Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಥೆಸಲೋನಿಕದವರಿಗೆ 2:7 - ಕನ್ನಡ ಸತ್ಯವೇದವು C.L. Bible (BSI)

7 ತಾಯಿ ತನ್ನ ಮಕ್ಕಳನ್ನು ಸಾಕಿಸಲಹುವಂತೆಯೇ, ನಾವು ನಿಮ್ಮನ್ನು ವಾತ್ಸಲ್ಯದಿಂದ ಕಂಡೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಆದರೆ ತಾಯಿಯೂ ತನ್ನ ಮಕ್ಕಳನ್ನು ಪ್ರೀತಿಯಿಂದ ಪೋಷಿಸುವ ಹಾಗೆ ನಾವು ನಿಮ್ಮ ಮಧ್ಯದಲ್ಲಿ ವಾತ್ಸಲ್ಯದಿಂದ ನಡೆದುಕೊಂಡಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ತಾಯಿಯು ತನ್ನ ಮಕ್ಕಳನ್ನು ಪೋಷಿಸುತ್ತಾಳೋ ಎಂಬಂತೆ ನಾವು ನಿಮ್ಮ ಮಧ್ಯದಲ್ಲಿ ವಾತ್ಸಲ್ಯದಿಂದ ನಡೆದುಕೊಂಡಿದ್ದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ನಾವು ಕ್ರಿಸ್ತನ ಅಪೊಸ್ತಲರಾಗಿ ನಿಮ್ಮೊಡಗಿದ್ದಾಗ, ನಿಮ್ಮಿಂದ ದುಡಿಸಿಕೊಳ್ಳಲು ನಮ್ಮ ಅಧಿಕಾರವನ್ನು ಬಳಸಬಹುದಾಗಿತ್ತು. ಆದರೆ ನಿಮ್ಮೊಡನೆ ಬಹಳ ಸಾತ್ವಿಕರಾಗಿದ್ದೆವು. ತಾಯಿಯು ತನ್ನ ಸ್ವಂತ ಚಿಕ್ಕ ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ನಾವು ನಡೆದುಕೊಂಡೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಅದರ ಬದಲಾಗಿ, ನಾವು ನಿಮ್ಮ ನಡುವೆ ಶಿಶುಗಳಂತೆ ಇದ್ದೆವು. ತಾಯಿಯು ತನ್ನ ಮಕ್ಕಳನ್ನು ಪೋಷಿಸುವಂತೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

7 ಅಮಿ ಕ್ರಿಸ್ತಾಚಿ ಅಪೊಸ್ತಲಾ ರ್‍ಹಾಲ್ಯಾರ್‍ಬಿ ಅಮ್ಕಾ ತಿಚ್ ಮರ್ಯಾದ್ ಗಾವುಕ್‍ ಪಾಜೆ ಮನುನ್ ಅಮಿ ಬಗುಕ್‍ನಾವ್. ಖರೆ ಎಕ್ ಅವ್ಸ್ ಕಸೆ ಅಪ್ನಾಚ್ಯಾ ಪೊರಾಕ್ನಿ ಸಂಬಾಳುನ್ ಘೆವ್ನ್ ಜಾತಾ, ತಸೆಚ್ ತುಮ್ಕಾಬಿ ಥಂಡ್ ಮನಾನ್ ಅಮಿ ಚಾಲ್ವುನ್ ಘೆವ್ನ್ ಗೆಲಾಂವ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಥೆಸಲೋನಿಕದವರಿಗೆ 2:7
18 ತಿಳಿವುಗಳ ಹೋಲಿಕೆ  

ತಂದೆ ಮಕ್ಕಳನ್ನು ಕಾಣುವಂತೆ ನಾವು ಪ್ರತಿಯೊಬ್ಬನನ್ನೂ ಆದರದಿಂದ ಕಂಡೆವು; ಬುದ್ಧಿ ಹೇಳಿದೆವು; ಪ್ರೋತ್ಸಾಹಿಸಿದೆವು.


ನಾನೇ ನಿಮ್ಮನ್ನು ಸಂತೈಸುವೆನು ತಾಯಿಯಂತೆ ಸಾಂತ್ವನ ದೊರಕುವುದು ನಿಮಗೆ ಜೆರುಸಲೇಮಿನಲೆ.


ಸಾಕುತಂದೆಗಳಾಗುವರು ರಾಜರು ನಿನಗೆ ಸಾಕುತಾಯಿಯರಾಗುವರು ರಾಣಿಯರು ನಿನಗೆ. ನಿನ್ನ ಪಾದಧೂಳಿಯ ನೆಕ್ಕುವರವರು ಸಾಷ್ಟಾಂಗವೆರಗಿ ನನಗೆ. ಆಗ ನಿನಗೆ ಗೊತ್ತಾಗುವುದು ನಾನೇ ಸರ್ವೇಶ್ವರನೆಂದು ನನ್ನನ್ನು ನಿರೀಕ್ಷಿಸುವವರು ಆಶಾಭಂಗಪಡರೆಂದು.


ದೇವರಿಂದ ಬರುವ ಜ್ಞಾನವಾದರೋ ಮೊಟ್ಟಮೊದಲನೆಯದಾಗಿ ಪವಿತ್ರವಾದುದು. ಅದು ಶಾಂತಿಸಮಾಧಾನ ಉಳ್ಳದ್ದು. ಸಹನೆ ಸಂಯಮವುಳ್ಳದ್ದು, ನ್ಯಾಯಸಮ್ಮತವಾದದ್ದು, ದಯೆದಾಕ್ಷಿಣ್ಯಗಳಿಂದಲೂ ಸತ್ಕಾರ್ಯಗಳಿಂದಲೂ ಫಲಭರಿತವಾದದ್ದು. ವಂಚನೆಯಾಗಲಿ, ಚಂಚಲತೆಯಾಗಲಿ ಅದರಲ್ಲಿ ಇರುವುದಿಲ್ಲ.


“ಪೌಲನು ನಮ್ಮ ಹತ್ತಿರವಿರುವಾಗ ಮೆದುವಾಗಿಯೂ ದೂರವಿರುವಾಗ ಕಠಿಣನಾಗಿಯೂ ವರ್ತಿಸುತ್ತಾನೆ,” ಎಂದು ನಿಮ್ಮಲ್ಲಿ ಕೆಲವರು ಮಾತನಾಡಿಕೊಳ್ಳುವುದು ನನಗೆ ತಿಳಿದುಬಂದಿದೆ. ವಿನಯಶೀಲರೂ ದೀನದಯಾಳುವೂ ಆದ ಕ್ರಿಸ್ತಯೇಸುವಿನ ಹೆಸರಿನಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ:


ವಿಶ್ವಾಸದಲ್ಲಿ ದುರ್ಬಲರನ್ನು ಗಳಿಸಿಕೊಳ್ಳಲು ನಾನೂ ದುರ್ಬಲನಂತಾದೆ. ಹೇಗಾದರೂ ಸರಿ, ಕೆಲವರನ್ನಾದರೂ ಉದ್ಧರಿಸಲು ಎಲ್ಲರಿಗೂ ಎಲ್ಲವೂ ಆದೆ.


ಬಲಹೀನಾವಸ್ಥೆಯಲ್ಲಿ ಅವರನ್ನು ಶಿಲುಬೆಗೇರಿಸಲಾಯಿತು ಎಂಬುದೇನೋ ನಿಜ. ಆದರೆ, ದೇವರ ಶಕ್ತಿಯಿಂದ ಅವರು ಜೀವಂತರಾಗಿದ್ದಾರೆ. ಕ್ರಿಸ್ತಯೇಸುವಿನಲ್ಲಿ ನಾವೂ ಬಲಹೀನರೇ. ಆದರೆ ನಿಮ್ಮ ವಿಷಯದಲ್ಲಿ ವರ್ತಿಸುವಾಗ ದೇವರ ಶಕ್ತಿಯಿಂದ ಯೇಸುಸ್ವಾಮಿಯೊಂದಿಗೆ ಜೀವಂತರಾಗಿದ್ದೇವೆ.


ಆತ ಮೇಯಿಸುವನು ತನ್ನ ಮಂದೆಯನ್ನು ಕುರುಬನ ಹಾಗೆ ಮರಿಗಳನ್ನು ಕೈಗೆ ಎತ್ತಿಕೊಳ್ಳುವನು, ಅಪ್ಪಿಕೊಳ್ಳುವನು ಎದೆಗೆ ನಡೆಸುವನು ಹಾಲೂಡಿಸುವ ಕುರಿಗಳನ್ನು ಮೆಲ್ಲಗೆ.


ನಿಮ್ಮ ದಯೆಗೆ ನಾನು ಅಯೋಗ್ಯನಾದೆನೇ? ‘ಮೊಲೆ ಕೂಸನ್ನು ಎತ್ತಿಕೊಂಡು ಹೋಗುವವಳಂತೆ ಈ ಜನರನ್ನು ತೋಳತೆಕ್ಕೆಯಲ್ಲಿರಿಸಿ, ಅವರ ಪೂರ್ವಜರಿಗೆ ನಾನು ಪ್ರಮಾಣಮಾಡಿದ ನಾಡಿಗೆ ಒಯ್ಯಿ’ ಎಂದು ಹೇಳುತ್ತೀರಲ್ಲವೆ? ನಾನು ಇವರಿಗೆ ಹೆತ್ತ ತಾಯಿಯೋ?


ಈ ಕಾರಣ, ನಾನು ನಿಮ್ಮ ನಡುವೆ ದುರ್ಬಲನೂ ಭಯಭೀತನೂ ಆಗಿದ್ದೆ.


ಬೆಂಗಾಡಿನಲ್ಲಿ ಸುಮಾರು ನಾಲ್ವತ್ತು ವರ್ಷಗಳ ಕಾಲ ಅವರನ್ನು ಕಾಪಾಡಿದರು.


ನನ್ನ ಪ್ರಿಯ ಮಕ್ಕಳೇ, ತಾಯಿ ತನ್ನ ಮಗುವಿಗಾಗಿ ಪ್ರಸವವೇದನೆಪಡುವ ಪ್ರಕಾರ ಕ್ರಿಸ್ತಯೇಸು ನಿಮ್ಮಲ್ಲಿ ರೂಪುಗೊಳ್ಳುವ ತನಕ ನಿಮಗಾಗಿ ನಾನು ಮತ್ತೆ ಅಂಥ ವೇದನೆಯನ್ನು ಪಡುತ್ತಿದ್ದೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು