1 ಅರಸುಗಳು 14:5 - ಕನ್ನಡ ಸತ್ಯವೇದವು C.L. Bible (BSI)5 ಆದರೆ ಸರ್ವೇಶ್ವರ ಅವನಿಗೆ, ಯಾರೊಬ್ಬಾಮನ ಹೆಂಡತಿ ಅಸ್ವಸ್ಥನಾದ ತನ್ನ ಮಗನ ವಿಷಯದಲ್ಲಿ ದೈವೋತ್ತರವನ್ನು ಕೇಳುವುದಕ್ಕೆ ತನ್ನನ್ನು ಅನ್ಯಳೆಂದು ತೋರ್ಪಡಿಸಿಕೊಂಡು ಬರುತ್ತಾಳೆ; ಆಕೆಗೆ ಇಂಥಿಂಥ ಉತ್ತರಕೊಡು, ಎಂದು ತಿಳಿಸಿದ್ದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಆದರೆ ಯೆಹೋವನು ಅವನಿಗೆ, “ಯಾರೊಬ್ಬಾಮನ ಹೆಂಡತಿಯು ಅಸ್ವಸ್ಥನಾದ ತನ್ನ ಮಗನ ವಿಷಯದಲ್ಲಿ ದೈವೋಕ್ತಿಯನ್ನು ಕೇಳುವುದಕ್ಕೆ ತನ್ನನ್ನು ಅನ್ಯಳ ಹಾಗೆ ವೇಷಮರೆಸಿಕೊಂಡು ಬರುತ್ತಾಳೆಂದೂ, ಆಕೆಗೆ ಇಂಥಿಂಥ ಉತ್ತರ ಕೊಡಬೇಕು” ಎಂದು ತಿಳಿಸಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಆದರೆ ಯೆಹೋವನು ಅವನಿಗೆ - ಯಾರೊಬ್ಬಾಮನ ಹೆಂಡತಿಯು ಅಸ್ವಸ್ಥನಾದ ತನ್ನ ಮಗನ ವಿಷಯದಲ್ಲಿ ದೈವೋತ್ತರವನ್ನು ಕೇಳುವದಕ್ಕೆ ತನ್ನನ್ನು ಅನ್ಯಳೆಂದು ತೋರ್ಪಡಿಸಿಕೊಂಡು ಬರುತ್ತಾಳೆಂದೂ ಆಕೆಗೆ ಇಂಥಿಂಥ ಉತ್ತರ ಕೊಡಬೇಕೆಂದೂ ತಿಳಿಸಿದ್ದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ಆದರೆ ಯೆಹೋವನು ಅವನಿಗೆ, “ಯಾರೊಬ್ಬಾಮನ ಪತ್ನಿಯು ಅಸ್ವಸ್ಥನಾಗಿರುವ ತನ್ನ ಮಗನ ಬಗ್ಗೆ ಕೇಳಲು ನಿನ್ನ ಬಳಿಗೆ ಬರುತ್ತಿದ್ದಾಳೆ” ಎಂದು ಹೇಳಿದ್ದನು. ಅಹೀಯನು ಏನು ಹೇಳಬೇಕೆಂಬುದನ್ನು ಯೆಹೋವನು ಅವನಿಗೆ ತಿಳಿಸಿದ್ದನು. ಯಾರೊಬ್ಬಾಮನ ಪತ್ನಿಯು ಅಹೀಯನ ಮನೆಗೆ ಬಂದಳು. ತಾನಾರೆಂಬುದು ಜನರಿಗೆ ತಿಳಿಯಬಾರದೆಂದು ಅವಳು ಪ್ರಯತ್ನಿಸುತ್ತಿದ್ದಳು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಆದರೆ ಯೆಹೋವ ದೇವರು ಅಹೀಯನಿಗೆ, “ಯಾರೊಬ್ಬಾಮನ ಪತ್ನಿಯು ತನ್ನ ಮಗನಿಗೋಸ್ಕರ ನಿನ್ನಿಂದ ದೈವೋತ್ತರವನ್ನು ಕೇಳುವುದಕ್ಕೆ ಬರುತ್ತಾಳೆ. ಏಕೆಂದರೆ ಅವಳ ಮಗನು ರೋಗದಲ್ಲಿದ್ದಾನೆ. ನೀನು ಅವಳಿಗೆ ಹೀಗೀಗೆ ಹೇಳು, ಅವಳು ಒಳಗೆ ಬರುವಾಗ ಮತ್ತೊಬ್ಬಳ ಹಾಗೆ ವೇಷಹಾಕಿಕೊಂಡು ಬರುವಳು,” ಎಂದು ಹೇಳಿಕೊಟ್ಟಿದ್ದನು. ಅಧ್ಯಾಯವನ್ನು ನೋಡಿ |