27 ನೀವು ಸಭೆಸೇರಿರುವಾಗ, ಯಾರಾದರೂ ಪರಭಾಷೆಯಲ್ಲಿ ಮಾತಾಡಲು ಬಯಸಿದರೆ, ಇಬ್ಬರು ಅಥವಾ ಮೂವರಿಗಿಂತಲೂ ಹೆಚ್ಚು ಜನರು ಪರಭಾಷೆಯಲ್ಲಿ ಮಾತಾಡಬಾರದು. ಅವರು ಹೇಳುವುದನ್ನು ಮತ್ತೊಬ್ಬ ವ್ಯಕ್ತಿಯು ಅನುವಾದಿಸಬೇಕು.
ಹಾಗಾದರೆ ಪ್ರಿಯ ಸಹೋದರರೇ, ನಾವು ನಡೆದುಕೊಳ್ಳಬೇಕಾದ ಬಗೆ ಹೇಗೆ? ನೀವು ಸಭೆ ಸೇರಿದಾಗ ನಿಮ್ಮಲ್ಲಿ ಒಬ್ಬನು ಹಾಡುತ್ತಾನೆ; ಇನ್ನೊಬ್ಬನು ಉಪದೇಶ ಮಾಡುತ್ತಾನೆ; ಮತ್ತೊಬ್ಬನು ದೇವರು ತನಗೆ ಶ್ರುತಪಡಿಸಿದ್ದನ್ನು ತಿಳಿಸುತ್ತಾನೆ; ಇನ್ನೂ ಒಬ್ಬನು ಪರವಶಾಭಾಷೆಯನ್ನಾಡುತ್ತಾನೆ; ಮಗದೊಬ್ಬನು ಅದಕ್ಕೆ ಅರ್ಥ ಹೇಳುತ್ತಾನೆ ಎಂದಿಟ್ಟುಕೊಳ್ಳೋಣ. ನೀವು ಏನು ಮಾಡಿದರೂ ಧರ್ಮಸಭೆಯ ಅಭಿವೃದ್ಧಿಗಾಗಿಯೇ ಮಾಡಬೇಕು.
ಪರವಶಾಭಾಷೆಯನ್ನು ಆಡುವವನು ಮಾನವನೊಡನಲ್ಲ, ದೇವರೊಡನೆ ಮಾತನಾಡುತ್ತಾನೆ. ಪವಿತ್ರಾತ್ಮರ ಪ್ರೇರಣೆಯಿಂದ ನಿಗೂಢ ವಿಷಯಗಳ ಬಗ್ಗೆ ಮಾತನಾಡುವುದರಿಂದ ಯಾರೂ ಆತನ ಮಾತನ್ನು ಅರ್ಥಮಾಡಿಕೊಳ್ಳಲಾರರು.
ನೀವೆಲ್ಲರೂ ಪರವಶಾಭಾಷೆಗಳನ್ನು ಆಡಬಹುದಾದರೂ ದೇವರ ವಾಕ್ಯವನ್ನು ಸಾರುವವರಾಗಬೇಕೆಂಬುದೇ ನನ್ನ ಅಭಿಲಾಷೆ. ಪರವಶಾಭಾಷೆಗಳನ್ನು ಆಡುವಾತನು ಧರ್ಮಸಭೆಯ ಅಭಿವೃದ್ಧಿಗಾಗಿ ತನ್ನ ಮಾತಿನ ಅರ್ಥವನ್ನು ಹೇಳಲಾರನಾದರೆ , ಅವನಿಗಿಂತಲೂ ದೇವರ ವಾಕ್ಯವನ್ನು ಸಾರುವವನೇ ಶ್ರೇಷ್ಠನು.