Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಹೋಶೇಯ 4:19 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಗಾಳಿಯು ಅವರನ್ನು ತನ್ನ ರೆಕ್ಕೆಗಳಲ್ಲಿ ಸುತ್ತಿಕೊಂಡು ಹೋಗುವುದು; ತಾವು ಮಾಡುತ್ತಿದ್ದ ವಿಗ್ರಹದ ಯಜ್ಞಗಳಿಗೆ ನಾಚಿಕೆಪಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಬಿರುಗಾಳಿ ಅವರನ್ನು ಬಡಿದೆತ್ತಿಕೊಂಡು ಹೋಗುವುದು. ಅವರು ವಿಗ್ರಹಗಳಿಗೆ ಅರ್ಪಿಸುತ್ತಿದ್ದ ಬಲಿಗಳಿಗಾಗಿ ನಾಚಿಕೆಪಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಗಾಳಿಯು ಅವರನ್ನು ತನ್ನ ರೆಕ್ಕೆಗಳಲ್ಲಿ ಸುತ್ತಿಕೊಂಡು ಹೋಗುವದು; ತಾವು ಮಾಡುತ್ತಿದ್ದ ಯಜ್ಞಗಳಿಗೆ ನಾಚಿಕೆಪಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಅವರು ತಮ್ಮ ಭಧ್ರತೆಗಾಗಿ ಆ ದೇವರುಗಳ ಬಳಿಗೆ ಹೋದರು ಮತ್ತು ತಮ್ಮ ಯೋಚನೆ ಮಾಡುವ ಶಕ್ತಿಯನ್ನೇ ಕಳಕೊಂಡರು. ಅವರ ಧೂಪಹೋಮಗಳೇ ಅವರನ್ನು ನಾಚಿಕೆಗೆ ಗುರಿಪಡಿಸುವವು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಗಾಳಿಯು ಅವರನ್ನು ತನ್ನ ರೆಕ್ಕೆಗಳಿಂದ ಬಂಧಿಸಿದೆ. ಅವರು ತಮ್ಮ ಬಲಿಗಳಿಂದ ನಾಚಿಕೆಪಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಹೋಶೇಯ 4:19
13 ತಿಳಿವುಗಳ ಹೋಲಿಕೆ  

“ನೀವು ಇಷ್ಟಪಟ್ಟ ಏಲಾ ಮರಗಳ ನಿಮಿತ್ತ ನಾಚಿಕೆಪಡುವಿರಿ. ಗೊತ್ತು ಮಾಡಿಕೊಂಡ ವನಗಳ ವಿಷಯವಾಗಿ ಲಜ್ಜೆಪಡುವಿರಿ.


ಎಫ್ರಾಯೀಮು ತನ್ನ ಸಹೋದರರಲ್ಲಿ ಫಲಸಮೃದ್ಧವಾಗಿದ್ದರೂ, ಕಾಡಿನಿಂದ ಯೆಹೋವನು ಬೀಸಮಾಡುವ ಮೂಡಣ ಗಾಳಿಯು ಬರಲು ಅದರ ಬುಗ್ಗೆಯು ಬತ್ತುವುದು, ಅದರ ಒರತೆಯು ಒಣಗುವುದು. ಶತ್ರುವು ಅವರ ಪ್ರಿಯವಸ್ತುಗಳ ನಿಧಿಯನ್ನು ಸೂರೆಮಾಡುವನು.


ಯೆಹೋವನು ಇಂತೆನ್ನುತ್ತಾನೆ, “ಇಗೋ, ನಾನು ಬಾಬೆಲಿನ ಮೇಲೂ, ಲೇಬ್ ಕಾಮೈ ದೇಶದವರ ಮೇಲೂ ನಾಶನದ ಗಾಳಿಯನ್ನು ಬೀಸಮಾಡುವೆನು.


ಎಫ್ರಾಯೀಮು ಮೇಯಿಸುವ ಮಂದೆಯು ಗಾಳಿಯೇ, ಹಿಂದಟ್ಟುವ ಬೇಟೆಯು ಮೂಡಣಗಾಳಿಯೇ. ಅದು ಮೋಸವನ್ನೂ, ಹಿಂಸೆಯನ್ನೂ ನಿರಂತರ ಹೆಚ್ಚೆಚ್ಚಾಗಿ ನಡೆಸುತ್ತದೆ; ಅಶ್ಶೂರದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುತ್ತದೆ; ಐಗುಪ್ತಕ್ಕೆ ಎಣ್ಣೆಯನ್ನು ಕಾಣಿಕೆಯಾಗಿ ಕಳುಹಿಸುತ್ತದೆ.


ಅದು ಜಗಳಗಂಟ ಮಹಾರಾಜನಿಗೆ ಕಾಣಿಕೆಯಾಗಿ ಅಶ್ಶೂರಕ್ಕೆ ಒಯ್ಯಲ್ಪಡುವುದು. ಎಫ್ರಾಯೀಮಿಗೆ ಅವಮಾನವಾಗುವುದು, ಇಸ್ರಾಯೇಲ್ ತಾನು ಸಂಕಲ್ಪಿಸಿಕೊಂಡ ವಿಷಯಕ್ಕಾಗಿ ನಾಚಿಕೆಪಡುವುದು.


ಯೆಹೋವನೇ, ಇಸ್ರಾಯೇಲರ ನಿರೀಕ್ಷೆಯೇ, ನಿನ್ನನ್ನು ಬಿಟ್ಟುಹೋಗುವವರು ಆಶಾಭಂಗಪಡುವರು. ಯೆಹೋವನಾದ ನಿನ್ನನ್ನು ತೊರೆದವರು ಜೀವಜಲದ ಬುಗ್ಗೆಯನ್ನು ತೊರೆದವರಾಗಿದ್ದಾರೆ; ಅವರ ಹೆಸರು ಧೂಳಿನಲ್ಲಿ ಬರೆಯಲ್ಪಡುವುದು.


ಕೆತ್ತಿದ ವಿಗ್ರಹಗಳಲ್ಲಿ ಭರವಸವಿಟ್ಟು, “ನೀವೇ ನಮ್ಮ ದೇವರುಗಳು” ಎಂದು ಎರಕದ ಬೊಂಬೆಗಳಿಗೆ ಅರಿಕೆಮಾಡುವವರು ಹಿಂದೆ ಬಿದ್ದು ಕೇವಲ ಅವಮಾನಕ್ಕೆ ಈಡಾಗುವರು.


ನನಗಿಷ್ಟವಾದಾಗ ನಾನು ಅವರನ್ನು ದಂಡಿಸುವೆನು; ಅವರ ಎರಡು ಅಪರಾಧಗಳ ದಂಡನೆಗೋಸ್ಕರ ಜನಾಂಗಗಳು ಅವರಿಗೆ ವಿರುದ್ಧವಾಗಿ ಒಟ್ಟುಗೂಡುವವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು