Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 14:26 - ಕನ್ನಡ ಸತ್ಯವೇದವು C.L. Bible (BSI)

26 ಹಾಗಾದರೆ ಪ್ರಿಯ ಸಹೋದರರೇ, ನಾವು ನಡೆದುಕೊಳ್ಳಬೇಕಾದ ಬಗೆ ಹೇಗೆ? ನೀವು ಸಭೆ ಸೇರಿದಾಗ ನಿಮ್ಮಲ್ಲಿ ಒಬ್ಬನು ಹಾಡುತ್ತಾನೆ; ಇನ್ನೊಬ್ಬನು ಉಪದೇಶ ಮಾಡುತ್ತಾನೆ; ಮತ್ತೊಬ್ಬನು ದೇವರು ತನಗೆ ಶ್ರುತಪಡಿಸಿದ್ದನ್ನು ತಿಳಿಸುತ್ತಾನೆ; ಇನ್ನೂ ಒಬ್ಬನು ಪರವಶಾಭಾಷೆಯನ್ನಾಡುತ್ತಾನೆ; ಮಗದೊಬ್ಬನು ಅದಕ್ಕೆ ಅರ್ಥ ಹೇಳುತ್ತಾನೆ ಎಂದಿಟ್ಟುಕೊಳ್ಳೋಣ. ನೀವು ಏನು ಮಾಡಿದರೂ ಧರ್ಮಸಭೆಯ ಅಭಿವೃದ್ಧಿಗಾಗಿಯೇ ಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಹಾಗಾದರೇನು, ಸಹೋದರರೇ? ನೀವು ಸಭೆಯಲ್ಲಿ ಸೇರಿಬರುವಾಗ ಒಬ್ಬನು ಹಾಡುವುದೂ, ಒಬ್ಬನು ಉಪದೇಶಮಾಡುವುದೂ, ಒಬ್ಬನು ತನಗೆ ಪ್ರಕಟವಾದದ್ದನ್ನು ತಿಳಿಸುವುದೂ, ಇನ್ನೂ ಒಬ್ಬನು ಅನ್ಯಭಾಷೆಯನ್ನಾಡುವುದೂ, ಒಬ್ಬನು ಅದರ ಅರ್ಥವನ್ನು ಹೇಳುವುದುಂಟು. ನೀವು ಏನು ಮಾಡಿದರೂ ಸಭೆಯ ಭಕ್ತಿವೃದ್ಧಿಗಾಗಿಯೇ ಮಾಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಹಾಗಾದರೇನು, ಸಹೋದರರೇ? ನೀವು ಕೂಡಿ ಬಂದಿರುವಾಗ ಒಬ್ಬನು ಹಾಡುವದೂ, ಒಬ್ಬನು ಉಪದೇಶಮಾಡುವದೂ, ಒಬ್ಬನು ತನಗೆ ಪ್ರಕಟವಾದದ್ದನ್ನು ತಿಳಿಸುವದೂ, ಒಬ್ಬನು ವಾಣಿಯನ್ನಾಡುವದೂ, ಒಬ್ಬನು ಅದರ ಅರ್ಥವನ್ನು ಹೇಳುವದೂ ಉಂಟಷ್ಟೆ. ನೀವು ಏನೂ ನಡಿಸಿದರೂ ಭಕ್ತಿವೃದ್ಧಿಗಾಗಿಯೇ ನಡಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಆದ್ದರಿಂದ ಸಹೋದರ ಸಹೋದರಿಯರೇ, ನೀವು ಮಾಡತಕ್ಕದ್ದೇನು? ನೀವು ಸಭೆಸೇರಿದಾಗ, ಒಬ್ಬನು ಹಾಡುತ್ತಾನೆ; ಒಬ್ಬನು ಉಪದೇಶ ಮಾಡುತ್ತಾನೆ; ಒಬ್ಬನು ದೇವರಿಂದ ಹೊಸ ಸತ್ಯವನ್ನು ತಿಳಿಸುತ್ತಾನೆ; ಒಬ್ಬನು ಪರಭಾಷೆಯಲ್ಲಿ ಮಾತಾಡುತ್ತಾನೆ; ಒಬ್ಬನು ಆ ಪರಭಾಷೆಯನ್ನು ಅನುವಾದಿಸುತ್ತಾನೆ. ಸಭೆಯು ದೃಢವಾಗಿ ಬೆಳೆಯಬೇಕೆಂಬುದೇ ಇವುಗಳ ಉದ್ದೇಶವಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಹಾಗಾದರೇನು ಪ್ರಿಯರೇ? ನೀವು ಸಭೆಯಾಗಿ ಕೂಡಿಬರುವಾಗ ಪ್ರತಿಯೊಬ್ಬನಿಗೆ ಕೀರ್ತನೆಯಾಗಲಿ, ಸಂದೇಶವಾಗಲಿ, ಪ್ರಕಟನೆಯಾಗಲಿ, ಅನ್ಯಭಾಷೆಯನ್ನಾಡುವುದಾಗಲಿ, ಅನ್ಯಭಾಷೆಗಳ ಅರ್ಥವನ್ನು ಹೇಳುವ ವರವಾಗಲಿ ಇರುತ್ತದಷ್ಟೆ. ಇವೆಲ್ಲವೂ ಸಭೆಗೆ ಭಕ್ತಿವೃದ್ಧಿಗಾಗಿಯೇ ಇರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

26 ತಸೆ ಹೊಲ್ಯಾರ್ ಭಾವಾನು ಅನಿ ಭೆನಿಯಾನು, ಅತ್ತಾ ಕಾಯ್ ಸಾಂಗು? ತುಮಿ ಎಕಾಕ್ಡೆ ಗೊಳಾ ಹೊಲ್ಲ್ಯಾ ತನ್ನಾ, ಎಕ್ಲ್ಯಾನ್ ಎಕ್ ಗಿತ್ ಗಾವುಕ್‍ ಹೊತಾ ನಾ ಹೊಲ್ಯಾರ್ ಶಿಕಾಪ್ ದಿವ್ಕ್ ಹೊತಾ, ಎಕ್ ಕಾಯ್‍ತರ್ ಸೊಡ್ಸುನ್ ಸಾಂಗುಕ್ ಹೊತಾ, ನಾ ಹೊಲ್ಯಾರ್ ವಿಚಿತ್ರ್ ಬಾಶೆತ್ ಬೊಲುಕ್ ಹೊತಾ, ನಾ ಹೊಲ್ಯಾರ್ ವಿಚಿತ್ರ್ ಬಾಶೆಚೊ ಅರ್ಥ್ ಸಾಂಗುಕ್ ಹೊತಾ, ಖರೆ ಹೆ ಸಗ್ಳೆ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ವಾಡಾವಳಿಸಾಟ್ನಿ ಕರುಕ್ ಬಗಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 14:26
18 ತಿಳಿವುಗಳ ಹೋಲಿಕೆ  

ಕೀರ್ತನೆ, ಹಾಡು, ಭಕ್ತಿಗೀತೆ ಇವುಗಳಿಂದ ನಿಮ್ಮ ಭಾವಗಳನ್ನು ಪರಸ್ಪರ ವ್ಯಕ್ತಪಡಿಸಿರಿ. ಹೃದಯಾಂತರಾಳದಿಂದ ಹಾಡಿ ಪ್ರಭುವಿಗೆ ಸ್ತುತಿಸಲ್ಲಿಸಿರಿ.


ಆದ್ದರಿಂದ ಶಾಂತಿಸಮಾಧಾನಕ್ಕೂ ಪರಸ್ಪರ ಅಭ್ಯುದಯಕ್ಕೂ ಹಿತಕರವಾದವುಗಳನ್ನೇ ಅರಸೋಣ.


ಆದುದರಿಂದ ನೀವು ಈಗ ನಡೆದುಕೊಳ್ಳುತ್ತಿರುವಂತೆ, ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ, ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಗೊಳಿಸಿರಿ.


ಇಡೀ ದೇಹವು ಕ್ರಿಸ್ತಯೇಸುವನ್ನೇ ಆಧರಿಸಿದೆ. ಅವರಲ್ಲಿಯೇ ಎಲ್ಲ ನರನಾಡಿಗಳು, ಕೀಲುಗಂಟು಼ಗಳು ಒಂದಾಗಿ ಕೆಲಸಮಾಡುತ್ತವೆ. ಪ್ರತಿಯೊಂದು ಅಂಗವೂ ತನ್ನ ಕೆಲಸವನ್ನು ಸೂಕ್ತರೀತಿಯಲ್ಲಿ ನಿರ್ವಹಿಸುವುದರಿಂದ ಇಡೀ ದೇಹ ಬೆಳೆಯುತ್ತಾ, ಪ್ರೀತಿಯಲ್ಲಿ ಪ್ರವರ್ಧಿಸುತ್ತಾ ಕ್ಷೇಮಾಭಿವೃದ್ಧಿಯನ್ನು ಪಡೆಯುತ್ತದೆ.


ನಿಮ್ಮ ಬಾಯಿಂದ ಕೆಟ್ಟಮಾತುಗಳು ಬಾರದಿರಲಿ. ಪ್ರತಿಯಾಗಿ ನಿಮ್ಮ ಮಾತುಗಳು ಆದರ್ಶಕರವಾಗಿರಲಿ; ಸಮಯೋಚಿತವಾಗಿರಲಿ, ಕೇಳುವವರ ಕಿವಿಗದು ಹಿತಕರವಾಗಿರಲಿ.


ಆದ್ದರಿಂದಲೇ ನಿಮ್ಮ ಬಳಿಗೆ ಬರುವುದಕ್ಕೆ ಮುಂಚೆಯೇ ಇದನ್ನೆಲ್ಲಾ ಬರೆಯುತ್ತಿದ್ದೇನೆ. ನಿಮ್ಮನ್ನು ಕೆಡವಿ ಹಾಳುಮಾಡುವುದಕ್ಕಲ್ಲ, ಕಟ್ಟಿ ಎಬ್ಬಿಸುವುದಕ್ಕಾಗಿಯೇ ಪ್ರಭು ನನಗೆ ಅಧಿಕಾರವನ್ನು ಕೊಟ್ಟಿರುವುದು. ಎಂದೇ, ನಿಮ್ಮ ಮಧ್ಯೆ ಬಂದಾಗ ಅಧಿಕಾರ ಪ್ರಯೋಗಿಸಿ ಕಠಿಣವಾಗಿ ವರ್ತಿಸಲು ಅವಕಾಶವಿರಬಾರದೆಂಬುದೇ ನನ್ನ ಅಪೇಕ್ಷೆ.


ನಾವು ತಪ್ಪಿತಸ್ಥರಲ್ಲವೆಂದು ನಿಮ್ಮ ಮುಂದೆ ಸಮರ್ಥಿಸಿಕೊಳ್ಳುವುದಕ್ಕಾಗಿ ಇದನ್ನು ಹೇಳುತ್ತಿದ್ದೇವೆಂದು ನೆನಸಬೇಡಿ. ದೇವರ ಸನ್ನಿಧಿಯಲ್ಲಿ, ಕ್ರಿಸ್ತಯೇಸುವಿನ ಹೆಸರಿನಲ್ಲಿ ನಾನು ನಿಮಗೆ ಹೇಳುತ್ತೇನೆ: ಪ್ರಿಯ ಸಹೋದರರೇ, ನಾವು ಮಾಡುತ್ತಿರುವುದೆಲ್ಲ ನಿಮ್ಮ ಆಧ್ಯಾತ್ಮಿಕ ಅಭಿವೃದ್ಧಿಗಾಗಿಯೇ.


ಆದರೆ ಎಲ್ಲವನ್ನು ಒಪ್ಪವಾಗಿ, ಓರಣವಾಗಿ ಮಾಡಿರಿ.


ದೇವಜನರನ್ನು ಪರಿಣಿತರನ್ನಾಗಿಸಿ ದೇವರ ಸೇವೆಗೆ ಸಿದ್ಧಗೊಳಿಸಲೆಂದು ಮತ್ತು ಯೇಸುಕ್ರಿಸ್ತರ ದೇಹವಾದ ಧರ್ಮಸಭೆ ಅಭಿವೃದ್ಧಿಹೊಂದಲೆಂದು ಈ ವರಗಳನ್ನು ಅವರಿಗೆ ನೀಡಿದರು.


ಪರವಶಾಭಾಷೆಯನ್ನು ಆಡುವುದಾದರೆ ಇಬ್ಬರು, ಹೆಚ್ಚೆಂದರೆ ಮೂವರು ಮಾತನಾಡಲಿ. ಆದರೆ ಒಬ್ಬರ ನಂತರ ಇನ್ನೊಬ್ಬರು ಮಾತನಾಡಲಿ. ಬೇರೊಬ್ಬರು ವಿವರಿಸಲಿ.


ಸಹೋದರರೇ, ಈ ವಿಷಯ ನಿಮಗೆ ತಿಳಿದಿರಲಿ; ನನ್ನ ಸೇವೆ ಇತರ ಜನರಲ್ಲಿ ಫಲಪ್ರದವಾದಂತೆ ನಿಮ್ಮಲ್ಲೂ ಫಲಪ್ರದವಾಗಬೇಕೆಂಬ ಉದ್ದೇಶದಿಂದ ನಿಮ್ಮ ಬಳಿಗೆ ಬರಲು ನಾನು ಅನೇಕ ಸಾರಿ ಪ್ರಯತ್ನಿಸಿದೆನು. ಆದರೆ, ಕಾರಣಾಂತರಗಳಿಂದ ಇದುವರೆಗೂ ಬರಲು ಸಾಧ್ಯವಾಗಲಿಲ್ಲ.


ಸೇವಕನು ಸೇವೆಯಲ್ಲಿಯೂ ಬೋಧಕನು ಬೋಧಿಸುವುದರಲ್ಲಿಯೂ


ನಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಹಿತವನ್ನೇ ಬಯಸಿ, ವಿಶ್ವಾಸದಲ್ಲಿ ಅವನು ಮತ್ತಷ್ಟು ಪ್ರವರ್ಧಿಸುವಂತೆ ನೆರವಾಗಬೇಕು.


ಪರವಶಾಭಾಷೆಯನ್ನು ಆಡುವವನು ಮಾನವನೊಡನಲ್ಲ, ದೇವರೊಡನೆ ಮಾತನಾಡುತ್ತಾನೆ. ಪವಿತ್ರಾತ್ಮರ ಪ್ರೇರಣೆಯಿಂದ ನಿಗೂಢ ವಿಷಯಗಳ ಬಗ್ಗೆ ಮಾತನಾಡುವುದರಿಂದ ಯಾರೂ ಆತನ ಮಾತನ್ನು ಅರ್ಥಮಾಡಿಕೊಳ್ಳಲಾರರು.


ಹಾಗಾದರೆ ಈಗ ನಾನೇನು ಮಾಡಬೇಕು? ಆತ್ಮದಿಂದಲೂ ಪ್ರಾರ್ಥಿಸಬೇಕು, ಮನಸ್ಸಿನಿಂದಲೂ ಪ್ರಾರ್ಥಿಸಬೇಕು, ಆತ್ಮದಿಂದಲೂ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು