1 ಅರಸುಗಳು 8:43 - ಕನ್ನಡ ಸತ್ಯವೇದವು C.L. Bible (BSI)43 ನಿಮ್ಮ ನಿವಾಸವಾಗಿರುವ ಪರಲೋಕದಿಂದ ಅವನ ಪ್ರಾರ್ಥನೆಯನ್ನು ಕೇಳಿ ಅವನು ಬೇಡಿಕೊಂಡದ್ದನ್ನು ಅನುಗ್ರಹಿಸಿರಿ; ಆಗ ಲೋಕದ ಎಲ್ಲಾ ಜನರು ನಿಮ್ಮ ನಾಮಮಹತ್ತನ್ನು ತಿಳಿದು, ನಿಮ್ಮ ಜನರಾದ ಇಸ್ರಯೇಲರಂತೆ ನಿಮ್ಮಲ್ಲಿ ಭಯಭಕ್ತಿಯುಳ್ಳವರಾಗಿ, ನಾನು ನಿಮ್ಮ ಹೆಸರಿಗಾಗಿ ಈ ಆಲಯವನ್ನು ಕಟ್ಟಿಸಿದೆನೆಂದು ತಿಳಿದುಕೊಳ್ಳುವರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201943 ನಿನ್ನ ನಿವಾಸವಾಗಿರುವ ಪರಲೋಕದಿಂದ ಅವನ ಪ್ರಾರ್ಥನೆಯನ್ನು ಕೇಳಿ, ಅವನು ಬೇಡಿಕೊಂಡದ್ದನ್ನು ಅನುಗ್ರಹಿಸು. ಆಗ ಪರರಾಜ್ಯದವರೂ, ಲೋಕದ ಎಲ್ಲಾ ಜನರು ನಿನ್ನ ನಾಮಮಹತ್ತನ್ನು ತಿಳಿದು, ನಿನ್ನ ಜನರಾದ ಇಸ್ರಾಯೇಲರಂತೆ ನಿನ್ನಲ್ಲಿ ಭಯಭಕ್ತಿಯುಳ್ಳವರಾಗಿ, ನಾನು ನಿನ್ನ ಹೆಸರಿಗಾಗಿ ಈ ಆಲಯವನ್ನು ಕಟ್ಟಸಿದ್ದೇನೆಂದು ತಿಳಿದುಕೊಳ್ಳುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)43 ನಿನ್ನ ನಿವಾಸವಾಗಿರುವ ಪರಲೋಕದಿಂದ ಅವನ ಪ್ರಾರ್ಥನೆಯನ್ನು ಕೇಳಿ ಅವನು ಬೇಡಿಕೊಂಡದ್ದನ್ನು ಅನುಗ್ರಹಿಸು; ಆಗ ಲೋಕದ ಎಲ್ಲಾ ಜನರೂ ನಿನ್ನ ನಾಮಮಹತ್ತನ್ನು ತಿಳಿದು ನಿನ್ನ ಜನರಾದ ಇಸ್ರಾಯೇಲ್ಯರಂತೆ ನಿನ್ನಲ್ಲಿ ಭಯಭಕ್ತಿಯುಳ್ಳವರಾಗಿ ನಾನು ನಿನ್ನ ಹೆಸರಿಗಾಗಿ ಈ ಆಲಯವನ್ನು ಕಟ್ಟಿಸಿದ್ದೇನೆಂದು ತಿಳಿದುಕೊಳ್ಳುವರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್43 ನಿನ್ನ ನಿವಾಸವಾದ ಪರಲೋಕದಿಂದಲೇ ಅವರ ಪ್ರಾರ್ಥನೆಗಳನ್ನು ದಯವಿಟ್ಟು ಆಲಿಸು, ಅನ್ಯ ಸ್ಥಳದವರಾದ ಆ ಜನರು ನಿನ್ನಲ್ಲಿ ಬೇಡುವುದನ್ನೆಲ್ಲ ದಯವಿಟ್ಟು ಈಡೇರಿಸು. ಆಗ, ಇಸ್ರೇಲಿನ ಜನರಂತೆ ಭೂಲೋಕದವರೆಲ್ಲರಿಗೂ ನಿನ್ನ ಹೆಸರು ಗೊತ್ತಾಗುವುದು ಮತ್ತು ಅವರು ನಿನಗೆ ಭಯಪಡುವರು. ಈ ಆಲಯವನ್ನು ನಿನ್ನ ಗೌರವಕ್ಕಾಗಿ ನಾನು ಕಟ್ಟಿಸಿದೆನೆಂಬುದು ಆಗ ಎಲ್ಲಾ ಕಡೆಯ ಜನರಿಗೂ ತಿಳಿಯುವುದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ43 ನೀವು ವಾಸಮಾಡುವ ಪರಲೋಕದಿಂದ ಕೇಳಿ, ಪರದೇಶಿಯು ಕೇಳಿದ್ದೆಲ್ಲವನ್ನು ನೆರವೇರಿಸಿರಿ. ಆಗ ಭೂಲೋಕದ ಎಲ್ಲಾ ಜನರೂ ನಿಮ್ಮ ನಾಮವನ್ನು ತಿಳಿದು, ನಿಮ್ಮ ಜನರಾದ ಇಸ್ರಾಯೇಲರಂತೆ ನಿಮಗೆ ಭಯಭಕ್ತಿಯುಳ್ಳವರಾಗಿ, ನಾನು ಕಟ್ಟಿಸಿದ ಈ ಆಲಯವು ನಿಮ್ಮ ಹೆಸರಿನಿಂದ ಕರೆಯಲಾಗಿದೆ ಎಂದು ತಿಳಿದುಕೊಳ್ಳುವರು. ಅಧ್ಯಾಯವನ್ನು ನೋಡಿ |