Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 8:30 - ಕನ್ನಡ ಸತ್ಯವೇದವು C.L. Bible (BSI)

30 ನಿಮ್ಮ ದಾಸನಾದ ನಾನಾಗಲಿ, ನಿಮ್ಮ ಪ್ರಜೆಗಳಾದ ಇಸ್ರಯೇಲರಾಗಲಿ, ಈ ಸ್ಥಳದ ಕಡೆಗೆ ತಿರುಗಿಕೊಂಡು ನಿಮ್ಮನ್ನು ಪ್ರಾರ್ಥಿಸಿದರೆ ನಿಮ್ಮ ನಿವಾಸವಾಗಿರುವ ಪರಲೋಕದಿಂದ ನಮ್ಮ ಬಿನ್ನಹವನ್ನು ಕೇಳಿ, ಕ್ಷಮೆಯನ್ನು ಅನುಗ್ರಹಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ನಿನ್ನ ಸೇವಕನಾದ ನಾನಾಗಲಿ ನಿನ್ನ ಪ್ರಜೆಗಳಾದ ಇಸ್ರಾಯೇಲರಾಗಲಿ ಈ ಸ್ಥಳದ ಕಡೆಗೆ ತಿರುಗಿಕೊಂಡು ನಿನ್ನನ್ನು ಪ್ರಾರ್ಥಿಸುವುದಾದರೆ, ನಿನ್ನ ನಿವಾಸವಾಗಿರುವ ಪರಲೋಕದಿಂದ ನಮ್ಮ ಬಿನ್ನಹವನ್ನು ಕೇಳಿ, ಕ್ಷಮೆಯನ್ನು ಅನುಗ್ರಹಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ನಿನ್ನ ಸೇವಕನಾದ ನಾನಾಗಲಿ ನಿನ್ನ ಪ್ರಜೆಗಳಾದ ಇಸ್ರಾಯೇಲ್ಯರಾಗಲಿ ಈ ಸ್ಥಳದ ಕಡೆಗೆ ತಿರುಗಿಕೊಂಡು ನಿನ್ನನ್ನು ಪ್ರಾರ್ಥಿಸುವದಾದರೆ ನಿನ್ನ ನಿವಾಸವಾಗಿರುವ ಪರಲೋಕದಿಂದ ನಮ್ಮ ಬಿನ್ನಹವನ್ನು ಕೇಳಿ ಕ್ಷಮೆಯನ್ನು ಅನುಗ್ರಹಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 ಯೆಹೋವನೇ, ನಾನು ಮತ್ತು ಇಸ್ರೇಲಿನ ಜನರೆಲ್ಲರೂ ಈ ಸ್ಥಳದ ಕಡೆಗೆ ತಿರುಗಿ, ನಿನ್ನಲ್ಲಿ ಪ್ರಾರ್ಥಿಸುತ್ತೇವೆ. ದಯವಿಟ್ಟು ಆ ಪ್ರಾರ್ಥನೆಗಳನ್ನು ಲಾಲಿಸು. ನೀನು ಪರಲೋಕದಲ್ಲಿ ವಾಸಿಸುತ್ತಿರುವಿಯೆಂದು ನಮಗೆ ಗೊತ್ತಿದೆ. ನೀನು ನಮ್ಮ ಪ್ರಾರ್ಥನೆಗಳನ್ನು ಅಲ್ಲಿಯೇ ಕೇಳಿ, ನಮಗೆ ಕ್ಷಮೆಯನ್ನು ಅನುಗ್ರಹಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ನಿಮ್ಮ ಜನರಾದ ಇಸ್ರಾಯೇಲರ ಮತ್ತು ನಿಮ್ಮ ಸೇವಕನ ವಿಜ್ಞಾಪನೆಯನ್ನೂ ಕೇಳಿರಿ. ಅವರು ಈ ಸ್ಥಳದ ಕಡೆಗೆ ಪ್ರಾರ್ಥಿಸುವಾಗ, ನೀವು ವಾಸಮಾಡುವ ಸ್ಥಳವಾದ ಪರಲೋಕದಿಂದ ಕೇಳಿ, ಕ್ಷಮೆಯನ್ನು ದಯಪಾಲಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 8:30
26 ತಿಳಿವುಗಳ ಹೋಲಿಕೆ  

ಮನುಷ್ಯರ ಅಂತರಂಗಗಳನ್ನು ಬಲ್ಲಂಥ ನೀವು, ನಿಮ್ಮ ನಿವಾಸವಾಗಿರುವ ಪರಲೋಕದಿಂದ ಆಲಿಸಿರಿ; ಅವರಿಗೆ ಪಾಪಪರಿಹಾರವನ್ನು ಅನುಗ್ರಹಿಸಿರಿ; ನೀವೊಬ್ಬರೇ ಎಲ್ಲಾ ಮಾನವರ ಹೃದಯಗಳನ್ನು ಬಲ್ಲವನಾಗಿರುವುದರಿಂದ ಪ್ರತಿಯೊಬ್ಬನಿಗೂ ಅವನವನು ಹಿಡಿಯುವ ಮಾರ್ಗಕ್ಕೆ ತಕ್ಕ ಹಾಗೆ ಫಲವನ್ನು ಕೊಡಿ.


ಪರಲೋಕದಲ್ಲಿರುವ ನೀವು ಆಲಿಸಿ ನಿಮ್ಮ ಭಕ್ತರೂ ಪ್ರಜೆಗಳೂ ಆದ ಇಸ್ರಯೇಲರ ಪಾಪಗಳನ್ನು ಕ್ಷಮಿಸಿರಿ; ಅವರು ನಡೆಯಬೇಕಾದ ಮಾರ್ಗವನ್ನು ತೋರಿಸಿರಿ; ನಿಮ್ಮ ಪ್ರಜೆಗೆ ಸ್ವಂತ ಸೊತ್ತಾಗಿ ಕೊಟ್ಟ ನಾಡಿಗೆ ಮಳೆಯನ್ನು ಅನುಗ್ರಹಿಸಿರಿ.


ಪರಲೋಕದಲ್ಲಿರುವ ನೀವು ಆಲಿಸಿ, ಅವರ ಪಾಪಗಳನ್ನು ಕ್ಷಮಿಸಿ, ಅವರ ಪಿತೃಗಳಿಗೆ ನೀವು ಕೊಟ್ಟ ಈ ನಾಡಿಗೆ ಅವರನ್ನು ಮರಳಿಬರಮಾಡಿ.


ಸ್ವಾಮೀ, ಕೇಳಿ; ಸ್ವಾಮೀ, ಕ್ಷಮಿಸಿ; ಸ್ವಾಮೀ, ಆಲಿಸಿ ಕಾರ್ಯವನ್ನು ಸಾಧಿಸಿ. ತಡಮಾಡಬೇಡಿ. ನನ್ನ ದೇವರೇ, ನಿಮ್ಮ ಜನತೆ ಹಾಗು ನಿಮ್ಮ ನಗರ ನಿಮ್ಮ ಹೆಸರಿನವುಗಳು. ಆದಕಾರಣ, ನಿಮ್ಮ ಹೆಸರನ್ನು ಕಾಪಾಡಿಕೊಳ್ಳಿ.”


“ಪರಮ ಪವಿತ್ರನ, ಶಾಶ್ವತ ಲೋಕದ ನಿತ್ಯನಿವಾಸಿಯಾದ ಮಹೋನ್ನತನ ಮಾತಿದು : ಉನ್ನತವಾದ ಪವಿತ್ರಾಲಯದಲ್ಲಿ ವಾಸಿಸುವವನು ನಾನು; ಆದರೂ ಪಶ್ಚಾತ್ತಾಪಪಡುವ ದೀನಮನದೊಂದಿಗೆ ನಾನಿದ್ದೇನೆ. ದೀನನ ಆತ್ಮವನ್ನು ಹಾಗು ಪಶ್ಚಾತ್ತಾಪಪಡುವ ಮನಸ್ಸನ್ನು ಉಜ್ಜೀವಗೊಳಿಸುವವನಾಗಿದ್ದೇನೆ.


ದುಡುಕಿ ಮಾತನಾಡಬೇಡ. ದೇವರ ಸನ್ನಿಧಿಯಲ್ಲಿ ಮಾತುಕೊಡಲು ಆತುರಪಡಬೇಡ. ದೇವರು ಇರುವುದು ಪರಲೋಕದಲ್ಲಿ, ನೀನಿರುವುದಾದರೋ ಭೂಲೋಕದಲ್ಲಿ. ಆದುದರಿಂದ ನಿನ್ನ ಮಾತುಗಳಿಗೆ ಮಿತಿಯಿರಲಿ.


ನಮಗೆ ತಪ್ಪುಮಾಡಿದವರನ್ನು ನಾವು ಕ್ಷಮಿಸುವ ಪ್ರಕಾರ ನಾವು ಮಾಡಿದ ತಪ್ಪುಗಳನ್ನು ಕ್ಷಮಿಸಿ.


ಆದುದರಿಂದ ಹೀಗೆಂದು ಪ್ರಾರ್ಥನೆಮಾಡಿ:


ಪರಲೋಕದಲಿ ಆಸೀನನಾಗಿರುವ ಪ್ರಭುವೆ I ನನ್ನ ಕಣ್ಣುಗಳನು ನಿನ್ನ ಕಡೆಗೆ ಎತ್ತಿರುವೆ II


ಮನ್ನಿಸಿದೆ ನಿನ್ನ ಪ್ರಜೆಯ ದ್ರೋಹವನು I ಕ್ಷಮಿಸಿದೆ ನೀ ಅವರ ಪಾಪಗಳೆಲ್ಲವನು II


ನಿಮ್ಮ ದಾಸನಾದ ನಾನಾಗಲಿ, ನಿಮ್ಮ ಪ್ರಜೆಗಳಾದ ಇಸ್ರಯೇಲರಾಗಲಿ, ಈ ಸ್ಥಳದ ಕಡೆಗೆ ತಿರುಗಿಕೊಂಡು ನಿಮ್ಮನ್ನು ಪ್ರಾರ್ಥಿಸುವಾಗ ನಿಮ್ಮ ನಿವಾಸವಾಗಿರುವ ಪರಲೋಕದಿಂದ ನಮ್ಮ ಬಿನ್ನಹಗಳನ್ನು ಕೇಳಿ, ಕ್ಷಮೆಯನ್ನು ಅನುಗ್ರಹಿಸಿರಿ.


ನೀವು ನಿಮ್ಮ ನಿವಾಸವಾಗಿರುವ ಪರಲೋಕದಿಂದ ಅವರ ವಿಜ್ಞಾಪನೆಯನ್ನೂ ಪ್ರಾರ್ಥನೆಯನ್ನೂ ಆಲಿಸಿರಿ; ಅವರಿಗೆ ದಯೆಯನ್ನು ತೋರಿಸಿರಿ.


ನಿಮ್ಮ ನಿವಾಸವಾಗಿರುವ ಪರಲೋಕದಿಂದ ಅವನ ಪ್ರಾರ್ಥನೆಯನ್ನು ಕೇಳಿ ಅವನು ಬೇಡಿಕೊಂಡದ್ದನ್ನು ಅನುಗ್ರಹಿಸಿರಿ; ಆಗ ಲೋಕದ ಎಲ್ಲಾ ಜನರು ನಿಮ್ಮ ನಾಮಮಹತ್ತನ್ನು ತಿಳಿದು, ನಿಮ್ಮ ಜನರಾದ ಇಸ್ರಯೇಲರಂತೆ ನಿಮ್ಮಲ್ಲಿ ಭಯಭಕ್ತಿಯುಳ್ಳವರಾಗಿ, ನಾನು ನಿಮ್ಮ ಹೆಸರಿಗಾಗಿ ಈ ಆಲಯವನ್ನು ಕಟ್ಟಿಸಿದೆನೆಂದು ತಿಳಿದುಕೊಳ್ಳುವರು.


ನನ್ನವರೆಂದು ಹೆಸರುಗೊಂಡ ನನ್ನ ಪ್ರಜೆಗಳು ತಮ್ಮನ್ನೇ ತಗ್ಗಿಸಿಕೊಂಡು, ನನ್ನ‍ನ್ನು ಪ್ರಾರ್ಥಿಸಿ, ನನ್ನ ದರ್ಶನವನ್ನು ಬಯಸುವುದಾದರೆ ನಾನು ಪರಲೋಕದಿಂದ ಆಲಿಸಿ, ಅವರ ಪಾಪಗಳನ್ನು ಕ್ಷಮಿಸಿ, ಅವರ ನಾಡಿಗೆ ಆರೋಗ್ಯಭಾಗ್ಯವನ್ನು ದಯಪಾಲಿಸುವೆನು.


ಪ್ರತಿಯಾಗಿ, ನಮ್ಮ ಪಾಪಗಳನ್ನು ಒಪ್ಪಿಕೊಂಡರೆ, ಆಗ ನಂಬಿಕಸ್ಥರೂ ನೀತಿವಂತರೂ ಆದ ದೇವರು ನಮ್ಮ ಪಾಪಗಳನ್ನು ಕ್ಷಮಿಸಿ ಎಲ್ಲಾ ಅನೀತಿ - ಅಧರ್ಮಗಳಿಂದ ನಮ್ಮನ್ನು ಶುದ್ಧೀಕರಿಸುತ್ತಾರೆ.


ಸರ್ವೇಶ್ವರ ಮೋಶೆಯ ಎದುರಿನಲ್ಲಿ ಹಾದುಹೋಗುತ್ತಾ ಹೀಗೆಂದು ಪ್ರಕಟಿಸಿದರು: ಸರ್ವೇಶ್ವರನು; ಸರ್ವೇಶ್ವರನು ಕರುಣಾಮಯನು, ದಯಾಳು ದೇವರು. ತಟ್ಟನೆ ಸಿಟ್ಟುಗೊಳ್ಳದವನು, ಪ್ರೀತಿಪಾತ್ರನು, ನಂಬಿಗಸ್ತನು,


ಸಾವಿರಾರು ತಲೆಗಳವರೆಗೂ ಅಚಲಪ್ರೀತಿ ತೋರುವವನು, ದೋಷಾಪರಾಧಗಳನ್ನೂ ಪಾಪಗಳನ್ನೂ ಕ್ಷಮಿಸುವವನು; ಆದರೂ ತಪ್ಪಿತಸ್ಥರನ್ನು ಶಿಕ್ಷಿಸದೆ ಬಿಡದವನು. ಹೆತ್ತವರ ದೋಷಪರಿಣಾಮಗಳನ್ನು ಮಕ್ಕಳ ಮೇಲೆ ಮೂರುನಾಲ್ಕು ತಲೆಗಳವರೆಗೆ ಬರಮಾಡುವವರು.


ಶಾಸನಕ್ಕೆ ರುಜುವಾದ ವಿಷಯ ದಾನಿಯೇಲನಿಗೆ ತಿಳಿಯಿತು. ಆತ ತನ್ನ ಮನೆಗೆ ಹೊರಟುಹೋದನು. ಅಲ್ಲಿ ತನ್ನ ಮಹಡಿಯ ಕೊಠಡಿಯಲ್ಲಿನ ಕಿಟಕಿಗಳು ಜೆರುಸಲೇಮಿನ ಕಡೆಗೆ ತೆರೆದಿದ್ದವು. ವಾಡಿಕೆಯ ಪ್ರಕಾರ ದಿನಕ್ಕೆ ಮೂರಾವರ್ತಿ ಅಲ್ಲಿ ತನ್ನ ದೇವರಿಗೆ ಮೊಣಕಾಲೂರಿ ಪ್ರಾರ್ಥಿಸಿ ಸ್ತೋತ್ರ ಸಲ್ಲಿಸುತ್ತಿದ್ದನು.


ನಮ್ಮ ದೇವರಾದ ಸರ್ವೇಶ್ವರ, ನಮ್ಮನ್ನು ಕರುಣಿಸುವವರೂ ಕ್ಷಮಿಸುವವರೂ ಆಗಿದ್ದಾರೆ. ಆದರೆ ನಾವು ಅವರಿಗೆ ವಿರುದ್ಧ ತಿರುಗಿಬಿದ್ದೆವು.


“ಸರ್ವೇಶ್ವರಾ, ನಮ್ಮ ಪಿತೃಗಳ ದೇವರೇ, ಪರಲೋಕದಲ್ಲಿ ದೇವರಾಗಿ ಇರುವವರು ನೀವಲ್ಲವೇ? ನೀವು ಜನಾಂಗಗಳ ಎಲ್ಲ ರಾಜ್ಯಗಳನ್ನೂ ಆಳುತ್ತಿದ್ದೀರಿ. ನಿಮ್ಮ ಹಸ್ತದಲ್ಲಿ ಬಲಪರಾಕ್ರಮಗಳಿವೆ; ನಿಮ್ಮೆದುರಿನಲ್ಲಿ ಯಾರೂ ನಿಲ್ಲಲಾರರು.


ನಿನ್ನ ಪರಿಶುದ್ಧಾಲಯದತ್ತ ಕೈಯೆತ್ತಿ ಮುಗಿವೆನು I ಕರುಣೆಯಿಂದಾಲಿಸು ಪ್ರಭು, ನನ್ನಾರ್ತ ಮನವಿಯನು II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು