1 ಕೊರಿಂಥದವರಿಗೆ 3:10 - ಕನ್ನಡ ಸತ್ಯವೇದವು C.L. Bible (BSI)10 ದೇವರು ನನಗಿತ್ತ ವರದಾನಗಳಿಗೆ ಅನುಸಾರವಾಗಿ ನಾನು ಚತುರಶಿಲ್ಪಿಯಂತೆ ಅಸ್ತಿವಾರ ಹಾಕಿದೆ. ಇನ್ನೊಬ್ಬನು ಅದರ ಮೇಲೆ ಕಟ್ಟುತ್ತಿದ್ದಾನೆ. ಆದರೆ ಕಟ್ಟುವ ಪ್ರತಿಯೊಬ್ಬನು ತಾನು ಹೇಗೆ ಕಟ್ಟುತ್ತಿದ್ದಾನೆ ಎಂಬುದರ ಬಗ್ಗೆ ಎಚ್ಚರದಿಂದಿರಲಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ದೇವರು ನನಗೆ ಕೊಟ್ಟ ಕೃಪೆಯ ಪ್ರಕಾರ ನಾನು ಜಾಣ್ಮೆಯುಳ್ಳ ಪ್ರವೀಣನಾದ ಶಿಲ್ಪಿಯಂತೆ ಅಸ್ತಿವಾರ ಹಾಕಿದೆನು. ಮತ್ತೊಬ್ಬನು ಅದರ ಮೇಲೆ ಕಟ್ಟುತ್ತಾನೆ. ಆದರೆ ತಾನು ಅದರ ಮೇಲೆ ಹೇಗೆ ಕಟ್ಟುತ್ತಿದ್ದೇನೆಂದು ಪ್ರತಿಯೊಬ್ಬನು ಎಚ್ಚರಿಕೆಯಿಂದಿರಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ದೇವರು ನನಗೆ ಕೃಪೆಯಿಂದ ಒಪ್ಪಿಸಿದ ಕೆಲಸವನ್ನು ನಡಿಸಿ ನಾನು ಪ್ರವೀಣಶಿಲ್ಪಿಯಂತೆ ಅಸ್ತಿವಾರ ಹಾಕಿದೆನು, ಮತ್ತೊಬ್ಬನು ಅದರ ಮೇಲೆ ಕಟ್ಟುತ್ತಾನೆ. ಪ್ರತಿಯೊಬ್ಬನು ತಾನು ಅದರ ಮೇಲೆ ಎಂಥದನ್ನು ಕಟ್ಟುತ್ತಾನೋ ಎಚ್ಚರಿಕೆಯಾಗಿರಬೇಕು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ದೇವರು ನನಗೆ ಕೊಟ್ಟ ವರದಾನಗಳನ್ನು ಉಪಯೋಗಿಸಿ ಚತುರ ಶಿಲ್ಪಿಯಂತೆ ನಾನು ಆ ಮನೆಗೆ ಅಸ್ತಿವಾರವನ್ನು ಹಾಕಿದೆನು. ಇತರ ಜನರು ಆ ಅಸ್ತಿವಾರದ ಮೇಲೆ ಕಟ್ಟುತ್ತಿದ್ದಾರೆ. ಆದರೆ ಪ್ರತಿಯೊಬ್ಬ ವ್ಯಕ್ತಿಯು ತಾನು ಹೇಗೆ ಕಟ್ಟುತ್ತಿದ್ದಾನೆ ಎಂಬುದರ ಬಗ್ಗೆ ಎಚ್ಚರದಿಂದಿರಬೇಕು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 ದೇವರು ನನಗೆ ಕೊಟ್ಟ ಕೃಪೆಗೆ ಅನುಸಾರವಾಗಿ, ನಾನು ಜ್ಞಾನಿಯಾದ ಶಿಲ್ಪಿಯಂತೆ ಅಸ್ತಿವಾರ ಹಾಕಿದೆನು. ಮತ್ತೊಬ್ಬನು ಅದರ ಮೇಲೆ ಕಟ್ಟುತ್ತಾನೆ. ಆದರೆ ಪ್ರತಿಯೊಬ್ಬನೂ ತಾನು ಅದರ ಮೇಲೆ ಎಷ್ಟು ಶ್ರದ್ಧೆಯಿಂದ ಕಟ್ಟುತ್ತಾನೆಂದು ನೋಡಿಕೊಳ್ಳಬೇಕು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್10 ದೆವಾನ್ ಮಾಕಾ ದಿಲ್ಲ್ಯಾ ಕುರ್ಪೆಚ್ಯಾ ವೈನಾ, ಮಿಯಾ ಎಕ್ ಶಾನ್ಯಾ ಭಾಂದ್ಪ್ಯಾಚ್ಯಾ ಸಾರ್ಕೆ ಪಾಯಾ ಘಾಟ್ಲಾ ಅನಿ ತೆಚ್ಯಾ ವೈರ್ ದುಸ್ರೊ ಎಕ್ಲೊ ಘರ್ ಭಾಂದುಲ್ಲಾ, ಖರೆ ಹರಿ ಎಕ್ಲೊ ಅಪ್ನಿ ಕಶೆ ಭಾಂದುಲ್ಲಾ ತೆಚ್ಯಾ ವಿಶಯಾತ್ ಕಾಳ್ಜಿ ಘೆವ್ದಿತ್. ಅಧ್ಯಾಯವನ್ನು ನೋಡಿ |