Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 9:11 - ಕನ್ನಡ ಸತ್ಯವೇದವು C.L. Bible (BSI)

11 ನಿಮ್ಮಲ್ಲಿ ಆಧ್ಯಾತ್ಮಿಕ ಬೀಜವನ್ನು ಬಿತ್ತನೆಮಾಡಿದ ನಾವು ಪ್ರತಿಫಲವಾಗಿ ದೈನಂದಿನ ಅಗತ್ಯಗಳನ್ನು ಅಪೇಕ್ಷಿಸುವುದು ಅತಿಯಾಯಿತೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ನಾವು ನಿಮ್ಮಲ್ಲಿ ಆತ್ಮೀಕವಾದ ಬೀಜವನ್ನು ಬಿತ್ತಿದ ಮೇಲೆ ನಿಮ್ಮಿಂದ ಭೌತಿಕವಾದ ಪೈರನ್ನು ಕೊಯ್ಯುವುದು ದೊಡ್ಡ ವಿಷಯವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ನಾವು ನಿಮಗೋಸ್ಕರ ಆತ್ಮಸಂಬಂಧವಾದ ಬೀಜವನ್ನು ಬಿತ್ತಿದ ಮೇಲೆ ನಿವ್ಮಿುಂದ ಶರೀರಸಂಬಂಧವಾದ ಪೈರನ್ನು ಕೊಯ್ಯುವದು ದೊಡ್ಡದೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ನಾವು ನಿಮ್ಮ ಮಧ್ಯದಲ್ಲಿ ಆತ್ಮಿಕ ಬೀಜವನ್ನು ಬಿತ್ತಿದೆವು. ಆದ್ದರಿಂದ ಈ ಜೀವನಕ್ಕೆ ಬೇಕಾದ ದೈನಂದಿನ ಅಗತ್ಯತೆಗಳನ್ನು ನಿಮ್ಮಿಂದ ನಾವು ಪಡೆದುಕೊಳ್ಳಬೇಕು. ಖಂಡಿತವಾಗಿ ಇದು ಹೆಚ್ಚೇನೂ ಅಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ನಾವು ನಿಮ್ಮಲ್ಲಿ ಆತ್ಮಿಕ ಸಂಗತಿಗಳನ್ನು ಬಿತ್ತಿದ ಮೇಲೆ, ನಿಮ್ಮಿಂದ ಭೌತಿಕ ಸುಗ್ಗಿಯನ್ನು ಕೊಯ್ಯುವುದು ದೊಡ್ಡದೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

11 ಅಮಿ ತುಮ್ಚ್ಯಾ ಭುತ್ತುರ್ ಆತ್ಮಿಕ್ ಬಿಂಯ್ ಪೆರ್ಲಾವ್ ಹೊಲ್ಯಾರ್, ತುಮ್ಚ್ಯಾತ್ನಾ ಸಂಸಾರಿ ಜಿವನಾಕ್ ಗರಜ್ ಹೊತ್ತೆ ಅಮಿ ಕಾಪ್ಲ್ಯಾ ಕಾಯ್ ಮೊಟೆ ಹೊಲೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 9:11
8 ತಿಳಿವುಗಳ ಹೋಲಿಕೆ  

ಅವರ ಸ್ವಂತ ಇಷ್ಟದಿಂದಲೇ ಮುಂದೆ ಬಂದಿದ್ದಾರೆ. ಹಾಗೆ ಮಾಡುವುದು ಅವರ ಕರ್ತವ್ಯವೂ ಹೌದು. ಏಕೆಂದರೆ, ಯೆಹೂದ್ಯರ ಆಧ್ಯಾತ್ಮಿಕ ಸಂಪತ್ತಿನಲ್ಲಿ ಪಾಲುಗಾರರಾಗಿರುವ ಅನ್ಯಧರ್ಮೀಯರು ತಮ್ಮ ಐಹಿಕಸಂಪತ್ತಿನಲ್ಲಿ ಅವರಿಗೆ ಪಾಲು ನೀಡಲು ಕರ್ತವ್ಯಬದ್ಧರಾಗಿದ್ದಾರೆ.


ದೇವರ ವಾಕ್ಯದ ಉಪದೇಶ ಪಡೆಯುವವನು ಉಪದೇಶ ಮಾಡುವವನೊಂದಿಗೆ ತನಗೆ ಇರುವ ಒಳ್ಳೆಯದನ್ನೆಲ್ಲಾ ಹಂಚಿಕೊಳ್ಳಲಿ.


ಹೀಗಿರುವಲ್ಲಿ, ಅವನ ಸೇವಕರೂ ಸಹ ಸತ್ಯಸೇವಕರಂತೆ ವೇಷಧಾರಿಗಳಾದರೆ ಅದರಲ್ಲೇನು ಸೋಜಿಗ? ಅವರ ಕೃತ್ಯಗಳಂತೆಯೇ ಅವರ ಅಂತ್ಯವೂ ಇರುತ್ತದೆ.


ಎರಡು ಅಂಗಿಗಳನ್ನಾಗಲಿ, ಕಾಲಿಗೆ ಕೆರವನ್ನಾಗಲಿ, ಕೈಗೆ ದಂಡವನ್ನಾಗಲಿ ತೆಗೆದುಕೊಳ್ಳಬೇಡಿ. ಏಕೆಂದರೆ, ದುಡಿಮೆಗಾರನು ಜೀವನಾಧಾರಕ್ಕೆ ಬಾಧ್ಯನು.


ಆಗ ಅವನ ಸೇವಕರು ಹತ್ತಿರಬಂದು, “ಯಜಮಾನರೇ, ಪ್ರವಾದಿ ಒಂದು ಕಠಿಣವಾದ ಕೆಲಸವನ್ನು ಹೇಳಿದ್ದರೆ ಅದನ್ನು ಮಾಡುತ್ತಿದ್ದಿರಲ್ಲವೆ? ಹಾಗಾದರೆ ‘ಸ್ನಾನಮಾಡಿ, ಶುದ್ಧರಾಗುವಿರಿ’ ಎಂದು ಹೇಳಿದರೆ ಏಕೆ ಅದರಂತೆ ಮಾಡಬಾರದು?” ಎಂದರು.


ಅದೇ ಪ್ರಕಾರ ಶುಭಸಂದೇಶ ಪ್ರಚಾರಕರು ಶುಭಸಂದೇಶ ಪ್ರಚಾರದ ಆದಾಯದಿಂದಲೇ ಜೀವನ ನಡೆಸಬೇಕೆಂದು ಪ್ರಭುವೇ ಆಜ್ಞಾಪಿಸಿದ್ದಾರೆ.


ನಿಮ್ಮಿಂದ ಸಹಾಯ ಪಡೆಯಬೇಕೆಂಬುದು ನನ್ನ ಉದ್ದೇಶವಲ್ಲ. ಆದರೆ ಈ ಸಹಾಯದಿಂದ ನಿಮಗೆ ಮುಂದೆ ದೊರಕುವ ಪ್ರತಿಫಲವು ಸಮೃದ್ಧಿಯಾಗಲೆಂದೇ ನನ್ನ ಇಚ್ಛೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು