Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 13:21 - ಕನ್ನಡ ಸತ್ಯವೇದವು C.L. Bible (BSI)

21 ಅವನು ಜುದೇಯ ನಾಡಿನ ಆ ದೈವಭಕ್ತನಿಗೆ, “ನಿನ್ನ ದೇವರಾದ ಸರ್ವೇಶ್ವರ ನಿನಗೆ ಈ ಸ್ಥಳದಲ್ಲಿ ಅನ್ನಪಾನಗಳನ್ನು ತೆಗೆದುಕೊಳ್ಳಬಾರದೆಂದು ಆಜ್ಞಾಪಿಸಿದರೂ ನೀನು ಅವರ ಆಜ್ಞೆಯನ್ನು ಮೀರಿ, ಅವಿಧೇಯನಾಗಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಅವನು ಆ ಯೆಹೂದ ದೇಶದವನಾದ ಆ ದೇವರ ಮನುಷ್ಯನಿಗೆ, “ನಿನ್ನ ದೇವರಾದ ಯೆಹೋವನು ನಿನಗೆ ಈ ಸ್ಥಳದಲ್ಲಿ ಅನ್ನಪಾನಗಳನ್ನು ತೆಗೆದುಕೊಳ್ಳಬಾರದೆಂದು ಆಜ್ಞಾಪಿಸಿದರೂ ನೀನು ಆತನ ಆಜ್ಞೆಯನ್ನು ಮೀರಿ ಅವಿಧೇಯನಾಗಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಅವನು ಯೆಹೂದ ದೇಶದವನಾದ ಆ ದೇವರ ಮನುಷ್ಯನಿಗೆ - ನಿನ್ನ ದೇವರಾದ ಯೆಹೋವನು ನಿನಗೆ ಈ ಸ್ಥಳದಲ್ಲಿ ಅನ್ನಪಾನಗಳನ್ನು ತೆಗೆದುಕೊಳ್ಳಬಾರದೆಂದು ಆಜ್ಞಾಪಿಸಿದರೂ ನೀನು ಆತನ ಆಜ್ಞೆಯನ್ನು ಮೀರಿ ಅವಿಧೇಯನಾಗಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಆ ಪ್ರವಾದಿಯು ಯೆಹೂದ ದೇಶದವನಾದ ದೇವಮನುಷ್ಯನಿಗೆ, “ಯೆಹೋವನು ಹೇಳುವುದೇನೆಂದರೆ, ನೀನು ಆತನಿಗೆ ವಿಧೇಯನಾಗಲಿಲ್ಲ. ಆತನ ಆಜ್ಞೆಯನ್ನು ನೀನು ಅನುಸರಿಸಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಅವನು ಯೆಹೂದ ದೇಶದವನಾದ ಆ ದೇವರ ಮನುಷ್ಯನಿಗೆ, “ನೀನು ಯೆಹೋವ ದೇವರ ಮಾತಿಗೆ ತಿರುಗಿಬಿದ್ದು, ನಿನ್ನ ದೇವರಾದ ಯೆಹೋವ ದೇವರು ನಿನಗೆ ಆಜ್ಞಾಪಿಸಿದ ಆಜ್ಞೆಯನ್ನು ಕೈಗೊಳ್ಳದೆ, ಹಿಂದಕ್ಕೆ ಬಂದು, ‘ರೊಟ್ಟಿ ತಿನ್ನಬೇಡ, ನೀರು ಕುಡಿಯಬೇಡ,’ ಎಂದು ಯೆಹೋವ ದೇವರು ನಿನಗೆ ಹೇಳಿದ ಸ್ಥಳದಲ್ಲಿ

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 13:21
19 ತಿಳಿವುಗಳ ಹೋಲಿಕೆ  

ನನ್ನ ಪ್ರೀತಿಪಾತ್ರರನ್ನು ನಾನು ಖಂಡಿಸುತ್ತೇನೆ ಮತ್ತು ದಂಡಿಸುತ್ತೇನೆ. ಆದುದರಿಂದ ಉತ್ಸಾಹದಿಂದಿರು, ದೇವರಿಗೆ ಅಭಿಮುಖನಾಗಿರು.


ನಿನ್ನ ಕೆಟ್ಟತನವೇ ನಿನ್ನನ್ನು ಶಿಕ್ಷಿಸುವುದು ನಿನ್ನ ದ್ರೋಹಗಳೇ ನಿನ್ನನ್ನು ಖಂಡಿಸುವುವು. ನಿನಗೆ ನನ್ನ ಭಯವಿಲ್ಲದೆ ನಿನ್ನ ದೇವರಾದ ಸರ್ವೇಶ್ವರನಾದ ನನ್ನನ್ನು ತೊರೆದುಬಿಟ್ಟದ್ದು ನಿನಗೆ ಕೆಟ್ಟದ್ದಾಗಿಯೂ ಕಹಿಯಾಗಿಯೂ ಪರಿಣಮಿಸುವುದು. ಇದನ್ನು ಚೆನ್ನಾಗಿ ಗ್ರಹಿಸಿಕೊ, ಕಣ್ಣಾರೆ ನೋಡು. ಇದು ಸರ್ವಶಕ್ತನೂ, ಸ್ವಾಮಿ ಸರ್ವೇಶ್ವರನೂ ಆದ ನನ್ನ ನುಡಿ.”


ತನ್ನ ಪತ್ನಿ ಜೆರೆಷಳಿಗೂ ಎಲ್ಲಾ ಆಪ್ತರಿಗೂ ತನಗೆ ಸಂಭವಿಸಿದುದನ್ನೆಲ್ಲಾ ವರದಿಮಾಡಿದನು. ಆಗ ಅವನ ಪಂಡಿತರೂ ಪತ್ನಿಯೂ ಅವನಿಗೆ, “ಯಾವನಿಂದ ನಿಮ್ಮ ಪತನವು ಪ್ರಾರಂಭವಾಯಿತೋ ಆ ವ್ಯಕ್ತಿ ಒಂದು ವೇಳೆ ಯೆಹೂದ್ಯನಾಗಿದ್ದರೆ, ನೀವು ಅವನನ್ನೆಂದಿಗೂ ಜಯಿಸಲಾರಿರಿ. ಅವನ ಮುಂದೆ ಬಿದ್ದು ಹಾಳಾಗುವಿರಿ,” ಎಂದು ಎಚ್ಚರವಿತ್ತರು.


ಆಗ ಗಾದನು ದಾವೀದನ ಬಳಿಗೆ ಬಂದು, “ನಿಮ್ಮ ನಾಡಿನಲ್ಲಿ ಏಳು ವರ್ಷಗಳ ಬರಗಾಲ ಉಂಟಾಗಬೇಕೋ, ಇಲ್ಲವೇ ನಿನ್ನ ಶತ್ರುಗಳು ನಿನ್ನನ್ನು ಸೋಲಿಸಿ ಮೂರು ತಿಂಗಳ ತನಕ ನಿನ್ನನ್ನು ಓಡಿಸಿಬಿಡಬೇಕೋ, ಇಲ್ಲವೆ ನಿನ್ನ ನಾಡಿನಲ್ಲಿ ಮೂರು ದಿನಗಳವರೆಗೂ ಘೋರವ್ಯಾಧಿ ಬರಬೇಕೋ? ನನ್ನನ್ನು ಕಳುಹಿಸಿದವರಿಗೆ ಯಾವ ಉತ್ತರವನ್ನು ತೆಗೆದುಕೊಂಡು ಹೋಗಬೇಕು, ಆಲೋಚಿಸಿ ಹೇಳು,” ಎಂದನು.


ಆಗ ಸರ್ವೇಶ್ವರ ಉಜ್ಜನ ಮೇಲೆ ಕೋಪಗೊಂಡರು. ಅಂಥ ಅಗೌರವಕ್ಕಾಗಿ ಅವನನ್ನು ದಂಡಿಸಿದರು. ಅವನು ಅಲ್ಲೇ ದೇವರ ಮಂಜೂಷದ ಬಳಿ ಸತ್ತುಬಿದ್ದನು.


ಆದರೆ ನೀನು ಸರ್ವೇಶ್ವರನ ಮಾತನ್ನು ಕೇಳದೆ, ಕೊಳ್ಳೆಗಾಗಿ ಮನಸೋತು, ಅವರಿಗೆ ದ್ರೋಹಮಾಡಿದ್ದೇಕೆ?” ಎಂದನು.


ಮುದುಕನೂ ಸ್ಥೂಲಕಾಯನೂ ಆದ ಏಲಿ ದೇವರ ಒಡಂಬಡಿಕೆಯ ಮಂಜೂಷದ ವರ್ತಮಾನವನ್ನು ಕೇಳಿದ್ದೇ, ಪೀಠದಿಂದ ಹಿಂದಕ್ಕೆ, ಬಾಗಿಲಿನ ಕಡೆಗೆ ಬಿದ್ದು, ಕುತ್ತಿಗೆ ಮುರಿದು ಸತ್ತನು. ಏಲಿ ಇಸ್ರಯೇಲರನ್ನು ನಾಲ್ವತ್ತು ವರ್ಷ ಪಾಲಿಸಿದ್ದನು.


“ಆರೋನನು ದೇಹತ್ಯಜಿಸಿ ತನ್ನ ಪೂರ್ವಜರನ್ನು ಸೇರಲಿ. ನೀವಿಬ್ಬರೂ ಮೆರೀಬಾ ಪ್ರವಾಹದ ಬಳಿ ನನ್ನ ಮಾತನ್ನು ಮೀರಿ ನಡೆದಿರಿ. ಆದ್ದರಿಂದ ನಾನು ಇಸ್ರಯೇಲರಿಗೆ ವಾಗ್ದಾನ ಮಾಡಿದ ನಾಡನ್ನು ಆರೋನನು ಪ್ರವೇಶಿಸಕೂಡದು.


ಬಳಿಕ ಸರ್ವೇಶ್ವರ ಮೋಶೆ ಮತ್ತು ಆರೋನರಿಗೆ, “ನೀವು ನನ್ನನ್ನು ನಂಬದೇಹೋದಿರಿ. ಇಸ್ರಯೇಲರ ಮುಂದೆ ನನ್ನ ಗೌರವವನ್ನು ಕಾಪಾಡದೆಹೋದಿರಿ. ಆದುದರಿಂದ ಈ ಸಮಾಜದವರನ್ನು ನಾನು ವಾಗ್ದಾನಮಾಡಿದ ನಾಡಿಗೆ ನೀವು ಕರೆದುಕೊಂಡು ಹೋಗಕೂಡದು,” ಎಂದು ಹೇಳಿದರು.


ಆಗ ಮೋಶೆ ಆರೋನನಿಗೆ: “’ನನ್ನ ಬಳಿಯಿರುವವರ ಮುಖಾಂತರವೆ ನನ್ನ ಪರಿಶುದ್ಧತೆಯನ್ನು ತೋರ್ಪಡಿಸುವೆ ಜನರೆಲ್ಲರ ಸಮ್ಮುಖದಲೆ ನನ್ನ ಮಹಿಮೆಯನು ಶೃತಪಡಿಸುವೆ, ಎಂಬ ಸರ್ವೇಶ್ವರನ ನುಡಿಗೆ ಇದೊಂದು ದೃಷ್ಟಾಂತವೇ ಸರಿ,” ಎಂದನು. ಅದಕ್ಕೆ ಆರೋನನು ಮೌನವಾಗಿದ್ದನು.


ಕೂಡಲೆ ಅವರಿಬ್ಬರ ಕಣ್ಣುಗಳು ತೆರೆದವು. ತಾವು ಬೆತ್ತಲೆ ಆಗಿದ್ದೇವೆಂದು ತಿಳಿದು ಅವರು ಅಂಜೂರದ ಎಲೆಗಳನ್ನು ಹೊಲಿದು ಉಟ್ಟುಕೊಂಡರು.


ಅವರು ಊಟಮಾಡುತ್ತಿರುವಾಗ ದೈವಭಕ್ತನನ್ನು ಹಿಂದಕ್ಕೆ ಕರೆದುತಂದ ಆ ಪ್ರವಾದಿಗೆ ಸರ್ವೇಶ್ವರ ಒಂದು ಸಂದೇಶವನ್ನು ದಯಪಾಲಿಸಿದರು.


ಅನ್ನಪಾನಗಳನ್ನು ತೆಗೆದುಕೊಳ್ಳುವುದಕ್ಕಾಗಿ ಹಿಂದಿರುಗಿ ಬಂದುದರಿಂದ ನಿನ್ನ ಶವ ನಿನ್ನ ಕುಟುಂಬ ಸ್ಮಶಾನಭೂಮಿಯನ್ನು ಸೇರುವುದೇ ಇಲ್ಲವೆಂದು ಸರ್ವೇಶ್ವರ ಹೇಳುತ್ತಾರೆ,” ಎಂದನು.


ಆಗ ಆ ಪ್ರವಾದಿ ಅವನಿಗೆ, “ನೀನು ಸರ್ವೇಶ್ವರನ ಮಾತನ್ನು ಕೇಳದೆಹೋದುದರಿಂದ ನನ್ನನ್ನು ಬಿಟ್ಟು ಹೊರಟಕೂಡಲೆ ಒಂದು ಸಿಂಹವು ಬಂದು ನಿನ್ನನ್ನು ಕೊಲ್ಲುವುದು,” ಎಂದನು. ಅಂತೆಯೇ ಅವನು ಇವನನ್ನು ಬಿಟ್ಟುಹೋದ ಕೂಡಲೆ, ಒಂದು ಸಿಂಹವು ಬಂದು ಅವನನ್ನು ಕೊಂದುಹಾಕಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು