Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 8:54 - ಕನ್ನಡ ಸತ್ಯವೇದವು C.L. Bible (BSI)

54 ಆಕಾಶದ ಕಡೆಗೆ ಕೈಯೆತ್ತಿ ಸರ್ವೇಶ್ವರನ ಬಲಿಪೀಠದ ಮುಂದೆ ಮೊಣಕಾಲೂರಿದ್ದ ಸೊಲೊಮೋನನು ಈ ಪ್ರಕಾರ ಸರ್ವೇಶ್ವರನನ್ನು ಪ್ರಾರ್ಥಿಸಿದ ನಂತರ ಎದ್ದು ನಿಂತನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

54 ಸೊಲೊಮೋನನು ಆಕಾಶದ ಕಡೆಗೆ ಕೈಯೆತ್ತಿ ಯೆಹೋವನ ಯಜ್ಞವೇದಿಯ ಮುಂದೆ ಮೊಣಕಾಲೂರಿ ಯೆಹೋವನನ್ನು ಪ್ರಾರ್ಥಿಸಿದ ನಂತರ ಎದ್ದು ನಿಂತು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

54 ಆಕಾಶದ ಕಡೆಗೆ ಕೈಯೆತ್ತಿ ಯೆಹೋವನ ಯಜ್ಞವೇದಿಯ ಮುಂದೆ ಮೊಣಕಾಲೂರಿದ್ದ ಸೊಲೊಮೋನನು ಈ ಪ್ರಕಾರವಾಗಿ ಯೆಹೋವನನ್ನು ಪ್ರಾರ್ಥಿಸಿದ ನಂತರ ಎದ್ದು ನಿಂತು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

54 ಸೊಲೊಮೋನನು ಯಜ್ಞವೇದಿಕೆಯ ಸನ್ನಿಧಿಯಲ್ಲಿ ತನ್ನ ಮೊಣಕಾಲುಗಳನ್ನೂರಿ, ದೇವರಿಗೆ ಪ್ರಾರ್ಥನೆಯನ್ನು ಮಾಡಿದನು. ಸೊಲೊಮೋನನು ತನ್ನ ಕೈಗಳನ್ನು ಪರಲೋಕದತ್ತ ಚಾಚಿ ಪ್ರಾರ್ಥಿಸಿದನು. ಬಳಿಕ ಸೊಲೊಮೋನನು ಪ್ರಾರ್ಥನೆಯನ್ನು ಮುಗಿಸಿ ಎದ್ದುನಿಂತನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

54 ಸೊಲೊಮೋನನು ಈ ಸಮಸ್ತ ಪ್ರಾರ್ಥನೆಯನ್ನೂ, ವಿಜ್ಞಾಪನೆಯನ್ನೂ ಯೆಹೋವ ದೇವರಿಗೆ ಮಾಡಿ ತೀರಿಸಿದ ತರುವಾಯ, ಅವನು ಯೆಹೋವ ದೇವರ ಬಲಿಪೀಠದ ಮುಂದೆ ಮೊಣಕಾಲೂರಿ, ತನ್ನ ಕೈಗಳನ್ನು ಆಕಾಶಕ್ಕೆ ಚಾಚಿದವನಾಗಿ ಎದ್ದು ನಿಂತನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 8:54
9 ತಿಳಿವುಗಳ ಹೋಲಿಕೆ  

ಯೇಸು ಪ್ರಾರ್ಥನೆಯಿಂದ ಎದ್ದು ಶಿಷ್ಯರ ಬಳಿಗೆ ಬಂದರು. ಶಿಷ್ಯರಾದರೋ ದುಃಖದಿಂದ ಬಳಲಿ ನಿದ್ರಿಸುತ್ತಿದ್ದರು.


ಸೊಲೊಮೋನನು ತನ್ನ ಪ್ರಾರ್ಥನೆಯನ್ನು ಮುಗಿಸಿದ ಕೂಡಲೆ ಆಕಾಶದಿಂದ ಬೆಂಕಿ ಇಳಿದು ಬಂದು ದಹನಬಲಿದ್ರವ್ಯಗಳನ್ನೂ ಬಲಿಮಾಂಸವನ್ನೂ ದಹಿಸಿಬಿಟ್ಟಿತು; ಸರ್ವೇಶ್ವರನ ತೇಜಸ್ಸು ಆಲಯದಲ್ಲಿ ತುಂಬಿಕೊಂಡಿತು.


ಬನ್ನಿ ಆರಾಧಿಸೋಣ ಬನ್ನಿ, ಬಾಗಿ ವಂದಿಸೋಣ I ನಮ್ಮನು ಸೃಜಿಸಿದಾ ಪ್ರಭುವಿಗೆ ಸಾಷ್ಟಾಂಗವೆರಗೋಣ II


ಆದರೂ, ಆ ದಿನಗಳು ಕಳೆದ ಮೇಲೆ, ಅವರನ್ನು ಬಿಟ್ಟು ನಮ್ಮ ಪ್ರಯಾಣವನ್ನು ಮುಂದುವರಿಸಲು ಅನುವಾದೆವು. ಅವರಾದರೋ, ಮಡದಿ ಮಕ್ಕಳೊಡನೆ ಪಟ್ಟಣ ಬಿಟ್ಟು ಸಮುದ್ರತೀರದವರೆಗೂ ನಮ್ಮೊಡನೆ ಬಂದರು. ಅಲ್ಲಿ ನಾವೆಲ್ಲರೂ ಮೊಣಕಾಲೂರಿ ಪ್ರಾರ್ಥನೆ ಮಾಡಿದೆವು.


ಇಷ್ಟು ಹೇಳಿದ ಮೇಲೆ ಪೌಲನು ಅವರೆಲ್ಲರ ಸಂಗಡ ಮೊಣಕಾಲೂರಿ ಪ್ರಾರ್ಥನೆ ಮಾಡಿದನು.


ಒಂದು ಕಲ್ಲೆಸೆತದಷ್ಟು ದೂರ ಹೋಗಿ, ಮೊಣಕಾಲೂರಿ ಪ್ರಾರ್ಥನೆಮಾಡುತ್ತಾ,


ಒಮ್ಮೆ ಯೇಸುಸ್ವಾಮಿ ಒಂದು ಸ್ಥಳದಲ್ಲಿ ಪ್ರಾರ್ಥನೆಮಾಡುತ್ತಾ ಇದ್ದರು. ಅವರ ಪ್ರಾರ್ಥನೆ ಮುಗಿದ ಮೇಲೆ ಶಿಷ್ಯರಲ್ಲಿ ಒಬ್ಬನು. “ಪ್ರಭುವೇ, ಯೊವಾನ್ನನು ತನ್ನ ಶಿಷ್ಯರಿಗೆ ಪ್ರಾರ್ಥನೆ ಮಾಡುವುದನ್ನು ಕಲಿಸಿದ ಹಾಗೆ ನಮಗೂ ಕಲಿಸಿಕೊಡಿ,” ಎಂದನು. ಅದಕ್ಕೆ ಯೇಸು ಇಂತೆಂದರು, “ನೀವು ಹೀಗೆ ಪ್ರಾರ್ಥನೆಮಾಡಬೇಕು: ತಂದೆಯೇ,


ಬಳಿಕ ಸೊಲೊಮೋನನು ಇಸ್ರಯೇಲರೆಲ್ಲರ ಎದುರಿನಲ್ಲಿ ಸರ್ವೇಶ್ವರನ ಬಲಿಪೀಠದ ಮುಂದೆ ನಿಂತು, ಆಕಾಶದ ಕಡೆಗೆ ಕೈಗಳನ್ನೆತ್ತಿ, ಹೀಗೆ ಪ್ರಾರ್ಥಿಸಿದನು:


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು