1 ಅರಸುಗಳು 13:1 - ಕನ್ನಡ ಸತ್ಯವೇದವು C.L. Bible (BSI)1 ಜುದೇಯ ನಾಡಿನವನಾದ ಒಬ್ಬ ದೈವಭಕ್ತನು ಸರ್ವೇಶ್ವರನಿಂದ ಕಳುಹಿಸಲ್ಪಟ್ಟವನಾಗಿ ಬೇತೇಲಿಗೆ ಬಂದನು. ಯಾರೊಬ್ಬಾಮನು ಧೂಪಾರತಿ ಎತ್ತಲು ಪೀಠದ ಹತ್ತಿರ ನಿಂತುಕೊಂಡನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಆಗ ಯೆಹೂದ ದೇಶದವನಾದ ಒಬ್ಬ ದೇವರ ಮನುಷ್ಯನು ಯೆಹೋವನಿಂದ ಕಳುಹಿಸಲ್ಪಟ್ಟವನಾಗಿ ಬೇತೇಲಿಗೆ ಬಂದನು. ಯಾರೊಬ್ಬಾಮನು ಧೂಪಹಾಕುವುದಕ್ಕಾಗಿ ಯಜ್ಞವೇದಿಯ ಹತ್ತಿರ ನಿಂತುಕೊಂಡಿದ್ದನು ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಯೆಹೂದ ದೇಶದವನಾದ ಒಬ್ಬ ದೇವರ ಮನುಷ್ಯನು ಯೆಹೋವನಿಂದ ಕಳುಹಿಸಲ್ಪಟ್ಟವನಾಗಿ ಬೇತೇಲಿಗೆ ಬಂದನು. ಯಾರೊಬ್ಬಾಮನು ಧೂಪ ಸುಡುವದಕ್ಕಾಗಿ ವೇದಿಯ ಹತ್ತಿರ ನಿಂತುಕೊಳ್ಳಲು ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್1 ಯೆಹೂದ ದೇಶದವನಾದ ಒಬ್ಬ ದೇವಮನುಷ್ಯನು ಯೆಹೋವನ ಆಜ್ಞೆಯಂತೆ ಬೇತೇಲಿಗೆ ಬಂದನು. ಆಗ ಯಾರೊಬ್ಬಾಮನು ಧೂಪವನ್ನು ಅರ್ಪಿಸುತ್ತಾ, ಯಜ್ಞವೇದಿಕೆಯ ಹತ್ತಿರ ನಿಂತಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಯಾರೊಬ್ಬಾಮನು ಧೂಪವನ್ನರ್ಪಿಸಲು ಬಲಿಪೀಠದ ಬಳಿಯಲ್ಲಿ ನಿಂತಿರುವಾಗ, ಯೆಹೂದದಿಂದ ಬೇತೇಲಿಗೆ ಯೆಹೋವ ದೇವರ ಮಾತಿನಂತೆ ಒಬ್ಬ ದೇವರ ಮನುಷ್ಯ ಬಂದನು. ಅಧ್ಯಾಯವನ್ನು ನೋಡಿ |