Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 11:27 - ಕನ್ನಡ ಸತ್ಯವೇದವು C.L. Bible (BSI)

27 ಅವನು ದಂಗೆಯೆದ್ದ ವಿವರಣೆ ಹೀಗಿದೆ : ಸೊಲೊಮೋನನು ಮಿಲ್ಲೋಕೋಟೆಯನ್ನು ಕಟ್ಟಿಸಿ ತನ್ನ ತಂದೆ ದಾವೀದನ ಪಟ್ಟಣದ ದುರ್ಬಲ ಸ್ಥಳವನ್ನು ಭದ್ರಪಡಿಸುತ್ತಿರುವಾಗ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಅವನು ತಿರುಗಿ ಬಿದ್ದದ್ದು ಹೇಗೆಂದರೆ, ಸೊಲೊಮೋನನು ಮಿಲ್ಲೋ ಕೋಟೆಯನ್ನು ಕಟ್ಟಿಸಿ ತನ್ನ ತಂದೆಯಾದ ದಾವೀದನ ಪಟ್ಟಣದ ದುರ್ಬಲ ಸ್ಥಳಗಳನ್ನು ಭದ್ರಪಡಿಸುತ್ತಿರುವಾಗ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಅವನು ತಿರುಗಿ ಬಿದ್ದದ್ದು ಹೇಗಂದರೆ - ಸೊಲೊಮೋನನು ವಿುಲ್ಲೋ ಕೋಟೆಯನ್ನು ಕಟ್ಟಿಸಿ ತನ್ನ ತಂದೆಯಾದ ದಾವೀದನ ಪಟ್ಟಣದ ದುರ್ಬಲಸ್ಥಳವನ್ನು ಭದ್ರಪಡಿಸುತ್ತಿರುವಾಗ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಯಾರೊಬ್ಬಾಮನು ರಾಜನ ವಿರುದ್ಧ ಏಕೆ ತಿರುಗಿ ಬಿದ್ದನೆಂಬ ಕಥೆಯು ಹೀಗಿದೆ: ಸೊಲೊಮೋನನು ಮಿಲ್ಲೋ ಕೋಟೆಯನ್ನು ಕಟ್ಟುತ್ತಿದ್ದನು ಮತ್ತು ತನ್ನ ತಂದೆಯಾದ ದಾವೀದನ ನಗರದ ಗೋಡೆಯನ್ನು ಭದ್ರಪಡಿಸುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಅವನು ಅರಸನಿಗೆ ವಿರೋಧವಾಗಿ ದಂಗೆಯೆದ್ದ ಕಾರಣವೇನೆಂದರೆ, ಸೊಲೊಮೋನನು ಮಿಲ್ಲೋ ಕೋಟೆಯನ್ನು ಕಟ್ಟಿಸಿ, ತನ್ನ ತಂದೆಯಾದ ದಾವೀದನ ಪಟ್ಟಣದಲ್ಲಿ ಬಿದ್ದುಹೋದವುಗಳನ್ನು ಕಟ್ಟಿಸುತ್ತಿರುವಾಗ,

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 11:27
12 ತಿಳಿವುಗಳ ಹೋಲಿಕೆ  

ಫರೋಹನ ಮಗಳು (ದಾವೀದನಗರದಿಂದ) ತನಗೋಸ್ಕರ ಕಟ್ಟಿಸಿದ್ದ ಮಂದಿರಕ್ಕೆ ಬಂದಳು; ಅನಂತರ ಸೊಲೊಮೋನನು ಮಿಲ್ಲೋಕೋಟೆಯನ್ನು ಕಟ್ಟಿಸಿದನು.


ಸರ್ವೇಶ್ವರನ ಆಲಯ, ಅರಮನೆ, ಮಿಲ್ಲೋಕೋಟೆ, ಜೆರುಸಲೇಮಿನ ಪೌಳಿಗೋಡೆ, ಹಾಚೋರ್, ಮೆಗಿದ್ದೋ ಹಾಗು ಗೆಜೆರ್ ಇವುಗಳನ್ನು ಸೊಲೊಮೋನನು ಬಿಟ್ಟೀಕೆಲಸದವರಿಂದ ಕಟ್ಟಿಸಿದನು.


ಸರ್ವೇಶ್ವರ ಇಂತೆನ್ನುತ್ತಾರೆ: “ದಿನ ಬರಲಿದೆ. ಅಂದು ಬಿದ್ದುಹೋಗಿರುವ ದಾವೀದನ ಗುಡಾರವನ್ನು ಮರಳಿ ಎಬ್ಬಿಸುವೆನು. ಅದರ ಬಿರುಕುಗಳನ್ನು ಮುಚ್ಚುವೆನು. ಹಾಳಾದದ್ದನ್ನು ಎತ್ತಿ ನಿಲ್ಲಿಸುವೆನು. ಮೊದಲು ಇದ್ದಂತೆಯೇ ಪುನಃ ನಿರ್ಮಿಸುವೆನು.


ಸರ್ವೇಶ್ವರನ ದಿನದಲ್ಲಿ ಯುದ್ಧಕ್ಕೆ ನಿಲ್ಲಬೇಕೆಂದು ನೀವು ಪೌಳಿಯ ಒಡಕುಗಳನ್ನೇರಲಿಲ್ಲ. ಇಸ್ರಯೇಲ್ ವಂಶದ ರಕ್ಷಣೆಗಾಗಿ ಗೋಡೆಯನ್ನು ಗಟ್ಟಿಮಾಡಲೂ ಇಲ್ಲ.


ಅವರ ಮೇಲೆ ನೀ ಕೈಯೆತ್ತಿದರೂ, ಸರ್ವೇಶ್ವರಾ, ಲಕ್ಷಿಸರವರು ನಿನ್ನನ್ನು. ನಾಚಲಿ ಅವರು ನೋಡಿ ನಿನ್ನ ಸ್ವಜನಾಭಿಮಾನವನು ದಹಿಸಿಬಿಡಲಿ ಅಗ್ನಿಜ್ವಾಲೆಯು ಆ ನಿನ್ನ ವಿರೋಧಿಗಳನು.


ದಾವೀದನ ಕೋಟೆಯ ಬಿರುಕುಗಳು ಬಹಳವೆಂಬುದನ್ನು ಗಮನಿಸಿದಿರಿ. ಕೆಳಗಿನ ಕೊಳಕ್ಕೆ ನೀರನ್ನು ಹಾಯಿಸಿದಿರಿ.


ನೀನು ಗರ್ವದಿಂದ ಮೂರ್ಖನಾಗಿ ನಡೆದಿದ್ದರೆ, ದುರಾಲೋಚನೆಯನ್ನು ಮಾಡಿದ್ದರೆ ಬಾಯಿಯ ಮೇಲೆ ಕೈಯಿಟ್ಟುಕೊ.


ನಾಡನು ನಡುಗಿಸಿ ಬಿಡಿಬಿಡಿಯಾಗಿಸಿದೆ I ಅದರೊಡಕನು ಸರಿಮಾಡು ತಡವರಿಸದೆ II


ಸನ್ಬಲ್ಲಟನು, ಟೋಬೀಯನು, ಅರೇಬಿಯರು, ಅಮ್ಮೋನಿಯರು ಹಾಗು ಅಷ್ಡೋದಿನವರು ಜೆರುಸಲೇಮಿನ ಗೋಡೆಯ ದುರಸ್ತಿಕಾರ್ಯ ಮುಂದುವರಿದಿದೆ ಹಾಗು ಅದರ ಸಂದುಗಳು ಮತ್ತೆ ಮುಚ್ಚಿಕೊಳ್ಳುತ್ತಿವೆ ಎಂಬುದನ್ನು ಕೇಳಿದರು.


ನಾವು ಬಂದಿರುವ ಸಂಗತಿಯೇ ಬೇರೆ; ಎಫ್ರಯಿಮ್ ಪರ್ವತ ಪ್ರದೇಶದ ಬಿಕ್ರೀಯ ಮಗನಾದ ಶೆಬನೆಂಬವನು ಅರಸ ದಾವೀದನಿಗೆ ವಿರೋಧವಾಗಿ ಕೈಯೆತ್ತಿದ್ದಾನೆ. ಅವನನ್ನು ಒಪ್ಪಿಸಿಬಿಡಿ; ನಾನು ಊರನ್ನು ಬಿಟ್ಟು ಹೋಗುತ್ತೇನೆ,” ಎಂದು ಹೇಳಿದನು. ಅದಕ್ಕೆ ಆ ಸ್ತ್ರೀ, “ನೋಡಿ, ಈಗಲೇ ಅವನ ತಲೆಯನ್ನು ಗೋಡೆಯ ಕಿಂಡಿಯಿಂದ ನಿಮ್ಮ ಕಡೆಗೆ ಎಸೆಯಲಾಗುವುದು,” ಎಂದು ಉತ್ತರಕೊಟ್ಟು ತನ್ನ ಜನರ ಬಳಿಗೆ ಹೋಗಿ ಅವರಿಗೆ ವಿವೇಕದಿಂದ ಈ ಸಂಗತಿಯನ್ನು ತಿಳಿಸಿದಳು.


ಆದರೂ ಅವನು, ಈಗ ‘ದಾವೀದನಗರ’ ಎನಿಸಿಕೊಳ್ಳುವ ಸಿಯೋನ್ ಕೋಟೆಯನ್ನು ಸ್ವಾಧೀನಪಡಿಸಿಕೊಂಡನು.


ಯೆಹೋವಾಷನ ಉದ್ಯೋಗಸ್ಥರು ಅವನಿಗೆ ವಿರೋಧವಾಗಿ ಒಳಸಂಚು ಮಾಡಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು