1 ಕೊರಿಂಥದವರಿಗೆ 2:13 - ಕನ್ನಡ ಸತ್ಯವೇದವು C.L. Bible (BSI)13 ನಾವು ಇವುಗಳನ್ನು ಮಾನವ ಜ್ಞಾನ ಪ್ರೇರೇಪಿಸಿದ ಮಾತುಗಳಿಂದ ಹೇಳುವುದಿಲ್ಲ. ದೇವರ ಆತ್ಮದಿಂದ ಪ್ರೇರಿತವಾದ ಮಾತುಗಳಿಂದ ಹೇಳುತ್ತೇವೆ. ಹೀಗೆ ಆಧ್ಯಾತ್ಮಿಕ ಸತ್ಯಗಳನ್ನು, ಆಧ್ಯಾತ್ಮಿಕ ವ್ಯಕ್ತಿಗಳಿಗೆ ವಿವರಿಸುತ್ತೇವೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಇವುಗಳನ್ನು ಮನುಷ್ಯ ಜ್ಞಾನವು ಕಲಿಸಿದ ಮಾತುಗಳಿಂದ ಹೇಳದೆ ಪವಿತ್ರಾತ್ಮನೇ ಕಲಿಸಿಕೊಟ್ಟ ಮಾತುಗಳಿಂದ ಹೇಳಿ ಆತ್ಮೀಕವಾದವುಗಳನ್ನು ಆತ್ಮೀಕರಾದವರಿಗೆ ಯುಕ್ತವಾದ ರೀತಿಯಲ್ಲಿ ಸ್ಪಷ್ಟಪಡಿಸುತ್ತೇವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ಇವುಗಳನ್ನು ಮಾನುಷಜ್ಞಾನವು ಕಲಿಸಿದ ಮಾತುಗಳಿಂದ ಹೇಳದೆ ದೇವರಾತ್ಮನೇ ಕಲಿಸಿಕೊಟ್ಟ ಮಾತುಗಳಿಂದ ಹೇಳಿ ಆತ್ಮಸಂಬಂಧವಾದವುಗಳನ್ನು ಆತ್ಮನಿಗೆ ಯುಕ್ತವಾದ ರೀತಿಯಲ್ಲಿ ವಿವರಿಸುತ್ತೇವೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 ನಾವು ಈಸಂಗತಿಗಳನ್ನು ಹೇಳುವಾಗ ಮನುಷ್ಯರ ಜ್ಞಾನದಿಂದ ಕಲಿತುಕೊಂಡಿರುವ ವಾಕ್ಯಗಳನ್ನು ಉಪಯೋಗಿಸದೆ ಆತ್ಮನಿಂದ ಕಲಿತುಕೊಂಡ ವಾಕ್ಯಗಳನ್ನೇ ಉಪಯೋಗಿಸುತ್ತೇವೆ. ಆತ್ಮಿಕ ಸಂಗತಿಗಳನ್ನು ವಿವರಿಸಲು ಆತ್ಮಿಕ ಪದಗಳನ್ನೇ ಬಳಸುತ್ತೇವೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ನಾವು ಮನುಷ್ಯ ಜ್ಞಾನವು ಕಲಿಸಿದ ಮಾತುಗಳಿಂದ ಮಾತನಾಡದೆ, ದೇವರ ಆತ್ಮರು ಕಲಿಸಿಕೊಟ್ಟ ಮಾತುಗಳಿಂದ ಇವುಗಳನ್ನು ಮಾತಾಡುತ್ತೇವೆ. ಹೀಗೆ ನಾವು ಆತ್ಮಿಕ ಸತ್ಯಗಳನ್ನು ದೇವರ ಆತ್ಮರ ಮಾತುಗಳಿಂದಲೇ ಸ್ಪಷ್ಟಪಡಿಸುತ್ತೇವೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್13 ತೆಚೆಸಾಟ್ನಿ ಆತ್ಮೊ ಅಸಲ್ಲ್ಯಾಕ್ನಿ ಅಮಿ ಆತ್ಮಿಕ್ ಖರೆಪಾನ್ ಸೊಡ್ವುನ್ ಸಾಂಗಟಲ್ಲ್ಯಾ ಸರ್ಕೆ, ಜೆ ಕಾಯ್ ಅಮಿ ಬೊಲ್ತಾಂವ್, ತೆ ಮಾಸ್ಸಾಚ್ಯಾ ಶಾನ್‍ಪಾನಾನ್ ಶಿಕ್ವುಲ್ಲ್ಯಾ ಗೊಸ್ಟಿಯಾ ನ್ಹಯ್. ಪವಿತ್ರ್ ಆತ್ಮ್ಯಾನುಚ್ ಶಿಕ್ವುಲ್ಲ್ಯಾ ಗೊಸ್ಟಿಯಾ. ಅಧ್ಯಾಯವನ್ನು ನೋಡಿ |