1 ಕೊರಿಂಥದವರಿಗೆ 9:10 - ಕನ್ನಡ ಸತ್ಯವೇದವು C.L. Bible (BSI)10 ಇದನ್ನು ನಮ್ಮ ಹಿತಚಿಂತನೆಯಿಂದ ಹೇಳಲಾಗಿದೆ; ಅದೇ ಉದ್ದೇಶದಿಂದ ಬರೆಯಲಾಗಿದೆ. ಹೌದು, ಉಳುವವನೂ ಒಕ್ಕುವವನೂ ಕಾಳುಬೆಳೆಯಲ್ಲಿ ಪಾಲುಪಡೆಯುವ ಉದ್ದೇಶದಿಂದಲೇ ದುಡಿಯುತ್ತಾರೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ಖಂಡಿತವಾಗಿ ನಮಗೋಸ್ಕರವಾಗಿಯೇ ಆತನು ಹೇಳುತ್ತಾನಲ್ಲವೇ? ಹೌದು, ನಮಗೋಸ್ಕರ ಬರೆಯಲ್ಪಟ್ಟಿದೆ. ಉಳುವವನು ಬೆಳೆಯಲ್ಲಿ ತನಗೆ ಪಾಲು ದೊರಕುವ ನಿರೀಕ್ಷೆಯಿಂದ ಉಳಬೇಕು, ಹಾಗೂ ಒಕ್ಕುವವನು ತನಗೆ ಸುಗ್ಗಿಯಲ್ಲಿ ಪಾಲು ದೊರಕುವುದೆಂದು ನಿರೀಕ್ಷೆಯಲ್ಲಿ ಒಕ್ಕಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ದೇವರು ಚಿಂತಿಸುವದು ಎತ್ತುಗಳಿಗಾಗಿಯೋ? ಅಥವಾ ನಮಗೋಸ್ಕರವಾಗಿಯೇ ಹೇಳುತ್ತಾನೋ? ಹೌದು, ನಮಗೋಸ್ಕರ ಬರೆದದೆ. ಉಳುವವನು ಬೆಳೆಯಲ್ಲಿ ತನಗೆ ಪಾಲು ದೊರಕುತ್ತದೆಂದು ಉಳುವದೂ, ಒಕ್ಕುವವನು ತನಗೆ ಪಾಲು ದೊರಕುತ್ತದೆಂದು ಒಕ್ಕುವದೂ ನ್ಯಾಯ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ಆತನು ನಿಜವಾಗಿಯೂ ನಮ್ಮ ಬಗ್ಗೆ ಮಾತಾಡುತ್ತಿದ್ದನು. ಹೌದು, ಪವಿತ್ರ ಗ್ರಂಥವು ನಮಗೋಸ್ಕರ ಬರೆಯಲ್ಪಟ್ಟಿದೆ. ಉಳುವವನು ಮತ್ತು ಒಕ್ಕುವವನು ತಮ್ಮ ಕೆಲಸಕ್ಕೆ ಸ್ವಲ್ಪ ಧಾನ್ಯ ದೊರೆಯುತ್ತದೆ ಎಂದು ನಿರೀಕ್ಷಿಸುತ್ತಾರೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 ನಿಶ್ಚಯವಾಗಿಯೂ, ದೇವರು ನಮಗೋಸ್ಕರ ಇವೆಲ್ಲವನ್ನು ಹೇಳುತ್ತಾರೆ ಅಲ್ಲವೇ? ಹೌದು, ಪವಿತ್ರ ವೇದವು ನಮಗೋಸ್ಕರವಾಗಿಯೇ ಬರೆಯಲಾಗಿದೆ. ಉಳುವವನು ಉಳುವಾಗ, ಒಕ್ಕುವವನು ಒಕ್ಕುವಾಗ ಸುಗ್ಗಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿಂದ ಹಾಗೆ ಮಾಡಬೇಕು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್10 ಸಂಶೆವ್ ನಸ್ತಾನಾ ಅಮ್ಚೆಸಾಟ್ನಿ ತೆನಿ ಅಶೆ ಮಟ್ಲ್ಯಾನಾಯ್ ಹೊಯ್‍ಕಿ ನ್ಹಯ್? ಹೊಯ್, ಹೆ ಖರೆಬಿ ಅಮ್ಚ್ಯಾಸಾಟ್ನಿ ಲಿವಲ್ಲೆ ಹಾಯ್, ಕಶ್ಯಾಕ್ ಮಟ್ಲ್ಯಾರ್ ಜೊ ಕೊನ್ ನಾಂಗರ್‍ತಾ ತೊ ಪಿಕ್ಕಾಚೊ ವಾಟೊ ಗಾವ್ತಾ ಮನ್ತಲ್ಯಾ ಬರೊಸ್ಯಾನ್ ನಾಂಗ್ರುಚೆ ಅನಿ ಜೆ ಕೊನ್ ಮಳ್ತಾನಾ ತೊ ಪಿಕ್ಕಾಚೊ ವಾಟೊ ಗಾವ್ತಾ ಮನ್ತಲ್ಯಾ ಬರೊಸ್ಯಾನ್ ಮಳುಚೆ. ಅಧ್ಯಾಯವನ್ನು ನೋಡಿ |