Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ತಿಮೊಥೆಯನಿಗೆ 5:17 - ಕನ್ನಡ ಸತ್ಯವೇದವು C.L. Bible (BSI)

17 ಸರಿಯಾಗಿ ಆಡಳಿತವನ್ನು ನಿರ್ವಹಿಸುತ್ತಿರುವ ಸಭಾಹಿರಿಯರು, ವಿಶೇಷವಾಗಿ ಬೋಧನೆಯಲ್ಲೂ ಉಪದೇಶದಲ್ಲೂ ಶ್ರಮಿಸುತ್ತಿರುವವರು, ಇಮ್ಮಡಿ ಸಂಭಾವನೆಗೆ ಯೋಗ್ಯರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಚೆನ್ನಾಗಿ ಅಧಿಕಾರ ನಡಿಸುವ ಸಭೆಯ ಹಿರಿಯರನ್ನು, ಅವರೊಳಗೆ ವಿಶೇಷವಾಗಿ ದೇವರ ವಾಕ್ಯವನ್ನು ಸಾರುವುದರಲ್ಲಿಯೂ ಉಪದೇಶಿಸುವುದರಲ್ಲಿಯೂ ಕಷ್ಟಪಡುವವರನ್ನು ಎರಡುಪಟ್ಟು ಗೌರವಕ್ಕೆ ಯೋಗ್ಯರೆಂದು ಎಣಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಚೆನ್ನಾಗಿ ಅಧಿಕಾರ ನಡಿಸುವ ಸಭೆಯ ಹಿರಿಯರನ್ನು, ಅವರೊಳಗೆ ವಿಶೇಷವಾಗಿ ಪ್ರಸಂಗದಲ್ಲಿಯೂ ಉಪದೇಶದಲ್ಲಿಯೂ ಕಷ್ಟಪಡುವವರನ್ನು ಇಮ್ಮಡಿಯಾದ ಮಾನಕ್ಕೆ ಯೋಗ್ಯರೆಂದು ಎಣಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಸಭೆಯನ್ನು ಉತ್ತಮ ಮಾರ್ಗದಲ್ಲಿ ನಡೆಸುವ ಹಿರಿಯರು ಗೌರವಕ್ಕೂ ಸಂಬಳಕ್ಕೂ ಯೋಗ್ಯರಾಗಿದ್ದಾರೆ. ಪ್ರಸಂಗ ಮಾಡುವುದರಲ್ಲಿಯೂ ಉಪದೇಶಮಾಡುವುದರಲ್ಲಿಯೂ ನಿರತರಾಗಿರುವ ಹಿರಿಯರು ಉನ್ನತವಾದ ಗೌರವವನ್ನು ಪಡೆಯುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಸಭಾಕಾರ್ಯಗಳನ್ನು ಸರಿಯಾಗಿ ನಡೆಸುತ್ತಿರುವ ಹಿರಿಯರು, ವಿಶೇಷವಾಗಿ ವಾಕ್ಯದಲ್ಲಿಯೂ ಬೋಧನೆಯಲ್ಲಿಯೂ ಶ್ರಮಿಸುತ್ತಿರುವವರು ಇಮ್ಮಡಿಯಾದ ಗೌರವಕ್ಕೆ ಯೋಗ್ಯರೆಂದು ಎಣಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

17 ಮುಖಂಡಾ ಹೊವ್ನ್ ಬರಿ ಕಾಮಾ ಕರ್‍ತಲ್ಯಾ ಜಾನ್ತ್ಯಾ ಲೊಕಾಂಚಿ ಮಜುರಿ ದೊನ್‍ಪಟ್ ಹೊವ್ಚಿ, ಲೈ ಕರುನ್ ತೆಂಚಿ, ಜೆ ಕೊನ್ ಪ್ರಚಾರ್ ಕರ್‍ತಲ್ಯಾತ್ ಅನಿ ಶಿಕ್ವುತಲ್ಯಾತ್ ಘಟ್‍ಮುಟ್ ರಿತಿನ್ ಕಾಮ್ ಕರ್ತಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ತಿಮೊಥೆಯನಿಗೆ 5:17
41 ತಿಳಿವುಗಳ ಹೋಲಿಕೆ  

ನಿಮ್ಮ ಸಭಾನಾಯಕರಿಗೆ ವಿಧೇಯರಾಗಿರಿ. ಅವರ ಆಜ್ಞೆಗಳನ್ನು ಪಾಲಿಸಿರಿ. ಅವರು ನಿಮ್ಮ ಆತ್ಮಗಳ ಪಾಲಕರು; ದೇವರಿಗೆ ಲೆಕ್ಕ ಒಪ್ಪಿಸಬೇಕಾದವರು. ಈ ಸೇವೆಯನ್ನು ಅವರು ಸಂತೋಷದಿಂದ ಮಾಡುವಂತೆ ನೀವು ನಡೆದುಕೊಳ್ಳಿ. ಅವರು ಮನನೊಂದುಕೊಂಡು ಮಾಡುವ ಸೇವೆಯಿಂದ ನಿಮಗೆ ಒಳಿತಾಗದು.


ದೇವರ ವಾಕ್ಯದ ಉಪದೇಶ ಪಡೆಯುವವನು ಉಪದೇಶ ಮಾಡುವವನೊಂದಿಗೆ ತನಗೆ ಇರುವ ಒಳ್ಳೆಯದನ್ನೆಲ್ಲಾ ಹಂಚಿಕೊಳ್ಳಲಿ.


ಮನೆಯಿಂದ ಮನೆಗೆ ಹೋಗದೆ ಆ ಮನೆಯಲ್ಲೇ ತಂಗಿದ್ದು, ಅಲ್ಲಿಯವರು ಕೊಡುವ ಅನ್ನಪಾನೀಯಗಳನ್ನು ಸೇವಿಸಿರಿ. ದುಡಿಮೆಗಾರನು ಕೂಲಿಗೆ ಬಾಧ್ಯನು.


ದೇವರ ವಾಕ್ಯವನ್ನು ನಿಮಗೆ ಹೇಳಿಕೊಟ್ಟ ಹಿಂದಿನ ಸಭಾನಾಯಕರನ್ನು ಮರೆಯಬೇಡಿ. ಅವರು ಹೇಗೆ ಬಾಳಿದರು, ಎಂಥ ಮರಣವನ್ನು ಪಡೆದರು ಎಂಬುದನ್ನು ಕುರಿತು ಆಲೋಚಿಸಿರಿ. ಅವರ ವಿಶ್ವಾಸ ನಿಮಗೆ ಆದರ್ಶವಾಗಿರಲಿ.


ವ್ಯವಸಾಯದ ಹುಟ್ಟುವಳಿಯಲ್ಲಿ ಮೊತ್ತಮೊದಲನೆಯ ಪಾಲು ಕಷ್ಟಪಟ್ಟ ರೈತನಿಗಲ್ಲವೇ?


ಪ್ರಭುವಿನ ಹೆಸರಿನಲ್ಲಿ ನೀವು ಅವನನ್ನು ತುಂಬು ಹೃದಯದಿಂದ ಸ್ವಾಗತಿಸಿರಿ. ಅವನಂಥವರಿಗೆ ಸೂಕ್ತ ಗೌರವ ಸಲ್ಲಿಸಿರಿ.


ಉಪದೇಶಕನು ಉಪದೇಶಿಸುವುದರಲ್ಲಿಯೂ ನಿರತನಾಗಿರಲಿ. ದಾನಮಾಡುವವನು ಧಾರಾಳವಾಗಿ ದಾನ ಮಾಡಲಿ. ಅಧಿಕಾರ ನಡೆಸುವವನು ನಿಷ್ಠೆಯಿಂದ ನಡೆಸಲಿ. ಕರುಣಾಪೂರಿತ ಕಾರ್ಯಗಳನ್ನು ಕೈಗೊಳ್ಳುವವನು ಹರ್ಷಚಿತ್ತನಾಗಿರಲಿ.


ಅವರೆಲ್ಲರು ನಮ್ಮನ್ನು ಹಲವಾರು ವಿಧದಲ್ಲಿ ಬಹುಮಾನಿಸಿದರು; ಮಾತ್ರವಲ್ಲ, ನಾವು ಅಲ್ಲಿಂದ ನೌಕಾಯಾನವನ್ನು ಮುಂದುವರಿಸಿದಾಗ, ನಮಗೆ ಅವಶ್ಯವಾದುದೆಲ್ಲವನ್ನು ತಂದು ಹಡಗಿನಲ್ಲಿಟ್ಟರು.


ದೇವರೊಡನೆ ದುಡಿಯುತ್ತಿರುವ ನಾವು ನಿಮ್ಮಲ್ಲಿ ವಿಜ್ಞಾಪಿಸುವುದೇನೆಂದರೆ: ದೇವರಿಂದ ನೀವು ಪಡೆದ ವರಪ್ರಸಾದಗಳನ್ನು ವ್ಯರ್ಥಮಾಡಬೇಡಿ.


ಪ್ರಭು ಸೇವೆಯಲ್ಲಿ ನಿರತರಾದ ತ್ರುಫೈನಳಿಗೂ ತ್ರುಫೋಸಳಿಗೂ ಮತ್ತು ಪ್ರಭುವಿಗಾಗಿ ಶ್ರದ್ಧೆಯಿಂದ ಸೇವೆಸಲ್ಲಿಸಿದ ಪ್ರಿಯ ಪೆರ್ಸಿಸಳಿಗೂ ನನ್ನ ನೆನಕೆಗಳು.


ಅವರ ಸ್ವಂತ ಇಷ್ಟದಿಂದಲೇ ಮುಂದೆ ಬಂದಿದ್ದಾರೆ. ಹಾಗೆ ಮಾಡುವುದು ಅವರ ಕರ್ತವ್ಯವೂ ಹೌದು. ಏಕೆಂದರೆ, ಯೆಹೂದ್ಯರ ಆಧ್ಯಾತ್ಮಿಕ ಸಂಪತ್ತಿನಲ್ಲಿ ಪಾಲುಗಾರರಾಗಿರುವ ಅನ್ಯಧರ್ಮೀಯರು ತಮ್ಮ ಐಹಿಕಸಂಪತ್ತಿನಲ್ಲಿ ಅವರಿಗೆ ಪಾಲು ನೀಡಲು ಕರ್ತವ್ಯಬದ್ಧರಾಗಿದ್ದಾರೆ.


ನನ್ನ ಜೊತೆ ಸೇವಕನಾದ ನೀನು ಈ ಮಹಿಳೆಯರಿಗೆ ನೆರವಾಗಬೇಕು. ಇವರು ಸಹ ಕ್ಲೇಮಂತನು ಮತ್ತು ಇತರ ಸಹಸೇವಕರೊಡನೆ ನನ್ನೊಂದಿಗೆ ಶುಭಸಂದೇಶದ ಪ್ರಚಾರಕಾರ್ಯದಲ್ಲಿ ಸಹಕರಿಸಿರುತ್ತಾರೆ. ಇವರೆಲ್ಲರ ಹೆಸರುಗಳು ನಿತ್ಯಜೀವಬಾಧ್ಯರ ಪಟ್ಟಿಯಲ್ಲಿವೆ.


ಇಂಥವರನ್ನು ಮತ್ತು ಅವರೊಡನೆ ದುಡಿದು ಸೇವೆಮಾಡುವವರನ್ನು ಮುಂದಾಳುಗಳೆಂದು ಸನ್ಮಾನಿಸಿರಿ.


ಅಂತೆಯೇ ತಮ್ಮ ಸಹಾಯವನ್ನು ಬಾರ್ನಬ ಮತ್ತು ಸೌಲ ಇವರ ಮುಖಾಂತರ ಅಲ್ಲಿನ ಸಭಾಪ್ರಮುಖರಿಗೆ ಕಳುಹಿಸಿಕೊಟ್ಟರು.


ಅವರು ಆಚೆ ದಡಕ್ಕೆ ಸೇರಿದ ಮೇಲೆ ಎಲೀಯನು ಎಲೀಷನನ್ನು, “ನಿನ್ನನ್ನು ಬಿಟ್ಟುಹೋಗುವ ಮೊದಲು ನಾನು ನಿನಗೋಸ್ಕರ ಏನು ಮಾಡಬೇಕನ್ನುತ್ತಿ ಹೇಳು?” ಎಂದು ಕೇಳಿದನು. ಅದಕ್ಕೆ ಎಲೀಷನು, “ನಿಮಗಿರುವ ಆತ್ಮಶಕ್ತಿಯಲ್ಲಿ ನನಗೆ ಎರಡು ಪಾಲನ್ನು ಅನುಗ್ರಹಿಸಿ,” ಎಂದು ಬೇಡಿಕೊಂಡನು.


ನೀನು ದೇವರ ವಾಕ್ಯವನ್ನು ಆಸಕ್ತಿಯಿಂದ ಕಾಲ ಅಕಾಲಗಳನ್ನು ಲೆಕ್ಕಿಸದೆ ಬೋಧಿಸು. ಸತ್ಯವನ್ನು ಮನಗಾಣಿಸು; ತಪ್ಪನ್ನು ತಿದ್ದು; ಒಳ್ಳೆಯದನ್ನು ಪ್ರೋತ್ಸಾಹಿಸು’ ತಾಳ್ಮೆಯನ್ನು ಕಳೆದುಕೊಳ್ಳದೆ ಉಪದೇಶಮಾಡು.


ಇವುಗಳಲ್ಲೇ ಮಗ್ನನಾಗಿರು. ಇದರಿಂದ ನಿನ್ನ ಮತ್ತು ನಿನ್ನ ಉಪದೇಶವನ್ನು ಕೇಳುವವರ ಜೀವೋದ್ಧಾರವನ್ನು ಸಾಧಿಸುವೆ.


ತನ್ನ ಕುಟುಂಬವನ್ನೇ ಜವಾಬ್ದಾರಿಯುತವಾಗಿ ನಡೆಸಲು ತಿಳಿಯದವನು ದೇವರ ಸಭೆಯನ್ನು ಹೇಗೆ ತಾನೇ ಪರಿಶೀಲಿಸಿಯಾನು?


ಹೀಗೆ ನೀವು ನಡೆದುಕೊಂಡರೆ ನನ್ನ ಸೇವೆ ವ್ಯರ್ಥವಾಗದೆ, ಶ್ರಮೆ ನಿಷ್ಫಲವಾಗದೆ, ಫಲಪ್ರದವಾಯಿತೆಂದು ಕ್ರಿಸ್ತರ ದಿನದಂದು ನಾನು ಹೆಮ್ಮೆಪಡಬಹುದು.


ಎಚ್ಚರಿಕೆ! ನಾನು ನಿಮಗೆ ಮುಂಚಿತವಾಗಿಯೇ ಇದನ್ನು ತಿಳಿಸುತ್ತಾ ಇದ್ದೇನೆ.


ನಿಮ್ಮ ಸಭಾನಾಯಕರೆಲ್ಲರಿಗೂ ಎಲ್ಲಾ ದೇವಜನರಿಗೂ ನನ್ನ ವಂದನೆಗಳು. ಇಟಲಿಯಿಂದ ಬಂದ ಸಹೋದರರು ನಿಮಗೆ ವಂದನೆ ತಿಳಿಸಿದ್ದಾರೆ.


ಸಕಲ ಮಾನವರ, ವಿಶೇಷವಾಗಿ ಕ್ರೈಸ್ತವಿಶ್ವಾಸಿಗಳ, ಉದ್ಧಾರಕರಾದ ಜೀವಸ್ವರೂಪ ದೇವರಲ್ಲಿಯೇ ನಾವು ಭರವಸೆಯಿಟ್ಟಿದ್ದೇವೆ; ಅದಕ್ಕಾಗಿಯೇ ನಾವು ಹೋರಾಡುತ್ತೇವೆ ಹಾಗೂ ಶ್ರಮಿಸುತ್ತೇವೆ.


ನಾನು ಈಗ ಈ ಸ್ಥಿತಿಯಲ್ಲಿ ಇರುವುದು ದೇವರ ಅನುಗ್ರಹದಿಂದಲೇ. ಅವರ ಅನುಗ್ರಹ ನನ್ನಲ್ಲಿ ವ್ಯರ್ಥವಾಗಲಿಲ್ಲ. ನಾನು ಅವರೆಲ್ಲರಿಗಿಂತಲೂ ಹೆಚ್ಚು ಶ್ರಮಪಟ್ಟು ಸೇವೆಮಾಡಿದ್ದೇನೆ. ಅದನ್ನು ಮಾಡಿದವನು ನಾನಲ್ಲ, ನನ್ನಲ್ಲಿರುವ ದೇವರ ಅನುಗ್ರಹವೇ.


ಹೀಗೆ ಕಷ್ಟಪಟ್ಟು ದುಡಿದು, ದುರ್ಬಲರಿಗೆ ನೆರವಾಗಬೇಕೆಂದು ನಾನು ನಿಮಗೆ ಹಲವಾರು ವಿಧದಲ್ಲಿ ತೋರಿಸಿಕೊಟ್ಟಿದ್ದೇನೆ. ‘ಕೊಳ್ಳುವ ಕೈಗಿಂತ ಕೊಡುವ ಕೈ ಧನ್ಯವಾದುದು’ ಎಂಬ ಯೇಸುಸ್ವಾಮಿಯ ಮಾತುಗಳನ್ನು ನೆನಪಿನಲ್ಲಿಡಿ.”


ನೀವು ದುಡಿಯದ ಎಡೆಯಲ್ಲಿ ಕೊಯ್ಲುಮಾಡಲು ನಾನು ನಿಮ್ಮನ್ನು ಕಳುಹಿಸಿದ್ದೇನೆ. ದುಡಿದವರು ಬೇರೆ, ಅವರ ದುಡಿಮೆಯ ಫಲ ಬರುವುದು ನಿಮ್ಮ ಪಾಲಿಗೆ,” ಎಂದು ಹೇಳಿದರು.


ಅದಕ್ಕೆ ಪ್ರಭು ಹೀಗೆಂದರು: “ಪ್ರಾಮಾಣಿಕನೂ ವಿವೇಕಿಯೂ ಆದ ಮೇಸ್ತ್ರಿ ಯಾರು? ಕಾಲಕಾಲಕ್ಕೆ ಸರಿಯಾಗಿ ಕೂಲಿಯಾಳುಗಳಿಗೆ ದವಸಧಾನ್ಯವನ್ನು ಅಳೆದುಕೊಟ್ಟು, ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಯಜಮಾನನು ನೇಮಿಸಿದ್ದ ಮೇಸ್ತ್ರಿಯೇ.


ನಂಬಿಕೆಯಿಂದ ಕಾದಿರುವ ಸೆರೆಯಾಳುಗಳೇ, ಹಿಂದಿರುಗಿರಿ ನಿಮ್ಮ ಸುಭದ್ರ ದುರ್ಗಸ್ಥಾನಕೆ ಇಗೋ, ಈಗಲೂ ಘೋಷಿಸುತ್ತಿರುವೆ: ನಿಮಗಿಮ್ಮಡಿ ಸೌಭಾಗ್ಯ ನೀಡುವೆ.


ನನಗಲ್ಲ, ನನ್ನ ಹಿಂಸಕರಿಗೆ ಅವಮಾನವಾಗಲಿ. ಭಯಭ್ರಾಂತಿ ನನ್ನನ್ನಲ್ಲ, ಅವರನ್ನು ಅಪಹರಿಸಲಿ. ಅವರಿಗೆ ಕೇಡುಗಾಲವನ್ನು ಬರಮಾಡಿ ಬೇರುಸಹಿತ ಅವರನ್ನು ನಾಶಪಡಿಸಿರಿ !


ಮೊತ್ತ ಮೊದಲು ಅವರ ಅಕ್ರಮಕ್ಕೂ ಪಾಪಕ್ಕೂ ಇಮ್ಮಡಿ ಶಿಕ್ಷೆಯನ್ನು ಕೊಡುವೆನು. ಏಕೆಂದರೆ ಹೆಣಗಳಂತಿರುವ ತಮ್ಮ ಹೇಯ ವಿಗ್ರಹಗಳಿಂದ ನನ್ನ ನಾಡನ್ನು ಹೊಲಸುಮಾಡಿದ್ದಾರೆ. ಅಸಹ್ಯವಾದ ವಸ್ತುಗಳಿಂದ ಆ ನನ್ನ ಸ್ವಂತ ನಾಡನ್ನು ತುಂಬಿಸಿಬಿಟ್ಟಿದ್ದಾರೆ.”


ಜೆರುಸಲೇಮಿನೊಡನೆ ಪ್ರೀತಿಯಿಂದ ಮಾತನಾಡಿ; ಅದರ ಊಳಿಗತನ ಮುಗಿಯಿತೆನ್ನಿ; ತಕ್ಕ ಪ್ರಾಯಶ್ಚಿತ್ತವಾಗಿದೆ ಅದು ಗೈದ ದೋಷಕೆ ಸರ್ವೇಶ್ವರ ಸ್ವಾಮಿಯಿಂದಲೇ ಅದರ ಎಲ್ಲಾ ಪಾಪಕೃತ್ಯಗಳಿಗೆ ಇಮ್ಮಡಿ ಶಿಕ್ಷೆಯಾಗಿದೆ ಎಂದು ಕೂಗಿ ಹೇಳಿ ಆ ನಗರಿಗೆ.”


ದಿಕ್ಕಿಲ್ಲದ ವಿಧವೆಯರನ್ನು ಸಂರಕ್ಷಿಸು.


ಈ ವಿಷಯಗಳನ್ನೆಲ್ಲಾ ಇತರ ಸಹೋದರರಿಗೆ ನೀನು ವಿವರಿಸುವವನಾದರೆ, ನೀನು ಕ್ರಿಸ್ತಯೇಸುವಿನ ಯೋಗ್ಯ ದಾಸನಾಗುವೆ, ನೀನು ಅನುಸರಿಸುತ್ತಾ ಬಂದಿರುವ ಸದ್ಬೋಧನೆಯಿಂದಲೂ ವಿಶ್ವಾಸದಿಂದಲೂ ಆಧ್ಯಾತ್ಮಿಕ ಪೋಷಣೆಯನ್ನು ಪಡೆಯುವೆ.


ನಾವು ದೇವರ ಸಹಕಾರ್ಮಿಕರು. ನೀವು ದೇವರೆ ಸಾಗುವಳಿಮಾಡುವ ಹೊಲ; ಅವರೆ ನಿರ್ಮಿಸುತ್ತಿರುವ ಮಂದಿರ.


ನಿನ್ನಲ್ಲಿರುವ ವರದಾನವನ್ನು ಅಲಕ್ಷಿಸಬೇಡ. ಸಭೆಯ ಹಿರಿಯರು ನಿನ್ನ ಮೇಲೆ ದೈವವಾಕ್ಯದ ಉಚ್ಚಾರದೊಂದಿಗೆ ಹಸ್ತನಿಕ್ಷೇಪಮಾಡಿದಾಗ ಈ ವರವು ನಿನಗೆ ಲಭಿಸಿತಲ್ಲವೇ?


ಸಭಾಹಿರಿಯರ ವಿರುದ್ಧ ಯಾರಾದರೂ ದೂರು ತಂದರೆ, ಇಬ್ಬರ ಅಥವಾ ಮೂವರ ಸಾಕ್ಷಿ ಇಲ್ಲದೆ ಅದನ್ನು ಲಕ್ಷ್ಯಕ್ಕೆ ತಂದುಕೊಳ್ಳಬೇಡ.


ನೀವು ಮತ್ತು ನಿಮ್ಮ ಮನೆಯವರು ಅದನ್ನು ಯಾವ ಸ್ಥಳದಲ್ಲಿಯಾದರೂ ಊಟಮಾಡಬಹುದು. ದೇವದರ್ಶನದ ಗುಡಾರದ ಪರಿಚರ್ಯವನ್ನು ಮಾಡಿದ್ದಕ್ಕೆ ಅದು ನಿಮಗೆ ಪ್ರತಿಫಲ.


ಅಂಥವನ ಕೈಯಲ್ಲಿ ಪಿತ್ರಾರ್ಜಿತ ಸೊತ್ತನ್ನು ಮಾರಿದ ಹಣವಿದ್ದರೂ ಮಿಕ್ಕ ಲೇವಿಯರೊಂದಿಗೆ ಸಮವಾದ ಪಾಲಿಗೆ ಬಾಧ್ಯನಾಗಿರುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು