1 ಪೂರ್ವಕಾಲ ವೃತ್ತಾಂತ 11:11 - ಕನ್ನಡ ಸತ್ಯವೇದವು C.L. Bible (BSI)11 ಹಕ್ಮೋನ ಗೋತ್ರದ ಯಾಷೊಬ್ಬಾಮ ಮೊದಲನೆಯವನು. ಇವನು ‘ಮೂವರು ಪ್ರಮುಖ ವೀರರು’ ಎಂಬ ಪಡೆಯ ನಾಯಕ. ಇವನು ತನ್ನ ಈಟಿಯಿಂದ ಮುನ್ನೂರು ಜನರ ಮೇಲೆ ಹೋರಾಡಿ ಅವರೆಲ್ಲರನ್ನೂ ಒಂದೇ ಕಾಳಗದಲ್ಲಿ ಕೊಂದುಹಾಕಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ದಾವೀದನ ಯುದ್ಧವೀರರ ಪಟ್ಟಿ: ಹಕ್ಮೋನಿಯನಾದ ಯಾಷೊಬ್ಬಾಮನು ಮೂವತ್ತು ಶೂರರಲ್ಲಿ ಮುಖ್ಯಸ್ಥನು. ಇವನು ತನ್ನ ಬರ್ಜಿಯನ್ನು ಬೀಸುತ್ತಾ ಹೋಗಿ ಒಂದೇ ಸಾರಿ ಮುನ್ನೂರು ಜನರನ್ನು ಕೊಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ದಾವೀದನ ರಣವೀರರ ಪಟ್ಟಿ - ಹಕ್ಮೋನಿಯನಾದ ಯಾಷೊಬ್ಬಾಮನು ಮೂವತ್ತು ಮಂದಿ ಶೂರರಲ್ಲಿ ಮುಖ್ಯಸ್ಥನು. ಇವನು ತನ್ನ ಬರ್ಜಿಯನ್ನು ಬೀಸುತ್ತಾ ಹೋಗಿ ಒಂದೇ ಸಾರಿ ಮುನ್ನೂರು ಮಂದಿಯನ್ನು ಕೊಂದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್11 ದಾವೀದನ ಸೈನ್ಯದಲ್ಲಿದ್ದ ಪರಾಕ್ರಮಿಗಳು ಯಾರೆಂದರೆ: ಹೆಕ್ಮೋನಿಯನಾದ ಯಾಷೊಬ್ಬಾಮನು. ಇವನು ರಥಾಶ್ವಗಳ ಅಧಿಕಾರಿಗಳಿಗೆ ಅಧಿಪತಿಯಾಗಿದ್ದನು; ಒಂದೇ ಸಾರಿ ಮುನ್ನೂರು ಮಂದಿಯನ್ನು ತನ್ನ ಬರ್ಜಿಯಿಂದ ಕೊಂದಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 ದಾವೀದನ ಪರಾಕ್ರಮಶಾಲಿಗಳ ಪಟ್ಟಿ: ಹಕ್ಮೋನಿಯನಾದ ಯಾಷೊಬ್ಬಾಮನು ಅಧಿಪತಿಗಳಲ್ಲಿ ಮುಖ್ಯಸ್ಥನಾಗಿದ್ದನು. ಇವನು ತನ್ನ ಈಟಿಯಿಂದ ಮುನ್ನೂರು ಮಂದಿಗೆ ವಿರೋಧವಾಗಿ ಹೋರಾಡಿ ಅವರನ್ನು ಒಂದೇ ಕಾಳಗದಲ್ಲಿ ಕೊಂದುಹಾಕಿದನು. ಅಧ್ಯಾಯವನ್ನು ನೋಡಿ |