Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 15:55 - ಕನ್ನಡ ಸತ್ಯವೇದವು C.L. Bible (BSI)

55 ಸಾವಿಗೆ ಸೋಲಾಯಿತು, ಜಯವು ಸಂಪೂರ್ಣವಾಯಿತು. ಎಲೈ ಸಾವೇ, ನಿನ್ನ ಜಯವೆಲ್ಲಿ? ಎಲೈ ಸಾವೇ, ನಿನ್ನ ವಿಷಕೊಂಡಿಯೆಲ್ಲಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

55 “ಹೇ! ಮರಣವೇ ನಿನ್ನ ಜಯವೆಲ್ಲಿ? ಹೇ! ಮರಣವೇ ನಿನ್ನ ವಿಷದ ಕೊಂಡಿ ಎಲ್ಲಿ?”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

55 ಮರಣವೇ, ನಿನ್ನ ಜಯವೆಲ್ಲಿ? ಮರಣವೇ, ನಿನ್ನ ವಿಷದ ಕೊಂಡಿ ಎಲ್ಲಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

55 “ಮರಣವೇ, ನಿನ್ನ ಜಯವೆಲ್ಲಿ? ಮರಣವೇ, ಕೇಡುಮಾಡುವ ನಿನ್ನ ಶಕ್ತಿ ಎಲ್ಲಿ?”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

55 “ಓ ಮರಣವೇ, ನಿನ್ನ ಜಯವು ಎಲ್ಲಿ? ಓ ಮರಣವೇ, ನಿನ್ನ ವಿಷದ ಕೊಂಡಿ ಎಲ್ಲಿ?”

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

55 ಎ ಮರ್ನಾ ಖೈ ಹಾಯ್ ತುಜಿ ಜಿಕ್? ಎ ಮರ್ನಾ ತುಜಿ ತರಾಸ್ ಕರ್‍ತಲೆ ತಾಕತ್ ಖೈ ಹಾಯ್?

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 15:55
16 ತಿಳಿವುಗಳ ಹೋಲಿಕೆ  

ಅದನ್ನು ಪಾತಾಳದ ಹಿಡಿತದಿಂದ ನಾನು ಬಿಡಿಸಲಾರೆ. ಮರಣದ ಬಾಧೆಯಿಂದ ಅವರನ್ನು ರಕ್ಷಿಸಲಾರೆ. ‘ಮರಣವೇ, ನಿನ್ನ ಮಾರಕ ವ್ಯಾಧಿಗಳಿಂದ ಅವರನ್ನು ಬಾಧಿಸು. ಪಾತಾಳವೇ, ಅವರನ್ನು ಕಬಳಿಸಿ ನಾಶಗೊಳಿಸು. ಕರುಣೆ ನನ್ನಿಂದ ದೂರವಾಗಿದೆ.


ಆದರೂ, ಆದಾಮನ ಕಾಲದಿಂದ ಮೋಶೆಯ ಕಾಲದವರೆಗೂ ಮರಣವು ದಬ್ಬಾಳಿಕೆ ನಡೆಸುತ್ತಿತ್ತು. ದೇವರ ಆಜ್ಞಾವಿಧಿಗಳನ್ನು ಮೀರಿ ಆದಾಮನು ಮಾಡಿದ ಪಾಪಕ್ಕೆ ಸಮನಾದ ಪಾಪವನ್ನು ಮಾಡದೆ ಇದ್ದವರ ಮೇಲೆಯೂ, ಮರಣದ ಆಳ್ವಿಕೆ ನಡೆಯುತ್ತಿತ್ತು. ಆದಾಮನು ಮುಂಬರಲಿದ್ದ ಮಹಾತ್ಮನ ಮುನ್ಸೂಚನೆಯಾಗಿದ್ದಾನೆ.


ಏಕೆನೆ, ದೂಡಲಾರೆ ಪಾತಾಳಕೆ ನೀನೆನ್ನ ಜೀವಾತ್ಮವನು, ಕೊಳೆಯಬಿಡಲಾರೆ ನೀನೊಲಿದಾತನನು.


ಸಾಯದೆಯೇ ಜೀವಿಸಬಲ್ಲ ನರನಾರು? I ಆ ತಳದಿಂದ ತಪ್ಪಿಸಿಕೊಳ್ಳುವವನಾರು? II


ಆಗ ಅವನು, “ಪ್ರಭೂ, ನೀವಾರು?” ಎಂದನು. “ನೀನು ಹಿಂಸೆಪಡಿಸುತ್ತ ಇರುವ ಯೇಸುವೇ ನಾನು.


ಆತ್ಮವನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಹಾಗೆಯೇ ತಮ್ಮ ಮರಣ ದಿನವನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಸಾವೆಂಬ ಸಮರಕ್ಕೆ ವಿರಾಮವಿಲ್ಲ; ಅಂತೆಯೇ ದುಷ್ಟತನದ ಮೂಲಕ ಅದರಿಂದ ತಪ್ಪಿಸಿಕೊಳ್ಳಲಾಗದು.


ಪಾತಾಳದಲ್ಲಿ ಯಾತನೆಪಡುತ್ತಾ ಅವನು ಕಣ್ಣೆತ್ತಿನೋಡಿದಾಗ, ದೂರದಲ್ಲಿ ಅಬ್ರಹಾಮನನ್ನೂ ಅವನ ಪಕ್ಕದಲ್ಲೇ ಕುಳಿತಿದ್ದ ಲಾಜರನನ್ನೂ ಕಂಡ.


ಮನುಷ್ಯನ ಗತಿಯೂ ಪಶುವಿನ ಗತಿಯೂ ಒಂದೇ; ಪಶುವಿಗೆ ಸಾವು ಬರುವ ಹಾಗೆ ಮನುಷ್ಯನಿಗೂ ಬರುತ್ತದೆ. ಎಲ್ಲಕ್ಕೂ ಇರುವ ಪ್ರಾಣ ಒಂದೇ. ಮನುಷ್ಯನು ಪಶುವಿಗಿಂತ ಶ್ರೇಷ್ಠನಲ್ಲ. ಎಲ್ಲವೂ ವ್ಯರ್ಥವೇ.


ಚೇಳುಗಳಿಗಿರುವಂತೆ ಬಾಲಗಳೂ ಕೊಂಡಿಗಳೂ ಅವುಗಳಿಗಿದ್ದವು. ಐದು ತಿಂಗಳವರೆಗೆ ಮಾನವರನ್ನು ಬಾಧಿಸುವ ಶಕ್ತಿ ಆ ಬಾಲಗಳಿಗಿತ್ತು.


ಪಾಪವೇ ಸಾವಿನ ವಿಷಕೊಂಡಿ. ಪಾಪಕ್ಕೆ ಶಕ್ತ್ಯಾಧಾರ ಶಾಸ್ತ್ರವಿಧಿಗಳೇ.


ಅದರ ಬಲ ನೆಲೆಗೊಂಡಿದೆ ಕುತ್ತಿಗೆಯಲಿ ಭಯವು ತಾಂಡವಾಡುತ್ತದೆ ಅದರ ಮುಂಗಡೆಯಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು