Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 12:11 - ಕನ್ನಡ ಸತ್ಯವೇದವು C.L. Bible (BSI)

11 ಈ ವರಗಳನ್ನೆಲ್ಲ ಆ ಪವಿತ್ರಾತ್ಮ ಒಬ್ಬರೇ ತಮ್ಮ ಇಷ್ಟಾನುಸಾರ ಪ್ರತಿಯೊಬ್ಬನಿಗೂ ಹಂಚುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಆದರೆ ಈ ಎಲ್ಲವುಗಳಲ್ಲಿ ಕಾರ್ಯ ಮಾಡುವ ಆ ಒಬ್ಬ ಆತ್ಮನೇ ವರಗಳನ್ನೆಲ್ಲಾ ತನ್ನ ಚಿತ್ತಾನುಸಾರವಾಗಿ ಒಬ್ಬೊಬ್ಬನಿಗೆ ಹಂಚಿಕೊಡುವವನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಈ ವರಗಳನ್ನೆಲ್ಲಾ ಆ ಒಬ್ಬ ಆತ್ಮನೇ ತನ್ನ ಚಿತ್ತಕ್ಕೆ ಬಂದ ಹಾಗೆ ಒಬ್ಬೊಬ್ಬನಿಗೆ ಹಂಚಿಕೊಟ್ಟು ನಡಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಪವಿತ್ರಾತ್ಮನು ಒಬ್ಬನೇ. ಆತನೇ ಎಲ್ಲಾ ವರಗಳನ್ನು ತನ್ನ ಚಿತ್ತಕ್ಕನುಸಾರವಾಗಿ ಪ್ರತಿಯೊಬ್ಬನಿಗೂ ಹಂಚಿಕೊಟ್ಟು ನಡೆಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಈ ವರಗಳನ್ನೆಲ್ಲ ಆ ಪವಿತ್ರಾತ್ಮ ಒಬ್ಬರೇ ತಮ್ಮ ಚಿತ್ತಾನುಸಾರ ಪ್ರತಿಯೊಬ್ಬನಿಗೂ ಹಂಚಿಕೊಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

11 ಖರೆ ಹಿ ಸಗ್ಳಿ ವರಾ ದಿತಲೊ ಎಕ್ಲೊಚ್ ಅನಿ ತೊಚ್ ಪವಿತ್ರ್ ಆತ್ಮೊ; ಅಪ್ನಾಂಚ್ಯಾ ಮನಾಕ್ ಯೆತಾ ತಸೆ ಹರಿ ಎಕ್ಲ್ಯಾಕ್ ತೊ ತಿ ವಾಟುನ್ ದಿತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 12:11
18 ತಿಳಿವುಗಳ ಹೋಲಿಕೆ  

ವರದಾನಗಳು ವಿಧವಿಧವಾಗಿವೆ; ಅವುಗಳನ್ನು ಕೊಡುವ ಪವಿತ್ರಾತ್ಮ ಒಬ್ಬರೇ.


ಸೂಚಕಕಾರ್ಯಗಳಿಂದಲೂ ಅದ್ಭುತಕಾರ್ಯಗಳಿಂದಲೂ ಹಲವಾರು ಮಹತ್ಕಾರ್ಯಗಳಿಂದಲೂ ಮತ್ತು ತಮ್ಮ ಚಿತ್ತಾನುಸಾರ ಅನುಗ್ರಹಿಸಿದ ಪವಿತ್ರಾತ್ಮ ಅವರ ವರದಾನಗಳಿಂದಲೂ ದೇವರು ಆ ಪ್ರಮಾಣವನ್ನು ಪುಷ್ಟೀಕರಿಸಿದ್ದಾರೆ.


ನಾವಾದರೋ ಹಾಗೆ ಮಿತಿಮೀರಿ ಹೊಗಳಿಕೊಳ್ಳುವುದಿಲ್ಲ. ನಮಗೆ ದೇವರು ತಾವೇ ನಿಯಮಿಸಿದ ಕಾರ್ಯಕ್ಷೇತ್ರದ ಸರಹದ್ದನ್ನು ನಾವು ಮೀರುವುದಿಲ್ಲ. ಈ ಸರಹದ್ದಿಗೆ ನೀವೂ ಒಳಪಟ್ಟಿದ್ದೀರಿ.


ಆದರೂ ನಮ್ಮಲ್ಲಿ ಪ್ರತಿಯೊಬ್ಬನೂ ಕ್ರಿಸ್ತಯೇಸು ಅನುಗ್ರಹಿಸುವ ಪ್ರಕಾರವೇ ವರಗಳನ್ನು ಪಡೆದಿದ್ದಾನೆ.


ಶಕ್ತಿಸಾಮರ್ಥ್ಯವು ನಾನಾ ವಿಧ; ಅವುಗಳನ್ನು ಎಲ್ಲರಲ್ಲೂ ಸಾಧಿಸುವ ದೇವರು ಒಬ್ಬರೇ.


ಸೃಷ್ಟಿಗಳಲ್ಲೆಲ್ಲಾ ನಾವು ಪ್ರಥಮ ಫಲವಾಗುವಂತೆ ದೇವರು ತಮ್ಮ ಸುಚಿತ್ತದ ಪ್ರಕಾರ ಸತ್ಯವಾಕ್ಯದ ಮೂಲಕ ನಮಗೆ ಜೀವವಿತ್ತರು.


ದೈವಯೋಜನೆಯಂತೆಯೇ ಸಕಲವೂ ಸಂಭವಿಸುತ್ತದೆ. ದೇವರು ಆದಿಯಲ್ಲೇ ಸಂಕಲ್ಪಿಸಿದ್ದಂತೆ ತಮ್ಮ ಚಿತ್ತಕ್ಕನುಗುಣವಾಗಿ ಕ್ರಿಸ್ತಯೇಸುವಿನ ಅನ್ಯೋನ್ಯತೆಯಲ್ಲಿ ನಮ್ಮನ್ನು ತಮ್ಮವರನ್ನಾಗಿ ಆರಿಸಿಕೊಂಡರು.


ದೇವರ ಕರೆಗೆ ಮತ್ತು ಪ್ರಭು ನೀಡಿರುವ ವರದಾನಗಳಿಗೆ ಅನುಗುಣವಾಗಿ ಪ್ರತಿಯೊಬ್ಬನೂ ಬಾಳುವೆ ನಡೆಸಲಿ. ಎಲ್ಲ ಸಭೆಗಳಿಗೂ ನಾನಿದನ್ನೇ ವಿಧಿಸಿದ್ದೇನೆ.


ಎಲ್ಲರೂ ನಾನಿರುವಂತೆ ಇರಬೇಕೆಂಬುದು ನನ್ನ ಅಭಿಲಾಷೆ. ಆದರೆ ದೇವರು ಪ್ರತಿಯೊಬ್ಬನಿಗೂ ವಿಶಿಷ್ಟ ವರವನ್ನು ದಯಪಾಲಿಸಿದ್ದಾರೆ. ಒಬ್ಬನಿಗೆ ಒಂದು ವರವಾದರೆ, ಮತ್ತೊಬ್ಬನಿಗೆ ಇನ್ನೊಂದು ವರವುಂಟು.


ದೇವರು ಅನುಗ್ರಹಿಸಿರುವ ಪ್ರಕಾರ ನಾವು ಬೇರೆ ಬೇರೆ ವರಗಳನ್ನು ಹೊಂದಿದ್ದೇವೆ. ನಾವು ಹೊಂದಿರುವ ವರವು ಪ್ರವಾದನೆಯ ವರವಾಗಿದ್ದರೆ ನಮ್ಮ ವಿಶ್ವಾಸಕ್ಕೆ ಅನುಗುಣವಾಗಿ ಅದನ್ನು ಉಪಯೋಗಿಸಬೇಕು.


ದೇವರ ಇಚ್ಛೆಗೆ ಅನುಗುಣವಾಗಿ ಮಾನವರಿಗೆ ಕರುಣೆಯೂ ಲಭಿಸುತ್ತದೆ, ಕಾಠಿಣ್ಯವೂ ಲಭಿಸುತ್ತದೆ.


ಪಿತನು ಸತ್ತವರನ್ನು ಎಬ್ಬಿಸಿ ಅವರಿಗೆ ಜೀವವನ್ನು ಕೊಡುವಂತೆಯೇ ಪುತ್ರನೂ ತನಗೆ ಬೇಕಾದವರಿಗೆ ಜೀವವನ್ನು ಕೊಡುತ್ತಾನೆ.


ಅದಕ್ಕೆ ಯೊವಾನ್ನನು, “ದೇವರು ದಯಪಾಲಿಸದೆ ಹೋದರೆ ಮಾನವನಿಗೇನೂ ದಕ್ಕದು.


ಗಾಳಿ ತನಗೆ ತೋಚಿದ ಕಡೆ ಬೀಸುತ್ತದೆ, ಅದರ ಸದ್ದು ನಿನಗೆ ಕೇಳಿಸುತ್ತದೆ; ಆದರೆ ಅದು ಎಲ್ಲಿಂದ ಬರುತ್ತದೆ, ಎಲ್ಲಿಗೆ ಹೋಗುತ್ತದೆ ಎಂಬುದು ನಿನಗೆ ತಿಳಿಯದು. ದೇವರ ಆತ್ಮದಿಂದ ಹುಟ್ಟಿದ ಪ್ರತಿಯೊಬ್ಬನೂ ಅದರಂತೆಯೇ,” ಎಂದು ಹೇಳಿದರು.


ನನ್ನದನ್ನು ನನ್ನಿಷ್ಟಾನುಸಾರ ಕೊಡುವ ಹಕ್ಕು ನನಗಿಲ್ಲವೆ? ನನ್ನ ಔದಾರ್ಯವನ್ನು ಕಂಡು ನಿನಗೇಕೆ ಹೊಟ್ಟೆಯುರಿ?’ ಎಂದ.


ಹೌದು, ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ.


ಆತನ ದೃಷ್ಟಿಯಲ್ಲಿ ಭೂನಿವಾಸಿಗಳೆಲ್ಲರು ಶೂನ್ಯರು ಇಹದ ಜನರೂ ಪರದ ದೂತರೂ ಆತನಿಗೆ ಅಧೀನರು. ಆತನ ಶಕ್ತಿಯುತ ಹಸ್ತವನ್ನು ಯಾರಿಂದಲೂ ತಡೆಯಲಾಗದು. ‘ನೀನು ಮಾಡುತ್ತಿರುವುದೇನು?’ ಎಂದು ಯಾರೂ ಆತನನ್ನು ಪ್ರಶ್ನಿಸಲಾರರು.


ಸದ್ಯ, ದೇವರು ತಮ್ಮ ಚಿತ್ತಾನುಸಾರ, ಪ್ರತಿಯೊಂದು ಅಂಗವನ್ನು ಸರಿಯಾಗಿ ಜೋಡಿಸಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು