಮುಖಾಂತರ ಹೇಳಿದ ವಾಕ್ಯದ ಪ್ರಕಾರ ಅವರು ದಾವೀದನನ್ನು ಇಸ್ರಾಯೇಲಿನ ಮೇಲೆ ಅರಸನಾಗಿರಲು ಅಭಿಷೇಕ ಮಾಡಿದರು.
ಹೆಬ್ರೋನಿನಲ್ಲಿದ್ದ ಅರಸ ದಾವೀದನು ತನ್ನ ಬಳಿಗೆ ಬಂದಿದ್ದ ಇಸ್ರಯೇಲರ ಹಿರಿಯರೊಡನೆ ಅಲ್ಲೇ ಸರ್ವೇಶ್ವರನ ಸನ್ನಿಧಿಯಲ್ಲಿ ಒಪ್ಪಂದಮಾಡಿಕೊಂಡನು. ಅವರು ದಾವೀದನನ್ನು ಅಭಿಷೇಕಿಸಿ ಇಸ್ರಯೇಲರ ಅರಸನನ್ನಾಗಿ ಮಾಡಿದರು.
ತರುವಾಯ ಯೆಹೂದ್ಯರು ಅಲ್ಲಿಗೆ ಬಂದು ದಾವೀದನನ್ನು ಅಭಿಷೇಕಿಸಿ ತಮ್ಮ ಕುಲಕ್ಕೆ ಅರಸನನ್ನಾಗಿ ಮಾಡಿಕೊಂಡರು. ಸೌಲನ ಶವವನ್ನು ಸಮಾಧಿಮಾಡಿದವರು ಯಾಬೇಷ್ ಗಿಲ್ಯಾದಿನವರೇ ಎಂಬ ಸಂಗತಿ ದಾವೀದನಿಗೆ ತಿಳಿಯಿತು.
ಹೀಗೆ ಕೂಡಿಬಂದವರೆಲ್ಲರು ದೇವಾಲಯದಲ್ಲಿ ಅರಸನೊಂದಿಗೆ ಒಪ್ಪಂದ ಮಾಡಿಕೊಂಡರು. ಯೆಹೋಯಾದನು ಅವರಿಗೆ, “ಇಗೋ, ರಾಜಪುತ್ರನು; ಸರ್ವೇಶ್ವರಸ್ವಾಮಿ ದಾವೀದನ ಸಂತಾನದವರಿಗೆ ಮಾಡಿದ ವಾಗ್ದಾನಕ್ಕನುಸಾರ ಅರಸನಾಗತಕ್ಕವನು ಇವನೇ.
ಅವನ ಸೇವಕರು ಅವನ ಶವವನ್ನು ರಥದಲ್ಲಿ ಹಾಕಿಕೊಂಡು ಮೆಗಿದ್ದೋವಿನಿಂದ ಜೆರುಸಲೇಮಿಗೆ ತಂದು ಅವನ ಸ್ವಂತ ಸಮಾಧಿಯಲ್ಲಿ ಇಟ್ಟರು. ಜನರು ಅವನ ಸ್ಥಾನದಲ್ಲಿ ಅವನ ಮಗ ಯೆಹೋವಾಹಾಜನನ್ನು ಅಭಿಷೇಕಿಸಿ ಅರಸನನ್ನಾಗಿ ಮಾಡಿದರು.
ಅವರೆಲ್ಲರು ಅಲ್ಲಿಗೆ ಹೋಗಿ ಸರ್ವೇಶ್ವರನ ಸನ್ನಿಧಿಯಲ್ಲಿ ಸೌಲನ ಅರಸುತನವನ್ನು ಘೋಷಿಸಿ ಸ್ಥಿರಪಡಿಸಿದರು. ಸರ್ವೇಶ್ವರನಿಗೆ ಶಾಂತಿಸಮಾಧಾನದ ಬಲಿಗಳನ್ನು ಸಮರ್ಪಿಸಿದರು. ಸೌಲನೊಡನೆ ಸೇರಿ ಬಹಳವಾಗಿ ಆನಂದಿಸಿದರು.
ಆಗ ಯೆಪ್ತಾಹನು ಗಿಲ್ಯಾದಿನ ಹಿರಿಯರ ಸಂಗಡ ಹೋದನು; ಜನರು ಅವನನ್ನು ಅಧಿಪತಿಯನ್ನಾಗಿಯೂ ನಾಯಕನನ್ನಾಗಿಯೂ ನೇಮಿಸಿದರು. ಯೆಪ್ತಾಹನು ತನ್ನ ವಿಷಯಗಳನ್ನೆಲ್ಲಾ ಮಿಚ್ಫೆಯಲ್ಲಿ ಸರ್ವೇಶ್ವರನ ಮುಂದೆ ಅರಿಕೆ ಮಾಡಿದನು.
ಅವನು ಹೆಬ್ರೋನಿನಲ್ಲಿದ್ದುಕೊಂಡು ಯೆಹೂದ ಕುಲ ಒಂದನ್ನೇ ಆಳಿದ್ದು ಏಳು ವರ್ಷ ಆರು ತಿಂಗಳು; ಜೆರುಸಲೇಮಿನಲ್ಲಿದ್ದುಕೊಂಡು ಯೆಹೂದ್ಯರನ್ನು ಹಾಗು ಇಸ್ರಯೇಲರನ್ನು ಆಳಿದ್ದು ಮೂವತ್ತಮೂರು ವರ್ಷ.
ದಾವೀದನ ಸುಪ್ರಸಿದ್ಧ ರಣವೀರರ ಪಟ್ಟಿ ಇದು: ಸರ್ವೇಶ್ವರ ಮಾಡಿದ ವಾಗ್ದಾನಕ್ಕೆ ಅನುಗುಣವಾಗಿ ದಾವೀದನು ಅರಸನಾಗಲು ಇತರ ಇಸ್ರಯೇಲರೊಂದಿಗೆ ಸಹಾಯ ಮಾಡಿದವರು ಹಾಗೂ ಅವನ ರಾಜ್ಯ ಶಕ್ತಿಯುತವಾಗಿರುವಂತೆ ಮಾಡಿದವರು ಇವರು: