1 ಅರಸುಗಳು 3:2 - ಕನ್ನಡ ಸತ್ಯವೇದವು C.L. Bible (BSI)2 ಅಲ್ಲಿಯವರೆಗೂ ಸರ್ವೇಶ್ವರಸ್ವಾಮಿಯ ನಾಮಕ್ಕೋಸ್ಕರ ಆಲಯವೇ ಇರಲಿಲ್ಲ. ಆದುದರಿಂದ ಜನರು ಪೂಜಾಸ್ಥಳಗಳಲ್ಲಿ ಬಲಿಯರ್ಪಣೆ ಮಾಡುತ್ತಿದ್ದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 ಆ ವರೆಗೂ ಯೆಹೋವನ ನಾಮಕ್ಕೋಸ್ಕರ ಆಲಯವಿರಲಿಲ್ಲವಾದುದರಿಂದ ಜನರು ಪೂಜಾಸ್ಥಳಗಳಲ್ಲಿ ಯಜ್ಞವನ್ನು ಆರ್ಪಿಸುತ್ತಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ಆವರೆಗೂ ಯೆಹೋವನಾಮಕ್ಕೋಸ್ಕರ ಆಲಯವಿರಲಿಲ್ಲವಾದದರಿಂದ ಜನರು ಪೂಜಾಸ್ಥಳಗಳಲ್ಲಿ ಯಜ್ಞಮಾಡುತ್ತಿದ್ದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್2 ದೇವಾಲಯದ ನಿರ್ಮಾಣವು ಇನ್ನೂ ಪೂರ್ಣಗೊಂಡಿರಲಿಲ್ಲ. ಆದ್ದರಿಂದ ಜನರು ಅದುವರೆವಿಗೂ ಎತ್ತರವಾದ ಸ್ಥಳಗಳಲ್ಲಿ ಯಜ್ಞವೇದಿಕೆಯ ಮೇಲೆ ಪಶುಗಳ ಯಜ್ಞಗಳನ್ನು ಸಮರ್ಪಿಸುತ್ತಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ2 ಆ ಕಾಲದವರೆಗೂ ಯೆಹೋವ ದೇವರ ಹೆಸರಿಗಾಗಿ ಆಲಯ ಇರಲಿಲ್ಲ. ಆದುದರಿಂದ, ಜನರು ಎತ್ತರದ ಸ್ಥಳಗಳಲ್ಲಿ ಬಲಿ ಅರ್ಪಿಸುತ್ತಿದ್ದರು. ಅಧ್ಯಾಯವನ್ನು ನೋಡಿ |
ಯೆಹೋವಾಷನು ಯಾಜಕರಿಗೆ, “ಸರ್ವೇಶ್ವರನ ಆಲಯಕ್ಕೆ ಸೇರುವ ಎಲ್ಲಾ ಪರಿಶುದ್ಧ ದ್ರವ್ಯವನ್ನು, ಅಂದರೆ ಜನಗಣತಿಯಲ್ಲಿ ಎಣಿಕೆಯಾದ ಪ್ರತಿಯೊಬ್ಬನು ತಂದುಕೊಡುವ ಹಣ, ದೇವರಿಗೆ ಪ್ರತಿಷ್ಟಿತನಾದ ವ್ಯಕ್ತಿ ತನ್ನ ಪ್ರಾಣವನನ್ನು ಬಿಡಿಸಿಕೊಳ್ಳುವುದಕ್ಕಾಗಿ ತೆರುವ ಹಣ, ಜನರು ಸರ್ವೇಶ್ವರನ ಆಲಯಕ್ಕೆ ಸ್ವೇಚ್ಛೆಯಿಂದ ತಂದು ಒಪ್ಪಿಸುವ ಹಣ, ಇವುಗಳನ್ನು ತೆಗೆದುಕೊಂಡು ದೇವಾಲಯವು ಎಲ್ಲೆಲ್ಲಿ ಶಿಥಿಲವಾಗಿ ಇರುತ್ತದೆ ಎಂದು ನೋಡಿ ಅದನ್ನು ಸರಿಮಾಡುವುದಕ್ಕಾಗಿ ವಿನಿಯೋಗಿಸಿರಿ.