1 ಅರಸುಗಳು 10:26 - ಕನ್ನಡ ಸತ್ಯವೇದವು C.L. Bible (BSI)26 ಸೊಲೊಮೋನನು ರಥಗಳನ್ನೂ ರಾಹುತರನ್ನೂ ಸಂಗ್ರಹಿಸುತ್ತಿದ್ದನು. ಅವನ ರಥಗಳು ಸಾವಿರದ ನಾನೂರು; ರಾಹುತರು ಹನ್ನೆರಡು ಸಾವಿರ. ಇವುಗಳಲ್ಲಿ ಕೆಲವನ್ನು ಜೆರುಸಲೇಮಿನಲ್ಲಿ ತನ್ನ ಬಳಿಯಲ್ಲೇ ಇರಿಸಿದ್ದನು; ಉಳಿದವುಗಳನ್ನು ರಥಗಳಿಗಾಗಿಯೇ ನೇಮಿಸಿದ್ದ ಪಟ್ಟಣಗಳಲ್ಲಿ ಇರಿಸಿದ್ದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201926 ಸೊಲೊಮೋನನು ರಥಗಳನ್ನೂ ಮತ್ತು ರಾಹುತರನ್ನೂ ಸಂಗ್ರಹಿಸಿದನು. ಅವನ ರಥಗಳು ಸಾವಿರದ ನಾನೂರು. ರಾಹುತರು ಹನ್ನೆರಡು ಸಾವಿರ. ಇವುಗಳಲ್ಲಿ ಕೆಲವನ್ನು ಯೆರೂಸಲೇಮಿನಲ್ಲಿ ತನ್ನ ಬಳಿಯಲ್ಲಿಯೂ, ಉಳಿದವುಗಳನ್ನು ರಥಗಳಿಗೋಸ್ಕರ ನೇಮಿಸಿದ ಪಟ್ಟಣಗಳಲ್ಲಿಯೂ ಇರಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)26 ಸೊಲೊಮೋನನು ರಥಗಳನ್ನೂ ರಾಹುತರನ್ನೂ ಸಂಗ್ರಹಿಸಿದನು. ಅವನ ರಥಗಳು ಸಾವಿರದ ನಾನೂರು; ರಾಹುತರು ಹನ್ನೆರಡು ಸಾವಿರ. ಇವುಗಳಲ್ಲಿ ಕೆಲವನ್ನು ಯೆರೂಸಲೇವಿುನಲ್ಲಿ ತನ್ನ ಬಳಿಯಲ್ಲಿಯೂ ಉಳಿದವುಗಳನ್ನು ರಥಗಳಿಗೋಸ್ಕರ ನೇವಿುಸಿದ ಪಟ್ಟಣಗಳಲ್ಲಿಯೂ ಇರಿಸಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್26 ಆದ್ದರಿಂದ ಅಸಂಖ್ಯವಾದ ರಥಗಳೂ ಕುದುರೆಗಳೂ ಸೊಲೊಮೋನನಲ್ಲಿದ್ದವು. ಅವನಲ್ಲಿ ಒಂದು ಸಾವಿರದ ನಾನೂರು ರಥಗಳು ಮತ್ತು ಹನ್ನೆರಡು ಸಾವಿರ ಕುದುರೆಗಳಿದ್ದವು. ಸೊಲೊಮೋನನು ಈ ರಥಗಳಿಗಾಗಿ ವಿಶೇಷವಾದ ನಗರಗಳನ್ನು ಕಟ್ಟಿಸಿದನು. ಆ ನಗರಗಳಲ್ಲಿ ರಥಗಳನ್ನು ಇರಿಸಿದನು. ರಾಜನಾದ ಸೊಲೊಮೋನನು ಕೆಲವು ರಥಗಳನ್ನು ಜೆರುಸಲೇಮಿನಲ್ಲಿ ತನ್ನ ಹತ್ತಿರ ಇಟ್ಟುಕೊಂಡನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ26 ಇದಲ್ಲದೆ ಸೊಲೊಮೋನನು ರಥಗಳನ್ನೂ, ರಾಹುತರನ್ನೂ ಕೂಡಿಸಿದನು. ಸಾವಿರದ ನಾನೂರು ರಥಗಳು, ಹನ್ನೆರಡು ಸಾವಿರ ಕುದುರೆಯ ರಾಹುತರು ಇದ್ದರು. ಇವುಗಳಲ್ಲಿ ಕೆಲವನ್ನು ಯೆರೂಸಲೇಮಿನಲ್ಲಿ ತನ್ನ ಬಳಿಯಲ್ಲಿಯೇ ಇರಿಸಿದನು, ಉಳಿದವುಗಳನ್ನು ರಥಗಳ ಪಟ್ಟಣಗಳಲ್ಲಿಯೂ ಇರಿಸಿದನು. ಅಧ್ಯಾಯವನ್ನು ನೋಡಿ |