Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ತಿಮೊಥೆಯನಿಗೆ 4:4 - ಕನ್ನಡ ಸತ್ಯವೇದವು C.L. Bible (BSI)

4 ದೇವರು ಸೃಷ್ಟಿಸಿದ್ದೆಲ್ಲವೂ ಒಳ್ಳೆಯದೇ. ಅವರಿಗೆ ಸ್ತುತಿಸಲ್ಲಿಸಿ ಸ್ವೀಕರಿಸಿದ ಯಾವುದನ್ನೂ ತಿರಸ್ಕರಿಸಬೇಕಾಗಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ದೇವರು ಉಂಟುಮಾಡಿದ್ದೆಲ್ಲವೂ ಒಳ್ಳೆಯದೇ, ನಾವು ಕೃತಜ್ಞತಾಸ್ತುತಿಮಾಡಿ ತೆಗೆದುಕೊಳ್ಳುವ ಯಾವ ಆಹಾರವನ್ನು ತಿರಸ್ಕರಿಸಬೇಕಾಗಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಆತನು ಉಂಟುಮಾಡಿದ್ದೆಲ್ಲವೂ ಒಳ್ಳೇದೇ; ದೇವರ ಸ್ತೋತ್ರಮಾಡಿ ತೆಗೆದುಕೊಳ್ಳುವ ಪಕ್ಷಕ್ಕೆ ಯಾವದನ್ನೂ ನಿಷಿದ್ಧವೆಂದು ಹೇಳತಕ್ಕದ್ದಲ್ಲ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಆತನು ನಿರ್ಮಿಸಿದ ಪ್ರತಿಯೊಂದೂ ಉತ್ತಮವಾಗಿರುತ್ತದೆ. ಆತನಿಗೆ ಕೃತಜ್ಞತಾಸ್ತುತಿ ಮಾಡಿ ತೆಗೆದುಕೊಳ್ಳುವ ಯಾವುದನ್ನೇ ಆಗಲಿ ನಿಷಿದ್ಧವೆಂದು ತಿರಸ್ಕರಿಸಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ದೇವರು ಸೃಷ್ಟಿಸಿದ್ದೆಲ್ಲವೂ ಒಳ್ಳೆಯದಾಗಿದೆ. ಕೃತಜ್ಞತೆ ಮಾಡಿ ಸ್ವೀಕರಿಸುವ ಯಾವುದನ್ನೂ ತಿರಸ್ಕರಿಸಬೇಕಾಗಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

4 ಕಶ್ಯಾಕ್ ಮಟ್ಲ್ಯಾರ್ ದೆವಾನ್ ರಚಲ್ಲೆ ಸಗ್ಳೆ ಬರೆಚ್; ಬುರ್ಶೆ ಮನ್ತಲೆ ಕಾಯ್ಬಿ ನಾ, ಖರೆ ಧನ್ಯವಾದಾಚಿ ಮಾಗ್ನಿ ಕರುನ್ ತೆ ಖಾವ್ಚೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ತಿಮೊಥೆಯನಿಗೆ 4:4
15 ತಿಳಿವುಗಳ ಹೋಲಿಕೆ  

ಕೇವಲ ಆಹಾರಕ್ಕಾಗಿ, ದೇವರು ಕಟ್ಟಿದ್ದನ್ನು ನೀನು ಕೆಡವಬೇಡ. ಆಹಾರಪದಾರ್ಥಗಳೆಲ್ಲಾ ಒಳ್ಳೆಯವೇ. ಆದರೆ ಅವುಗಳಲ್ಲಿ ಯಾವುದಾದರೂ ಒಂದನ್ನು ತಿನ್ನುವುದರಿಂದ ಮತ್ತೊಬ್ಬನಿಗೆ ವಿಘ್ನವನ್ನು ಒಡ್ಡುವುದಾದರೆ, ಅದು ತಪ್ಪು.


ಮನಸ್ಸಾಕ್ಷಿಯನ್ನು ಕೆದಕುವ ಪ್ರಶ್ನೆಗಳಿಗೆ ಎಡೆಕೊಡದೆ ಮಾಂಸದ ಮಾರುಕಟ್ಟೆಯಲ್ಲಿ ಮಾರುವುದೆಲ್ಲವನ್ನೂ ನೀವು ತಂದು ತಿನ್ನಬಹುದು.


ಯಾವ ಪದಾರ್ಥವು ಸ್ವತಃ ಅಶುದ್ಧವಲ್ಲವೆಂದು ಪ್ರಭುಯೇಸುವಿನಲ್ಲಿ ನಾನು ಖಚಿತವಾಗಿ ಹೇಳಬಲ್ಲೆ. ಆದರೆ, ಒಂದು ಪದಾರ್ಥವನ್ನು ಅಶುದ್ಧವೆಂದು ಯಾರಾದರೂ ಭಾವಿಸಿದರೆ ಅದು ಅವನಿಗೆ ಅಶುದ್ಧವೇ ಆಗುತ್ತದೆ.


“ಏನನ್ನು ಮಾಡಲೂ ಸ್ವಾತಂತ್ರ್ಯವಿದೆ,” ಎಂದು ಹೇಳುವುದುಂಟು. ಆದರೆ ಎಲ್ಲವೂ ಪ್ರಯೋಜನಕರವಲ್ಲ. ಏನನ್ನು ಮಾಡಲೂ ಸ್ವಾತಂತ್ರ್ಯವಿದೆ. ಆದರೆ ಎಲ್ಲವೂ ಅಭಿವೃದ್ಧಿಕರವಲ್ಲ.


ವಿಶ್ವಾಸಿಗಳಾಗಿರುವ ಯೆಹೂದ್ಯೇತರಿಗಾದರೋ ನಾವೀಗಲೇ ಪತ್ರವನ್ನು ಕಳುಹಿಸಿದ್ದೇವೆ. ಅದರಲ್ಲಿ ಅವರು ವಿಗ್ರಹಗಳಿಗೆ ಅರ್ಪಿಸಿದ ನೈವೇದ್ಯವನ್ನು ಸೇವಿಸಬಾರದು, ಅನೈತಿಕತೆಯಿಂದ ದೂರವಿರಬೇಕು, ರಕ್ತವನ್ನಾಗಲೀ ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಗಳನ್ನಾಗಲೀ ತಿನ್ನಬಾರದು, ಎಂದು ತೀರ್ಮಾನಕೊಟ್ಟಿದ್ದೇವೆ,” ಎಂದರು.


ಮದುವೆಯಾಗಬಾರದು, ಇಂತಿಂಥ ಆಹಾರವನ್ನು ಸೇವಿಸಬಾರದು ಎಂದು ಬೋಧಿಸುತ್ತಾರೆ. ಆದರೆ ಸತ್ಯವನ್ನು ಅರಿತು ಯಾರು ವಿಶ್ವಾಸಿಗಳಾಗಿದ್ದಾರೋ ಅಂಥವರು ಎಲ್ಲ ಆಹಾರಪದಾರ್ಥಗಳನ್ನು ಕೃತಜ್ಞತಾಸ್ತುತಿಯೊಡನೆ ಸೇವಿಸಲೆಂದೇ ದೇವರು ಅವುಗಳನ್ನು ಸೃಷ್ಟಿಸಿದ್ದಾರೆ.


ತಾವು ಸೃಷ್ಟಿಸಿದ ಎಲ್ಲವನ್ನು ದೇವರು ನೋಡಿದರು. ಅವೆಲ್ಲವೂ ಬಹಳ ಚೆನ್ನಾಗಿತ್ತು. ಹೀಗೆ ಬೈಗೂ ಬೆಳಗೂ ಆಗಿ ಆರನೆಯ ದಿನ ಆಯಿತು.


“ನಿಮಗೆ ಪೊರೆಬಂಡೆ ಆತ, ಆತನ ಕಾರ್ಯ ದೋಷರಹಿತ ಆತನ ಮಾರ್ಗ ನ್ಯಾಯಯುತ, ಆ ದೇವ ನಂಬಿಕಸ್ತ. ಆತ ನಿರ್ವಂಚಕ, ಯಥಾರ್ಥನು ಹಾಗು ನೀತಿವಂತ.”


ಅದಕ್ಕೆ ಮತ್ತೊಮ್ಮೆ ಆ ವಾಣಿ ಅವನಿಗೆ, “ದೇವರೇ ಶುದ್ಧೀಕರಿಸಿರುವ ಯಾವುದನ್ನೂ ಅಶುದ್ಧವೆನ್ನಬೇಡ,” ಎಂದಿತು.


ಒಂದು ದಿನವನ್ನು ಮಂಗಳಕರವೆಂದು ಭಾವಿಸುವವನು ಪ್ರಭುವಿಗಾಗಿಯೇ ಆ ರೀತಿ ಭಾವಿಸುತ್ತಾನೆ. ಮಾಂಸವನ್ನು ತಿನ್ನುವವನು ಪ್ರಭುವಿಗಾಗಿಯೇ ತಿನ್ನುತ್ತಾನೆ. ಹೇಗೆಂದರೆ, ತಿನ್ನುವ ಆ ಪದಾರ್ಥಕ್ಕಾಗಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾನೆ. ಸಸ್ಯಾಹಾರಿಯೂ ಪ್ರಭುವಿಗಾಗಿಯೇ ಮಾಂಸವನ್ನು ತಿನ್ನದೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾನೆ.


ಏಕೆಂದರೆ, “ಭೂಮಂಡಲವೂ ಅದರಲ್ಲಿರುವುದೆಲ್ಲವೂ ಪ್ರಭುವಿನದೆ.”


ಹಾಗೂ “ನಾನು ದೇವರಿಗೆ ಕೃತಜ್ಞತಾಸ್ತೋತ್ರ ಮಾಡಿ ಊಟಮಾಡಿದೆನಾದರೆ ಹಗೆ ಸ್ತೋತ್ರಸಲ್ಲಿಕೆಯೊಂದಿಗೆ ಮಾಡಿದ ಊಟಕ್ಕಾಗಿ ನನ್ನ ಮೇಲೆ ದೂಷಣೆ ಏಕೆ?” ಎಂದು ಕೇಳಬಹುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು