Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 20:6 - ಕನ್ನಡ ಸತ್ಯವೇದವು C.L. Bible (BSI)

6 ನಾಳೆ ಇಷ್ಟುಹೊತ್ತಿಗೆ ನನ್ನ ಆಳುಗಳನ್ನು ಕಳುಹಿಸುವೆನು; ಅವರು ನಿನ್ನ ಮತ್ತು ನಿನ್ನ ಅಧಿಕಾರಿಗಳ ಮನೆಗಳನ್ನು ಶೋಧಿಸಿ, ನಿಮಗೆ ಅಮೂಲ್ಯವಾದುವುಗಳನ್ನೆಲ್ಲಾ ತೆಗೆದುಕೊಳ್ಳುವರು ಎಂಬುದಾಗಿ ಬೆನ್ಹದದನು ತಿಳಿಸುತ್ತಾರೆ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ನಾಳೆ ಇಷ್ಟು ಹೊತ್ತಿಗೆ ನನ್ನ ಆಳುಗಳನ್ನು ಕಳುಹಿಸುವೆನು, ಅವರು ನಿನ್ನ ಮತ್ತು ನಿನ್ನ ಸೇವಕರ ಮನೆಗಳನ್ನು ಶೋಧಿಸಿ ನಿಮಗೆ ಇಷ್ಟವಾಗಿರುವವುಗಳನ್ನೆಲ್ಲಾ ತೆಗೆದುಕೊಳ್ಳುವರು ಎಂಬುದಾಗಿ ಬೆನ್ಹದದನು ಅನ್ನುತ್ತಾನೆ” ಎಂದು ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ನಾಳೆ ಇಷ್ಟುಹೊತ್ತಿಗೆ ನನ್ನ ಆಳುಗಳನ್ನು ಕಳುಹಿಸುವೆನು; ಅವರು ನಿನ್ನ ಮತ್ತು ನಿನ್ನ ಸೇವಕರ ಮನೆಗಳನ್ನು ಶೋಧಿಸಿ ನಿಮಗೆ ಇಷ್ಟವಾಗಿರುವವುಗಳನ್ನೆಲ್ಲಾ ತೆಗೆದುಕೊಳ್ಳುವರು ಎಂಬದಾಗಿ ಬೆನ್ಹದದನು ಅನ್ನುತ್ತಾನೆ ಎಂದು ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ನಾಳೆ ಇದೇ ಸಮಯದಲ್ಲಿ, ನಿನ್ನ ಅರಮನೆ ಮತ್ತು ನಿನ್ನ ಅಧೀನದಲ್ಲಿರುವ ಅಧಿಕಾರಿಗಳ ಮನೆಗಳನ್ನು ಶೋಧಿಸಲು ನಾನು ನನ್ನ ಜನರನ್ನು ಕಳುಹಿಸುತ್ತೇನೆ. ನನ್ನ ಜನರು ತಮಗೆ ಇಷ್ಟವಾದುದನ್ನು ತೆಗೆದುಕೊಳ್ಳುತ್ತಾರೆ’” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ನಿಶ್ಚಯವಾಗಿ ನಾಳೆ ಇಷ್ಟು ಹೊತ್ತಿಗೆ ನಾನು ನನ್ನ ಸೇವಕರನ್ನು ನಿನ್ನ ಬಳಿಗೆ ಕಳುಹಿಸುವೆನು. ಅವರು ನಿನ್ನ ಅರಮನೆಯನ್ನೂ ನಿನ್ನ ಸೇವಕರ ಮನೆಗಳನ್ನೂ ಶೋಧಿಸಿ, ನಿಮಗೆ ಅಮೂಲ್ಯವಾದುವುಗಳನ್ನೆಲ್ಲಾ ಅವರು ತೆಗೆದುಕೊಂಡು ಹೋಗುವರು,’ ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 20:6
13 ತಿಳಿವುಗಳ ಹೋಲಿಕೆ  

ನನ್ನ ಬೆಳ್ಳಿಬಂಗಾರಗಳನ್ನು ಅತ್ಯಮೂಲ್ಯವಾದ ಬೊಕ್ಕಸಗಳನ್ನು ದೋಚಿಕೊಂಡು ನಿಮ್ಮ ದೇವಾಲಯಗಳಿಗೆ ಕೊಂಡೊಯ್ದಿದ್ದೀರಿ.


ಎಫ್ರಯಿಮ್ ಕಳೆಗಳ ನಡುವೆ ಸೊಂಪಾಗಿ ಬೆಳೆದ ಜೊಂಡಿನಂತಿದೆ. ಆದರೆ ಸರ್ವೇಶ್ವರ ಮರುಭೂಮಿಯಿಂದ ಮೂಡಣಗಾಳಿ ಬೀಸುವಂತೆ ಮಾಡುವರು. ಅದರ ಬುಗ್ಗೆ ಬತ್ತಿಹೋಗುವುದು. ಅದರ ಒರತೆ ಒಣಗಿಹೋಗುವುದು. ಅದರ ಸಿರಿಸಂಪತ್ತಿನ ನಿಧಿಯನ್ನು ಶತ್ರುಗಳು ಸೂರೆಮಾಡುವರು.


ದೋಚಿಕೊಂಡನು ದ್ರೋಹಿ ಆಕೆಯ ಆಸ್ತಿಯನ್ನು ಕೈಚಾಚಿ. 'ಸೇರಿಸಬಾರದು ಸಭೆಗೆ ಮ್ಲೇಚ್ಛರನ್ನು’ ಎಂಬುದು ದೇವನ ಆಣತಿ. ಆದರಿಗೋ ಅಂಥವರೇ ಪವಿತ್ರಾಲಯ ಪ್ರವೇಶಿಸುವ ದುರ್ಗತಿ !


ಜೆರುಸಲೇಮ್ ದಿಕ್ಕುಪಾಲಾಗಿ ಕಷ್ಟಪಡುವಾಗ ನೆನಸಿಕೊಳ್ಳುತ್ತಾಳೆ ತನ್ನ ಪ್ರಾಚೀನ ವೈಭವಗಳನ್ನೆಲ್ಲಾ. ತನ್ನ ಜನತೆ ವೈರಿಗಳ ವಶವಾದಾಗ ಆಕೆಗೆ ಸಿಗಲಿಲ್ಲ ಯಾರೊಬ್ಬರ ಬೆಂಬಲ. ಆಕೆಯಾ ಹೀನಸ್ಥಿತಿ ನೋಡಿ ವೈರಿಗಳು ಮಾಡಿದರು ಪರಿಹಾಸ್ಯ.


‘ಕುರಿಗಾಹಿಗಳೇ, ಅರಚಿಗೋಳಾಡಿ ಮೇಷಪಾಲರೇ, ಬೂದಿಯಲ್ಲಿ ಬಿದ್ದು ಹೊರಳಾಡಿ. ನಿಮ್ಮನ್ನು ವಧಿಸುವ ಕಾಲ ಬಂದಿದೆ ನಾನು ನಿಮ್ಮನ್ನು ಭಂಗಪಡಿಸುವೆ. ನೀವು ಚೂರುಚೂರಾಗುವಿರಿ ಒಡೆದುಹೋದ ಅಂದವಾದ ಪಾತ್ರೆಯಂತೆ.


ವಿಗ್ರಹಗಳನ್ನು ಕೆತ್ತುವವರೆಲ್ಲರು ನಿರರ್ಥಕರು; ಅವರ ಇಷ್ಟಬೊಂಬೆಗಳು ಏತಕ್ಕೂ ಬಾರವು; ಅವುಗಳಲ್ಲಿ ವಿಶ್ವಾಸವಿಡುವವರು ಕುರುಡರು, ತಿಳುವಳಿಕೆ ಇಲ್ಲದವರು. ಅಂಥವರು ನಾಚಿಕೆಗೆ ಗುರಿಯಾಗುವರು.


ಬಂಗಾರದ ಇಪ್ಪತ್ತು ಬಟ್ಟಲುಗಳು ಪ್ರತಿಯೊಂದೂ 8:4 ಕಿಲೋಗ್ರಾಂ; ಇವುಗಳಲ್ಲದೆ ಶ್ರೇಷ್ಠವಾದ ಕಂಚಿನ ಎರಡು ಪಾತ್ರೆಗಳಿದ್ದವು. ಅವು ಬಂಗಾರದಷ್ಟು ಬೆಲೆಯುಳ್ಳವುಗಳು.


ಅದಕ್ಕೆ ದಾವೀದನು, “ನಾನು ಬಲು ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದೇನೆ. ಸರ್ವೇಶ್ವರನ ಕೈಯಲ್ಲೆ ಬೀಳುತ್ತೇನೆ; ಅವರು ಕೃಪಾಪೂರ್ಣರು. ಮನುಷ್ಯರ ಕೈಯಲ್ಲಿ ಬೀಳಲೊಲ್ಲೆ,” ಎಂದು ಹೇಳಿ ವ್ಯಾಧಿಯನ್ನು ಆಯ್ದುಕೊಂಡನು.


ತನ್ನ ಹಿರಿಯ ಮಗ ಏಸಾವನ ಬಟ್ಟೆಗಳಲ್ಲಿ ಶ್ರೇಷ್ಠವಾದವು ಮನೆಯಲ್ಲಿ ಆಕೆಯ ವಶದಲ್ಲಿದ್ದವು. ಅವುಗಳನ್ನು ತೆಗೆದು ಕಿರಿಯ ಮಗ ಯಕೋಬನಿಗೆ ತೊಡಿಸಿದಳು


ಆ ದೂತರು ಮರಳಿ ಅಹಾಬನ ಬಳಿಗೆ ಬಂದು, “ನಿನ್ನ ಬೆಳ್ಳಿಬಂಗಾರವನ್ನೂ ಸತಿಸುತರನ್ನೂ ನನಗೆ ಒಪ್ಪಿಸಬೇಕೆಂದು ನಿನಗೆ ಹೇಳಿಕಳುಹಿಸಿದೆನಲ್ಲವೆ?


ಆಗ ಇಸ್ರಯೇಲರ ಆ ಅರಸನು ನಾಡಿನ ಎಲ್ಲ ಹಿರಿಯರನ್ನು ಕರೆಸಿ ಅವರಿಗೆ, “ನೋಡಿದಿರೋ, ಅವನು ನಮಗೆಂಥ ಕೇಡು ಬಗೆಯುತ್ತಾನೆ; ‘ನಿನ್ನ ಬೆಳ್ಳಿಬಂಗಾರವನ್ನೂ ಸತಿಸುತರನ್ನೂ ನನಗೆ ಕೊಡು’ ಎಂದು ಹೇಳಿಕಳುಹಿಸಿದ್ದಕ್ಕೆ ನಾನು ಒಪ್ಪಿದರೂ ಅವನಿಗೆ ತೃಪ್ತಿಯಾಗಲಿಲ್ಲ,” ಎಂದು ಹೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು