Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 13:16 - ಕನ್ನಡ ಸತ್ಯವೇದವು C.L. Bible (BSI)

16-17 ಅದಕ್ಕೆ ಅವನು, “ನಾನು ನಿನ್ನ ಸಂಗಡ ಬರಕೂಡದು; ಈ ಸ್ಥಳದಲ್ಲಿ ಅನ್ನಪಾನಗಳನ್ನು ತೆಗೆದುಕೊಳ್ಳಬಾರದೆಂದೂ ಬಂದ ದಾರಿಯನ್ನು ಬಿಟ್ಟು ಬೇರೆ ದಾರಿಯಿಂದ ಹಿಂದಿರುಗಿ ಹೋಗಬೇಕೆಂದೂ ನನಗೆ ಸರ್ವೇಶ್ವರನ ಅಪ್ಪಣೆಯಾಗಿದೆ,” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಅದಕ್ಕೆ ಅವನು, “ನಾನು ನಿನ್ನ ಸಂಗಡ ಬರವುದಿಲ್ಲ ಮತ್ತು ಈ ಸ್ಥಳದಲ್ಲಿ ಅನ್ನಪಾನಗಳನ್ನು ತೆಗೆದುಕೊಳ್ಳುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಅದಕ್ಕೆ ಅವನು - ನಾನು ನಿನ್ನ ಸಂಗಡ ಬರಕೂಡದು; ಈ ಸ್ಥಳದಲ್ಲಿ ಅನ್ನಪಾನಗಳನ್ನು ತೆಗೆದುಕೊಳ್ಳಕೂಡದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಆದರೆ ದೇವಮನುಷ್ಯನು, “ನಾನು ನಿನ್ನ ಜೊತೆಯಲ್ಲಿ ಮನೆಗೆ ಬರಲು ಸಾಧ್ಯವಿಲ್ಲ. ನಾನು ಈ ಸ್ಥಳದಲ್ಲಿ ನಿನ್ನೊಂದಿಗೆ ತಿನ್ನುವುದಿಲ್ಲ ಮತ್ತು ಕುಡಿಯುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಅದಕ್ಕವನು, “ನಾನು ನಿನ್ನ ಸಂಗಡ ಹಿಂದಿರುಗಲೂ ಕೂಡದು, ಹೋಗಲೂ ಕೂಡದು. ಈ ಸ್ಥಳದಲ್ಲಿ ನಿನ್ನ ಸಂಗಡ ರೊಟ್ಟಿ ತಿನ್ನುವುದಿಲ್ಲ, ನೀರು ಕುಡಿಯುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 13:16
8 ತಿಳಿವುಗಳ ಹೋಲಿಕೆ  

ಆದರೆ ಯೇಸು ಪೇತ್ರನತ್ತ ತಿರುಗಿ, “ಸೈತಾನನೇ, ತೊಲಗಿಲ್ಲಿಂದ; ನೀನು ನನಗೆ ಅಡೆತಡೆ; ನಿನ್ನ ಈ ಆಲೋಚನೆ ಮನುಷ್ಯರದ್ದೇ ಹೊರತು, ದೇವರದಲ್ಲ,” ಎಂದರು.


ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಸೈತಾನನೇ, ತೊಲಗು. ‘ನಿನ್ನ ದೇವರಾದ ಸರ್ವೇಶ್ವರನನ್ನು ಆರಾಧಿಸು. ಅವರೊಬ್ಬರಿಗೇ ಸೇವೆಸಲ್ಲಿಸು,’ ಎಂದೂ ಪವಿತ್ರಗ್ರಂಥದಲ್ಲಿ ಬರೆದಿದೆ,” ಎಂದರು.


ನೀವು ಕೂಡ ಈ ರಾತ್ರಿ ಇಲ್ಲೇ ತಂಗಿರಿ, ಸರ್ವೇಶ್ವರ ಏನು ಹೇಳುತ್ತಾರೋ ಅದನ್ನು ತಿಳಿದುಕೊಳ್ಳುತ್ತೇನೆ,” ಎಂದು ಬಾಲಾಕನು ದೂತರಿಗೆ ಉತ್ತರಕೊಟ್ಟನು.


ಬೆಳಿಗ್ಗೆ ಬಿಳಾಮನು ಬಾಲಾಕನ ಮುಖಂಡರಿಗೆ, “ನಾನು ನಿಮ್ಮ ಜೊತೆಯಲ್ಲಿ ಬರುವುದಕ್ಕೆ ಸರ್ವೇಶ್ವರನ ಅಪ್ಪಣೆಯಿಲ್ಲ. ನೀವು ನಿಮ್ಮ ನಾಡಿಗೆ ತೆರಳಿ,” ಎಂದನು.


ಈ ಉಪದೇಶವನ್ನು ಒಪ್ಪದಿರುವ ಯಾವನಾದರೂ ನಿಮಗೆ ಉಪದೇಶಮಾಡಬಂದರೆ, ಮನೆಯೊಳಗೆ ಸೇರಿಸಬೇಡಿ; ಅವನನ್ನು ಹರಸಲೂಬೇಡಿ.


ಆಗ ಆ ಮುದುಕನು, “ನೀನು ನನ್ನ ಮನೆಗೆ ಬಂದು ಊಟಮಾಡು,” ಎಂದು ಹೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು