Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 22:22 - ಕನ್ನಡ ಸತ್ಯವೇದವು C.L. Bible (BSI)

22 ‘ಹೇಗೆ ಪ್ರೇರಿಸುವೆ?’ ಎಂದು ಸರ್ವೇಶ್ವರ ಕೇಳಿದರು. ಅದು, ‘ನಾನು ಅಸತ್ಯವಾಡುವ ಆತ್ಮವಾಗಿ ಅವನ ಎಲ್ಲ ಪ್ರವಾದಿಗಳಲ್ಲಿ ಸೇರುವೆನು,’ ಎಂದು ಉತ್ತರಕೊಟ್ಟಿತು. ಆಗ ಸರ್ವೇಶ್ವರ, ‘ಹೋಗಿ ಅದರ ಅಂತೆಯೇ ಮಾಡು; ಅವನನ್ನು ಪ್ರೇರಿಸಿ ಸಫಲನಾಗುವೆ,’ ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ‘ಹೇಗೆ ಪ್ರೇರೇಪಿಸುವಿ?’ ಎಂದು ಯೆಹೋವನು ಕೇಳಲು ಅದು, ‘ನಾನು ಅಸತ್ಯವನ್ನಾಡುವ ಆತ್ಮವಾಗಿ ಅವನ ಎಲ್ಲಾ ಪ್ರವಾದಿಗಳಲ್ಲಿ ಸೇರುವೆನು’ ಎಂದು ಉತ್ತರಕೊಟ್ಟಿತು. ಆಗ ಆತನು ಅದಕ್ಕೆ, ‘ಹೋಗಿ ಅದರಂತೆ ಮಾಡು ಅವನನ್ನು ಪ್ರೇರೇಪಿಸಿ ಸಫಲವಾಗುವಿ’ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಹೇಗೆ ಪ್ರೇರಿಸುವಿ ಎಂದು ಯೆಹೋವನು ಕೇಳಲು ಅದು - ನಾನು ಅಸತ್ಯವನ್ನಾಡುವ ಆತ್ಮವಾಗಿ ಅವನ ಎಲ್ಲಾ ಪ್ರವಾದಿಗಳಲ್ಲಿ ಸೇರುವೆನು ಎಂದು ಉತ್ತರಕೊಟ್ಟಿತು. ಆಗ ಆತನು ಅದಕ್ಕೆ - ಹೋಗಿ ಅದರಂತೆ ಮಾಡು; ಅವನನ್ನು ಪ್ರೇರಿಸಿ ಸಫಲನಾಗುವಿ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಯೆಹೋವನು, ‘ರಾಜನಾದ ಅಹಾಬನನ್ನು ನೀನು ಹೇಗೆ ಪ್ರೇರೇಪಿಸುವೆ?’ ಎಂದು ಉತ್ತರಿಸಿದಾಗ, ದೂತನು, ‘ಅಹಾಬನ ಎಲ್ಲಾ ಪ್ರವಾದಿಗಳು ಗಲಿಬಿಲಿಗೊಳ್ಳುವಂತೆ ಮಾಡುತ್ತೇನೆ. ರಾಜನಾದ ಅಹಾಬನಿಗೆ ಪ್ರವಾದಿಗಳು ಸುಳ್ಳುಹೇಳುವಂತೆ ನಾನು ಮಾಡುತ್ತೇನೆ. ಪ್ರವಾದಿಗಳ ಸಂದೇಶವೆಲ್ಲವೂ ಸುಳ್ಳಾಗಿರುವುದು’ ಎಂದನು. ಆದ್ದರಿಂದ ಯೆಹೋವನು, ‘ಸರಿ, ಹೋಗಿ ರಾಜನಾದ ಅಹಾಬನನ್ನು ಪ್ರೇರೇಪಿಸು. ನೀನು ಸಫಲನಾಗುವೆ’” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 “ಆಗ ಯೆಹೋವ ದೇವರು, ‘ಅದು ಹೇಗೆ?’ ಎಂದರು. “ಅದಕ್ಕದು, ‘ನಾನು ಹೊರಟು ಅವನ ಎಲ್ಲಾ ಪ್ರವಾದಿಗಳ ಬಾಯಲ್ಲಿ ಸುಳ್ಳನ್ನಾಡುವ ಆತ್ಮವಾಗಿರುವೆನು,’ ಎಂದಿತು. “ಅದಕ್ಕೆ ಅವರು, ‘ನೀನು ಅವನನ್ನು ಮರುಳುಗೊಳಿಸುವೆ ಮತ್ತು ಜಯಿಸುವೆ. ಹೊರಟುಹೋಗಿ ಹಾಗೆ ಮಾಡು,’ ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 22:22
28 ತಿಳಿವುಗಳ ಹೋಲಿಕೆ  

ಸರ್ವೇಶ್ವರಸ್ವಾಮಿ ಅವನಿಗೂ ಶೆಕೆಮಿನ ಹಿರಿಯರಿಗೂ ವೈಮನಸ್ಸು ಹುಟ್ಟುವಂತೆ ದುಷ್ಟ ಆತ್ಮವನ್ನು ಕಳುಹಿಸಿದರು. ಈ ಶೆಕೆಮಿನವರು ಅಬೀಮೆಲೆಕನಿಗೆ ದ್ರೋಹ ಎಸಗಿದರು.


ಒಂದು ದಿನ ಸೌಲನು ಕೈಯಲ್ಲಿ ಈಟಿಯನ್ನು ಹಿಡಿದು ತನ್ನ ಮನೆಯಲ್ಲಿ ಕುಳಿತುಕೊಂಡಿದ್ದನು. ಆಗ ಸರ್ವೇಶ್ವರನಿಂದ ಬಂದ ದುರಾತ್ಮವೊಂದು ಅವನನ್ನು ಆವರಿಸಿತು.


ಸರ್ವೇಶ್ವರನ ಆತ್ಮ ಸೌಲನನ್ನು ಬಿಟ್ಟುಹೋಯಿತು. ಅವರಿಂದ ಬಂದ ದುರಾತ್ಮವೊಂದು ಅವನನ್ನು ಪೀಡಿಸುತ್ತಿತ್ತು.


ಜನರನ್ನು ಮರುಳುಗೊಳಿಸುತ್ತಿದ್ದ ಪಿಶಾಚಿಯನ್ನು ಗಂಧಕದ ಅಗ್ನಿ ಸರೋವರಕ್ಕೆ ಎಸೆಯಲಾಯಿತು. ಆ ಮೃಗವನ್ನೂ ಕಪಟ ಪ್ರವಾದಿಯನ್ನೂ ಮೊದಲೇ ಅದಕ್ಕೆ ಎಸೆಯಲಾಗಿತ್ತು. ಇವರೆಲ್ಲರೂ ಯುಗಯುಗಾಂತರಗಳವರೆಗೆ ಹಗಲಿರುಳೆನ್ನದೆ ಅಲ್ಲಿಯೇ ಬೇನೆಬೇಗುದಿಗಳಿಂದ ನರಳುವರು.


ಮೊದಲನೆಯ ಮೃಗದ ಎದುರಿನಲ್ಲಿ ಪವಾಡಗಳನ್ನೆಸಗುವ ಅನುಮತಿ ಇದ್ದುದರಿಂದ ಅದು ಭೂನಿವಾಸಿಗಳನ್ನು ಮರುಳುಗೊಳಿಸಿತು. ಖಡ್ಗದಿಂದ ಗಾಯಗೊಂಡಿದ್ದರೂ ಸಾಯದೆ ಬದುಕಿದ್ದ ಮೃಗದ ಗೌರವಾರ್ಥ ಒಂದು ವಿಗ್ರಹವನ್ನು ನಿರ್ಮಿಸಬೇಕೆಂದು ಭೂನಿವಾಸಿಗಳಿಗೆ ಅದು ವಿಧಿಸಿತು.


“ಒಬ್ಬ ಪ್ರವಾದಿ ಮರುಳುಗೊಂಡು ದೈವೋಕ್ತಿಯೊಂದನ್ನು ನುಡಿದರೆ, ಆ ಪ್ರವಾದಿಯನ್ನು ಮರುಳುಗೊಳಿಸಿದವನು ಸರ್ವೇಶ್ವರನಾದ ನಾನೇ. ನಾನು ಅವನ ಮೇಲೆ ಕೈಯೆತ್ತಿ ಇಸ್ರಯೇಲರಾದ ನನ್ನ ಜನರಿಂದ ತೆಗೆದುಹಾಕಿ ಅವನನ್ನು ನಿರ್ನಾಮ ಮಾಡುವೆನು.


ಸಾಮರ್ಥ್ಯ ಹಾಗು ವಿಜಯ ಆತನ ಲಕ್ಷಣ ವಂಚಕ ಹಾಗು ವಂಚಿತ ಆತನಿಗೆ ಅಧೀನ.


ಸರ್ವೇಶ್ವರ ತಮ್ಮ ಹತ್ತಿರ ನಿಂತವರನ್ನು, “ಅಹಾಬನು ಹತನಾಗಿ ಬೀಳುವಂತೆ ಅವನನ್ನು ರಾಮೋತ್ ಗಿಲ್ಯಾದಿನ ಯುದ್ಧಕ್ಕೆ ಯಾರು ಪ್ರೇರಿಸುವಿರಿ?” ಎಂದು ಕೇಳಿದಾಗ ಒಬ್ಬನು ಒಂದು ವಿಧವಾಗಿಯೂ ಇನ್ನೊಬ್ಬನು ಇನ್ನೊಂದು ವಿಧವಾಗಿಯೂ ಉತ್ತರಕೊಟ್ಟರು.


ಮಾರನೆಯ ದಿನ ದೇವರಿಂದ ಬಂದ ದುರಾತ್ಮವೊಂದು ಸೌಲನನ್ನು ಆವರಿಸಿತು. ಅವನು ಬುದ್ಧಿಗೆಟ್ಟು ಮನೆಯೊಳಗೇ ಕೂಗಾಡತೊಡಗಿದನು. ಅವನ ಕೈಯಲ್ಲಿ ಒಂದು ಈಟಿ ಇತ್ತು. ವಾಡಿಕೆಯ ಪ್ರಕಾರ ದಾವೀದನು ಕಿನ್ನರಿ ಬಾರಿಸುತ್ತಾ ಇದ್ದನು.


ಆ ಒಂದು ಸಾವಿರ ವರ್ಷಗಳು ಮುಗಿದ ನಂತರ ಸೈತಾನನನ್ನು ಬಂಧನದಿಂದ ಬಿಡುಗಡೆ ಮಾಡಲಾಗುವುದು.


ಆ ಒಂದು ಸಾವಿರ ವರ್ಷಗಳ ಕಾಲದವರೆಗೆ, ಅದು ಜನಾಂಗಗಳನ್ನು ಮರುಳುಗೊಳಿಸದಂತೆ ದೇವದೂತನು ಸೈತಾನನನ್ನು ಪಾತಾಳಕ್ಕೆ ದಬ್ಬಿ, ಬಾಗಿಲು ಮುಚ್ಚಿ, ಅದಕ್ಕೆ ಮುದ್ರೆ ಹಾಕಿದನು. ಆ ಸಾವಿರ ವರ್ಷಗಳ ಕಾಲ ಮುಗಿದ ಮೇಲೆ ಅವನಿಗೆ ಸ್ವಲ್ಪಕಾಲ ಬಿಡುಗಡೆ ದೊರೆಯುವುದು.


ಹೀಗೆ ದೈವಸಂಕಲ್ಪವು ನೆರವೇರಬೇಕೆಂದು ದೇವರೇ ಆ ಜನರನ್ನು ಪ್ರೇರೇಪಿಸುವರು. ಇದೇ ಪ್ರೇರಣೆಯಿಂದಾಗಿ ದೇವರ ವಾಕ್ಯ ನೆರವೇರುವವರೆಗೆ ಅವರು ಒಮ್ಮನಸ್ಸಿನಿಂದ ರಾಜ್ಯಾಧಿಕಾರವನ್ನು ಆ ಮೃಗಕ್ಕೆ ಒಪ್ಪಿಸಿಬಿಡುವರು.


ನಾವಾದರೋ ದೇವರಿಗೆ ಸೇರಿದವರು. ದೇವರನ್ನು ಅರಿತವನು ನಮಗೆ ಕಿವಿಗೊಡುತ್ತಾನೆ. ದೇವರಿಗೆ ಸೇರದವನು ನಮಗೆ ಕಿವಿಗೊಡುವುದಿಲ್ಲ. ಇದರಿಂದಲೇ ಸತ್ಯವನ್ನು ಸಾರುವ ಆತ್ಮ ಯಾವುದು ಮತ್ತು ಅಸತ್ಯವನ್ನು ಸಾರುವ ಆತ್ಮ ಯಾವುದು ಎಂಬುದು ನಮಗೆ ತಿಳಿಯುತ್ತದೆ.


ಮುಂಬರುವ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳಿಗೆ ಬಲಿಬಿದ್ದು, ದುರಾತ್ಮಗಳ ದುರುಪದೇಶಗಳಿಗೆ ಕಿವಿಗೊಟ್ಟು ವಿಶ್ವಾಸಭ್ರಷ್ಟರಾಗುವರೆಂದು ಪವಿತ್ರಾತ್ಮ ಸ್ಪಷ್ಟವಾಗಿ ತಿಳಿಸಿದ್ದಾರೆ.


ಸೈತಾನನೇ ನಿಮಗೆ ತಂದೆ; ಆ ನಿಮ್ಮ ತಂದೆ ಮಾಡಬಯಸುವುದನ್ನು ನೀವು ಮಾಡಬಯಸುತ್ತೀರಿ; ಮೊತ್ತ ಮೊದಲಿನಿಂದಲೂ ಅವನು ಕೊಲೆಪಾತಕ. ಸತ್ಯವೆಂಬುದೇ ಅವನಲ್ಲಿ ಇಲ್ಲದ ಕಾರಣ ಅವನು ಸತ್ಯಪರನಲ್ಲ. ಸುಳ್ಳಾಡುವಾಗ ಅವನು ತನಗೆ ಸಹಜವಾದುದನ್ನೇ ಆಡುತ್ತಾನೆ. ಅವನು ಸುಳ್ಳುಗಾರ. ಸುಳ್ಳಿನ ಮೂಲಪುರುಷನೇ ಅವನು.


ಅವನಿಗೆ ಪ್ರಿಯ ಶಪಿಸುವುದೆಂದರೆ, ಎರಗಲಿದೀಗ ಅವನ ಮೇಲೇ I ಆಶೀರ್ವದಿಸುವುದು ಅವನಿಗಪ್ರಿಯ, ಇರಲಿ ಅವನಿಗದು ದೂರದಲೇ II


ಕಡೆಗೆ ಒಂದು ಆತ್ಮವು ಸರ್ವೇಶ್ವರನ ಮುಂದೆ ಬಂದು ನಿಂತು, ‘ನಾನು ಹೋಗಿ ಅವನನ್ನು ಪ್ರೇರಿಸುವೆನು,’ ಎಂದಿತು.


ಎಲೀಷನು ಇಸ್ರಯೇಲರ ಅರಸನಿಗೆ, “ನನಗೂ ನಿನಗೂ ಏನು ಸಂಬಂಧ? ನಿನ್ನ ತಂದೆತಾಯಿಗಳ ಪ್ರವಾದಿಗಳ ಬಳಿಗೆ ಹೋಗು,” ಎಂದು ಹೇಳಿದನು. ಅದಕ್ಕೆ ಇಸ್ರಯೇಲರ ಅರಸನು, “ಹಾಗೆನ್ನಬೇಡಿ; ಸರ್ವೇಶ್ವರ ಈ ಮೂರು ಮಂದಿ ಅರಸರಾದ ನಮ್ಮನ್ನು ಮೋವಾಬ್ಯರ ಕೈಗೆ ಒಪ್ಪಿಸುವುದಕ್ಕಾಗಿ ಇಲ್ಲಿಗೆ ಬರಮಾಡಿದ್ದಾರೆ ಅಲ್ಲವೇ?’ ಎಂದನು.


ಅಂದು ನಾಡಿನಲ್ಲಿ ವಿಗ್ರಹಗಳು ಹೆಸರಿಲ್ಲದಂತೆ ಮಾಡುವೆನು; ಅಷ್ಟೇ ಅಲ್ಲ, ಅವುಗಳನ್ನು ಯಾರೂ ನೆನಸಿಕೊಳ್ಳದಂತೆ ಮಾಡುವೆನು; ಅಲ್ಲದೆ ಪ್ರವಾದಿಯೆನಿಸಿಕೊಳ್ಳುವವರನ್ನೂ ಅಶುದ್ಧ ಆತ್ಮವನ್ನೂ ನಾಡಿನಿಂದ ತೊಲಗಿಸಿಬಿಡುವೆನು.


ಆಗ ಆ ಮುದುಕನು, “ನಾನೂ ನಿನ್ನಂತೆ ಪ್ರವಾದಿಯಾಗಿದ್ದೇನೆ; ಒಬ್ಬ ದೇವದೂತನು ನನಗೆ ಕಾಣಿಸಿಕೊಂಡು ನಿನ್ನನ್ನು ಕರೆದುಕೊಂಡು ಬರಬೇಕೆಂದು ಸರ್ವೆಶ್ವರನ ಹೆಸರಿನಲ್ಲಿ ಆಜ್ಞಾಪಿಸಿದ್ದಾನೆ,” ಎಂದು ಹೇಳಿದನು. ಆದರೆ ಈ ಮಾತು ಸುಳ್ಳಾಗಿತ್ತು.


ಸರ್ವೇಶ್ವರ ಸೈತಾನನಿಗೆ, “ನೋಡು, ಆತನ ಆಸ್ತಿಪಾಸ್ತಿಯೆಲ್ಲ ನಿನ್ನ ಕೈವಶಕ್ಕೆ ಬಿಟ್ಟಿದ್ದೇನೆ. ಆತನ ಮೈಮೇಲೆ ಮಾತ್ರ ಕೈಹಾಕಬೇಡ,” ಎಂದು ಅಪ್ಪಣೆಕೊಟ್ಟರು. ಕೂಡಲೆ ಸೈತಾನನು ಸರ್ವೇಶ್ವರರ ಸನ್ನಿಧಾನದಿಂದ ಹೊರಟುಹೋದನು.


ಸರ್ವೇಶ್ವರ ಅವರ ಮನಸ್ಸಿನಲ್ಲಿ ಚಂಚಲಭಾವವನ್ನು ಮೂಡಿಸಿದ್ದಾರೆ. ಅಮಲೇರಿದವನು ಕಕ್ಕುತ್ತಾ ಅತ್ತಿತ್ತ ಓಲಾಡುವ ಪ್ರಕಾರ ಈಜಿಪ್ಟಿನವರು ತಮ್ಮ ಒಂದೊಂದು ಕೆಲಸಕಾರ್ಯದಲ್ಲೂ ಅಸ್ಥಿರರಾಗಿರುವಂತೆ ಮಾಡಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು