Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 11:24 - ಕನ್ನಡ ಸತ್ಯವೇದವು C.L. Bible (BSI)

24 ‘ಮೂವತ್ತು ಪ್ರಮುಖ ವೀರರು’ ಪಡೆಯ ಒಬ್ಬನಾದ ಬೆನಾಯ ಮಾಡಿದ ಶೂರಕೃತ್ಯ ಇದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಈ ಪರಾಕ್ರಮ ಕೃತ್ಯದಿಂದ ಯೆಹೋಯಾದನ ಮಗನಾದ ಬೆನಾಯನು ಈ ಮೂವರಲ್ಲಿ ಹೆಸರುವಾಸಿಯಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಈ ಪರಾಕ್ರಮಕೃತ್ಯದಿಂದ ಯೆಹೋಯಾದನ ಮಗನಾದ ಬೆನಾಯನು ಈ ಮೂವರಲ್ಲಿ ಹೆಸರುಗೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಇಂಥಾ ಅನೇಕ ಪರಾಕ್ರಮದ ಕೃತ್ಯಗಳನ್ನು ಯೆಹೋಯಾದನ ಮಗನಾದ ಬೆನಾಯನು ಮಾಡಿದ್ದನು. ಆ ಮೂರು ಮಂದಿ ವೀರರಂತೆಯೇ ಇವನೂ ಹೆಸರುವಾಸಿಯಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಇವುಗಳನ್ನು ಯೆಹೋಯಾದಾವನ ಮಗ ಬೆನಾಯನು ಮಾಡಿದ್ದರಿಂದ, ಮೂರು ಮಂದಿ ಪರಾಕ್ರಮಶಾಲಿಗಳಂತೆಯೇ ಹೆಸರುಗೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 11:24
5 ತಿಳಿವುಗಳ ಹೋಲಿಕೆ  

ಯೆಹೋಯಾದಾವನ ಮಗ ಬೆನಾಯನು ‘ಕೆರೇತ್ಯ’, ‘ಪೆಲೇತ್ಯ,’ ಎಂಬ ಕಾವಲುದಂಡುಗಳ ಮುಖ್ಯಸ್ಥನಾಗಿದ್ದನು. ದಾವೀದನ ಮಕ್ಕಳೂ ಯಾಜಕರಾಗಿದ್ದರು.


ಇನ್ನೊಮ್ಮೆ ಏಳುವರೆ ಅಡಿ ಎತ್ತರದ, ಅತೀ ಬಲವಾದ ಈಟಿಯನ್ನು ಹೊಂದಿದ್ದ, ಬಲಾಢ್ಯನಾದ ಈಜಿಪ್ಟನೊಬ್ಬನನ್ನು ಸೋಲಿಸಿದನು. ಆ ಈಜಿಪ್ಟಿನವನ ಕೈಯಲ್ಲಿ ಬಲವಾದ ಈಟಿ ಇತ್ತು. ಇವನಾದರೋ ಒಂದು ಕೋಲನ್ನು ಮಾತ್ರ ಹಿಡಿದುಕೊಂಡು ಹೋಗಿ, ಅವನ ಕೈಯಲ್ಲಿದ್ದ ಈಟಿಯನ್ನು ಕಿತ್ತುಕೊಂಡು ಅದರಿಂದಲೇ ಅವನನ್ನು ಸಂಹರಿಸಿದನು.


ಇವನು ‘ಮೂವತ್ತು ಪ್ರಮುಖ ವೀರರ’ ಪಡೆಯಲ್ಲಿ ಪ್ರಸಿದ್ಧನಾಗಿದ್ದನೇ ಹೊರತು, ‘ಮೂವರು ಪ್ರಮುಖ ವೀರರ’ ಪಡೆಯವರಷ್ಟು ಪ್ರಖ್ಯಾತನಾಗಲಿಲ್ಲ. ಅವನನ್ನು ದಾವೀದನು ತನ್ನ ಕಾವಲುಗಾರರಲ್ಲಿ ಮುಖ್ಯಸ್ಥನನ್ನಾಗಿ ಇಟ್ಟುಕೊಂಡಿದ್ದನು.


ದಾವೀದನು ಅರಸ ಸೌಲನಿಂದ ತಪ್ಪಿಸಿಕೊಂಡು ಚಿಕ್ಲಗ್ ಎಂಬಲ್ಲಿಗೆ ಹೋಗಿ ವಾಸಿಸಿದ್ದನು. ಅಲ್ಲಿ ಬೆನ್ಯಾಮೀನ್ ಗೋತ್ರದ ಅನೇಕ ಅನುಭವಶಾಲಿಗಳೂ ನಂಬಿಗಸ್ಥರೂ ಆದ ಸೈನಿಕರು ಬಂದು ಅವನನ್ನು ಸೇರಿಕೊಂಡರು.


ಪರಾಕ್ರಮಶಾಲಿಯಾದ ಯುವಕ ಚಾದೋಕ ಮತ್ತು ಅವನ ಬಂಧುಗಳಾದ 22 ಮಂದಿ ಅಧಿಪತಿಗಳು;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು