Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 16:23 - ಕನ್ನಡ ಸತ್ಯವೇದವು C.L. Bible (BSI)

23 ಯೆಹೂದ್ಯರ ಅರಸ ಆಸನ ಆಳ್ವಿಕೆಯ ಮೂವತ್ತೊಂದನೆಯ ವರ್ಷದಲ್ಲಿ ಒಮ್ರಿ ಇಸ್ರಯೇಲರ ಅರಸನಾಗಿ ಹನ್ನೆರಡು ವರ್ಷ ಆಳಿದನು. ಆರು ವರ್ಷಗಳವರೆಗೆ ತಿರ್ಚವೇ ಅವನ ರಾಜಧಾನಿಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಯೆಹೂದ್ಯರ ಅರಸನಾದ ಆಸನ ಆಳ್ವಿಕೆಯ ಮೂವತ್ತೊಂದನೆಯ ವರ್ಷದಲ್ಲಿ ಒಮ್ರಿಯು ಇಸ್ರಾಯೇಲರ ಅರಸನಾಗಿ ಹನ್ನೆರಡು ವರ್ಷ ಆಳ್ವಿಕೆ ಮಾಡಿದನು. ಆರು ವರ್ಷಗಳ ವರೆಗೆ ತಿರ್ಚವೇ ಅವನ ರಾಜಧಾನಿಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಯೆಹೂದ್ಯರ ಅರಸನಾದ ಆಸನ ಆಳಿಕೆಯ ಮೂವತ್ತೊಂದನೆಯ ವರುಷದಲ್ಲಿ ಒಮ್ರಿಯು ಇಸ್ರಾಯೇಲ್ಯರ ಅರಸನಾಗಿ ಹನ್ನೆರಡು ವರುಷ ಆಳಿದನು. ಆರು ವರುಷಗಳವರೆಗೆ ತಿರ್ಚವೇ ಅವನ ರಾಜಧಾನಿಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಆಸನು ಯೆಹೂದದ ರಾಜನಾಗಿದ್ದ ಮೂವತ್ತೊಂದನೇ ವರ್ಷದಲ್ಲಿ ಒಮ್ರಿಯು ಇಸ್ರೇಲಿನ ರಾಜನಾದನು. ಒಮ್ರಿಯು ಇಸ್ರೇಲನ್ನು ಹನ್ನೆರಡು ವರ್ಷ ಆಳಿದನು. ಆ ಹನ್ನೆರಡು ವರ್ಷಗಳಲ್ಲಿ ಆರು ವರ್ಷ ಅವನು ತಿರ್ಚದಲ್ಲಿ ಆಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಯೆಹೂದದ ಅರಸನಾದ ಆಸನ ಮೂವತ್ತೊಂದನೆಯ ವರ್ಷದಲ್ಲಿ, ಒಮ್ರಿಯು ಇಸ್ರಾಯೇಲಿನ ಮೇಲೆ ಆಳಲು ಆರಂಭಿಸಿ, ಹನ್ನೆರಡು ವರ್ಷ ಆಳಿದನು, ಅದರಲ್ಲಿ ಆರು ವರ್ಷ ತಿರ್ಚದಲ್ಲಿ ಆಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 16:23
6 ತಿಳಿವುಗಳ ಹೋಲಿಕೆ  

ಪಟ್ಟಕ್ಕೆ ಬಂದಾಗ ಅವನಿಗೆ ನಲ್ವತ್ತೆರಡು ವರ್ಷ ಪ್ರಾಯ. ಇವನು ಜೆರುಸಲೇಮಿನಲ್ಲಿ ಒಂದು ವರ್ಷ ಆಳಿದನು; ಒಮ್ರಿಯ ಮೊಮ್ಮಗಳಾದ ಅತಲ್ಯ ಎಂಬಾಕೆ ಇವನ ತಾಯಿ;


ಯೆಹೂದ್ಯರ ಅರಸ ಆಸನ ಆಳ್ವಿಕೆಯ ಮೂವತ್ತೆಂಟನೆಯ ವರ್ಷದಲ್ಲಿ ಒಮ್ರಿಯ ಮಗ ಅಹಾಬನು ಇಸ್ರಯೇಲರ ಅರಸನಾದನು; ಸಮಾರಿಯ ಪಟ್ಟಣದಲ್ಲಿ ಇಪ್ಪತ್ತೆರಡು ವರ್ಷ ಆಳಿದನು.


ಯೆಹೂದ್ಯರ ಅರಸ ಆಸನ ಆಳ್ವಿಕೆಯ ಇಪ್ಪತ್ತಾರನೆಯ ವರ್ಷದಲ್ಲಿ ಬಾಷನ ಮಗ ಏಲನು ತಿರ್ಚದಲ್ಲಿ ಇಸ್ರಯೇಲರ ಅರಸನಾಗಿ ಎರಡು ವರ್ಷ ಆಳಿದನು.


ಬಾಷನು ಈ ಸುದ್ದಿಯನ್ನು ಕೇಳಿದಾಗ ರಾಮಕೋಟೆಯನ್ನು ಕಟ್ಟಿಸುವುದನ್ನು ಬಿಟ್ಟು ತಿರ್ಚಕ್ಕೆ ಹೋಗಿ ಅಲ್ಲೇ ವಾಸಿಸಿದನು.


ಆದರೆ ಒಮ್ರಿಯ ಪಂಗಡದವರು ಗೀನತನ ಮಗ ತಿಬ್ನಿಯ ಪಂಗಡದವರನ್ನು ಸೋಲಿಸಿದರು. ತಿಬ್ನಿಯು ಸತ್ತುಹೋದನು; ಒಮ್ರಿಯೇ ಆಳತೊಡಗಿದನು.


ಇವನು ಪಟ್ಟಕ್ಕೆ ಬಂದಾಗ ಇಪ್ಪತ್ತೆರಡು ವರ್ಷದ ವಯಸ್ಸಿನವನಾಗಿದ್ದನು. ಜೆರುಸಲೇಮಿನಲ್ಲಿ ಒಂದು ವರ್ಷ ಆಳಿದನು. ಇಸ್ರಯೇಲರ ಅರಸನಾದ ಒಮ್ರಿಯನ ಮೊಮ್ಮಗಳಾದ ಅತಲ್ಯ ಎಂಬಾಕೆ ಇವನ ತಾಯಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು