Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 15:32 - ಕನ್ನಡ ಸತ್ಯವೇದವು C.L. Bible (BSI)

32 ಲೋಕ ಪ್ರಶಂಸೆಗಾಗಿ ನಾನು ಈ ಎಫೆಸದ ‘ಕಾಡುಮೃಗ’ಗಳೊಡನೆ ಹೋರಾಡಿದೆನಾದರೆ, ಅದರಿಂದ ಬರುವ ಲಾಭವಾದರೂ ಏನು? ಸತ್ತವರಿಗೆ ಪುನರುತ್ಥಾನವಿಲ್ಲವಾದರೆ, “ಬನ್ನಿರಿ, ತಿನ್ನೋಣ, ಕುಡಿಯೋಣ, ಕಾದಿದೆಯಲ್ಲ ನಾಳೆ ಮರಣ,” ಎಂಬ ನಾಣ್ನುಡಿಯಂತೆ ನಡೆಯಬಹುದಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ನಾನು ಎಫೆಸದಲ್ಲಿ ಮೃಗ ಯುದ್ಧ ಮಾಡಿದ್ದು ಕೇವಲ ಮಾನುಷಾಭಿಪ್ರಾಯದಿಂದಾದರೆ ನನಗೇನು ಪ್ರಯೋಜನ? ಸತ್ತವರು ಎದ್ದು ಬರುವುದಿಲ್ಲವಾದರೆ, ನಾವು ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ನಾನು ಎಫೆಸದಲ್ಲಿ ಮೃಗಗಳೊಂದಿಗೆ ಯುದ್ಧಮಾಡಿದ್ದು ಕೇವಲ ಮಾನುಷಾಭಿಪ್ರಾಯದಿಂದಾದರೆ ನನಗೇನು ಪ್ರಯೋಜನ? ಸತ್ತವರು ಎದ್ದು ಬರುವದಿಲ್ಲವಾದರೆ - ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ಕೇವಲ ನನ್ನ ಮಾನುಷ ಸ್ವಭಾವದಿಂದ ನಾನು ಎಫೆಸದಲ್ಲಿ ದುಷ್ಟಮೃಗಗಳೊಂದಿಗೆ ಹೋರಾಡಿದ್ದರೆ, ಅದರಿಂದ ನನಗೇನು ಪ್ರಯೋಜನ? ಸತ್ತವರಿಗೆ ಪುನರುತ್ಥಾನವಿಲ್ಲದಿದ್ದರೆ, “ತಿನ್ನೋಣ, ಕುಡಿಯೋಣ, ಏಕೆಂದರೆ ನಾವು ನಾಳೆ ಸಾಯುತ್ತೇವೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ನಾನು ಎಫೆಸದಲ್ಲಿ ಕಾಡು ಮೃಗಗಳೊಂದಿಗೆ ಹೋರಾಟ ಮಾಡಿದ್ದು ಕೇವಲ ಮಾನವ ಕಾರಣಗಳಿಂದ ಮಾತ್ರವಾಗಿದ್ದರೆ, ಅದರಿಂದ ನನಗೇನು ಪ್ರಯೋಜನ? ಸತ್ತವರು ಎದ್ದುಬರುವುದಿಲ್ಲವಾದರೆ, “ತಿನ್ನೋಣ, ಕುಡಿಯೋಣ, ನಾಳೆ ಮರಣ ಹೊಂದೋಣ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

32 ಮಾಜ್ಯಾ ಹ್ಯಾ ಮಾನುಸ್‍ ಪಾನಾಚ್ಯಾ ನದ್ರೆನ್ ಬಗುನ್, ಮಿಯಾ ಎಫೆಜಾತ್ ಜನಾವರಾಚ್ಯಾ ವಾಂಗ್ಡಾ ಕುಸ್ತಿ ಧರಿ ಹೊತ್ತೊ ತರ್, ಮಾಕಾ ತ್ಯಾತುರ್ ಕಾಯ್ ಫಾಯ್ದೊ ಗಾವಿ ಹೊತ್ತೊ? ಮರಲ್ಲಿ ಲೊಕಾ ಝಿತ್ತಿ ಹೊವ್ನ್ ಉಟಿನ್ಯಾತ್ ಹೊಲ್ಯಾರ್, “ಯೆವಾ ಅಮಿ ಖಾವ್ನ್ - ಜೆವ್ನ್ ಗಮ್ಮತ್ ಕರುವಾ ಕಶ್ಯಾಕ್ ಮಟ್ಲ್ಯಾರ್ ಅಮಿ ಉದ್ದ್ಯಾ ಮರುನ್ ಜಾತಾಂವ್.” ಮಟ್ಲ್ಯಾ ಸರ್ಕೆ ಕರುಚೆ ಪಡ್ಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 15:32
20 ತಿಳಿವುಗಳ ಹೋಲಿಕೆ  

ಆದರೆ ನೀವು ಹರ್ಷಾನಂದಗೊಂಡಿರಿ. ದನಕರುಗಳನ್ನು ಕೊಯ್ದಿರಿ, ಮಾಂಸವನ್ನು ಭುಜಿಸಿ ಮದ್ಯಪಾನ ಮಾಡಿದಿರಿ. “ಇಂದೇ ತಿಂದು ಕುಡಿಯೋಣ, ನಾಳೆ ಬರುತ್ತದೆ ಮರಣ,” ಎಂದು ಹೇಳಿಕೊಂಡಿರಿ.


ಅಲ್ಲದೆ, “ಎಲೈ ಮನವೇ, ಅನೇಕ ವರ್ಷಗಳಿಗೆ ಬೇಕಾದಷ್ಟು ಸರಕು ಬಿದ್ದಿದೆ, ಆರಾಮವಾಗಿರು. ತಿನ್ನು, ಕುಡಿ, ಸುಖಪಡು ಎಂದು ಹೇಳಿಕೊಳ್ಳುತ್ತೇನೆ",’ ಎಂದುಕೊಂಡ.


ಅಲ್ಲದೆ, ‘ಬನ್ನಿ, ಮಧುಪಾನವನ್ನು ತರಿಸುತ್ತೇನೆ. ಅಮಲೇರಿಸುವ ಮದ್ಯವನ್ನು ಬೇಕಾದಷ್ಟು ಕುಡಿಯೋಣ; ಆಗ ಇನ್ನೂ ಸಂಭ್ರಮವಾಗಿರುವುದು!’ ಎಂದು ಹರಟಿಕೊಳ್ಳುವರು.”


ಸಹಜ ಪ್ರವೃತ್ತಿಯಿಂದ ಬೇಟೆಗಾಗಿಯೂ ಕೊಲೆಗಾಗಿಯೂ ಹುಟ್ಟಿರುವ ವಿವೇಕಶೂನ್ಯ ಪ್ರಾಣಿಗಳಂತೆ ಬಾಳುವ ಈ ದುರ್ಬೋಧಕರಾದರೋ ತಮಗೆ ತಿಳಿಯದವುಗಳನ್ನು ದೂಷಣೆಮಾಡುತ್ತಾರೆ. ಆ ಪ್ರಾಣಿಗಳು ನಾಶವಾಗುವಂತೆಯೇ ಇವರೂ ನಾಶವಾಗುತ್ತಾರೆ.


ಎಫೆಸ ನಗರಕ್ಕೆ ಬಂದು ಸೇರಿದಾಗ ಪೌಲನು ತನ್ನ ಸಂಗಡಿಗರನ್ನು ಅಲ್ಲೇ ಬಿಟ್ಟು ಪ್ರಾರ್ಥನಾ ಮಂದಿರಕ್ಕೆ ಹೋಗಿ ಅಲ್ಲಿ ಯೆಹೂದ್ಯರೊಡನೆ ತರ್ಕಮಾಡತೊಡಗಿದನು.


ಆದರೆ, ಈ ಜನರು ತಮಗೆ ಅರ್ಥವಾಗದ ಎಲ್ಲವನ್ನೂ ದೂಷಿಸುತ್ತಾರೆ. ವಿಚಾರ ಶೂನ್ಯ ಪ್ರಾಣಿಗಳಂತೆ ಸಹಜ ಪ್ರವೃತ್ತಿಯಿಂದ ಏನನ್ನು ತಿಳಿದುಕೊಳ್ಳುತ್ತಾರೋ ಅದರಿಂದಲೇ ನಾಶವಾಗುತ್ತಾರೆ.


ಪ್ರಿಯ ಸಹೋದರರೇ, ದೈನಂದಿನ ಜೀವನದಿಂದ ಒಂದು ಉದಾಹರಣೆಯನ್ನೇ ತೆಗೆದುಕೊಳ್ಳೋಣ: ಒಬ್ಬನು ಮತ್ತೊಬ್ಬನೊಡನೆ ಒಂದು ಒಪ್ಪಂದ ಮಾಡಿಕೊಳ್ಳುತ್ತಾನೆ. ಕ್ರಮಬದ್ಧವಾಗಿ ಅದನ್ನು ಮಾಡಿ ಮುಗಿಸಿದ ಮೇಲೆ ಯಾರೂ ಅದನ್ನು ರದ್ದುಮಾಡುವಂತಿಲ್ಲ, ಬದಲಾಯಿಸುವಂತಿಲ್ಲ.


ಇದನ್ನು ಅರ್ಥಮಾಡಿಕೊಳ್ಳಲು ನೀವು ಅಶಕ್ತರಾಗಿರುವುದರಿಂದ ನಾನು ಹೀಗೆ ಸಾಮಾನ್ಯ ರೀತಿಯಲ್ಲಿ ಮಾತನಾಡುತ್ತಿದ್ದೇನೆ. ಹಿಂದೊಮ್ಮೆ ನೀವು ನಿಮ್ಮ ಇಂದ್ರಿಯಗಳನ್ನು ಹೆಚ್ಚುಹೆಚ್ಚಾಗಿ ಅಶ್ಲೀಲತೆಗೂ ಅಕ್ರಮಕ್ಕೂ ಗುಲಾಮರನ್ನಾಗಿಸಿದಿರಿ; ಈಗಲಾದರೋ ಪರಿಶುದ್ಧತೆಗೂ ಸತ್ಸಂಬಂಧಕ್ಕೂ ನಿಮ್ಮ ಇಂದ್ರಿಯಗಳನ್ನು ಅಧೀನರಾಗಿಸಿರಿ.


ಅಪೊಲ್ಲೋಸನು ಕೊರಿಂಥದಲ್ಲಿ ಇದ್ದಾಗ, ಪೌಲನು ಮೇಲ್ನಾಡಿನ ಪ್ರಾಂತ್ಯದ ಮಾರ್ಗವಾಗಿ ಎಫೆಸಕ್ಕೆ ಬಂದನು. ಅಲ್ಲಿ ಕೆಲವು ಮಂದಿ ಶಿಷ್ಯರನ್ನು ಕಂಡು,


ಒಬ್ಬನು ಪ್ರಪಂಚವನ್ನೆಲ್ಲಾ ಗೆದ್ದುಕೊಂಡು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅಥವಾ ತೆತ್ತರೆ ಅವನಿಗೆ ಅದರಿಂದ ಬರುವ ಲಾಭವಾದರೂ ಏನು?


ತಿಂದು, ಕುಡಿದು, ತನ್ನ ದುಡಿಮೆಯಲ್ಲೇ ಸುಖವನ್ನು ಅನುಭವಿಸುವುದಕ್ಕಿಂತ ಮೇಲಾದುದು ಮನುಷ್ಯನಿಗೆ ಯಾವುದು ಇಲ್ಲ. ಇದು ದೇವರಿಂದ ಆದುದು ಎಂದು ಮನಗಂಡೆ.


ನಾ ನಿರ್ಮಲಚಿತ್ತನಾಗಿ ಬಾಳಿದ್ದು ವ್ಯರ್ಥವೋ? I ಶುದ್ಧಹಸ್ತನಾಗಿ ನಡೆದುಕೊಂಡುದು ನಿರರ್ಥಕವೋ? II


ಈ ರೀತಿ ನೀನು ನುಡಿಯುವುದು ನ್ಯಾಯವೆಂದು ಊಹಿಸುತ್ತೀಯೋ? ನಿನ್ನ ನೀತಿ ದೇವರ ನೀತಿಗಿಂತ ಮಿಗಿಲಾದುದೆನ್ನುತ್ತೀಯೋ?


ಅವರನ್ನು ಬೀಳ್ಕೊಡುತ್ತಾ, “ದೇವರ ಚಿತ್ತವಾದರೆ ನಾನು ನಿಮ್ಮಲ್ಲಿಗೆ ಮರಳಿ ಬರುತ್ತೇನೆ,” ಎಂದು ಹೇಳಿ ಎಫೆಸದಿಂದ ಸಮುದ್ರ ಪ್ರಯಾಣಮಾಡಿದನು.


ನಮ್ಮ ಅಕ್ರಮ ನಡತೆ ದೇವರ ನ್ಯಾಯನೀತಿಯನ್ನು ಮತ್ತಷ್ಟು ಸ್ಪಷ್ಟವಾಗಿ ತೋರಿಸುವ ಸಾಧನವಾದರೆ ಆಗ ಏನು ಹೇಳುವುದು? ಆ ಅಕ್ರಮವಾಗಿ ದೇವರು ನಮ್ಮ ಮೇಲೆ ಕೋಪ ಕಾರಿದರೆ ಅದು ಅನ್ಯಾಯವೆಂದು ನಾವು ಹೇಳಬಹುದೆ? (ಮನುಷ್ಯನಿಗೆ ಸಹಜವಾಗಿ ಏಳುವ ಪ್ರಶ್ನೆಯಿದು)


ಪಂಚಾಶತ್ತಮ ಹಬ್ಬದ ತನಕ ನಾನು ಎಫೆಸದಲ್ಲಿಯೇ ಇರುತ್ತೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು