Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 11:16 - ಕನ್ನಡ ಸತ್ಯವೇದವು C.L. Bible (BSI)

16 ಇದರ ಬಗ್ಗೆ ಯಾರಾದರೂ ತರ್ಕಿಸಿದರೆ ಅಂಥವನಿಗೆ ಇದು ತಿಳಿದಿರಲಿ: ಇಂಥ ಪದ್ಧತಿ ನಮ್ಮಲ್ಲಿ ಇಲ್ಲ: ಇನ್ನಾವ ಧರ್ಮಸಭೆಗಳಲ್ಲೂ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಯಾವನಾದರೂ ಇದರ ಕುರಿತು ವಾಗ್ವಾದ ಮಾಡುವುದಾದರೆ ಇಂಥ ಪದ್ಧತಿ ನಮ್ಮಲ್ಲಿ ಇಲ್ಲ ಮತ್ತು ದೇವರ ಸಭೆಗಳಲ್ಲಿಯೂ ಇಲ್ಲ ಎಂದು ತಿಳಿದುಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಒಬ್ಬನು ವಾಗ್ವಾದಪ್ರಿಯನಾಗಿ ಕಾಣಿಸಿಕೊಂಡರೆ ಇಂಥ ಪದ್ಧತಿ ನಮ್ಮಲಿಲ್ಲ, ಮತ್ತು ದೇವರ ಸಭೆಗಳಲ್ಲಿಯೂ ಇಲ್ಲ ಎಂದು ತಿಳುಕೊಳ್ಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಕೆಲವು ಜನರು ಇದರ ಬಗ್ಗೆ ಇನ್ನೂ ವಾದಮಾಡಬಯಸಬಹುದು. ಆದರೆ ಈ ಸಂಪ್ರದಾಯವು ನಮ್ಮಲ್ಲಾಗಲಿ ದೇವರ ಸಭೆಗಳಲ್ಲಾಗಲಿ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಇದರ ಬಗ್ಗೆ ಯಾರಿಗಾದರೂ ವಾಗ್ವಾದ ಮಾಡಬಯಸಿದರೆ, ಇಂಥ ಪದ್ಧತಿ ನಮ್ಮಲ್ಲಿಲ್ಲ, ದೇವರ ಸಭೆಗಳಲ್ಲಿಯೂ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

16 ಖರೆ ಹ್ಯಾ ವಿಶಯಾತ್ ತುಮ್ಚ್ಯಾತ್ಲೊ ಕೊನ್ ಬಿ ತಕ್ರಾರ್ ಕರುಕ್ ರ್‍ಹಾತಾ ಜಾಲ್ಯಾರ್, ಮಿಯಾ ತೆಕಾ ಎವ್ಡೆಚ್ ಸಾಂಗ್ತಾ ಅಮ್ಚ್ಯಾ ಮದ್ದಿ ಹೊಂವ್ದಿತ್, ದೆವಾಚ್ಯಾ ಲೊಕಾಚ್ಯಾ ತಾಂಡ್ಯಾತ್ನಿ ಹೊಂವ್ದಿತ್ ದುಸ್ರಿ ರುಡಾ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 11:16
12 ತಿಳಿವುಗಳ ಹೋಲಿಕೆ  

ದೇವರ ಕರೆಗೆ ಮತ್ತು ಪ್ರಭು ನೀಡಿರುವ ವರದಾನಗಳಿಗೆ ಅನುಗುಣವಾಗಿ ಪ್ರತಿಯೊಬ್ಬನೂ ಬಾಳುವೆ ನಡೆಸಲಿ. ಎಲ್ಲ ಸಭೆಗಳಿಗೂ ನಾನಿದನ್ನೇ ವಿಧಿಸಿದ್ದೇನೆ.


ಸಹೋದರರೇ, ನೀವು ಜುದೇಯದಲ್ಲಿರುವ ದೇವರ ಸಭೆಗಳನ್ನು ಅನುಸರಿಸಿದಿರಿ. ಕ್ರಿಸ್ತಯೇಸುವಿನಲ್ಲಿ ವಿಶ್ವಾಸವಿಟ್ಟಿರುವ ಅವರು ಯೆಹೂದ್ಯರಿಂದ ಅನುಭವಿಸಿದಂಥ ಹಿಂಸೆಯನ್ನು, ನೀವೂ ಸ್ವಜನರಿಂದ ಅನುಭವಿಸಿದಿರಿ.


ನೀನು ಅವರನ್ನು ಕರೆದುಕೊಂಡು ಹೋಗಿ ಅವರ ಜೊತೆಯಲ್ಲಿ ನೀನೂ ಶುದ್ಧಾಚಾರವಿಧಿಯನ್ನು ಮಾಡಿಸಿಕೊ. ಅವರ ಖರ್ಚುವೆಚ್ಚವನ್ನೆಲ್ಲಾ ನೀನೇ ವಹಿಸಿಕೋ. ಅವರು ಮುಂಡನ ಮಾಡಿಸಿಕೊಳ್ಳಲಿ. ಹೀಗೆ ಮಾಡಿದರೆ, ನಿನ್ನ ಬಗ್ಗೆ ಅವರು ಕೇಳಿಸಿಕೊಂಡಿರುವ ವಿಷಯ ನಿಜವಲ್ಲವೆಂದೂ ನೀನು ಕೂಡ ಮೋಶೆಯ ಧರ್ಮಶಾಸ್ತ್ರಕ್ಕೆ ಅನುಸಾರವಾಗಿ ನಡೆಯುತ್ತಿರುವೆ ಎಂದೂ ಅವರೆಲ್ಲರಿಗೂ ಮನವರಿಕೆಯಾಗುವುದು.


ನಿನ್ನ ವಿಷಯ ಅವರಿಗೆ ತಿಳಿದುಬಂದಿದೆ. ಅದೇನೆಂದರೆ ನೀನು ಅನ್ಯಧರ್ಮೀಯರ ನಡುವೆ ವಾಸಿಸುತ್ತಿರುವ ಯೆಹೂದ್ಯರೆಲ್ಲರಿಗೆ, ‘ನೀವು ಮೋಶೆಯ ನೇಮನಿಯಮಗಳನ್ನು ಅನುಸರಿಸಬಾರದು, ನಿಮ್ಮ ಮಕ್ಕಳಿಗೆ ಸುನ್ನತಿಯನ್ನು ಮಾಡಿಸಬಾರದು, ಯೆಹೂದ್ಯ ಸಂಪ್ರದಾಯಗಳನ್ನು ಆಚರಿಸಬಾರದು,’ ಎಂದು ಬೋಧಿಸುತ್ತಿರುವಿಯಂತೆ.


ದೇವಜನರಿಗೋಸ್ಕರ ಹಣ ಸಂಗ್ರಹಿಸುವುದರ ವಿಷಯವಾಗಿ ಹೇಳುವುದಾದರೆ: ಗಲಾತ್ಯದ ಸಭೆಗಳಿಗೆ ನಾನು ಕೊಟ್ಟ ನಿಯಮವನ್ನೇ ನೀವೂ ಅನುಸರಿಸಿರಿ. ನಾನು ಬಂದಾಗ ಹಣ ಸಂಗ್ರಹಿಸುವ ಅವಶ್ಯಕತೆ ಇರಬಾರದು.


ಅದೇ ಮೇರೆಗೆ, ನೀವು ಸೂಕ್ತಕಾಲಕ್ಕೆ ಮುಂಚೆ ತೀರ್ಪುಮಾಡಬೇಡಿ; ಪ್ರಭುವಿನ ಪುನರಾಗಮನದವರೆಗೂ ಕಾದುಕೊಂಡಿರಿ. ಕತ್ತಲಲ್ಲಿ ಗುಪ್ತವಾಗಿರುವುಗಳನ್ನು ಪ್ರಭುವು ಬೆಳಕಿಗೆ ತರುವರು; ಅಂತರಂಗದ ಯೋಜನೆಗಳನ್ನು ಬಹಿರಂಗಪಡಿಸುವರು. ಆಗ ಪ್ರತಿಯೊಬ್ಬನಿಗೂ ತಕ್ಕ ಪ್ರಶಂಸೆ ದೇವರಿಂದಲೇ ದೊರಕುವುದು.


ನಾನು ಸ್ವತಂತ್ರನಲ್ಲವೇ? ಪ್ರೇಷಿತನಲ್ಲವೇ? ನಮ್ಮ ಪ್ರಭು ಯೇಸುವನ್ನು ಕಂಡವನಲ್ಲವೇ? ಪ್ರಭುವಿನಲ್ಲಿ ನಾನು ಮಾಡಿದ ಸೇವೆಯ ಪ್ರತಿಫಲ ನೀವಲ್ಲವೇ?


ಜೀವನೋಪಾಯಕ್ಕಾಗಿ ಬಾರ್ನಬ ಮತ್ತು ನಾನು ಮಾತ್ರ ದುಡಿಯಬೇಕೇ?


ಆಮೇಲೆ ನಾನು ಕ್ರಯಪತ್ರವನ್ನು, ಅಂದರೆ ಚಕ್ಕುಬಂದಿ ಷರತ್ತುಗಳಿಂದ ಕೂಡಿ ಮುದ್ರಿತವಾದ ಪತ್ರವನ್ನೂ ಮುಚ್ಚಳಿಕೆಯ ಪತ್ರವನ್ನೂ ತೆಗೆದುಕೊಂಡು


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು