ಹೋಶೇಯ 6:9 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಕಳ್ಳರ ಗುಂಪು ಒಬ್ಬನಿಗೆ ಹೊಂಚು ಹಾಕುವಂತೆ ಯಾಜಕರು ಗುಂಪಾಗಿ ದಾರಿಯಲ್ಲಿ ಹೊಂಚಿಕೊಂಡಿದ್ದು, ಶೆಕೆಮಿಗೆ ಯಾತ್ರೆ ಹೋಗುವವರನ್ನು ದೋಚಿ ಕೊಂದುಹಾಕುತ್ತಾರೆ; ಹೌದು, ಘೋರಕೃತ್ಯವನ್ನು ನಡೆಸುತ್ತಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ದರೋಡೆಗಾರರು ದಾರಿಹೋಕರಿಗಾಗಿ ಹೊಂಚುಹಾಕುವಂತೆ ಯಾಜಕರು ಗುಂಪುಗೂಡಿ ಹೊಂಚುಹಾಕುತ್ತಾ, ಶೆಖೆಮಿಗೆ ಯಾತ್ರೆಹೋಗುವವರನ್ನು ಕೊಂದುಹಾಕುತ್ತಾರೆ. ಅವರು ಮಾಡುವುದು ನಿಜಕ್ಕೂ ಘೋರಕೃತ್ಯ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಡಕಾಯಿತಿಯವರು ಒಬ್ಬನಿಗೆ ಹೊಂಚುವಂತೆ ಯಾಜಕರು ಗುಂಪಾಗಿ ದಾರಿಯಲ್ಲಿ ಹೊಂಚಿಕೊಂಡಿದ್ದು ಶೆಕೆವಿುಗೆ ಹೋಗುವವರನ್ನು ಕೊಂದುಹಾಕುತ್ತಾರೆ; ಹೌದು, ಘೋರಕೃತ್ಯವನ್ನು ನಡಿಸುತ್ತಾರೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಕಳ್ಳರು ದಾರಿಯಲ್ಲಿ ಹೊಂಚುಹಾಕುತ್ತಾ ಜನರನ್ನು ಸೂರೆಮಾಡಲು ಕಾಯುತ್ತಿರುತ್ತಾರೆ. ಅದೇ ರೀತಿಯಲ್ಲಿ ಶೆಕೆಮಿಗೆ ಹೋಗುವ ದಾರಿಯಲ್ಲಿ ಯಾಜಕರು ಕಾಯುತ್ತಾ ಹಾದುಹೋಗುತ್ತಿರುವ ಜನರ ಮೇಲೆ ಬೀಳುವರು. ಅವರು ದುಷ್ಕೃತ್ಯಗಳನ್ನು ಮಾಡಿರುತ್ತಾರೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ದರೋಡೆಕೋರರು ಮನುಷ್ಯನಿಗೋಸ್ಕರ ಹೊಂಚುಹಾಕುವಂತೆ, ಯಾಜಕರ ಗುಂಪು ದಾರಿಹೋಕರಿಗಾಗಿ ಹೊಂಚುಹಾಕುತ್ತಾ ಶೆಕೆಮಿಗೆ ಹೋಗುವವರನ್ನು ದಾರಿಯಲ್ಲಿ ಕೊಲೆಮಾಡುತ್ತಾರೆ. ಅವರು ನೀಚತನವನ್ನು ಮಾಡುವವರಾಗಿದ್ದಾರೆ. ಅಧ್ಯಾಯವನ್ನು ನೋಡಿ |