Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 20:15 - ಕನ್ನಡ ಸತ್ಯವೇದವು C.L. Bible (BSI)

15 ಅಹಾಬನು ಪ್ರದೇಶಾಧಿಪತಿಗಳ ಆಳುಗಳನ್ನು ಲೆಕ್ಕಿಸಿದಾಗ ಇನ್ನೂರ ಮೂವತ್ತೆರಡು ಮಂದಿ ಇದ್ದರು; ಇಸ್ರಯೇಲರ ಸೈನ್ಯವನ್ನು ಲೆಕ್ಕಿಸಿದಾಗ ಏಳು ಸಾವಿರ ಮಂದಿಯಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಅಹಾಬನು ಪ್ರದೇಶಾಧಿಪತಿಗಳ ಸೇವಕರಾಗಿ ಕೆಲಸ ಮಾಡುವ ಯುವ ಅಧಿಕಾರಿಗಳನ್ನು ಲೆಕ್ಕಿಸಿದಾಗ ಇನ್ನೂರ ಮೂವತ್ತೆರಡು ಜನರಿದ್ದರು. ಇಸ್ರಾಯೇಲರ ಸೈನ್ಯವನ್ನು ಲೆಕ್ಕಿಸಿದಾಗ ಏಳು ಸಾವಿರ ಜನರಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಅಹಾಬನು ಪ್ರದೇಶಾಧಿಪತಿಗಳ ಆಳುಗಳನ್ನು ಲೆಕ್ಕಿಸಿದಾಗ ಇನ್ನೂರ ಮೂವತ್ತೆರಡು ಮಂದಿಯಿದ್ದರು; ಇಸ್ರಾಯೇಲ್ಯರ ಸೈನ್ಯವನ್ನು ಲೆಕ್ಕಿಸಿದಾಗ ಏಳು ಸಾವಿರ ಮಂದಿಯಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಅಹಾಬನು ಜಿಲ್ಲೆಗಳ ರಾಜ್ಯಪಾಲರುಗಳ ಸೇವೆ ಮಾಡುತ್ತಿರುವ ಯೌವನಸ್ಥರನ್ನು ಒಟ್ಟಾಗಿ ಸೇರಿಸಿದನು. ಅಲ್ಲಿ ಇನ್ನೂರ ಮೂವತ್ತೆರಡು ಮಂದಿ ಯುವಜನರಿದ್ದರು. ನಂತರ ರಾಜನು ಇಸ್ರೇಲಿನ ಸೈನ್ಯವನ್ನು ಒಟ್ಟಾಗಿ ಕರೆದನು. ಅವರಲ್ಲಿ ಒಟ್ಟು ಏಳುಸಾವಿರ ಸೈನಿಕರಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಅಹಾಬನು ಪ್ರಾಂತಗಳ ಪ್ರಧಾನರ ಕಿರಿಯ ಅಧಿಕಾರಿಗಳನ್ನು ಲೆಕ್ಕಮಾಡಿದಾಗ ಅವರು ಇನ್ನೂರ ಮೂವತ್ತೆರಡು ಜನರಿದ್ದರು. ಅವರ ತರುವಾಯ ಇಸ್ರಾಯೇಲರಾದ ಸೈನಿಕರನ್ನು ಲೆಕ್ಕಮಾಡಿದಾಗ ಏಳು ಸಾವಿರ ಜನರಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 20:15
11 ತಿಳಿವುಗಳ ಹೋಲಿಕೆ  

ಆಸನು ತನ್ನ ದೇವರಾದ ಸರ್ವೇಶ್ವರನಿಗೆ, “ಸರ್ವೇಶ್ವರಾ, ಬಲಿಷ್ಠನು ಬಲಹೀನನ ಮೇಲೆ ಬೀಳುವಾಗ, ನಿಮ್ಮ ಹೊರತು ರಕ್ಷಕನಿಲ್ಲ. ನಿಮ್ಮಲ್ಲಿ ಭರವಸೆ ಇಟ್ಟು ನಿಮ್ಮ ಹೆಸರಿನಲ್ಲಿ ಈ ಮಹಾ ಸೇನೆಗೆ ವಿರುದ್ಧ ಯುದ್ಧಕ್ಕೆ ಬಂದಿದ್ದೇವೆ. ಸರ್ವೇಶ್ವರಾ, ನಮ್ಮ ದೇವರು ನೀವು; ನರರು ನಿಮ್ಮನ್ನು ಎದುರಿಸಿ ಗೆಲ್ಲಬಾರದು,” ಎಂದು ಮೊರೆ ಇಟ್ಟನು.


ಯೆಹೋವಾಹಾಜನಿಗೆ ಐವತ್ತುಮಂದಿ ರಾಹುತರು, ಹತ್ತು ರಥಗಳು, ಹತ್ತುಸಾವಿರ ಮಂದಿ ಕಾಲಾಳುಗಳು ಮಾತ್ರ ಉಳಿದಿದ್ದರು. ಸಿರಿಯಾದವರ ಅರಸನು ಬೇರೆ ಎಲ್ಲರನ್ನೂ ಸಂಹರಿಸಿ, ಕಣದ ಧೂಳಿಪಟದಂತೆ ಮಾಡಿಬಿಟ್ಟನು.


ಆದರೆ ಬಾಳನ ವಿಗ್ರಹಕ್ಕೆ ಅಡ್ಡಬೀಳದೆಯೂ ಅದನ್ನು ಮುದ್ದಿಡದೆಯೂ ಇರುವ ಏಳುಸಾವಿರ ಮಂದಿ ಇಸ್ರಯೇಲರನ್ನು ಉಳಿಸುವೆನು,” ಎಂದು ಹೇಳಿದನು.


ಯೋನಾತಾನನು ತನ್ನ ಆಯುಧಗಳನ್ನು ಹೊರುವವನಿಗೆ, “ಸುನ್ನತಿಯಿಲ್ಲದ ಈ ಕಾವಲುದಂಡಿನವರೆಗೆ ನೇರವಾಗಿ ಹೋಗೋಣ ಬಾ; ಬಹುಶಃ ಸರ್ವೇಶ್ವರ ತಾವೇ ನಮ್ಮ ಪರವಾಗಿ ಕಾರ್ಯಸಾಧಿಸುವರು. ಬಹುಜನರಿಂದಾಗಲಿ, ಸ್ವಲ್ಪಜನರಿಂದಾಗಲಿ, ರಕ್ಷಿಸುವುದು ಸರ್ವೇಶ್ವರಸ್ವಾಮಿಗೆ ಅಸಾಧ್ಯವಲ್ಲ,” ಎಂದು ಹೇಳಿದನು.


ಸೌಲನಾದರೋ ಗಿಬೆಯ ಪ್ರಾಂತ್ಯದ ಅಂತ್ಯಭಾಗವಾಗಿರುವ ಮಿಗ್ರೋನಿನಲ್ಲಿನ ಒಂದು ದಾಳಿಂಬ ವೃಕ್ಷದ ಅಡಿಯಲ್ಲಿ ಇಳಿದುಕೊಂಡಿದ್ದನು. ಅವನ ಜೊತೆಯಲ್ಲಿ ಸುಮಾರು ಆರುನೂರು ಮಂದಿ ಸೈನಿಕರು ಇದ್ದರು.


ಅಲ್ಲದೆ, ಅವನು ಆ ಮುನ್ನೂರು ಮಂದಿಯನ್ನು ಮೂರು ಗುಂಪುಮಾಡಿ ಪ್ರತಿ ಒಬ್ಬನ ಕೈಯಲ್ಲಿ ಕೊಂಬನ್ನೂ ಉರಿಯುವ ಪಂಜಡಗಿರುವ ಬರಿಕೊಡವನ್ನೂ ಕೊಟ್ಟು ಅವರಿಗೆ,


ಆಗ ಸರ್ವೇಶ್ವರ ಗಿದ್ಯೋನನಿಗೆ, “ನೀರನ್ನು ನೆಕ್ಕಿದ ಆ ಮೂನ್ನೂರು ಮಂದಿಯಿಂದಲೇ ನಿಮಗೆ ಜಯವನ್ನುಂಟುಮಾಡಿ ಮಿದ್ಯಾನ್ಯರನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು; ಉಳಿದವರು ತಮ್ಮ ತಮ್ಮ ಸ್ಥಳಗಳಿಗೆ ಹೋಗಲಿ,” ಎಂದು ಆಜ್ಞಾಪಿಸಿದರು.


ಅಹಾಬನು, “ಇದು ಯಾರ ಮುಖಾಂತರ ಆಗುವುದು?” ಎಂದು ಕೇಳಿದ್ದಕ್ಕೆ ಅವನು, “ಪ್ರದೇಶಾಧಿಪತಿಗಳ ಸೇವಕರ ಮುಖಾಂತರ ಆಗುವುದೆಂದು ಸರ್ವೇಶ್ವರ ತಿಳಿಸುತ್ತಾರೆ,” ಎಂದು ಉತ್ತರಕೊಟ್ಟನು. ಅಹಾಬನು ಮುಂದುವರಿದು, “ಯುದ್ಧ ಪ್ರಾರಂಭಮಾಡತಕ್ಕವರಾರು?” ಎಂದು ಕೇಳಲು ಅವನು, “ನೀನೇ” ಎಂದು ಉತ್ತರಿಸಿದನು.


ಮಧ್ಯಾಹ್ನದಲ್ಲಿ, ಬೆನ್ಹದದನು ತನ್ನ ಸಹಾಯಕ್ಕಾಗಿ ಬಂದ ಮೂವತ್ತೆರಡು ಮಂದಿ ರಾಜರ ಸಂಗಡ ಮದ್ಯಪಾನಮಾಡಿ ಮತ್ತನಾಗಿ, ಡೇರೆಯಲ್ಲಿ ಕುಳಿತುಕೊಂಡಿದ್ದಾಗ ಇವರು ಪಟ್ಟಣದಿಂದ ಹೊರಗೆ ಬಂದರು.


ಅರಸನಾವನು ವಿಜೇತನಾಗನು ಮಹಾ ಸೇನಾಬಲದಿಂದಲೆ I ಶೂರನಾವನು ಜಯಶೀಲನಾಗನು ಕೇವಲ ಭುಜಬಲದಿಂದಲೆ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು