Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಹೋಶೇಯ 9:8 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಎಫ್ರಾಯೀಮು ನನ್ನ ದೇವರ ವಿಷಯವಾಗಿ ಹೊಂಚು ಹಾಕುತ್ತದೆ; ಪ್ರವಾದಿಯ ಮಾರ್ಗಗಳಲ್ಲೆಲ್ಲಾ ಬೇಟೆಗಾರನ ಬಲೆಯು ಒಡ್ಡಿದೆ, ಅವನ ದೇವರ ಆಲಯದಲ್ಲಿಯೂ ಶತ್ರುವಿನ ವಿರೋಧವು ಕಾದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಎಫ್ರಯಿಮನ ದೇವಜನರಿಗೆ ಪ್ರವಾದಿಯೇ ಕಾವಲುಗಾರ. ಆದರೂ ಅವನ ಹಾದಿಯಲ್ಲೆಲ್ಲ ಬೇಟೆಯ ಬಲೆ ಒಡ್ಡಲಾಗಿದೆ. ದೇವರ ಆಲಯದಲ್ಲೂ ಅವನಿಗೆ ಹಗೆತನ ಕಾದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಎಫ್ರಾಯೀಮು ನನ್ನ ದೇವರ ವಿಷಯವಾಗಿ ಹೊಂಚುಹಾಕುತ್ತದೆ; ಪ್ರವಾದಿಯ ಮಾರ್ಗಗಳಲ್ಲೆಲ್ಲಾ ಬೇಟೆಯ ಬಲೆಯು ಒಡ್ಡಿದೆ, ಅವನ ದೇವರ ಆಲಯದಲ್ಲಿಯೂ ಶತ್ರುವಿರೋಧವು ಕಾದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ದೇವರೂ ಪ್ರವಾದಿಯೂ ಕಾವಲುಗಾರರಂತೆ ಎಫ್ರಾಯೀಮನ್ನು ಕಾಪಾಡುತ್ತಿದ್ದಾರೆ. ಆದರೆ ದಾರಿಯಲ್ಲಿ ಅನೇಕ ಉರುಲುಗಳಿವೆ. ಜನರು ಪ್ರವಾದಿಯನ್ನು ಹಗೆ ಮಾಡುತ್ತಾರೆ. ದೇವರ ಆಲಯದಲ್ಲಿಯೂ ಅವನನ್ನು ಹಗೆ ಮಾಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ನನ್ನ ದೇವರೊಂದಿಗೆ ಪ್ರವಾದಿಯು ಎಫ್ರಾಯೀಮನ ಮೇಲೆ ಕಾವಲುಗಾರನಾಗಿದ್ದಾನೆ, ಆದರೂ ಅವನ ಮಾರ್ಗಗಳಲ್ಲೆಲ್ಲ ಬೇಟೆಯ ಬಲೆ ಒಡ್ಡಲಾಗಿದೆ ಮತ್ತು ಅವನ ದೇವರ ಮನೆಯಲ್ಲಿ ದ್ವೇಷವಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಹೋಶೇಯ 9:8
42 ತಿಳಿವುಗಳ ಹೋಲಿಕೆ  

ಯಾಜಕರೇ, ಇದನ್ನು ಕೇಳಿರಿ, ಇಸ್ರಾಯೇಲ್ ಕುಲದವರೇ, ಆಲಿಸಿರಿ; ರಾಜವಂಶದವರೇ, ಕಿವಿಗೊಡಿರಿ; ನೀವು ಮಿಚ್ಪದಲ್ಲಿ ಉರುಲಾಗಿಯೂ, ತಾಬೋರಿನಲ್ಲಿ ಬಲೆಯಾಗಿಯೂ ಇದ್ದ ಕಾರಣ ನಿಮಗೆ ನ್ಯಾಯತೀರ್ಪು ಬಂದಿದೆ.


“ನರಪುತ್ರನೇ, ನಾನು ನಿನ್ನನ್ನು ಇಸ್ರಾಯೇಲ್ ವಂಶದವರ ಮೇಲೆ ಕಾವಲುಗಾರನನ್ನಾಗಿ ನೇಮಿಸಿದ್ದೇನೆ. ಹೀಗಿರಲು ನನ್ನ ಬಾಯಿಂದ ಹೊರಡುವ ಮಾತನ್ನು ಕೇಳಿ, ನನ್ನ ಪರವಾಗಿ ಅವರನ್ನು ಎಚ್ಚರಿಸು.


ಅವರಲ್ಲಿ ಉತ್ತಮನೂ ಮುಳ್ಳಿನ ಪೊದೆಗೆ ಸಮಾನ, ಸತ್ಯವಂತನೂ ಕೂಡ ಮುಳ್ಳುಬೇಲಿಗಿಂತ ಕಡೆ. ನಿನ್ನ ಕಾವಲುಗಾರರು ಮುಂತಿಳಿಸಿದ ನಿನ್ನ ದಂಡನೆಯ ದಿನ ಬಂದಿದೆ. ಈಗ ನಿನ್ನ ಜನರಿಗೆ ಭ್ರಾಂತಿ ಹಿಡಿಯುವುದು.


ಯೆರೂಸಲೇಮೇ, ನಾನು ನಿನ್ನ ಪೌಳಿಗೋಡೆಗಳಲ್ಲಿ ಕಾವಲುಗಾರರನ್ನು ನೇಮಿಸಿದ್ದೇನೆ; ಅವರು ಹಗಲೂ, ಇರುಳೂ ಮೌನವಾಗಿರರು. ಯೆಹೋವನನ್ನು ಸ್ಮರಿಸುವವರೇ,


ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ. ಅವರು ಲೆಕ್ಕ ಒಪ್ಪಿಸಬೇಕಾದವರಾಗಿರುವುದರಿಂದ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ದುಃಖಿಸದೆ ಸಂತೋಷದಿಂದ ಇದನ್ನು ಮಾಡುವಂತೆ ನಡೆದುಕೊಳ್ಳಿರಿ. ಏಕೆಂದರೆ ಅವರು ವ್ಯಸನದಿಂದಿರುವುದು ನಿಮಗೆ ಪ್ರಯೋಜನಕರವಾದದ್ದಲ್ಲ.


ಬೇರೆ ಯಾರೂ ಮಾಡದಿರುವ ಕ್ರಿಯೆಗಳನ್ನು ನಾನು ಅವರ ನಡುವೆ ಮಾಡದೆಹೋಗಿದ್ದರೆ ಅವರಿಗೆ ಪಾಪವು ಇರುತ್ತಿರಲಿಲ್ಲ. ಆದರೆ ಈಗ ಅವರು ನನ್ನ ಅದ್ಭುತಕಾರ್ಯಗಳನ್ನು ನೋಡಿದ್ದಾರೆ, ಆದರೂ ನನ್ನನ್ನೂ ನನ್ನ ತಂದೆಯನ್ನೂ ದ್ವೇಷಿಸಿದ್ದಾರೆ


“ಆದುದರಿಂದ ನರಪುತ್ರನೇ, ನಾನು ನಿನ್ನನ್ನು ಇಸ್ರಾಯೇಲ್ ವಂಶದವರಿಗೆ ಕಾವಲುಗಾರನನ್ನಾಗಿ ನೇಮಿಸಿದ್ದೇನೆ; ನೀನು ನನ್ನ ಬಾಯಿಂದ ಹೊರಡುವ ಮಾತನ್ನು ಕೇಳಿ, ನನ್ನ ದೂತನಾಗಿ ಅವರನ್ನು ಎಚ್ಚರಿಸು.


ಚೀಯೋನಿನ ಮಧ್ಯದಲ್ಲಿ ಶಿಷ್ಟರ ರಕ್ತವನ್ನು ಸುರಿಸಿದ ಯಾಜಕರ ಪಾಪ ಮತ್ತು ಪ್ರವಾದಿಗಳ ದೋಷಗಳಿಂದಲೇ ಈ ಗತಿ ಬಂತು.


ನಿನ್ನ ಪ್ರವಾದಿಗಳು ಕಂಡ ದರ್ಶನ, ಹೇಳಿದ ಪ್ರವಾದನೆಯ ವಾಕ್ಯಗಳು ವ್ಯರ್ಥ, ನಿಸ್ಸಾರ; ಅವರು ನಿನ್ನ ದೋಷವನ್ನು ಬೈಲಿಗೆ ತಾರದ ಕಾರಣ ನಿನ್ನ ದುರವಸ್ಥೆಯು ನೀಗಲಿಲ್ಲ; ನಿನ್ನ ವಿಷಯವಾಗಿ ಅವರಿಗೆ ಕಂಡುಬಂದ ವ್ಯರ್ಥ ದೈವೋಕ್ತಿಗಳು ನೀನು ಗಡೀಪಾರಾಗಿ ಒಯ್ಯಲ್ಪಡುವುದಕ್ಕೆ ಆಸ್ಪದವಾದವು.


ಒಂದು ದಿನವು ಬರುವುದು, ಆಗ ಎಫ್ರಾಯೀಮಿನ ಗುಡ್ಡಗಳ ಮೇಲಿರುವ ಕಾವಲುಗಾರರು, ಏಳಿರಿ, ಚೀಯೋನಿಗೆ, ನಮ್ಮ ದೇವರಾದ ಯೆಹೋವನ ಸನ್ನಿಧಾನಕ್ಕೆ ಹೋಗೋಣ ಬನ್ನಿ’ ಎಂದು ಕೂಗುವರು” ಎಂದು ಹೇಳುವನು.


ಅದಕ್ಕೆ ನಾನು, “ಅಯ್ಯೋ, ಕರ್ತನಾದ ಯೆಹೋವನೇ, ಇಗೋ ಪ್ರವಾದಿಗಳು ಈ ಜನರಿಗೆ, ‘ಖಡ್ಗವು ನಿಮ್ಮ ಕಣ್ಣಿಗೆ ಕಾಣದು, ಕ್ಷಾಮವು ನಿಮಗೆ ಸಂಭವಿಸದು; ಯೆಹೋವನು ಈ ಸ್ಥಳದಲ್ಲಿ ತಾನು ಪ್ರಮಾಣ ಮಾಡಿದಂತೆ ಸಮಾಧಾನವನ್ನು ನಿಮಗೆ ಕೊಡುವನು ಎಂದು ನುಡಿಯುತ್ತಾರೆ’” ಎಂಬುದಾಗಿ ಹೇಳಿದೆನು.


‘ತುತ್ತೂರಿಯ ಶಬ್ದವನ್ನು ಕೇಳಿರಿ’ ಎಂದು ನಾನು ಅವರ ಮೇಲೆ ಕಾವಲುಗಾರರನ್ನು ನೇಮಿಸಲು, ‘ನಾವು ಕೇಳುವುದಿಲ್ಲ’ ಎಂದು ಹೇಳಿದರು.


ಸಮಾಧಾನವಿಲ್ಲದಿದ್ದರೂ, ಸಮಾಧಾನ ಎಂದು ಹೇಳಿ ನನ್ನ ಜನರ ಗಾಯವನ್ನು ಮೇಲೆ ಮೇಲೆ ವಾಸಿಮಾಡಿದ್ದಾರೆ.


ಊರಿನಲ್ಲಿ ತಿರುಗುವ ಕಾವಲುಗಾರರ ಕೈಗೆ ಸಿಕ್ಕಿದೆನು, “ನನ್ನ ಪ್ರಾಣಪ್ರಿಯನನ್ನು ಕಂಡಿರಾ?” ಎಂದು ಅವರನ್ನು ವಿಚಾರಿಸಿದೆನು.


ಒಂದು ದಿನ ಜನರು ಒಬ್ಬ ಸತ್ತವನನ್ನು ಸಮಾಧಿಮಾಡುವುದಕ್ಕೆ ಹೋದಾಗ, ಮೋವಾಬ್ಯರ ಗುಂಪು ಬರುತ್ತಿರುವುದನ್ನು ಕಂಡು ಶವವನ್ನು ಎಲೀಷನ ಸಮಾಧಿಯಲ್ಲಿ ಬಿಸಾಡಿ ಓಡಿಹೋದರು. ಸತ್ತ ಮನುಷ್ಯನ ದೇಹವು ಎಲೀಷನ ಎಲುಬುಗಳಿಗೆ ತಗಲಿದ ಕೂಡಲೆ ಅವನು ಜೀವ ಬಂದು ಎದ್ದು ನಿಂತನು.


ಆ ಸರದಾರನು ದೇವರ ಮನುಷ್ಯನಿಗೆ, “ಯೆಹೋವನು ಆಕಾಶದಲ್ಲಿ ಕಿಂಡಿಗಳನ್ನು ಕೊರೆದರೂ, ಇದು ಸಂಭವಿಸಲು ಸಾಧ್ಯವಿಲ್ಲ?” ಎಂದು ಹೇಳಿದ್ದನು. ಆಗ ದೇವರ ಮನುಷ್ಯನಾದ ಎಲೀಷನು ಅವನಿಗೆ, “ನೀನು, ಅದನ್ನು ಕಣ್ಣಾರೆ ಕಾಣುವಿ, ಆದರೆ ಅದನ್ನು ಅನುಭವಿಸುವುದಿಲ್ಲ” ಎಂದು ನುಡಿದಿದ್ದನು.


ಇದನ್ನು ಕೇಳಿ ಅರಸನ ಸಮೀಪವರ್ತಿಯಾದ ಸರದಾರನು ದೇವರ ಮನುಷ್ಯನಿಗೆ, “ಯೆಹೋವನು ಆಕಾಶದಲ್ಲಿ ಕಿಂಡಿಗಳನ್ನು ಕೊರೆದರೂ ಇದು ಸಂಭವಿಸಲಾರದು” ಎನ್ನಲು ಎಲೀಷನು ಅವನಿಗೆ, “ಅದು ಸಂಭವಿಸುವುದನ್ನು ನೀನು ಕಣ್ಣಾರೆ ಕಾಣುವಿ, ಆದರೆ ನೀನು ಅದನ್ನು ಅನುಭವಿಸುವುದಿಲ್ಲ” ಎಂದು ಹೇಳಿದನು.


ನಾಮಾನನ ಕುಷ್ಠವು ನಿನ್ನನ್ನೂ, ನಿನ್ನ ಸಂತಾನದವರನ್ನೂ ಸದಾಕಾಲ ಹಿಡಿದಿರುವುದು” ಎಂದನು. ಕೂಡಲೆ ಅವನಿಗೆ ಕುಷ್ಠ ಹತ್ತಿತು. ಗೇಹಜಿ ಹಿಮದಂತೆ ಬಿಳುಪಾಗಿ ಎಲೀಷನ ಸನ್ನಿಧಿಯಿಂದ ಹೊರಟುಹೋದನು.


ಅವನು ಯೊರ್ದನ್ ನದಿಗೆ ಹೋಗಿ ಏಳು ಸಾರಿ ಅದರಲ್ಲಿ ಮುಳುಗಿ ಎದ್ದನು. ಕೂಡಲೆ ದೇವರ ಮನುಷ್ಯನ ಮಾತಿಗನುಸಾರವಾಗಿ ಅವನ ದೇಹವು ಕೂಸಿನ ದೇಹದಂತೆ ಶುದ್ಧವಾಯಿತು.


ಅದಕ್ಕೆ ಅವನು, “ಇಷ್ಟನ್ನು ನೂರು ಮಂದಿಗೆ ಹೇಗೆ ಬಡಿಸಲಿ” ಎಂದನು. ಎಲೀಷನು ಅವನಿಗೆ, “ಇರಲಿ, ಕೊಡು. ಅವರು ಊಟಮಾಡಲಿ. ಅವರು ಅದನ್ನು ಊಟಮಾಡಿ ತೃಪ್ತರಾಗಿ ಇನ್ನೂ ಉಳಿಸಿಕೊಳ್ಳುವರೆಂದು ಯೆಹೋವನು ಎನ್ನುತ್ತಾನೆ” ಎಂದು ಹೇಳಿದನು.


ಆಗ ಎಲೀಷನು, “ಹಿಟ್ಟನ್ನು ತಂದು ಕೊಡಿರಿ” ಎಂದು ಹೇಳಿದನು. ಅವರು ತಂದಾಗ, ಅದನ್ನು ಆ ಪಾತ್ರೆಯೊಳಗೆ ಹಾಕಿ, “ಈಗ ಇದನ್ನು ಬಡಿಸಬಹುದು. ಜನರು ಇದನ್ನು ಊಟಮಾಡಲಿ” ಎಂದನು. ಕೂಡಲೇ ಪಾತ್ರೆಯಲ್ಲಿದ್ದ ವಿಷವೆಲ್ಲಾ ಹೋಯಿತು.


ಅವನು ಬುಗ್ಗೆಗೆ ಹೋಗಿ ಆ ನೀರಿನಲ್ಲಿ ಉಪ್ಪು ಹಾಕಿ, “ಇನ್ನು ಮುಂದೆ ಈ ನೀರಿನಿಂದ ಮರಣವೂ ಬಂಜೆತನವೂ ಉಂಟಾಗದಂತೆ ಇದರಲ್ಲಿದ್ದ ದೋಷವನ್ನೆಲ್ಲಾ ಪರಿಹರಿಸಿದ್ದೇನೆ ಎಂಬುದಾಗಿ ಯೆಹೋವನು ಅನ್ನುತ್ತಾನೆ” ಎಂದು ಹೇಳಿದನು.


“ಎಲೀಯನ ದೇವರಾದ ಯೆಹೋವನೆಲ್ಲಿ?” ಎಂದು ಅಂದುಕೊಂಡು, ಆ ಕಂಬಳಿಯಿಂದ ನೀರನ್ನು ಹೊಡೆಯಲು ಅದು ಎರಡು ಭಾಗವಾಯಿತು. ಎಲೀಷನು ಹೊಳೆಯನ್ನು ದಾಟಿಹೋದನು.


ಮೀಕಾಯೆಹುವು ಅರಸನಿಗೆ, “ನೀನು ಸುರಕ್ಷಿತವಾಗಿ ಬರುವುದಾದರೆ ನಾನು ನುಡಿದದ್ದು ಯೆಹೋವನ ಮಾತಲ್ಲವೆಂದು ತಿಳಿದುಕೋ” ಎಂದು ಹೇಳಿ “ಎಲ್ಲಾ ಜನರೇ, ಇದನ್ನು ಕೇಳಿರಿ” ಎಂದು ಕೂಗಿದನು.


‘ಹೇಗೆ ಪ್ರೇರೇಪಿಸುವಿ?’ ಎಂದು ಯೆಹೋವನು ಕೇಳಲು ಅದು, ‘ನಾನು ಅಸತ್ಯವನ್ನಾಡುವ ಆತ್ಮವಾಗಿ ಅವನ ಎಲ್ಲಾ ಪ್ರವಾದಿಗಳಲ್ಲಿ ಸೇರುವೆನು’ ಎಂದು ಉತ್ತರಕೊಟ್ಟಿತು. ಆಗ ಆತನು ಅದಕ್ಕೆ, ‘ಹೋಗಿ ಅದರಂತೆ ಮಾಡು ಅವನನ್ನು ಪ್ರೇರೇಪಿಸಿ ಸಫಲವಾಗುವಿ’ ಅಂದನು.


ನನ್ನ ಸುಳ್ಳಿನಿಂದ ದೇವರ ಸತ್ಯವು ಪ್ರಸಿದ್ಧಿಗೆ ಬಂದು ಆತನ ಮಹಿಮೆ ಹೆಚ್ಚಾಗುವುದಾದರೆ ಇನ್ನು ನನ್ನನ್ನು ಪಾಪಿಯೆಂದು ಪರಿಗಣಿಸುವುದು ಯಾಕೆ?


ಅವರಲ್ಲಿ ಕೆನಾನನ ಮಗನಾದ ಚಿದ್ಕೀಯ ಎಂಬುವನು ಕಬ್ಬಿಣದ ಕೊಂಬುಗಳನ್ನು ಮಾಡಿಸಿ, ತಲೆಗೆ ಕಟ್ಟಿಕೊಂಡು ಬಂದು, “ಯೆಹೋವನು ಹೀಗೆನ್ನುತ್ತಾನೆ, ಅರಾಮ್ಯರು ನಿರ್ಮೂಲರಾಗುವವರೆಗೂ ಇವುಗಳಿಂದ ನೀನು ಅವರನ್ನು ಇರಿದು ಕೊಂದುಹಾಕುವಿ” ಎಂದನು.


ಆಗ ಇಸ್ರಾಯೇಲರ ಅರಸನು ತನ್ನ ರಾಜ್ಯದಲ್ಲಿದ್ದ ಸುಮಾರು ನಾನೂರು ಪ್ರವಾದಿಗಳನ್ನು ಕೂಡಿಸಿ ಅವರನ್ನು, “ನಾನು ರಾಮೋತ್ ಗಿಲ್ಯಾದಿನ ಮೇಲೆ ಯುದ್ಧಕಾಗಿ ಹೋಗಬಹುದೋ ಹೋಗಬಾರದೋ?” ಎಂದು ಕೇಳಲು ಅವರು, “ಹೋಗಬಹುದು, ಕರ್ತನು ಅದನ್ನು ಅರಸನ ಕೈಗೆ ಒಪ್ಪಿಸುವನು” ಅಂದರು.


ನೀನು ಈಗ ಎಲ್ಲಾ ಇಸ್ರಾಯೇಲರನ್ನೂ, ಈಜೆಬೆಲಳಿಂದ ಪೋಷಣೆ ಹೊಂದುವ ಬಾಳನ ನಾನೂರೈವತ್ತು ಪ್ರವಾದಿಗಳನ್ನು ಮತ್ತು ಅಶೇರ ದೇವತೆಯ ನಾನೂರು ಪ್ರವಾದಿಗಳನ್ನು ಕರ್ಮೆಲ್ ಬೆಟ್ಟಕ್ಕೆ ಕರೆಯಿಸು” ಎಂದು ಹೇಳಿದನು.


ಅನೇಕ ದಿನಗಳಾದ ನಂತರ ಎಲೀಯನಿಗೆ ಯೆಹೋವನ ವಾಕ್ಯವುಂಟಾಯಿತು. ಬರಗಾಲದ ಮೂರನೆಯ ವರ್ಷದಲ್ಲಿ ಯೆಹೋವನು ಅವನಿಗೆ, “ನೀನು ಹೋಗಿ ಅಹಾಬನನ್ನು ಕಾಣು. ನಾನು ದೇಶಕ್ಕೆ ಮಳೆ ಕೊಡುತ್ತೇನೆ” ಎಂದನು.


ಗಿಲ್ಯಾದಿನ ತಿಷ್ಬೀಯ ಊರಿನವನಾದ ಎಲೀಯ ಎಂಬುವವನು ಅಹಾಬನಿಗೆ, “ನಾನು ಸನ್ನಿಧಿಸೇವೆ ಮಾಡುತ್ತಿರುವ ಇಸ್ರಾಯೇಲ್ ದೇವರಾದ ಯೆಹೋವನಾಣೆ,


ನಮ್ಮ ಜೀವವು ಬೇಟೆಗಾರನ ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದೆ; ಬಲೆಯು ಹರಿದುಹೋಯಿತು, ನಾವು ತಪ್ಪಿಸಿಕೊಂಡೆವು.


ಮನುಷ್ಯನೋ ತನ್ನ ಕಾಲ ಗತಿಯನ್ನು ತಿಳಿಯನಷ್ಟೆ. ಮೀನುಗಳು ಕೆಟ್ಟ ಬಲೆಗೂ, ಪಕ್ಷಿಗಳು ಉರುಲಿನಲ್ಲಿ ಸಿಕ್ಕಿಬೀಳುವ ಹಾಗೆ ಮನುಷ್ಯರು ಪ್ರಾಣಿಗಳ ಹಾಗೆ ತಮ್ಮ ಮೇಲೆ ತಟ್ಟನೆ ಬೀಳುವ ಕೇಡಿನ ಕಾಲಕ್ಕೆ ಸಿಕ್ಕಿಕೊಳ್ಳುವರು.


ನಾನು ಸಮಾರ್ಯದ ಪ್ರವಾದಿಗಳಲ್ಲಿ ಅನೈತಿಕತೆಯನ್ನು ನೋಡಿದ್ದೇನೆ; ಅವರು ಬಾಳ್ ದೇವತೆಯ ಆವೇಶದಿಂದ ಪ್ರವಾದಿಸಿ, ಇಸ್ರಾಯೇಲೆಂಬ ನನ್ನ ಜನರನ್ನು ಮಾರ್ಗ ತಪ್ಪಿಸಿದ್ದಾರೆ.


ದಂಡನೆಯ ದಿನಗಳು ಹತ್ತಿರವಾಗಿದೆ, ಮುಯ್ಯಿತೀರಿಸುವ ದಿನಗಳು ಸಮೀಪಿಸಿವೆ. ಅದು ಇಸ್ರಾಯೇಲಿನ ಅನುಭವಕ್ಕೆ ಬಂದೇ ಬರುವವು; ಇಸ್ರಾಯೇಲೇ, ನಿನ್ನ ಅಧರ್ಮವು ಬಹಳವಾಗಿರುವುದರಿಂದಲೂ, ವಿರೋಧವು ಹೆಚ್ಚಾಗಿರುವುದರಿಂದಲೂ, “ಪ್ರವಾದಿಯು ಮೂರ್ಖನು ಮತ್ತು ದೇವರಾತ್ಮ ಪ್ರೇರಿತನು ಹುಚ್ಚನು” ಅಂದುಕೊಳ್ಳುತ್ತೀ.


ಪೂರ್ವದಲ್ಲಿ ಗಿಬ್ಯದವರು ಕೆಡಿಸಿಕೊಂಡಂತೆ ಎಫ್ರಾಯೀಮ್ಯರು ತಮ್ಮನ್ನು ತೀರಾ ಕೆಡಿಸಿಕೊಂಡಿದ್ದಾರೆ. ದೇವರು ಅವರ ಅಧರ್ಮವನ್ನು ಜ್ಞಾಪಕಕ್ಕೆ ತಂದುಕೊಂಡು ಅವರ ಪಾಪಗಳಿಗೆ ಪ್ರತಿದಂಡನೆ ಮಾಡುವನು.


ನಾನಾದರೋ ವಧೆಗೆ ಒಯ್ಯುವ ಸಾಧು ಕುರಿಗೆ ಸಮಾನನಾಗಿದ್ದೆನು. “ಮರವನ್ನು ಫಲಸಹಿತವಾಗಿ ನಾಶಪಡಿಸೋಣ, ಇವನು ನಿರ್ನಾಮವಾಗುವಂತೆ ಜೀವಲೋಕದಿಂದ ಇವನನ್ನು ನಿರ್ಮೂಲಮಾಡೋಣ” ಎಂದು ಅವರು ನನಗೆ ವಿರುದ್ಧವಾಗಿ ಕುಯುಕ್ತಿಗಳನ್ನು ಕಲ್ಪಿಸಿದ್ದು ನನಗೆ ತಿಳಿದಿರಲಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು