Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 2:37 - ಕನ್ನಡ ಸತ್ಯವೇದವು C.L. Bible (BSI)

37 ನೀನು ಇದನ್ನು ಬಿಟ್ಟು ಕಿದ್ರೋನ್ ಹಳ್ಳದ ಆಚೆಗೆ ಹೋದೆಯಾದರೆ, ಅದೇ ದಿವಸ ನಿನಗೆ ಮರಣಶಿಕ್ಷೆಯಾಗುವುದೆಂದು ತಿಳಿದುಕೋ; ಮತ್ತು ಆ ರಕ್ತಾಪರಾಧವು ನಿನ್ನ ತಲೆಯ ಮೇಲೆಯೇ ಇರುವುದು,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

37 ನೀನು ಇದನ್ನು ಬಿಟ್ಟು ಕಿದ್ರೋನ್ ಹಳ್ಳದ ಆಚೆಗೆ ಹೋದೆಯಾದರೆ ಅದೇ ದಿನದಲ್ಲಿ ನಿನಗೆ ಮರಣಶಿಕ್ಷೆಯಾಗುವುದೆಂದು ತಿಳಿದುಕೋ ಮತ್ತು ಆ ರಕ್ತಾಪರಾಧವು ನಿನ್ನ ತಲೆಯ ಮೇಲೆಯೇ ಇರುವುದು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

37 ನೀನು ಇದನ್ನು ಬಿಟ್ಟು ಕಿದ್ರೋನ್‍ಹಳ್ಳದ ಆಚೆಗೆ ಹೋದಿಯಾದರೆ ಅದೇ ದಿವಸದಲ್ಲಿ ನಿನಗೆ ಮರಣಶಿಕ್ಷೆಯಾಗುವದೆಂದು ತಿಳಿದುಕೋ; ಮತ್ತು ಆ ರಕ್ತಾಪರಾಧವು ನಿನ್ನ ತಲೆಯ ಮೇಲೆಯೇ ಇರುವದು ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

37 ನೀನು ನಗರವನ್ನು ಬಿಟ್ಟು ಕಿದ್ರೋನ್ ಹೊಳೆಯ ಹಿಂದಕ್ಕೆ ಹೋದರೆ, ನಿನ್ನನ್ನು ಕೊಲ್ಲಲಾಗುವುದು. ಅದು ನಿನ್ನ ಸ್ವಂತ ತಪ್ಪಾಗುವುದು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

37 ಯಾವ ದಿವಸದಲ್ಲಿ ನೀನು ಹೊರಟು ಕಿದ್ರೋನೆಂಬ ಹಳ್ಳವನ್ನು ದಾಟುವೆಯೋ, ಆ ದಿವಸದಲ್ಲಿ ನಿಶ್ಚಯವಾಗಿ ಸಾಯುವೆ ಎಂದು ಖಂಡಿತ ತಿಳಿದುಕೋ ಮತ್ತು ನಿನ್ನ ರಕ್ತವು ನಿನ್ನ ತಲೆಯ ಮೇಲೆ ಇರುವುದು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 2:37
13 ತಿಳಿವುಗಳ ಹೋಲಿಕೆ  

ದಾವೀದನು, “ಈ ರಕ್ತಾಪರಾಧ ನಿನ್ನ ತಲೆಯ ಮೇಲೆಯೇ ಇರಲಿ; ‘ಸರ್ವೇಶ್ವರನ ಅಭಿಷಿಕ್ತನನ್ನು ಕೊಂದುಹಾಕಿದೆ’ ಎಂದು ನಿನ್ನ ಬಾಯೇ ನಿನಗೆ ವಿರೋಧವಾಗಿ ಸಾಕ್ಷಿಹೇಳಿತು,” ಎಂದನು.


ಇವರೆಲ್ಲರೂ ಬಹಳವಾಗಿ ನಡೆಯುವಾಗ ಸುತ್ತ-ಮುತ್ತಿನವರೆಲ್ಲರೂ ಬಹಳವಾಗಿ ಅತ್ತರು. ಅರಸನೂ ಎಲ್ಲ ಜನರೂ ಕಿದ್ರೋನ್ ಹಳ್ಳವನ್ನು ದಾಟಿ ಅರಣ್ಯಮಾರ್ಗ ಹಿಡಿದರು.


ಅವರಲ್ಲಿ ಯಾರಾದರೂ ಮನೆಬಿಟ್ಟು ಬೀದಿಗೆ ಬಂದರೆ ಅವರ ಮರಣಕ್ಕೆ ಅವರೇ ಕಾರಣರು ಆಗುವರು. ಅದಕ್ಕೆ ನಾವು ಹೊಣೆಗಾರರಲ್ಲ. ಆದರೆ ನಿನ್ನೊಡನೆ ಮನೆಯಲ್ಲಿದ್ದವರ ಮೇಲೆ ಯಾರಾದರೂ ಕೈಮಾಡಿದ್ದಾದರೆ ಆ ರಕ್ತಾಪರಾಧ ನಮ್ಮ ತಲೆಯ ಮೇಲಿರುವುದು.


ಯೇಸು ಸ್ವಾಮಿ ಹೀಗೆ ಹೇಳಿದ ಬಳಿಕ ತಮ್ಮ ಶಿಷ್ಯರೊಡನೆ ಹೊರಟು, ಕೆದ್ರೋನ್ ಹಳ್ಳವನ್ನು ದಾಟಿ, ಅಲ್ಲೇ ಇದ್ದ ತೋಟವನ್ನು ಹೊಕ್ಕರು.


ಅಸಹ್ಯಕಾರ್ಯವನ್ನು ಮಾಡಿ, ಸಾಲಕ್ಕೆ ಬಡ್ಡಿ ತೆಗೆದು, ಲಾಭಕ್ಕೆ ಹಣಕೊಟ್ಟು, ಹಿಂಸಾಚಾರಿಯೂ, ರಕ್ತಸುರಿಸುವವನೂ ಆಗಿದ್ದರೆ, ಜೀವಿಸುವನೇ? ಖಂಡಿತ ಜೀವಿಸನು; ಈ ದುರಾಚಾರಗಳನ್ನೆಲ್ಲಾ ನಡೆಸಿದನಲ್ಲವೇ? ಅವನು ಸಾಯುವುದು ನಿಶ್ಚಯ; ತನ್ನ ಮರಣಕ್ಕೆ ತಾನೇ ಕಾರಣ.


ಸರ್ವೇಶ್ವರನ ಆಲಯದಲ್ಲಿದ್ದ ಅಶೇರವಿಗ್ರಹಸ್ತಂಭವನ್ನು ತರಿಸಿ, ಜೆರುಸಲೇಮಿನ ಹೊರಗಿರುವ ಕಿದ್ರೋನ್ ಹಳ್ಳಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ಅದನ್ನು ಸುಡಿಸಿ, ಪುಡುಪುಡಿಮಾಡಿಸಿ, ಆ ಪುಡಿಯನ್ನು ಸಾರ್ವಜನಿಕ ಸ್ಮಶಾನದಲ್ಲಿ ಹಾಕಿಸಿದನು.


“ತಂದೆಗಾಗಲಿ ತಾಯಿಗಾಗಲಿ ಶಾಪಹಾಕುವವರಿಗೆ ಮರಣಶಿಕ್ಷೆಯಾಗಬೇಕು. ತಂದೆತಾಯಿಗಳಿಗೆ ಶಾಪ ಹಾಕುವುದರಿಂದ ಅವರಿಗೆ ಸಂಭವಿಸುವ ಮರಣಶಿಕ್ಷೆಗೆ ಅವರೇ ಕಾರಣ.


ಹೆಣ ಹೂಣುವ, ಬೂದಿ ತುಂಬುವ ಕಣಿವೆಯಿಂದ, ಕಿದ್ರೋನ್ ಹಳ್ಳ, ಪೂರ್ವದಿಕ್ಕಿನ ಕುದುರೆ ಬಾಗಿಲಮೂಲೆ, ಇವುಗಳವರೆಗಿರುವ ಪ್ರದೇಶವೆಲ್ಲ ಸರ್ವೇಶ್ವರನಿಗೆ ಪರಿಶುದ್ಧ ಸ್ಥಾನವಾಗುವುದು. ಈ ನಗರ ಇನ್ನೆಂದಿಗೂ ನಿರ್ಮೂಲವಾಗದು, ನಾಶವಾಗದು.”


ಯಾಜಕರು ಸರ್ವೇಶ್ವರನ ಆಲಯವನ್ನು‍ ಶುದ್ಧಮಾಡುವುದಕ್ಕೆ ಒಳಗೆ ಹೋಗಿ ಪವಿತ್ರಸ್ಥಾನದಲ್ಲಿದ್ದ ಹೊಲಸನ್ನೆಲ್ಲಾ ಹೊರಗೆ ತಂದು ಪ್ರಾಕಾರದಲ್ಲಿ ಹಾಕಿದರು. ಲೇವಿಯರು ಅದನ್ನು ಕೂಡಿಸಿ ಹೊರಗೆ ಒಯ್ದು ಕಿದ್ರೋನ್ ಹಳ್ಳದಲ್ಲಿ ಹಾಕಿದರು.


ಇವನ ತಾಯಿ ಮಾಕಳು ಅಶೇರ ದೇವತೆಯ ಒಂದು ಅಸಹ್ಯವಾದ ಮೂರ್ತಿಯನ್ನು ಮಾಡಿಸಿದ್ದರಿಂದ ಆಸನು ಆಕೆಯನ್ನು ‘ರಾಜಮಾತೆ’ ಎಂಬ ಪದವಿಯಿಂದ ತೆಗೆದುಹಾಕಿ ಆ ಮೂರ್ತಿಯನ್ನು ಕಡಿದು ಕಿದ್ರೋನ್ ಹಳ್ಳದ ಹತ್ತಿರ ಸುಡಿಸಿದನು.


ಈ ಇಬ್ಬರನ್ನೂ ವಧಿಸಿದ ಪಾಪವು ಯೋವಾಬನ ತಲೆಯ ಮೇಲೂ ಅವನ ಸಂತಾನದವರ ತಲೆಯ ಮೇಲೂ ಇರಲಿ; ಆದರೆ ದಾವೀದನಿಗೂ ಅವನ ಸಿಂಹಾಸನವನ್ನೇರುವ ಸಂತಾನದವರಿಗೂ ಸರ್ವೇಶ್ವರನಿಂದ ನಿತ್ಯಸೌಭಾಗ್ಯ ದೊರಕಲಿ!” ಎಂದನು.


ಅರಸನು, “ಅವನು ಹೇಳಿದಂತೆ ಮಾಡು; ಅವನನ್ನು ಕೊಂದು ಅವನ ಶವವನ್ನು ಸಮಾಧಿಮಾಡು. ಯೋವಾಬನು ನಿಷ್ಕಾರಣವಾಗಿ ರಕ್ತಸುರಿಸಿದುದರಿಂದ ನನಗೂ ನನ್ನ ತಂದೆಯ ಮನೆಯವರಿಗೂ ಹತ್ತಿರುವ ದೋಷವನ್ನು ಈ ಪ್ರಕಾರ ಪರಿಹರಿಸು.


ಅದಕ್ಕೆ ಶಿಮ್ಮಿಯು, “ಒಳ್ಳೆಯದು; ನನ್ನ ಒಡೆಯರೂ ಅರಸರೂ ಆದ ನೀವು ಹೇಳಿದಂತೆಯೇ ಸೇವಕನಾದ ನಾನು ಮಾಡುವೆನು,” ಎಂದು ಉತ್ತರಕೊಟ್ಟು ಬಹಳ ದಿನಗಳವರೆಗೆ ಜೆರುಸಲೇಮಿನಲ್ಲೇ ವಾಸಿಸುತ್ತಿದ್ದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು