Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 20:30 - ಕನ್ನಡ ಸತ್ಯವೇದವು C.L. Bible (BSI)

30 ಉಳಿದ ಇಪ್ಪತ್ತೇಳು ಸಾವಿರಮಂದಿ ಸೈನಿಕರು ಅಫೇಕ ಪಟ್ಟಣವನ್ನು ಹೊಕ್ಕರು. ಆದರೆ ಆ ಪಟ್ಟಣದ ಗೋಡೆ ಅವರ ಮೇಲೆ ಬಿದ್ದುದರಿಂದ ಅವರೂ ಸತ್ತರು. ಬೆನ್ಹದದನೂ ಆ ಪಟ್ಟಣವನ್ನು ಹೊಕ್ಕು, ಒಂದು ಮನೆಯ ಒಳಕೋಣೆಯಲ್ಲಿ ಅಡಗಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ಉಳಿದ ಇಪ್ಪತ್ತೇಳು ಸಾವಿರ ಮಂದಿ ಸೈನಿಕರು ಅಫೇಕ ಪಟ್ಟಣವನ್ನು ಹೊಕ್ಕರು. ಆದರೆ ಆ ಪಟ್ಟಣದ ಗೋಡೆಯು ಅವರ ಮೇಲೆ ಬಿದ್ದುದರಿಂದ ಅವರೂ ಸತ್ತರು. ಬೆನ್ಹದದನು ಆ ಪಟ್ಟಣವನ್ನು ಹೊಕ್ಕು ಒಂದು ಮನೆಯ ಒಳಕೋಣೆಯಲ್ಲಿ ಬಚ್ಚಿಟ್ಟುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ಉಳಿದ ಇಪ್ಪತ್ತೇಳು ಸಾವಿರ ಮಂದಿ ಸೈನಿಕರು ಅಫೇಕ ಪಟ್ಟಣವನ್ನು ಹೊಕ್ಕರು; ಆದರೆ ಆ ಪಟ್ಟಣದ ಗೋಡೆಯು ಅವರ ಮೇಲೆ ಬಿದ್ದದರಿಂದ ಅವರೂ ಸತ್ತರು. ಬೆನ್ಹದದನೂ ಆ ಪಟ್ಟಣವನ್ನು ಹೊಕ್ಕು ಒಂದು ಮನೆಯ ಒಳಕೋಣೆಯಲ್ಲಿ ಅಡಗಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 ಬದುಕಿ ಉಳಿದವರು ಅಫೇಕ್ ನಗರಕ್ಕೆ ಓಡಿಹೋದರು. ಆ ನಗರದ ಗೋಡೆಯು ಉಳಿದಿದ್ದ ಇಪ್ಪತ್ತೇಳು ಸಾವಿರ ಜನರ ಮೇಲೆ ಉರುಳಿ ಬಿತ್ತು. ಬೆನ್ಹದದನೂ ನಗರಕ್ಕೆ ಓಡಿಹೋಗಿ ಒಂದು ಕೊಠಡಿಯಲ್ಲಿ ಅವಿತುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ಮಿಕ್ಕಾದವರು ಅಫೇಕೆಂಬ ಪಟ್ಟಣದೊಳಗೆ ಓಡಿಹೋದರು. ಅಲ್ಲಿ ಒಂದು ಗೋಡೆ ಉಳಿದುಕೊಂಡವರಲ್ಲಿ ಇಪ್ಪತ್ತೇಳು ಸಾವಿರ ಮಂದಿಯ ಮೇಲೆ ಬಿದ್ದಿತ್ತು. ಆದರೆ ಬೆನ್ಹದದನು ಪಟ್ಟಣಕ್ಕೆ ಓಡಿಬಂದು ಒಳ ಕೊಠಡಿಯಲ್ಲಿ ಬಚ್ಚಿಟ್ಟುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 20:30
21 ತಿಳಿವುಗಳ ಹೋಲಿಕೆ  

“ನೀನು ಅಡಗಿಕೊಳ್ಳುವುದಕ್ಕೆ ಒಳಗಿನ ಕೋಣೆಗೆ ಹೋಗುವ ದಿನದಲ್ಲಿ ಅದು ನಿನಗೆ ಗೊತ್ತಾಗುವುದು,” ಎಂದು ಉತ್ತರಕೊಟ್ಟನು.


ಮೀಕಾಯೆಹುವು, “ನೀನು ಅಡಗಿಕೊಳ್ಳುವುದಕ್ಕೆ ಒಳಗಿನ ಕೋಣೆಗೆ ಹೋಗುವ ದಿನದಲ್ಲಿ ಅದು ನಿನಗೆ ಗೊತ್ತಾಗುವುದು,” ಎಂದು ಉತ್ತರಕೊಟ್ಟನು.


ಒಂದು ವರ್ಷ ದಾಟಿದನಂತರ ಬೆನ್ಹದದನು ಸಿರಿಯಾದವರನ್ನು ಕೂಡಿಸಿಕೊಂಡು ಇಸ್ರಯೇಲರೊಡನೆ ಯುದ್ಧಮಾಡುವುದಕ್ಕಾಗಿ ಅಫೇಕಕ್ಕೆ ಬಂದನು.


ಶಿಲೊವಾ ಎಂಬಲ್ಲಿ ಗೋಪುರ ಕುಸಿದು ಬಿದ್ದಾಗ ಹದಿನೆಂಟು ಜನ ಸತ್ತರಲ್ಲವೆ? ಅವರು ಜೆರುಸಲೇಮಿನಲ್ಲಿ ವಾಸವಾಗಿರುವ ಇತರ ಎಲ್ಲಾ ಜನರಿಗಿಂತ ಹೆಚ್ಚು ದೋಷಿಗಳಾಗಿದ್ದರೆಂದು ಭಾವಿಸಿತ್ತೀರೋ?


ಕರ್ಮೆಲ್ ಬೆಟ್ಟದ ತುದಿಯಲ್ಲಿ ಅವಿತುಕೊಂಡರೂ ಅವರನ್ನು ಹುಡುಕಿ ಅಲ್ಲಿಂದ ಹಿಡಿದುತರುವೆನು. ನನ್ನ ಕಣ್ಣುತಪ್ಪಿಸಿ ಸಮುದ್ರದ ತಳದಲ್ಲಿ ಅಡಗಿಕೊಂಡರೂ, ಅಲ್ಲಿಯೂ ಅವರನ್ನು ಕಚ್ಚುವಂತೆ ಘಟಸರ್ಪಕ್ಕೆ ಆಜ್ಞೆಮಾಡುವೆನು.


ಅದು ಹೇಗೆಂದರೆ: “ಸಿಂಹದ ಬಾಯಿಯಿಂದ ತಪ್ಪಿಸಿಕೊಂಡು ಓಡುತ್ತಿರುವವನು ಕರಡಿಯನ್ನು ಎದುರುಗೊಳ್ಳುವಂತೆ ಆಗುವುದು ಅಥವಾ ಅವನು ಅಲ್ಲಿಂದ ಮನೆಗೆ ಓಡಿಬಂದು ಗೋಡೆಯ ಮೇಲೆ ಕೈಯೂರಲು ಅವನಿಗೆ ಹಾವು ಕಚ್ಚಿದಂತೆ ಆಗುವುದು.


ನೆಬೂಕದ್ನೆಚ್ಚರನಾದ ನಾನು ಪರಲೋಕ ರಾಜನನ್ನು ಹೊಗಳಿ, ಕೊಂಡಾಡಿ, ಕೀರ್ತಿಸುತ್ತೇನೆ: ಆತನ ಕಾರ್ಯಗಳೆಲ್ಲವು ಸತ್ಯ, ಆತನ ಮಾರ್ಗಗಳೆಲ್ಲವು ನ್ಯಾಯ, ಗರ್ವಿಷ್ಠರನ್ನು ಆತ ತಗ್ಗಿಸಬಲ್ಲ.


ಭಯಕ್ಕೆ ಓಡುವವನು ಗುಂಡಿಯಲ್ಲಿ ಬೀಳುವನು ಗುಂಡಿಯಿಂದ ಹತ್ತಿ ಬರುವವನು ಬಲೆಗೆ ಸಿಕ್ಕುವನು. ದಂಡನೆಯ ವರ್ಷವನ್ನು ಮೋವಾಬಿಗೆ ಖಂಡಿತ ಬರಮಾಡುವೆನು - ಇದು ಸರ್ವೇಶ್ವರನ ನುಡಿ.


ಬೀಳುವನು ಕುಳಿಯಲ್ಲಿ, ಭಯಭೀತಿಯ ಸಪ್ಪಳಕ್ಕೆ ಓಡಿಹೋಗುವವನು, ಸಿಕ್ಕಿಬೀಳುವನು ಬಲೆಯಲ್ಲಿ ಕುಳಿಯ ಹತ್ತಿ ಬರುವವನು. ತೆರೆದಿವೆ ನೋಡಿ, ಆಕಾಶದ ದ್ವಾರಗಳು, ಕಂಪಿಸುತ್ತಿವೆ ಬುವಿಯ ಅಸ್ತಿವಾರಗಳು.


ಕರುಣೆಯುಳ್ಳವನಿಗಾತ ಕರುಣಾಮಯಿ I ದೋಷರಹಿತನಿಗಾತ ನಿರ್ದೋಷಿ II


ಅವರಲ್ಲಿ ಪ್ರತಿಯೊಬ್ಬನು ತನ್ನ ಎದುರಿಗೆ ಬಂದ ವಿರೋಧಿಯನ್ನು ಕೊಲ್ಲುತ್ತಾ ಮುಂದೆ ನಡೆದನು; ಸಿರಿಯಾದವರು ಓಡಿಹೋಗತೊಡಗಿದರು. ಇಸ್ರಯೇಲರು ಅವರನ್ನು ಹಿಂದಟ್ಟಿದರು. ಅರಸ ಬೆನ್ಹದದನು ಹಾಗು ಕೆಲವು ಮಂದಿ ರಾಹುತರು ಕುದುರೆಗಳನ್ನೇರಿ ಓಡಿಹೋಗಿ ತಪ್ಪಿಸಿಕೊಂಡರು.


ಆಗ ಅವರು ಅಹಾಬನಿಗೆ, “ಸಮಾರಿಯ ಪಟ್ಟಣವನ್ನು ಸಂಪೂರ್ಣವಾಗಿ ನಾಶಮಾಡುವೆನು; ಲೆಕ್ಕವಿಲ್ಲದ ನನ್ನ ಸೈನಿಕರು ಅದರಲ್ಲಿ ಒಂದು ಹಿಡಿ ಧೂಳನ್ನೂ ಬಿಡುವುದಿಲ್ಲ; ಬಿಟ್ಟರೆ ದೇವತೆಗಳು ನನಗೆ ಬೇಕಾದದ್ದನ್ನು ಮಾಡಲಿ!” ಎಂದು ಹೇಳಿಕಳುಹಿಸಿದನು.


ಗೆಷೂರ್ಯರ ನಾಡು, ದಕ್ಷಿಣದಲ್ಲಿದ್ದ ಅವ್ವೀಯರ ನಾಡು; ಸಿದೋನ್ಯರಿಗೆ ಸೇರಿದ ಮೆಯರಾದಿಂದ ಅಮೋರಿಯರ ಮೇರೆಯಾದ ಅಫೇಕದವರೆಗಿರುವ ಕಾನಾನ್ಯರ ನಾಡು;


ಫಿಲಿಷ್ಟಿಯರು ತಮ್ಮ ಸೈನ್ಯವನ್ನು ಕೂಡಿಸಿಕೊಂಡು ಬಂದು ಅಫೇಕಿನಲ್ಲಿ ಪಾಳೆಯಮಾಡಿಕೊಂಡರು. ಇಸ್ರಯೇಲರು ಜೆಸ್ರೀಲ್ ಬೈಲಿನಲ್ಲಿರುವ ಬುಗ್ಗೆಯ ಬಳಿಯಲ್ಲಿ ಇಳಿದುಕೊಂಡರು.


ಈ ಎರಡು ಸೈನ್ಯಗಳೂ ಏಳುದಿನಗಳವರೆಗೆ ಎದುರುಬದುರಾಗಿ ಪಾಳೆಯಮಾಡಿಕೊಂಡಿದ್ದವು; ಏಳನೆಯ ದಿನದಲ್ಲಿ ಯುದ್ಧಪ್ರಾರಂಭವಾಯಿತು. ಇಸ್ರಯೇಲರು ಆ ಒಂದೇ ದಿನದಲ್ಲಿ ಸಿರಿಯಾದವರ ಒಂದು ಲಕ್ಷಮಂದಿ ಕಾಲಾಳುಗಳನ್ನು ವಧಿಸಿದರು.


ಆಮೇಲೆ ಅವರು ದಹನಬಲಿ ಯಜ್ಞಗಳನ್ನು ಸಮರ್ಪಿಸುವುದಕ್ಕೆ ಹೋದರು. ಇದಕ್ಕೆ ಮೊದಲೇ ಅವನು ದೇವಸ್ಥಾನದ ಹೊರಗೆ ಎಂಬತ್ತು ಮಂದಿಯನ್ನು ಕಾಯುವುದಕ್ಕಾಗಿ ಇರಿಸಿ ಅವರಿಗೆ, “ನಾನು ಯಾರನ್ನು ನಿಮ್ಮ ಕೈಗೆ ಸಿಕ್ಕುವ ಹಾಗೆ ಮಾಡುವೆನೋ ಅವರಲ್ಲಿ ಒಬ್ಬನನ್ನೂ ಬಿಡಬೇಡಿ; ಬಿಟ್ಟರೆ ಅವನ ಪ್ರಾಣಕ್ಕೆ ಬದಲಾಗಿ ನಿಮ್ಮ ಪ್ರಾಣವು ಹೋಗುವುದು,” ಎಂಬುದಾಗಿ ಆಜ್ಞಾಪಿಸಿದ್ದನು.


ಇದ್ದಕ್ಕಿದ್ದಂತೆ ಆ ಗೋಡೆ ತಟ್ಟನೆ ಬಿದ್ದುಹೋಗುವುದು. ಅಂತೆಯೇ ನಿಮ್ಮ ಅಪರಾಧ ನಿಮಗೆ ಅಪಾಯಕರವಾಗಿರುವುದು.


ಆದರೆ ಅಬೀಮೆಲೆಕನಿಗೆ ಬೆನ್ನುತೋರಿಸಿ ಓಡಿಹೋಗಬೇಕಾಯಿತು. ಅವನು ಇವನನ್ನು ಹಿಂದಟ್ಟಿದನು. ಊರಬಾಗಿಲಿನವರೆಗೆ ಅನೇಕ ಮಂದಿ ಹತರಾಗಿ ಬಿದ್ದರು.


ಯುದ್ಧವು ಸುತ್ತಣ ಪ್ರದೇಶಗಳಿಗೆ ಹಬ್ಬಿಕೊಂಡಿತು. ಆ ದಿನ ಕತ್ತಿಯಿಂದ ಸತ್ತವರಿಗಿಂತ, ಮರುಳುಗಾಡಿನಲ್ಲಿ ಸತ್ತವರ ಸಂಖ್ಯೆಯೇ ಹೆಚ್ಚಾಗಿತ್ತು.


ಆ ಊರನ್ನು ಮುಟ್ಟಿದನಂತರ ನಿಂಷಿಯ ಮೊಮ್ಮಗನೂ ಯೆಹೋಷಾಫಾಟನ ಮಗನೂ ಆದ ಯೇಹುವು ಎಲ್ಲಿರುತ್ತಾನೆಂದು ವಿಚಾರಿಸು. ಅವನು ಸಿಕ್ಕಿದಾಗ ಅವನನ್ನು ಅವನ ಜೊತೆಗಾರರ ಗುಂಪಿನಿಂದ ಪ್ರತ್ಯೇಕವಾಗಿ ಕರೆದುಕೊಂಡು ಒಳಗಿನ ಕೋಣೆಗೆ ಹೋಗು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು