Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 1:17 - ಕನ್ನಡ ಸತ್ಯವೇದವು C.L. Bible (BSI)

17 ಶೇಮನ ಮಕ್ಕಳು - ಏಲಾಮ್, ಅಶ್ಶೂರ್, ಅರ್ಪಕ್ಷದ್, ಲೂದ್, ಅರಾಮ್, ಊಚ್, ಹೂಲ್, ಗೆತೆರ್, ಮೆಷೆಕ್ ಎಂಬವರು. ಈ ಹೆಸರಿನ ಜನಾಂಗಗಳಿಗೆ ಇವರೇ ಮೂಲಪುರುಷರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಶೇಮನ ಸಂತಾನದವರು: ಏಲಾಮ್, ಅಶ್ಶೂರ್, ಅರ್ಪಕ್ಷದ್, ಲೂದ್, ಅರಾಮ್, ಊಚ್, ಹೂಲ್, ಗೆತೆರ್ ಮತ್ತು ಮೆಷೆಕ್ ಎಂಬುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಶೇಮನ ಸಂತಾನದವರು - ಏಲಾಮ್, ಅಶ್ಶೂರ್, ಅರ್ಪಕ್ಷದ್, ಲೂದ್, ಅರಾಮ್ ಎಂಬವರು. [ಅರಾಮ್ ಸಂತಾನದವರು] - ಊಚ್, ಹೂಲ್, ಗೆತೆರ್, ಮೆಷೆಕ್ ಎಂಬವರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಶೇಮನ ಗಂಡುಮಕ್ಕಳು ಯಾರೆಂದರೆ: ಏಲಾಮ್, ಅಶ್ಯೂರ್, ಅರ್ಪಕ್ಷದ್, ಲೂದ್ ಮತ್ತು ಅರಾಮ್. ಅರಾಮನ ಮಕ್ಕಳು ಯಾರೆಂದರೆ: ಊಚ್, ಹೂಲ್, ಗೆತೆರ್ ಮತ್ತು ಮೆಷೆಕ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಶೇಮನ ಪುತ್ರರು: ಏಲಾಮ್, ಅಶ್ಯೂರ್, ಅರ್ಪಕ್ಷದ್, ಲೂದ್, ಅರಾಮ್, ಅರಾಮನ ಪುತ್ರರು: ಊಚ್, ಹೂಲ್, ಗೆತೆರ್ ಮತ್ತು ಮೆಷೆಕ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 1:17
22 ತಿಳಿವುಗಳ ಹೋಲಿಕೆ  

ಅಸ್ಸೀರಿಯದಿಂದ ನಮಗೆ ರಕ್ಷಣೆ ದೊರಕದು. ನಾವು ಕಾಳಗದ ಕುದುರೆಗಳ ಮೇಲೆ ಇನ್ನೆಂದೂ ಸವಾರಿಮಾಡೆವು. ನಮ್ಮ ಕೈಗಳು ನಿರ್ಮಿಸಿರುವ ವಿಗ್ರಹಗಳನ್ನು ವೀಕ್ಷಿಸಿ, ‘ನೀವೇ ನಮ್ಮ ದೇವರು’ ಎಂದು ಜಪಿಸೆವು. ಓ ದೇವಾ, ದಿಕ್ಕಿಲ್ಲದವರಿಗೆ ಕರುಣೆ ತೋರಿಸುವವನು ನೀನೇ,” ಎಂದು ಹೇಳು.


“ಏಲಾಮೂ ಅಲ್ಲಿದೆ; ಅದರ ಪ್ರಜೆಯೆಲ್ಲಾ ಅದರ ಗೋರಿಯನ್ನು ಸುತ್ತಿಕೊಂಡಿವೆ.ಅವರೆಲ್ಲರೂ ಸಂಹೃತರು, ಖಡ್ಗಹತರು; ಜೀವಲೋಕದಲ್ಲಿ ಭೀಕರವಾಗಿದ್ದ ಆ ಸುನ್ನತಿಹೀನರು ಅಧೋಲೋಕಕ್ಕೆ ಇಳಿದು ಪ್ರೇತಗಳ ನಡುವೆ ಅವಮಾನಪಟ್ಟಿದ್ದಾರೆ.


“ಅಸ್ಸೀರಿಯ ಮತ್ತು ಅದರ ಜನತೆ ಯಾವಾಗಲು ಅಲ್ಲಿರುವುವು; ಆ ಜನರ ಗೋರಿಗಳು ಅದನ್ನು ಸುತ್ತಿಕೊಂಡಿವೆ; ಅವರೆಲ್ಲರೂ ಸಂಹೃತರು, ಖಡ್ಗಹತರು.


ಹಾರಾನ್ ಕನ್ನೆ, ಏದೆನ್ ಸ್ಥಳಗಳವರು ಹಾಗೂ ಶೆಬ, ಅಸ್ಸೀರಿಯಾ, ಕಿಲ್ಮದ್ ಪ್ರಾಂತ್ಯಗಳ ವರ್ತಕರು,


“ಪಾರಸಿಯರೂ ಲೂದ್ಯರೂ ಪೂಟ್ಯರೂ ನಿನ್ನ ಸೈನ್ಯದ ಭಟರಾಗಿದ್ದರು. ಖೇಡ್ಯ ಶಿರಸ್ತ್ರಾಣಗಳನ್ನು ನಿನ್ನಲ್ಲಿ ನೇತುಹಾಕಿ ನಿನ್ನನ್ನು ಭೂಷಿಸುತ್ತಿದ್ದರು.


ಏಲಾಮಿನ ಎಲ್ಲ ಅರಸರು, ಮೇದ್ಯರ ಎಲ್ಲ ಅರಸರು;


ಅವರ ಮಧ್ಯೆ ಒಂದು ಸೂಚಕಕಾರ್ಯವನ್ನು ಮಾಡುವೆನು. ಅವರಲ್ಲಿ ಅಳಿದುಳಿದವರನ್ನು ನನ್ನ ಸುದ್ದಿಯನ್ನು ಕೇಳದೆಯೂ ನನ್ನ ಮಹಿಮೆಯನ್ನು ಕಾಣದೆಯೂ ಇರುವವರ ಬಳಿಗೆ ಕಳಿಸುವೆನು. ತಾರ್ಷೀಷ್, ಲಿಬಿಯಾ, ಧನುರ್ಧಾರಿಗಳಾದ ಲೂದಿಯಾ, ತೂಬಲ್, ಗ್ರೀಸ್ ಎಂಬ ನಾಡುಗಳಿಗೂ ದೂರದ ದ್ವೀಪನಿವಾಸಿಗಳ ಬಳಿಗೂ ಕಳಿಸುವೆನು. ಈ ಅನ್ಯಜನಾಂಗಗಳಿಗೆ ಅವರು ನನ್ನ ಮಹಿಮೆಯನ್ನು ಪ್ರಕಟಿಸುವರು.


ಏಲಾಮಿನ ಸೈನಿಕರು ಬಿಲ್ಲುಬಾಣಗಳನ್ನೂ, ರಥಾಶ್ವಗಳನ್ನೂ ಸಜ್ಜುಗೊಳಿಸಿರುವರು. ಕೀರಿನವರು ಗುರಾಣಿಗಳನ್ನು ಅಣಿಗೊಳಿಸಿರುವರು.


ಘೋರ ದರ್ಶನವೊಂದು ನನಗೆ ಕಂಡುಬಂತು: ದ್ರೋಹಿ ದ್ರೋಹವೆಸಗುತ್ತಿದ್ದಾನೆ. ಕೊಳ್ಳೆಗಾರ ಕೊಳ್ಳೆಹೊಡೆಯುತ್ತಿದ್ದಾನೆ. ಏಲಾಮೇ ಮುನ್ನುಗ್ಗು ! ಮೇದ್ಯವೇ, ಮುತ್ತಿಗೆ ಹಾಕು ! ಬಾಬಿಲೋನಿನಿಂದ ನಿನಗೊದಗಿದ ಗೋಳಾಟವನ್ನು ನಿಲ್ಲಿಸುತ್ತೇನೆ.


ಆ ದಿನದಂದು ಅಸ್ಸೀರಿಯ, ಈಜಿಪ್ಟ್, ಪತ್ರೋಸ್, ಸುಡಾನ್, ಏಲಾಮ್, ಬಾಬಿಲೋನಿಯ, ಹಮಾಥ್ ಹಾಗೂ ಸಮುದ್ರದ ಕರಾವಳಿ - ಈ ಸ್ಥಳಗಳಿಂದ ಸರ್ವೇಶ್ವರ ತಮ್ಮ ಅಳಿದುಳಿದ ಜನರನ್ನು ಬಿಡಿಸಿ ಬರಮಾಡಿಕೊಳ್ಳಲು ಮತ್ತೆ ಕೈನೀಡುವರು.


ಇವರೊಡನೆ ಕೂಡಿಕೊಂಡಿಹ ಅಸ್ಸೀರ್ಯರು I ಲೋಟನ ವಂಶಕ್ಕೆ ಭುಜಬಲವಾಗಿಹರು II


ಅವರು ಜೆರುಬ್ಬಾಬೆಲನ ಬಳಿಗೂ ಗೋತ್ರಪ್ರಧಾನರ ಬಳಿಗೂ ಬಂದು, “ನಿಮ್ಮೊಡನೆ ಕಟ್ಟುವುದಕ್ಕೆ ನಮಗೂ ಅಪ್ಪಣೆಯಾಗಲಿ; ಏಕೆಂದರೆ ನಿಮ್ಮಂತೆ ನಾವೂ ನಿಮ್ಮ ದೇವರ ಭಕ್ತರು; ನಮ್ಮನ್ನು ಇಲ್ಲಿ ತಂದಿರಿಸಿದ ಅಸ್ಸೀರಿಯದ ಅರಸ ಏಸರ್ಹದ್ದೋನನ ಕಾಲದಿಂದ ನಾವು ಆ ದೇವರಿಗೇ ಬಲಿಯರ್ಪಣೆ ಮಾಡುತ್ತಾ ಬಂದಿದ್ದೇವೆ,” ಎಂದು ಹೇಳಿದರು.


“ಬಾಲಾಕನು ನನ್ನನ್ನು ಕರೆಸಿದ ಅರಾಮಿನಿಂದ ಮೋವಾಬರಸ ನನ್ನ ಬರಮಾಡಿದ ಮೂಡಲಗುಡ್ಡೆಗಳಿಂದ. ‘ನನ್ನ ಪರವಾಗಿ ಯಕೋಬವಂಶಜರನ್ನು ಶಪಿಸೆಂದ’ ‘ಹಾಕು ಇಸ್ರಯೇಲರಿಗೆ ಧಿಕ್ಕಾರ’ ಎಂದು ಹೇಳಿದ.


ಆ ದಿನಗಳಲ್ಲಿ ಬಾಬೆಲೋನಿನ ಅರಸ ಅಮ್ರಾಫೆಲನು, ಎಲ್ಲಸಾರಿನ ಅರಸ ಅರಿಯೋಕನು, ಎಲಾಮಿನ ಅರಸ ಕೆದೊರ್ಲಗೋಮರನು ಮತ್ತು ಗೋಯಿಮದ ಅರಸ ತಿದ್ಗಾಲನು - ಈ ನಾಲ್ವರು


ಶೇಮನ ವಂಶವೃಕ್ಷ; ಜಲಪ್ರಳಯ ಕಳೆದು ಎರಡು ವರ್ಷಗಳಾದ ಮೇಲೆ ಶೇಮನಿಗೆ ಅರ್ಪಕ್ಷದನು ಹುಟ್ಟಿದನು. ಆಗ ಶೇಮನಿಗೆ 100 ವರ್ಷ ವಯಸ್ಸು.


ಈ ಕನಸಿನಲ್ಲಿ ಏಲಾಮ್ ಸಂಸ್ಥಾನದ ಶೂಷನ್ ಕೋಟೆಯಲ್ಲಿ ನಾನಿದ್ದೆ. ಊಲಾ ಕಾಲುವೆಯ ದಡದ ಮೇಲೆ ನಾನು ನಿಂತುಕೊಂಡಿದ್ದ ಹಾಗೆ ತೋರಿತು.


ಸಾಲ ಕಯಿನನಿಗೆ, ಕಯಿನ್ ಅರ್ಫಕ್ಷಾದನಿಗೆ, ಅರ್ಪಕ್ಷಾದ್‍ ಶೇಮನಿಗೆ, ಶೇಮ್ ನೋವನಿಗೆ, ನೋವ ಲಾಮೆಕನಿಗೆ, ಲಾಮೆಕ್ ಮತೂಷಲನಿಗೆ ಹುಟ್ಟಿದರು.


ಅರ್ವಾದಿಯ, ಚೆಮಾರಿಯ ಮತ್ತು ಹಮಾತಿನ ಜನರ ಮೂಲಪಿತೃ ಕಾನಾನನು.


ಅರ್ಪಕ್ಷದ್, ಶೆಲಹನ ತಂದೆ, ಶೆಲಹ, ಏಬೆರನ ತಂದೆ.


ಹಿಬ್ರಿಯರೆಲ್ಲರಿಗೆ ಮೂಲಪುರುಷನೂ ಯೆಫೆತನ ಅಣ್ಣನೂ ಆಗಿದ್ದ ಶೇಮನಿಗು ಸಹ ಮಕ್ಕಳಾದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು