Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ತಿಮೊಥೆಯನಿಗೆ 2:9 - ಕನ್ನಡ ಸತ್ಯವೇದವು C.L. Bible (BSI)

9 ಅಂತೆಯೇ, ಮಹಿಳೆಯರು, ಸಭ್ಯತೆಯನ್ನು ಮೀರದೆ ಘನತೆ, ಗೌರವಕ್ಕೆ ಒಪ್ಪುವಂತಹ ಉಡುಪನ್ನು ಧರಿಸಿಕೊಳ್ಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಹಾಗೆಯೇ ಸ್ತ್ರೀಯರು ಮಾನಸ್ಥೆಯರಾಗಿಯೂ, ಸಭ್ಯತೆಯುಳ್ಳವರಾಗಿಯೂ ಇದ್ದು, ಗೌರವಕ್ಕೆ ತಕ್ಕ ಉಡುಪನ್ನೂ ಧರಿಸಿಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆಯನ್ನು ಹೆಣೆಯುವುದು, ಚಿನ್ನ, ಮುತ್ತು, ಬೆಲೆಯುಳ್ಳ ವಸ್ತ್ರ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಹಾಗೆಯೇ ಸ್ತ್ರೀಯರು ಮಾನಸ್ಥೆಯರಾಗಿಯೂ ಡಂಭವಿಲ್ಲದವರಾಗಿಯೂ ಇದ್ದು ಮರ್ಯಾದೆಗೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಸ್ತ್ರೀಯರು ತಮಗೆ ಯೋಗ್ಯವಾದ ಉಡುಪುಗಳನ್ನು ಧರಿಸಬೇಕೆಂದು ನಾನು ಅಪೇಕ್ಷಿಸುತ್ತೇನೆ. ಅವರ ಉಡುಪುಗಳು ಅವರು ಮಾನಸ್ಥೆಯರು ಎಂಬುದನ್ನು ತೋರಿಸುವಂಥವುಗಳಾಗಿರಬೇಕು. ಅವರು ತಮ್ಮ ಸೌಂದರ್ಯವನ್ನು ಹೆಚ್ಚಿಸಲು ತಲೆಕೂದಲನ್ನು ಅಲಂಕಾರಿಕವಾಗಿ ಕಟ್ಟಿಕೊಳ್ಳಕೂಡದು; ಬಂಗಾರವನ್ನು ಮತ್ತು ಮುತ್ತುಗಳನ್ನು ತೊಟ್ಟುಕೊಳ್ಳಕೂಡದು ಮತ್ತು ಬೆಲೆಬಾಳುವ ಬಟ್ಟೆಗಳನ್ನು ಧರಿಸಿಕೊಳ್ಳಕೂಡದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಹಾಗೆಯೇ ಸ್ತ್ರೀಯರು ಸಭ್ಯತೆ ಹಾಗೂ ಸ್ವಸ್ಥಬುದ್ಧಿಯುಳ್ಳವರಾಗಿದ್ದು ಗೌರವಕ್ಕೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆ, ಚಿನ್ನ, ಮುತ್ತುಗಳು, ಬೆಲೆಯುಳ್ಳ ವಸ್ತ್ರ ಇವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳದೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

9 ತಸೆಚ್ ಬಾಯ್ಕೊಮನ್ಸಾನಿ ಮರ್ಯಾದಿಚೆ ಅನಿ ಶಿಸ್ತ್ ದಿಸ್ತಲೆ ಕಪ್ಡೆ ನೆಸುಚೆ ಮನ್ತಲಿ ಮಾಜಿ ಆಶಾ, ಅನಿ ಕೆಸಾಕ್ನಿ ಲೈ ಶಿಂಗಾರ್ ಕರುನ್ ಘೆವ್ಕ್ ಸಾಟ್ನಿ ಲೈ ಸೊನ್ಯಾಚಿ ವಸ್ತಾ ನೆಸುನ್, ಮೊತಿಚಿ ವಸ್ತಾ ನೆಸುನ್, ಮ್ಹಾಗ್ರೆ ಕಪ್ಡೆ ನೆಸುಚೆ ಮನುನ್ ನ್ಹಯ್,

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ತಿಮೊಥೆಯನಿಗೆ 2:9
20 ತಿಳಿವುಗಳ ಹೋಲಿಕೆ  

ಎಲೈ ಜೆರುಸಲೇಮ್, ಸೂರೆಯಾಗುವಾಗ ಏನು ಮಾಡುವೆ? ಪಟ್ಟದ ಬಟ್ಟೆಗಳನ್ನು ಉಟ್ಟುಕೊಂಡು ಚಿನ್ನದ ಒಡವೆಗಳನ್ನು ತೊಟ್ಟುಕೊಂಡು ಕಾಡಿಗೆಯಿಂದ ಕಣ್ಣುಗಳನ್ನು ಅಗಲಿಸಿಕೊಂಡು ಶೃಂಗರಿಸಿಕೊಂಡರೆ ಏನು ಪ್ರಯೋಜನ? ಎಲ್ಲವೂ ವ್ಯರ್ಥ ! ನಿನ್ನ ಮಿಂಡರೇ ನಿನ್ನನ್ನು ತಿರಸ್ಕರಿಸಿ ನಿನ್ನ ಪ್ರಾಣಹುಡುಕುವರು.


ಪ್ರೀತಿಸುತ್ತಾನೆ ಪ್ರಭು ತನ್ನ ಪ್ರಜೆಯನು I ಜಯಶೀಲರನ್ನಾಗಿಸುತ್ತಾನೆ ದೀನದಲಿತರನು II


ಸ್ವಾಮಿ ಇಂತೆನ್ನುತ್ತಾರೆ: ಸಿಯೋನಿನ ಮಹಿಳೆಯರ ಒನಪು ಒಯ್ಯಾರಗಳನ್ನು ನೋಡಿರಿ. ಅವರು ಕತ್ತುತೂಗುತ್ತಾ, ಕಡೆಗಣ್ಣು ಹಾಕುತ್ತಾ, ಕುಲುಕಿ ಹೆಜ್ಜೆಯಿಡುತ್ತಾ, ಕಾಲುಗೆಜ್ಜೆ ಜಣಜಣಿಸುತ್ತಾ ನಡೆಯುತ್ತಾರೆ.


ಒಬ್ಬ ಯುವತಿ ತನ್ನ ಆಭರಣಗಳನ್ನು, ಒಬ್ಬ ವಧು ತನ್ನ ಡಾಬನ್ನು ಮರೆಯುವುದುಂಟೆ? ನನ್ನ ಜನರೋ ಲೆಕ್ಕವಿಲ್ಲದಷ್ಟು ದಿನ ನನ್ನನ್ನು ಮರೆತಿದ್ದಾರೆ.


ಯೇಹುವು ಜೆಸ್ರೀಲಿಗೆ ಬಂದನು. ಈಜೆಬೆಳು ಅದನ್ನು ಕೇಳಿ ತಲೆಯನ್ನು ಆಭರಣಗಳಿಂದ ಅಲಂಕರಿಸಿಕೊಂಡು, ಕಣ್ಣಿಗೆ ಕಾಡಿಗೆ ಹಚ್ಚಿಕೊಂಡು, ಕಿಟಕಿಯಿಂದ ನೋಡುತ್ತಾ ನಿಂತಳು.


ಇಗೋ, ಅವನನ್ನು ಎದುರುಗೊಳ್ಳುತ್ತಾಳೆ ವೇಷಧಾರಿಯಾದ ಕಪಟಸ್ತ್ರೀಯೊಬ್ಬಳು.


ಬಳಿಕ ತಾನು ತಂದಿದ್ದ ಬೆಳ್ಳಿಬಂಗಾರದ ಒಡವೆಗಳನ್ನು ಹಾಗು ವಸ್ತ್ರಗಳನ್ನು ತೆಗೆದು ರೆಬೆಕ್ಕಳಿಗೆ ಕೊಟ್ಟನು. ಆಕೆಯ ಅಣ್ಣನಿಗೂ ತಾಯಿಗೂ ಬೆಲೆಬಾಳುವ ಉಡುಗೊರೆಗಳನ್ನು ಕೊಟ್ಟನು.


ಮರಳಿ ಕಟ್ಟುವರಿವರು ಪಾಳುಬಿದ್ದ ಪುರಾತನ ಮನೆಗಳನು ಮತ್ತೆ ಎಬ್ಬಿಸುವರು ಬಿದ್ದ ಹಳೆಯ ಕಟ್ಟಡಗಳನು ನೂತನಗೊಳಿಸುವರು ತಲಾಂತರದ ಹಾಳುಬೀಳು ಪಟ್ಟಣಗಳನು.


ಮೂರನೆಯ ದಿನ ಎಸ್ತೇರಳು ರಾಜವಸ್ತ್ರಾಭರಣಗಳನ್ನು ಧರಿಸಿ ಅರಮನೆಯ ಒಳಗಣ ಪ್ರಾಕಾರವನ್ನು ಪ್ರವೇಶಿಸಿ ರಾಜಮಂದಿರದ ಎದುರಿನಲ್ಲಿ ನಿಂತಳು. ಅರಸನು ಆ ಮಂದಿರದೊಳಗೆ ರಾಜಸಿಂಹಾಸನದ ಮೇಲೆ ಬಾಗಿಲಿಗೆ ಎದುರಾಗಿ ಕುಳಿತಿದ್ದನು.


ತನಗೆ ಬೇಕಾದ ರತ್ನಗಂಬಳಿಯನ್ನು ತಾನೆ ನೇಯ್ದಿದ್ದಾಳೆ; ಆಕೆಯ ಉಡುಪೋ ನಾರುಮಡಿ, ರಕ್ತಾಂಬರ.


ಇಲ್ಲವಾದರೆ, ಏಕೆ ಹೋದಿರಿ? ನಯವಾದ ರೇಷ್ಮೆ ಉಡುಪನ್ನು ಧರಿಸಿದ್ದ ವ್ಯಕ್ತಿಯನ್ನು ನೋಡಲು ಹೋದಿರೇನು? ಅಂತಹ ಉಡುಗೆ ತೊಡುಗೆ ಧರಿಸುವವರು ಅರಮನೆಗಳಲ್ಲಿ ಇರುತ್ತಾರಷ್ಟೆ.


ಘನತೆ, ಗೌರವ, ಆಕೆಯ ಬಟ್ಟೆಬರೆ; ಭವಿಷ್ಯತ್ತಿನಲ್ಲಿ ಆಕೆಗೆ ನಿರ್ಭೀತ ನಗೆ.


ಅವರು ಮಿತಿಮೀರಿದ ಕೇಶಾಲಂಕಾರ, ಆಭರಣಾಲಂಕಾರ, ವಸ್ತ್ರಾಲಂಕಾರಗಳಿಂದ ತಮ್ಮನ್ನೇ ಶೃಂಗರಿಸಿಕೊಳ್ಳುವುದರ ಬದಲು ದೈವಭಕ್ತೆಯರಾದ ಸ್ತ್ರೀಯರಿಗೆ ಲಕ್ಷಣವಾದ ಸತ್ಕಾರ್ಯಗಳಿಂದ ಅಲಂಕರಿಸಿಕೊಳ್ಳಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು