Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ತಿಮೊಥೆಯನಿಗೆ 1:18 - ಕನ್ನಡ ಸತ್ಯವೇದವು C.L. Bible (BSI)

18 ತಿಮೊಥೇಯನೇ, ನನ್ನ ಕುಮಾರನೇ, ಹಿಂದೆ ನಿನ್ನ ಕುರಿತು ಮಾಡಲಾಗಿರುವ ಪ್ರವಾದನೆಗಳಿಗೆ ಅನುಗುಣವಾಗಿ ನಾನು ನಿನಗೆ ಕೊಡುವ ಆಜ್ಞೆ ಇದು: ಪ್ರವಾದನೆಗಳಿಂದ ಪ್ರೇರಣೆ ಪಡೆದು ದಿಟ್ಟಹೋರಾಟವನ್ನು ಮಾಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಮಗನಾದ ತಿಮೊಥೆಯನೇ, ನಿನ್ನ ವಿಷಯದಲ್ಲಿ ಮೊದಲು ಉಂಟಾಗಿದ್ದ ಪ್ರವಾದನೆಗಳನ್ನು ನೆನಪಿಸಿಕೊಂಡು, ನೀನು ಅವುಗಳಿಂದ ಧೈರ್ಯಹೊಂದಿ ಒಳ್ಳೆಯ ಯುದ್ಧವನ್ನು ನಡೆಸಬೇಕೆಂದು ನಿನಗೆ ಆಜ್ಞಾಪಿಸುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಮಗನಾದ ತಿಮೊಥೆಯನೇ, ನಿನ್ನ ವಿಷಯದಲ್ಲಿ ಮುಂಚೆ ಉಂಟಾದ ಪ್ರವಾದನೆಗಳನ್ನು ನಾನು ನೆನಸಿ - ನೀನು ಅವುಗಳಿಂದ ಧೈರ್ಯಗೊಂಡು ಕ್ರೈಸ್ತರ ದಿವ್ಯಯುದ್ಧವನ್ನು ನಡಿಸಬೇಕೆಂದು ನಿನಗೆ ಆಜ್ಞಾಪನೆಮಾಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ತಿಮೊಥೆಯನೇ, ನೀನು ನನಗೆ ಮಗನಂತಿರುವೆ. ನಾನು ನಿನಗೆ ಆಜ್ಞಾಪಿಸುವುದೇನೆಂದರೆ, ಮೊದಲು ನಿನ್ನ ವಿಷಯದಲ್ಲಿ ತಿಳಿಸಲಾದ ಪ್ರವಾದನೆಗಳಿಗೆ ಅನುಗುಣವಾಗಿ ನಂಬಿಕೆಯ ದಿವ್ಯ ಹೋರಾಟವನ್ನು ಮಾಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಮಗನಾದ ತಿಮೊಥೆಯನೇ, ನಿನ್ನ ವಿಷಯವಾಗಿ ಮೊದಲು ಉಂಟಾದ ಪ್ರವಾದನೆಗಳ ಪ್ರಕಾರವೇ ನೀನು ಅವುಗಳಿಂದ ಒಳ್ಳೆಯ ಯುದ್ಧವನ್ನು ನಡಿಸಬೇಕೆಂದು ಈ ಆಜ್ಞೆಯನ್ನು ನಿನಗೆ ಒಪ್ಪಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

18 ತಿಮೊತಿ ಮಾಜ್ಯಾ ಲೆಕಾ, ಫಾಟಿ ತಿಯಾ ಬರಿ ಖಬರ್ ಲೊಕಾಕ್ನಿ ಶಿಕ್ವಲ್ಲ್ಯಾ ಗೊಸ್ಟಿಯಾಂಚ್ಯಾ ಪರ್‍ಕಾರ್ ಮಿಯಾ ತುಕಾ ಸಾಂಗ್ತಾ. ಬರೆ ಕರುನ್ ಲಡಾಯ್ ಕರುಕ್ ಮನುನ್ ಹೊತ್ತ್ಯಾ ಹತಿಯಾರಾಂಚ್ಯಾ ಬಾಸೆನ್ ತ್ಯಾ ಗೊಸ್ಟಿಯಾ ತಿಯಾ ವಾಪರ್,

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ತಿಮೊಥೆಯನಿಗೆ 1:18
19 ತಿಳಿವುಗಳ ಹೋಲಿಕೆ  

ನಿನ್ನಲ್ಲಿರುವ ವರದಾನವನ್ನು ಅಲಕ್ಷಿಸಬೇಡ. ಸಭೆಯ ಹಿರಿಯರು ನಿನ್ನ ಮೇಲೆ ದೈವವಾಕ್ಯದ ಉಚ್ಚಾರದೊಂದಿಗೆ ಹಸ್ತನಿಕ್ಷೇಪಮಾಡಿದಾಗ ಈ ವರವು ನಿನಗೆ ಲಭಿಸಿತಲ್ಲವೇ?


ಪ್ರಿಯ ತಿಮೊಥೇಯನೇ, ನಿನ್ನ ವಶಕ್ಕೆ ಕೊಡಲಾಗಿರುವ ಸದ್ಬೋಧನೆಯನ್ನು ಸುರಕ್ಷಿತವಾಗಿ ಕಾಪಾಡಿಕೋ. ಪ್ರಾಪಂಚಿಕ ವ್ಯರ್ಥ ಸಂಭಾಷಣೆಗಳಿಂದಲೂ ‘ಜ್ಞಾನಿ'ಗಳೆಂದು ತಪ್ಪಾಗಿ ಕೊಚ್ಚಿಕೊಳ್ಳುವವರ ವಾಗ್ವಾದಗಳಿಂದಲೂ ದೂರವಿರು.


ತಿಮೊಥೇಯನ ಯೋಗ್ಯತೆಯನ್ನು ನೀವು ಬಲ್ಲಿರಿ. ತಂದೆಯೊಂದಿಗೆ ಮಗನು ದುಡಿಯುವಂತೆ, ಶುಭಸಂದೇಶದ ಸೇವೆಯಲ್ಲಿ ನನ್ನೊಂದಿಗೆ ಆತನು ದುಡಿದಿದ್ದಾನೆ.


ಬಾಳಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ನನ್ನ ಓಟವನ್ನು ಮುಗಿಸಿದ್ದೇನೆ. ವಿಶ್ವಾಸವನ್ನು ಕಾಪಾಡಿಕೊಂಡಿದ್ದೇನೆ.


ನಮ್ಮ ಉದ್ಧಾರಕರಾದ ದೇವರ ಮತ್ತು ನಮ್ಮ ನಿರೀಕ್ಷೆಯಾಗಿರುವ ಕ್ರಿಸ್ತಯೇಸುವಿನ ಆಜ್ಞಾನುಸಾರ, ನಾನು ಕ್ರಿಸ್ತಯೇಸುವಿನ ಪ್ರೇಷಿತನಾಗಿದ್ದೇನೆ. ಪಿತನಾದ ದೇವರೂ ನಮ್ಮ ಪ್ರಭುವಾದ ಕ್ರಿಸ್ತಯೇಸುವೂ ನಿನಗೆ ಕೃಪೆಯನ್ನೂ ಕರುಣೆಯನ್ನೂ ಶಾಂತಿಯನ್ನೂ ಅನುಗ್ರಹಿಸಲಿ!


ದೇವರು ಸೃಷ್ಟಿಸಿದ್ದೆಲ್ಲವೂ ಒಳ್ಳೆಯದೇ. ಅವರಿಗೆ ಸ್ತುತಿಸಲ್ಲಿಸಿ ಸ್ವೀಕರಿಸಿದ ಯಾವುದನ್ನೂ ತಿರಸ್ಕರಿಸಬೇಕಾಗಿಲ್ಲ.


ಇವನು ಯೇಸುವಿನಲ್ಲಿ ನನ್ನ ಸ್ವಂತ ಮಗನಂತಿದ್ದಾನೆ. ಸೆರೆಮನೆಯಲ್ಲೇ ನಾನು ಅವನನ್ನು ಆಧ್ಯಾತ್ಮಿಕವಾಗಿ ಪಡೆದೆನು.


ಪೌಲನು ದೆರ್ಬೆಗೂ ಅಲ್ಲಿಂದ ಲುಸ್ತ್ರಕ್ಕೂ ಪ್ರಯಾಣಮಾಡಿದನು. ತಿಮೊಥೇಯ ಎಂಬ ಕ್ರೈಸ್ತಭಕ್ತನು ಅಲ್ಲಿ ವಾಸಿಸುತ್ತಿದ್ದನು. ಇವನ ತಾಯಿ ಯೆಹೂದ್ಯಳು ಹಾಗೂ ಕ್ರೈಸ್ತಭಕ್ತಳು. ತಂದೆಯಾದರೋ ಗ್ರೀಕನು.


ಇದಕ್ಕಾಗಿಯೇ ಪ್ರಭುವಿನಲ್ಲಿ ನನ್ನ ನೆಚ್ಚಿನ ಹಾಗೂ ಪ್ರಾಮಾಣಿಕ ಮಗನಾದ ತಿಮೊಥೇಯನನ್ನು ನಿಮ್ಮ ಬಳಿಗೆ ಕಳಿಸಿದ್ದೇನೆ. ಆತನು ಕ್ರಿಸ್ತಯೇಸುವಿನಲ್ಲಿ ನನ್ನ ಬಾಳುವೆಯನ್ನು ಕುರಿತು ತಿಳಿಸುವನು; ನಾನು ಎಲ್ಲೆಡೆಯಲ್ಲೂ ಎಲ್ಲಾ ಧರ್ಮಸಭೆಗಳಲ್ಲೂ ಬೋಧಿಸುತ್ತಿರುವುದನ್ನು ನಿಮ್ಮ ನೆನಪಿಗೆ ತರುವನು.


ಯಾವ ಸೈನಿಕ ಸ್ವಂತ ಖರ್ಚಿನಿಂದ ಸಮರಕ್ಕೆ ನಿಲ್ಲುತ್ತಾನೆ? ಯಾವ ತೋಟಗಾರ ತನ್ನ ಸ್ವಂತ ದ್ರಾಕ್ಷಿಯ ತೋಟದಿಂದ ದ್ರಾಕ್ಷಿಯ ಫಲವನ್ನು ತಿನ್ನದಿರುತ್ತಾನೆ? ಯಾವ ಗೌಳಿಗ ತಾನು ಸಾಕಿದ ಹಸುವಿನ ಹಾಲನ್ನು ಕುಡಿಯದಿರುತ್ತಾನೆ?


ನಿರ್ಮಲ ಹೃದಯ, ಶುದ್ಧ ಮನಸ್ಸಾಕ್ಷಿ ಹಾಗೂ ನಿಷ್ಕಪಟ ವಿಶ್ವಾಸದಿಂದ ಹುಟ್ಟುವ ಪ್ರೀತಿಯು ವೃದ್ಧಿಯಾಗಬೇಕೆಂಬುದೇ ವಾಕ್ಯೋಪದೇಶದ ಉದ್ದೇಶ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು